ಅಭಿಮಾನಿಗಳ ಒತ್ತಾಯ, ಅಮೆರಿಕದಲ್ಲಿ ಬಾಹುಬಲಿ 2 ಮತ್ತೆ ಬಿಡುಗಡೆ
ದೇಶದ ಹಲವು ರಾಜ್ಯಗಳಲ್ಲಿ ಚಿತ್ರಮಂದಿರಗಳು ಮತ್ತೆ ಕಾರ್ಯನಿರ್ವಹಿಸುತ್ತಿವೆ. ಕೇವಲ 50% ಪ್ರೇಕ್ಷಕರಿಗಷ್ಟೆ ಅವಕಾಶ ನೀಡಿರುವ ಕಾರಣ, ಹೊಸ ಸಿನಿಮಾಗಳ ಬಿಡುಗಡೆ ಆಗುತ್ತಿಲ್ಲ. ಹಲವು ಚಿತ್ರಮಂದಿರಗಳಲ್ಲಿ ಹಳೆಯ ಸಿನಿಮಾಗಳನ್ನೇ ಮರು ಬಿಡುಗಡೆ ಮಾಡಲಾಗುತ್ತಿದೆ.
ಆದರೆ ಅಮೆರಿಕದಲ್ಲಿ ಕೆಲವು ತಿಂಗಳಿನಿಂದಲೂ ಚಿತ್ರಮಂದಿರಗಳು ಕಾರ್ಯ ನಿರ್ವಹಿಸುತ್ತಿವೆ, ಟೆನೆಟ್ ಸೇರಿದಂತೆ ಇನ್ನೂ ಕೆಲವು ಹೊಸ ಸಿನಿಮಾಗಳು ಬಿಡುಗಡೆ ಆಗಿ ಚೆನ್ನಾಗಿಯೇ ಪ್ರದರ್ಶನ ಕಂಡಿವೆ.
ಅಮೆರಿಕದಲ್ಲಿ ಪ್ರಭಾಸ್ ಅಭಿನಯದ ಬಾಹುಬಲಿ 2 ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ಅದೂ ಪ್ರಭಾಸ್ ಹುಟ್ಟುಹಬ್ಬದಂದು ಅಮೆರಿಕದ ಕೆಲವು ಆಯ್ದ ಚಿತ್ರಮಂದಿರಗಳಲ್ಲಿ ಬಾಹುಬಲಿ 2 ಮರು ಬಿಡುಗಡೆ ಆಗುತ್ತಿದೆ.

ಅಕ್ಟೋಬರ್ 23 ರಂದು ಮರು ಬಿಡುಗಡೆ
ಪ್ರಭಾಸ್ ಅಭಿಮಾನಿಗಳ ಒತ್ತಾಯದ ಮೇರೆಗೆ ಅಕ್ಟೋಬರ್ 23 ರಂದು ಬಾಹುಬಲಿ 2 ಸಿನಿಮಾವನ್ನು ಅಮೆರಿಕದ ಕೆಲವು ನಗರಗಳಲ್ಲಿ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡಲಾಗುತ್ತಿದೆ. ಅಕ್ಟೋಬರ್ 23 ಪ್ರಭಾಸ್ ಹುಟ್ಟುಹಬ್ಬ.

100 ಕೋಟಿಗೂ ಹೆಚ್ಚು ಗಳಿಸಿತ್ತು ಬಾಹುಬಲಿ 2
ಬಾಹುಬಲಿ 2 ಸಿನಿಮಾ ಈ ಮೊದಲು ಅಮೆರಿಕದಲ್ಲಿ ಬಿಡುಗಡೆ ಆಗಿದ್ದಾಗ ದಾಖಲೆಯನ್ನೇ ಬರೆದಿತ್ತು. ನೂರು ಕೋಟಿಗೂ ಹೆಚ್ಚು ಹಣವನ್ನು ಗಳಿಸಿತ್ತು ಬಾಹುಬಲಿ 2. ಯಾವುದೇ ಹಿಂದಿ ಸಿನಿಮಾಗಳು ಸಹ ಅಮೆರಿಕದಲ್ಲಿ ಇಷ್ಟೋಂದು ಹಣ ಗಳಿಸಿರಲಿಲ್ಲ.

ಅಮೆರಿಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ
ಅಮೆರಿಕದಲ್ಲಿ ಪ್ರಭಾಸ್‌ಗೆ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಪ್ರಭಾಸ್ ಅಭಿಮಾನಿಗಳ ಒತ್ತಾಯದಿಂದಲೇ ಪ್ರಭಾಸ್ ಹುಟ್ಟುಹಬ್ಬಕ್ಕೆ ಆಯ್ದ ಕೆಲವು ಚಿತ್ರಮಂದಿರಗಳಲ್ಲಿ ಬಾಹುಬಲಿ 2 ಮರು ಬಿಡುಗಡೆ ಮಾಡಲಾಗುತ್ತಿದೆ.
Recommended Video

ಹಲವು ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿ
ಇನ್ನುಳಿದಂತೆ ಪ್ರಭಾಸ್ ಪ್ರಸ್ತುತ ರಾಧೆ-ಶ್ಯಾಂ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಂತರ ಭಾರಿ ಬಜೆಟ್ ಸಿನಿಮಾ ಆದಿಪುರುಷ್ ಆ ನಂತರ ದೀಪಿಕಾ ಪಡುಕೋಣೆ ಜೊತೆಗೆ ಪೌರಾಣಿಕ ಹಿನ್ನೆಲೆಯುಳ್ಳ ಸಿನಿಮಾದಲ್ಲಿ ನಟಿಸಲಿದ್ದಾರೆ ಪ್ರಭಾಸ್.


Click it and Unblock the Notifications











