ಟ್ರೋಲ್ ವಾರ್ ನಡುವೆ ಕರಿದ ಬಜ್ಜಿ, ಜಿಲೇಬಿ; ಎನ್‌ಟಿಆರ್ ಫ್ಯಾನ್ಸ್- ಮೆಗಾ ಫ್ಯಾನ್ಸ್ ಮಧ್ಯೆ ಕಿರಿಕ್!

ಒಂದ್ಕಾಲದಲ್ಲಿ ರಸ್ತೆಗಳಲ್ಲಿ ಚಿತ್ರಮಂದಿರಗಳ ಮುಂಭಾಗದಲ್ಲಿ ನಡೆಯುತ್ತಿದ್ದ ಅಭಿಮಾನಿಗಳ ನಡುವಿನ ಕಿರಿಕ್ ಈಗ ಸೋಶಿಯಲ್ ಮೀಡಿಯಾಗೆ ಶಿಫ್ಟ್ ಆಗಿದೆ. ಒಬ್ಬ ನಟನನ್ನು ಮತ್ತೊಬ್ಬ ನಟನ ಅಭಿಮಾನಿಗಳು ಟೀಕಿಸುವುದು, ಟ್ರೋಲ್ ಮಾಡುವುದು ಹೆಚ್ಚುತ್ತಲೇ ಇದೆ. ಸದ್ಯ ಟಾಲಿವುಡ್‌ನಲ್ಲಿ ನಂದಮೂರಿ ಫ್ಯಾನ್ಸ್ ಹಾಗೂ ಮೆಗಾ ಫ್ಯಾನ್ಸ್ ನಡುವಿನ ಕೆಸರೆರಚಾಟ ಕೀಳುಮಟ್ಟಕ್ಕೆ ಇಳಿದಿದೆ.

ತೆಲುಗು ನಟರಾದ ಎನ್‌ಟಿಆರ್ ಹಾಗೂ ಚಿರಂಜೀವಿ ಇಬ್ಬರೂ ಅದ್ಭುತ ಕಲಾವಿದರು. ಚಿತ್ರರಂಗಕ್ಕೆ ಇಬ್ಬರ ಕೊಡುಗೆ ಮರೆಯೋಕೆ ಸಾಧ್ಯವಿಲ್ಲ. ರಾಮಾರಾವು ಜೊತೆ ಒಂದೇ ಚಿತ್ರದಲ್ಲಿ ಚಿರು ಸಹ ನಟಿಸಿದ್ದಾರೆ. ಎರಡೂ ಕುಟುಂಬಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಸಣ್ಣಪುಟ್ಟ ಮನಸ್ತಾಪಗಳು ಇದ್ದರೂ ಅದು ಈಗ ತಣ್ಣಗಾಗಿದೆ. ಆದರೆ ಇಬ್ಬರ ಅಭಿಮಾನಿಗಳ ನಡುವೆ ಶೀತಲ ಸಮರ ಮಾತ್ರ ನಡೆಯುತ್ತಲೇ ಇದೆ. ಸೋಶಿಯಲ್ ಮೀಡಿಯಾದಲ್ಲಿ ಇದೀಗ ಮತ್ತೆ ಟ್ರೋಲ್ ಅತಿಯಾಗಿದೆ.

Bajji vs Jalebi NTR and Chiranjeevi Fans Clash on Social Media with Troll War

ದಿವಂಗತ ನಟ, ಆಂಧ್ರದ ಮಾಜಿ ಸಿಎಂ ಎನ್‌ಟಿಆರ್ ಅವರನ್ನು ಮೆಗಾ ಫ್ಯಾನ್ಸ್ ಟ್ರೋಲ್ ಮಾಡುತ್ತಿದ್ದಾರೆ. ಫನ್ನಿ ಮೀಮ್ಸ್ ವೈರಲ್ ಮಾಡಿ ವ್ಯಂಗ್ಯವಾಡುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಚಿರಂಜೀವಿಯನ್ನು ನಂದಮೂರಿ ಫ್ಯಾನ್ಸ್ ಟ್ರೋಲ್ ಮಾಡುತ್ತಿದ್ದಾರೆ. 'X' ಖಾತೆಯಲ್ಲಿ ಇದೇ ಈಗ ಹಾಟ್ ಟಾಪಿಕ್ ಆಗಿದೆ. ಇನ್ನು ಈ ಟ್ರೋಲ್ಸ್‌ನಲ್ಲಿ ಮೆಣಸಿನ ಕಾಯಿ ಬಜ್ಜಿ ಹಾಗೂ ಜಿಲೇಬಿ ಭಾರೀ ಸದ್ದು ಮಾಡ್ತಿದೆ. ಅಷ್ಟಕ್ಕೂ ಇಬ್ಬರ ಅಭಿಮಾನಿಗಳ ನಡುವೆ ಬಜ್ಜಿ ಹಾಗೂ ಜಿಲೇಬಿ ವಿಚಾರ ಯಾಕೆ ಬಂತು ಮುಂದೆ ಓದಿ.

