'ಪೊನ್ನಿಯಿನ್ ಸೆಲ್ವನ್' Vs 'ಬಾಹುಬಲಿ': ಟ್ರೋಲ್ ಮಾಡಿದ ಪ್ರಭಾಸ್ ಫ್ಯಾನ್ಸ್, ರೊಚ್ಚಿಗೆದ್ದ ತಮಿಳು ಪ್ರೇಕ್ಷಕರು!

ಸೋಶಿಯಲ್ ಮೀಡಿಯಾದಲ್ಲಿ 'ಪೊನ್ನಿಯಿನ್ ಸೆಲ್ವನ್' ವರ್ಸಸ್ 'ಬಾಹುಬಲಿ' ಫೈಟ್ ಶುರುವಾಗಿದೆ. ಮಣಿರತ್ನಂ ನಿರ್ದೇಶನದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ತಿದ್ದಂತೆ ಕೆಲವರು ಬಾಹುಬಲಿ ಚಿತ್ರಕೆಕ ಹೋಲಿಸಿ ಟ್ರೋಲ್ ಮಾಡ್ತಿದ್ದಾರೆ. ಅಷ್ಟೆಲ್ಲಾ ಬಡಾಯಿ ಕೊಚ್ಚಿಕೊಂಡ್ರಿ, ಇಷ್ಟೇನಾ ನಿಮ್ಮ 'ಪೊನ್ನಿಯಿನ್ ಸೆಲ್ವನ್' ಕಥೆ ಎನ್ನುತ್ತಿದ್ದಾರೆ. ಇದಕ್ಕೆ ತಮಿಳು ಪ್ರೇಕ್ಷಕರು ತಿರುಗೇಟು ನೀಡುವ ಪ್ರಯತ್ನ ಮಾಡ್ತಿದ್ದಾರೆ.

ಚಿಯಾನ್ ವಿಕ್ರಂ, ಐಶ್ವರ್ಯ ರೈ, ಕಾರ್ತಿ, ಜಯಂ ಸೂರ್ಯ, ತ್ರಿಶಾ ನಟನೆಯ ಬಹುಕೋಟಿ ವೆಚ್ಚದ ಐತಿಹಾಸಿಕ ಸಿನಿಮಾ 'ಪೊನ್ನಿಯಿನ್ ಸೆಲ್ವನ್'. ಅಂದಾಜು 400 ಕೋಟಿ ರೂ. ಬಜೆಟ್‌ನಲ್ಲಿ ಮಣಿರತ್ನಂ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. 'ಪೊನ್ನಿಯಿನ್ ಸೆಲ್ವನ್' ಹೆಸರಿನಲ್ಲಿ ಕಲ್ಕಿ ಕೃಷ್ಣಮೂರ್ತಿ ಬರೆದಿದ್ದ ಕಾದಂಬರಿಯನ್ನು ಆಧರಿಸಿ ಅದೇ ಹೆಸರಿನಲ್ಲಿ ಮಣಿರತ್ನಂ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಟ್ರೈಲರ್ ನೋಡಿದಾಗಲೇ ಕೆಲವರು ಚಿತ್ರವನ್ನು ರಾಜಮೌಳಿ ನಿರ್ದೇಶನದ 'ಬಾಹುಬಲಿ' ಜೊತೆಗೆ ಹೋಲಿಸಿ ನೋಡಿದ್ದರು.

ಮಣಿರತ್ನಂ ಅಂಡ್ ಟೀಮ್ ನಮ್ಮದು 'ಬಾಹುಬಲಿ'ಗಿಂತ ಭಿನ್ನವಾದ ಸಿನಿಮಾ ಎಂದು ಹೇಳಿಕೊಂಡು ಬಂದಿತ್ತು. ಆದರೆ ಪ್ರೇಕ್ಷಕರು ಹೋಲಿಕೆ ಮಾಡಿ ನೋಡಿ ನೋಡುವುದನ್ನು ಬಿಡಲಿಲ್ಲ. ತಮಿಳಿನ ಕೆಲವರು 'ಬಾಹುಬಲಿ'ಯನ್ನು ಮೀರಿಸುವ ಸಿನಿಮಾ 'ಪೊನ್ನಿಯಿನ್ ಸೆಲ್ವನ್' ಎಂದಿದ್ದರು.

'PS1' ಟ್ರೋಲ್ ಮಾಡುತ್ತಿರುವ ಪ್ರಭಾಸ್ ಫ್ಯಾನ್ಸ್

'PS1' ಟ್ರೋಲ್ ಮಾಡುತ್ತಿರುವ ಪ್ರಭಾಸ್ ಫ್ಯಾನ್ಸ್

'ಪೊನ್ನಿಯಿನ್ ಸೆಲ್ವನ್' ಚಿತ್ರ ತೆಲುಗಿಗೂ ಡಬ್ ಆಗಿ ರಿಲೀಸ್ ಆಗಿದ್ದು, ಆಂಧ್ರ, ತೆಲಂಗಾಣದಲ್ಲಿ ನೆಗೆಟಿವ್ ಟಾಕ್ ಕೇಳಿಬಂದಿದೆ. ವಿಮರ್ಶಕರಿಗೂ ಸಿನಿಮಾ ಇಷ್ಟವಾಗಿಲ್ಲ. ಇನ್ನು 'ಬಾಹುಬಲಿ'ಗೆ ಹೋಲಿಸಿದ್ದ ಸಿನಿಮಾ ಏನು ಹೀಗಿದೆ ? ಎಂದು ಪ್ರಭಾಸ್ ಫ್ಯಾನ್ಸ್ 'ಪೊನ್ನಿಯಿನ್ ಸೆಲ್ವನ್' ಚಿತ್ರವನ್ನು ಟ್ರೋಲ್ ಮಾಡುತ್ತಿದ್ದಾರೆ. ಪ್ರಭಾಸ್ ಸಿನಿಮಾವನ್ನು ಮೀರಿಸುವುದು ಇರಲಿ, ಹತ್ತಿರಕ್ಕೂ ಬರುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ಮೀಮ್ಸ್ ಕ್ರಿಯೇಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ತೇಲಿ ಬಿಡ್ತಿದ್ದಾರೆ.

