ವಿಡಿಯೋ: ರಷ್ಯಾದಲ್ಲೂ ಪ್ರಭಾಸ್ ಅಬ್ಬರ, ಟಿವಿಯಲ್ಲಿ ಬಾಹುಬಲಿ ಪ್ರಸಾರ

ಬಾಹುಬಲಿ ಸಿನಿಮಾ ಇಡೀಯ ಭಾರತವೇ ದಕ್ಷಿಣ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಬಾಹುಬಲಿ ಸೃಷ್ಟಿಸಿದ ಕ್ರೇಜ್ ಈವರೆಗೆ ಮುಗಿದಿಲ್ಲ.

Recommended Video

ಅಂಬಿ ಹುಟ್ಟು ಹಬ್ಬದ ಆಚರಣೆಗೆ ಅಂಬಿ ಸ್ಮಾರಕದ ಬಳಿ ಯಾರೆಲ್ಲಾ ಬಂದಿದ್ದಾರೆ ನೋಡಿ| Ambareesh

ಕೇವಲ ಭಾರತ ಮಾತ್ರವಲ್ಲ ವಿದೇಶಗಳಲ್ಲೂ ಸಹ ಬಾಹುಬಲಿ ಭಾರಿ ಹೆಸರು ಗಳಿಸಿತು. ಬಾಹುಬಲಿ ಸಿನಿಮಾಕ್ಕೆ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಸಾಕಷ್ಟು ಅಭಿಮಾನಿಗಳು ಇದ್ದಾರೆ.

ಬಾಹುಬಲಿ ಭಾರತದಲ್ಲಷ್ಟೆ ಅಲ್ಲದೆ ವಿದೇಶಗಳಲ್ಲೂ ಸಹ ಸೂಪರ್ ಹಿಟ್ ಎನಿಸಿಕೊಂಡಿದೆ. ಭಾರತದ ಭಾಷೆಗಳಿಗೆ ಮಾತ್ರವಲ್ಲದೆ, ವಿದೇಶದ ಬೇರೆ-ಬೇರೆ ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗಿದೆ.

ಇದೀಗ ರಷ್ಯಾ ಭಾಷೆಗೆ ಡಬ್ ಆಗಿರುವ ಬಾಹುಬಲಿ ಸಿನಿಮಾವನ್ನು ಟಿವಿಯಲ್ಲಿ ಪ್ರಸಾರ ಮಾಡುತ್ತಿರುವ ವಿಡಿಯೋ ಟ್ವಿಟ್ಟರ್‌ನಲ್ಲಿ ಸಾಕಷ್ಟು ವೈರಲ್ ಆಗಿದೆ.

ರಷ್ಯಾ ಇನ್ ಇಂಡಿಯಾ ಟ್ವೀಟ್

ಭಾರತದಲ್ಲಿನ ರಷ್ಯಾದ ಧೂತಾವಾಸದ ಅಧಿಕೃತ ಟ್ವಿಟ್ಟರ್ ಖಾತೆ 'ರಷ್ಯಾ ಇನ್ ಇಂಡಿಯಾ ' ಟ್ವೀಟ್ ಮಾಡಿದ್ದು, 'ಭಾರತೀಯ ಸಿನಿಮಾ ರಷ್ಯಾದಲ್ಲಿ ಜನಪ್ರಿಯವಾಗಿದೆ. ನೋಡಿ ರಷ್ಯಾ ಟಿವಿಯಲ್ಲಿ ಬಾಹುಬಲಿ ಪ್ರಸಾರವಾಗುತ್ತಿದೆ' ಎಂದು ಬಾಹುಬಲಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ.

ರಷ್ಯನ್ ಭಾಷೆಯಲ್ಲಿ ಬಾಹುಬಲಿ

ರಷ್ಯನ್ ಭಾಷೆಯಲ್ಲಿ ಬಾಹುಬಲಿ

ಬಾಹುಬಲಿ ಸಿನಿಮಾಕ್ಕೆ ರಷ್ಯನ್ ಭಾಷೆಯ ವಾಯ್ಸ್ ಓವರ್ ನೀಡಿ ರಷ್ಯಾದ ಟಿವಿಯಲ್ಲಿ ಪ್ರಸಾರ ಮಾಡಲಾಗುತ್ತಿದೆ. ರಷ್ಯನ್ ಭಾಷೆಯಲ್ಲಿ ಬಾಹುಬಲಿ, ರಾಜಮಾತಾ, ದೇವಸೇನಾ ಮಾತನಾಡುವುದು ಕೇಳುವುದಕ್ಕೆ ಮಜವೆನಿಸುತ್ತದೆ.

ಕೆಜಿಎಫ್ ಸಿನಿಮಾವನ್ನು ರಷ್ಯನ್ ಭಾಷೆಗೆ ಡಬ್ ಮಾಡಲು ಮನವಿ

ಕೆಜಿಎಫ್ ಸಿನಿಮಾವನ್ನು ರಷ್ಯನ್ ಭಾಷೆಗೆ ಡಬ್ ಮಾಡಲು ಮನವಿ

ಬಾಹುಬಲಿ ಸಿನಿಮಾ ನೋಡಿದ್ದಕ್ಕೆ ಧನ್ಯವಾದಗಳು, ಮುಂದೆ ಕೆಜಿಎಫ್ ಸಿನಿಮಾವನ್ನು ಟ್ರೈ ಮಾಡಿ ಎಂದು ಕೆಜಿಎಫ್ ಅಭಿಮಾನಿಯೊಬ್ಬರು ರಷ್ಯಾ ಧೂತಾವಾಸದ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ಪಸಿವಾಡಿ ಪ್ರಾಣಂ ಸಿನಿಮಾ ಡಬ್ ಆಗಿತ್ತು

ಪಸಿವಾಡಿ ಪ್ರಾಣಂ ಸಿನಿಮಾ ಡಬ್ ಆಗಿತ್ತು

ಈ ಹಿಂದೆ ಚಿರಂಜೀವಿ ಅಭಿನಯದ 'ಪಸಿವಾಡಿ ಪ್ರಾಣಂ' ಸಿನಿಮಾ ರಷ್ಯನ್ ಭಾಷೆಗೆ ಡಬ್ ಆಗಿತ್ತೆಂದು ಚಿರಂಜೀವಿ ಅಭಿಮಾನಿಯೊಬ್ಬ ನೆನಪಿಸಿದ್ದಾರೆ. ಬಾಹುಬಲಿ ಸಿನಿಮಾ ರಷ್ಯಾದಲ್ಲಿ ಜನಪ್ರಿಯವಾಗಿರುವುದು ಪ್ರಭಾಸ್ ಅಭಿಮಾನಿಗಳಲ್ಲಿ ಭಾರಿ ಸಂತಸ ತಂದಿದೆ.

More from Filmibeat

English summary
Telugu movie Bahubali broadcasting in Russian TV with Russian voice over. Prabhas fans loved it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X