ಶಿವಣ್ಣನ ಸಿನಿಮಾ ರೀಮೇಕ್‌ನಲ್ಲಿ ಬಾಲಕೃಷ್ಣ, ದುನಿಯಾ ವಿಜಯ್‌ ಪಾತ್ರವೇನು?

ನಟ ದುನಿಯಾ ವಿಜಯ್ ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವುದು ಇತ್ತೀಚೆಗೆ ಬಹಳ ಸುದ್ದಿಯಾಗಿತ್ತು. ದುನಿಯಾ ವಿಜಯ್, ತೆಲುಗಿನ ಬಾಲಕೃಷ್ಣ ನಟನೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬುದು ಗಾಂಧಿನಗರದ ಇತ್ತೀಚಿನ ಪ್ರಮಖ ಸುದ್ದಿಗಳಲ್ಲಿ ಒಂದಾಗಿತ್ತು.

ಆದರೆ ದುನಿಯಾ ವಿಜಯ್, ಬಾಲಕೃಷ್ಣರ ಸಿನಿಮಾದಲ್ಲಿ ಯಾವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಪಾತ್ರ ಯಾವುದು? ಸಿನಿಮಾದ ಹೆಸರು ಇತರೆ ಮಾಹಿತಿಗಳು ಹೊರಬಿದ್ದಿರಲಿಲ್ಲ. ಆದರೆ ಈಗ ಸಿನಿಮಾ ಚಿತ್ರೀಕರಣದ ಚಿತ್ರವೊಂದು ವೈರಲ್ ಆಗಿದ್ದು, ಚಿತ್ರ ನೋಡಿದರೆ ಹಲವು ಅನುಮಾನಗಳು ಏಳುತ್ತಿವೆ.

ಬಾಲಕೃಷ್ಣ ಜೊತೆಗೆ ದುನಿಯಾ ವಿಜಯ್ ನಟಿಸುತ್ತಿರುವ ಸಿನಿಮಾದ ಚಿತ್ರ ವೈರಲ್ ಆಗಿದ್ದು, ಆ ಚಿತ್ರ ಕನ್ನಡದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದ ಸೂಪರ್ ಹಿಟ್ ಸಿನಿಮಾ 'ಮಫ್ತಿ'ಯ ದೃಶ್ಯವನ್ನು ಹೋಲುತ್ತಿದೆ.

Balakrishna Acting In Shiva Rajkumars Mafti Movie Telugu Remake

ಮಫ್ತಿಯಲ್ಲಿ ಶಿವರಾಜ್ ಕುಮಾರ್ ಅವರಂತೆ ಕಪ್ಪು ಲೆನಿನ್ ಶರ್ಟ್, ಪಮಚೆ ಧರಿಸಿ ಮರದ ಕುರ್ಚಿಯ ಮೇಲೆ ಬಾಲಕೃಷ್ಣ ಕೂತಿದ್ದರೆ ಅವರ ಹಿಂದೆ ಉದ್ದನೆಯ ಜುಬ್ಬ ಧರಿಸಿ ಬಿಳಿಯ ಗಡ್ಡ ಬಿಟ್ಟು ವ್ಯಕ್ತಿಯೊಬ್ಬರು ನಿಂತಿದ್ದಾರೆ. ಅವರ ಪಕ್ಕದಲ್ಲಿಯೇ ಸಾಲಾಗಿ ಐಶಾರಾಮಿ ಕಾರುಗಳು ನಿಂತಿವೆ.

ಕನ್ನಡದ 'ಮಫ್ತಿ' ಸಿನಿಮಾದಲ್ಲಿ ಇಂಥಹುದೇ ಒಂದು ದೃಶ್ಯವಿದೆ. ಆ ದೃಶ್ಯಕ್ಕೂ ಈಗ ವೈರಲ್ ಆಗಿರುವ ಬಾಲಕೃಷ್ಣ ಚಿತ್ರಕ್ಕೂ ಬಹಳ ದೊಡ್ಡ ಹೋಲಿಕೆ ಇದೆ.

'ಮಫ್ತಿ' ಸಿನಿಮಾದ ತೆಲುಗು ರೀಮೇಕ್‌ನಲ್ಲಿ ದುನಿಯಾ ವಿಜಯ್‌ರ ಪಾತ್ರ ಏನೆಂಬುದು ಇನ್ನು ಸ್ಪಷ್ಟವಾಗಿಲ್ಲ. ಆದರೆ ಕನ್ನಡದ 'ಮಫ್ತಿ'ಯಲ್ಲಿ ಶ್ರೀಮುರಳಿ ನಿರ್ವಹಿಸಿದ್ದ ಪಾತ್ರದವನ್ನು ತೆಲುಗಿನಲ್ಲಿ ದುನಿಯಾ ವಿಜಯ್ ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಚಿತ್ರೀಕರಣ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ.

'ಮಫ್ತಿ' ಸಿನಿಮಾದಲ್ಲಿ ಸಿನಿಮಾದಲ್ಲಿ ನಟ ಶ್ರೀಮುರಳಿ, ಛಾಯಾ ಸಿಂಗ್ ಸಹ ನಟಿಸಿದ್ದರು. 2017 ರಲ್ಲಿ ಬಿಡುಗಡೆ ಆಗಿದ್ದ 'ಮಫ್ತಿ' ಸಿನಿಮಾವನ್ನು ನರ್ತನ್ ನಿರ್ದೇಶನ ಮಾಡಿದ್ದರು. ಕನ್ನಡದಲ್ಲಿ ಛಾಯಾ ಸಿಂಗ್ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

More from Filmibeat

English summary
Nandamuri Balakrishna acting in Shiva Rajkumar's Mafti movie Telugu remake. Duniya Vijay is also acting in that movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X