ಮಗನಿಗೆ ರಾಜಮೌಳಿ ಹೆಸರಿಟ್ಟ ಬಾಹುಬಲಿ ನಟ

ರಾಜಮೌಳಿ ಸಿನಿ ಪ್ರೇಕ್ಷಕರಿಗೆ ಮಾತ್ರವಲ್ಲ, ಸಿನಿಮಾ ಮಂದಿಗೆ ಫೇವರೇಟ್ ನಿರ್ದೇಶಕ. ರಾಜಮೌಳಿ ಸಿನಿಮಾದಲ್ಲಿ ನಟಿಸಿ ತಾರಾ ಮೌಲ್ಯ ಗಳಿಸಿದವರೆಷ್ಟೋ.

Recommended Video

Ramesh Aravind ಕೊರೊನಾಗೆ ಹೊಂದಿಕೊಳ್ಳಲೇ ಬೇಕು ಎಂದು ಅದ್ಬುತವಾಗಿ ವಿವರಿಸಿದರು | Get Adjusted with Corona

ಬಾಹುಬಲಿ ಒಂದರಿಂದಲೇ ಎಷ್ಟೋ ಮಂದಿ ನಟ-ನಟಿಯರಿಗೆ ಹೊಸ ಹೊಳಪು ಬಂತು. ಅಂಥಹುದರಲ್ಲಿ ಒಬ್ಬರು ಕಾಲಕೇಯ ಪಾತ್ರದಾಗಿ ಪ್ರಭಾಕರ್.

ಬಾಹುಬಲಿ ಮೊದಲ ಭಾಗದಲ್ಲಿ ಪ್ರಮುಖ ವಿಲನ್ ಆಗಿ ನಟಿಸಿ ಎಲ್ಲರಿಂದ ಮೆಚ್ಚು ಗೆ ಗಳಿಸಿದ್ದರು ಪ್ರಭಾಕರ್. ಅವರ ಕಾಲಕೇಯ ಪಾತ್ರ, ಪಾತ್ರದ ಭಾಷೆ, ಅವರ ಅಭಿನಯ ಎಲ್ಲವೂ ಸಿನಿ ಪ್ರಿಯರ ಮೆಚ್ಚುಗೆ ಗಳಿಸಿತ್ತು. ಕಾಲಕೇಯ ತೆಲುಗು ಸಿನಿರಂಗದ ಜನಪ್ರಿಯ ವಿಲನ್‌ಗಳಲ್ಲಿ ಒಬ್ಬನಾಗಿ ಹೋದ.

ಮಗನಿಗೆ ರಾಜಮೌಳಿ ಹೆಸರಿಟ್ಟಿದ್ದಾರೆ

ಮಗನಿಗೆ ರಾಜಮೌಳಿ ಹೆಸರಿಟ್ಟಿದ್ದಾರೆ

ಕಾಲಕೇಯ ಪಾತ್ರವನ್ನು ತಮಗೆ ನೀಡಿದಕ್ಕೆ ಪ್ರಭಾಕರ್ ಈ ಹಿಂದೆಯೂ ರಾಜಮೌಳಿಗೆ ಧನ್ಯವಾದ ಅರ್ಪಿಸಿದ್ದರು. ಈಗಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಮಗನಿಗೆ ರಾಜಮೌಳಿ ಹೆಸರಿಟ್ಟಿದ್ದಾರೆ.

ಮೊದಲು ರಾಜಮೌಳಿಯನ್ನು ಸಂಪರ್ಕಿಸಿದ್ದರು

ಮೊದಲು ರಾಜಮೌಳಿಯನ್ನು ಸಂಪರ್ಕಿಸಿದ್ದರು

ಪ್ರಭಾಕರ್ ನಟನಾಗಬೇಕು ಎಂದು ಕೋಡಂಗಲ್ ಎಂಬ ಹಳ್ಳಿಯಿಂದ ಹೈದರಾಬಾದ್‌ ಗೆ ಬಂದು ರಾಜಮೌಳಿ ಅವರನ್ನು ಭೇಟಿ ಆಗಿದ್ದರು. ಅವರೇ ಪ್ರಭಾಕರ್ ಅವರಿಗೆ ಮೊದಲ ಅವಕಾಶ ದೊರಕುವಂತೆ ಮಾಡಿದ್ದರಂತೆ. ಕೊನೆಗೆ ಪ್ರಭಾಕರ್ ಅವರಿಗೆ ಅಂತರರಾಷ್ಟ್ರೀಯ ಮಾನ್ಯತೆ ಗಳಿಸಿಕೊಟ್ಟ ಕಾಲಕೇಯ ಪಾತ್ರವನ್ನು ರಾಜಮೌಳಿಯೇ ನೀಡಿದ್ದಾರೆ.

ರಾಜಮೌಳಿ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ

ರಾಜಮೌಳಿ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ

ರಾಜಮೌಳಿ ಅವರ ಬಗ್ಗೆ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಮಾತನಾಡಿರುವ ಪ್ರಭಾಕರ್, ರಾಜಮೌಳಿ ಅವರ ಋಣ ತೀರಿಸಲೆಂದು ಈಗ ತಮ್ಮ ಮಗನಿಗೆ ರಾಜಮೌಳಿ ಹೆಸರಿಟ್ಟಿದ್ದಾರಂತೆ. ಅಂದಹಾಗೆ ಪ್ರಭಾಕರ್ ಮಗನ ಹೆಸರು ಶ್ರೀರಾಮ್ ರಾಜಮೌಳಿ.

ಕನ್ನಡದಲ್ಲಿಯೂ ನಟಿಸಿರುವ ಪ್ರಭಾಕರ್

ಕನ್ನಡದಲ್ಲಿಯೂ ನಟಿಸಿರುವ ಪ್ರಭಾಕರ್

ಕನ್ನಡದಲ್ಲಿಯೂ ನಟಿಸಿರುವ ಪ್ರಭಾಕರ್, ಬೃಂದಾವನ, ಗಜಕೇಸರಿ , ಲಕ್ಷ್ಮಣ, ಚೌಕ, ಉದ್ಘರ್ಷ, ನಟಸಾರ್ವಭೌಮ, ಬಿಚ್ಚುಗತ್ತಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ವರಗೆ ಸುಮಾರು 50 ಸಿನಿಮಾಗಳಲ್ಲಿ ನಟಿಸಿದ್ದಾರೆ.

More from Filmibeat

English summary
Bahubali actor Prabhakar named his son after director Rajamouli's name.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X