ತಿರುಗೇಟು ನೀಡಿದ ತಮಿಳು ಪ್ರೇಕ್ಷಕರು

ತಿರುಗೇಟು ನೀಡಿದ ತಮಿಳು ಪ್ರೇಕ್ಷಕರು

ತಮಿಳು ಪ್ರೇಕ್ಷಕರು ಕೂಡ ಪ್ರಭಾಸ್ ಫ್ಯಾನ್ಸ್‌ಗೆ ತಿರುಗೇಟು ನೀಡುತ್ತಿದ್ದಾರೆ. ಬಗೆಬಗೆಯ ಮೀಮ್ಸ್ ಕ್ರಿಯೇಟ್ ಮಾಡಿ ಕೆಣಕುತ್ತಿದ್ದಾರೆ. 'ಪೊನ್ನಿಯಿನ್ ಸೆಲ್ವನ್' ಕಾದಂಬರಿಯಿಂದ ಪ್ರೇರಣೆಗೊಂಡು ಮೌಳಿ 'ಬಾಹುಬಲಿ' ಹಾಗೂ RRR ಚಿತ್ರದ ಕೆಲ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದಾರೆ ಎನ್ನುತ್ತಿದ್ದಾರೆ. ನಂಬಲಾಗದಂತಹ ಊಹೆಗೂ ಮೀರಿದ ದೃಶ್ಯಗಳನ್ನು ಇಟ್ಟಿದ್ದಾರೆ. 'ಪೊನ್ನಿಯಿನ್ ಸೆಲ್ವನ್' ಚೋಳ ರಾಜರ ಕಥೆ. ಇಲ್ಲಿ ರಾಜಮೌಳಿ ರೀತಿ ಏನೇನೊ ತೋರಿಸೋಕೆ ಸಾಧ್ಯವಿಲ್ಲ. ಭಾರೀ ಗ್ರಾಫಿಕ್ಸ್, ಐಟಂ ಸಾಂಗ್, ಫ್ಯಾಂಟಸಿ ಇರುವುದಿಲ್ಲ. 'ಪೊನ್ನಿಯಿನ್ ಸೆಲ್ವನ್' ಸಿನಿಮಾ ತುಂಬಾ ಚೆನ್ನಾಗಿದೆ ಎಂದು ವಾದಿಸುತ್ತಿದ್ದಾರೆ.

'ಪನ್ನೀರು' ಸೆಲ್ವನ್ ಎಂದ 'ಬಾಹುಬಲಿ' ಕಥೆಗಾರ

'ಪನ್ನೀರು' ಸೆಲ್ವನ್ ಎಂದ 'ಬಾಹುಬಲಿ' ಕಥೆಗಾರ

ಪ್ರಭಾಸ್ ಫ್ಯಾನ್ಸ್ ಮಾತ್ರವಲ್ಲ ರಾಜಮೌಳಿ ತಂಡದ S. S ಕಂಚಿ ಕೂಡ 'ಪೊನ್ನಿಯಿನ್ ಸೆಲ್ವನ್' ಟ್ರೋಲ್ ಮಾಡಿದ್ದಾರೆ. 'ಪನ್ನೀರು' ಸೆಲ್ವನ್ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ನಿರ್ದೇಶಕ ರಾಜಮೌಳಿ ಕಜೀನ್ ಆಗಿರುವ ಕಂಚಿ 'ಪೊನ್ನಿಯಿನ್ ಸೆಲ್ವನ್' ಚಿತ್ರವನ್ನು ತಮ್ಮದೇ ಶೈಲಿಯಲ್ಲಿ ಟ್ರೋಲ್ ಮಾಡಿದ್ದಾರೆ. ಆ ಟ್ವೀಟ್ ಈಗ ಸಖತ್ ವೈರಲ್ ಆಗಿದೆ.

'PS1' ಫಸ್ಟ್ ಡೇ ಕಲೆಕ್ಷನ್ 45 ಕೋಟಿ ರೂ.

'PS1' ಫಸ್ಟ್ ಡೇ ಕಲೆಕ್ಷನ್ 45 ಕೋಟಿ ರೂ.

ಮಿಶ್ರಪ್ರತಿಕ್ರಿಯೆ ನಡುವೆಯೂ ಮೊದಲ ದಿನ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಅಂದಾಜು 45 ಕೋಟಿ ರೂ. ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ. ತಮಿಳುನಾಡಿನಲ್ಲೇ ಸಿನಿಮಾ 26 ಕೋಟಿ ದೋಚುವ ಮೂಲಕ ದಾಖಲೆ ಬರೆದಿದೆ. ದಸರಾ ಸಂಭ್ರಮದಲ್ಲಿ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡುವು ನಿರೀಕ್ಷೆಯಲ್ಲಿದೆ ಚಿತ್ರತಂಡ.

More from Filmibeat

English summary
Bahubali Vs Ponniyin Selvan Tamil Fight Goes Viral in Social Media. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X