250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ನಂದಮೂರಿ ತಾರಕ ರಾಮಾರಾವು ಸಕ್ಸಸ್ ಕಂಡಿದ್ದರು. ರಂಗಭೂಮಿ ಹಿನ್ನೆಲೆಯಿಂದ ಬಂದ ಅವರು ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸಿ ಮೋಡಿ ಮಾಡಿದ್ದರು. ವಿಶ್ವವಿಖ್ಯಾತ ನಟಸಾರ್ವಭೌಮ ಎಂಬ ಬಿರುದು ಸಿಕ್ಕಿತ್ತು. ಡಾ. ರಾಜ್‌ಕುಮಾರ್‌ ಅವರಿಗೆ ಸರಿಸಮನಾಗಿ ಅತ್ತ ತೆಲುಗು ಚಿತ್ರರಂಗದಲ್ಲಿ ರಾಮಾರಾವು ಬೆಳೆದು ಬಂದವರು. ಮುಂದೆ ಇದೇ ಜನಪ್ರಿಯತೆ ಬಳಸಿಕೊಂಡು ಪ್ರಾದೇಶಿಕ ಪಕ್ಷ ಕಟ್ಟಿ ಆಂಧ್ರದ ಸಿಎಂ ಪಟ್ಟಕ್ಕೇರಿದ್ದರು. ಇನ್ನು ಭೋಜನ ಪ್ರಿಯರಾಗಿದ್ದ ಎನ್‌ಟಿಆರ್ ಇಡ್ಲಿ, ಬಜ್ಜಿ, ನಾಟಿ ಕೋಳಿಯನ್ನು ಬಹಳ ಇಷ್ಟಪಟ್ಟು ತಿನ್ನುತ್ತಿದ್ದರು.

ಎನ್‌ಟಿಆರ್ ಏನೆಲ್ಲಾ ಸೇವಿಸುತ್ತಿದ್ದರು, ಯಾವ ಪ್ರಮಾಣದಲ್ಲಿ ಸೇವಿಸುತ್ತಿದ್ದರು ಎಂದು ಅವರನ್ನು ಹತ್ತಿರದಿಂದ ಬಲ್ಲವರು ಇತ್ತೀಚೆಗೆ ಸಂದರ್ಶನಗಳಲ್ಲಿ ಹೇಳಿದ್ದಾರೆ. ಅವರಿಗೆ ಮೆಣಸಿನ ಕಾಯಿ ಬಜ್ಜಿ ಅಂದರೆ ಬಹಳ ಇಷ್ಟ. ಒಮ್ಮೆಲೆ 40 ಬಜ್ಜಿ ತಿನ್ನುತ್ತಿದ್ದರು, ಬೆಳ್ಳಂಬೆಳಗ್ಗೆ ಒಂದು ನಾಟಿ ಕೋಳಿ, ಮೇಕೆ ಕಾಲುಗಳನ್ನು ತಿನ್ನುತ್ತಿದ್ದರು. ಎರಡು ಡಜನ್ ಸೋಡಾ ಕುಡಿಯುತ್ತಿದ್ದರು ಎಂದು ಹೇಳಿರುವ ವೀಡಿಯೋಗಳನ್ನು ವೈರಲ್ ಮಾಡಿ ಮೆಗಾ ಫ್ಯಾನ್ಸ್ ಟ್ರೋಲ್ ಮಾಡುತ್ತಿದ್ದಾರೆ. ವ್ಯಂಗ್ಯವಾಡಿ AI ಇಮೇಜ್, ವೀಡಿಯೋಗಳನ್ನು ಕ್ರಿಯೇಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

ತಮ್ಮ ನೆಚ್ಚಿನ ನಟನನ್ನು ಟ್ರೋಲ್ ಮಾಡುತ್ತಿರುವುದಕ್ಕೆ ಪ್ರತಿಯಾಗಿ ಚಿರಂಜೀವಿ ಬಗ್ಗೆ ನಂದಮೂರಿ ಫ್ಯಾನ್ಸ್ ವ್ಯಂಗ್ಯವಾಡುತ್ತಿದ್ದಾರೆ. ಚಿರಂಜೀವಿ ಅವರಿಗೆ ಜಿಲೇಬಿ ಅಂದ್ರೆ ಬಹಳ ಇಷ್ಟ ಎಂದು ಹಾಗಾಗಿ ಜಿಲೇಬಿಮ್ಯಾನ್ ಎಂದು ಕುಹಕವಾಡುತ್ತಿದ್ದಾರೆ. ಅದಕ್ಕೆ ಒಂದಷ್ಟು ಫೋಟೊ, ವೀಡಿಯೋಗಳನ್ನು ತೇಲಿ ಬಿಡುತ್ತಿದ್ದಾರೆ. ಇದೇ ಕಾರಣಕ್ಕೆ ಈಗ ಬಜ್ಜಿ ಹಾಗೂ ಜಿಲೇಬಿ ಪದಗಳು ಟ್ಟಿಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ. #bajjified, #karanajanmudu, #Jilebified, #BajjiTwitter, #NationalJilebiDay ಎಂಬ ಹ್ಯಾಷ್‌ಟ್ಯಾಗ್‌ಗಳು ಸದ್ದು ಮಾಡ್ತಿವೆ.

ಅಭಿಮಾನಿಗಳ ನಡುವಿನ ದ್ವೇಷಕ್ಕೆ, ಅವರ ಕೆಸರೆರಚಾಟಕ್ಕೆ ಇಬ್ಬರು ದಿಗ್ಗಜ ನಟರ ಬಗ್ಗೆ ತೇಜೋವಧೆ ಮಾಡುವುದು ಎಷ್ಟು ಸರಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಸುಖಾಸುಮ್ಮನೆ ಯಾಕೆ ಹೀಗೆ ಟ್ರೋಲ್ ಮಾಡುವುದು ಎದು ಪ್ರಶ್ನಿಸುತ್ತಿದ್ದಾರೆ. ಕಾರಣವೇ ಇಲ್ಲದೇ ಹೀಗೆ ಟ್ರೋಲ್ ಮಾಡುವುದು ಯಾಕೆ? ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Fan wars in Tollywood heat up as Nandamuri and Mega fans engage in a bizarre troll battle involving bajji and jalebi references to late NTR and Chiranjeevi
Read more about: tollywood ntr chiranjeevi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X