ವೀರಸಿಂಹ ರೆಡ್ಡಿ ಸಕ್ಸಸ್: ನಟಿ ಹನಿ ರೋಸ್ ಜತೆ ಬಾಲಕೃಷ್ಣ ಪಾರ್ಟಿ!

ಎದುರಿಗೆ ಯಾರೇ ಇದ್ದರೂ ಯಾರಿಗೂ ತಲೆ ಕೆಡಿಸಿಕೊಳ್ಳದೇ ತನಗೆ ಅನಿಸಿದ್ದನ್ನು ನೇರವಾಗಿ ಹೇಳುವ ಸ್ವಭಾವವನ್ನು ಹೊಂದಿರುವ ನಟ ನಂದಮೂರಿ ಬಾಲಕೃಷ್ಣ. ಸಿನಿಮಾದಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲಿಯೂ ಸಹ ಬಾಲಕೃಷ್ಣ ಮಾತನಾಡುವಾಗ ಎದುರು ಮಾತನಾಡುವವರು ಯಾರೂ ಸಹ ಇಲ್ಲ. ಇನ್ನು ಬಾಲಕೃಷ್ಣ ಅವರು ಮೇಲಿನಿಂದ ಮಾತ್ರ ಕಲ್ಲಿನಂತಹ ಸ್ವಭಾವದವರ ರೀತಿ ಕಾಣುತ್ತಾರೆ, ಆದರೆ ಅವರ ಮನಸ್ಸು ತುಂಬಾ ಮೃದು ಎಂದು ಬಾಲಕೃಷ್ಣ ಅವರ ಜತೆ ನಟಿಸಿದ ಹಲವಾರು ಕಲಾವಿದರು ಹೇಳಿಕೊಂಡಿದ್ದಾರೆ.

ಇನ್ನು ತನ್ನ ಚಿತ್ರದ ಗೆಲುವನ್ನು ಸದಾ ಮುಕ್ತ ಮನಸ್ಸಿನಿಂದ ಆಚರಿಸುವ ಬಾಲಕೃಷ್ಣ ಈ ಬಾರಿಯ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆಗೊಂಡ ವೀರಸಿಂಹ ರೆಡ್ಡಿ ಚಿತ್ರದ ಗೆಲುವನ್ನೂ ಸಹ ಆಚರಿಸಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ವೀರಸಿಂಹ ರೆಡ್ಡಿ ಸಕ್ಸಸ್ ಪಾರ್ಟಿಯಲ್ಲಿ ನಟ ಬಾಲಕೃಷ್ಣ ಜತೆ ಚಿತ್ರದ ನಟಿಯರಲ್ಲಿ ಓರ್ವರಾದ ಹನಿ ರೋಸ್ ಸಹ ಭಾಗವಹಿಸಿದ್ದರು.

Balakrishna and Honey Rose photo from Veera Simha Reddy success party goes viral

ಸದ್ಯ ಈ ಪಾರ್ಟಿಯಲ್ಲಿ ಬಾಲಕೃಷ್ಣ ಹಾಗೂ ನಟಿ ಹನಿ ರೋಸ್ ಶ್ಯಾಂಪೇನ್ ಅನ್ನು ಕೈ ಕೈ ಬಳಸಿ ವಿಭಿನ್ನ ಶೈಲಿಯಲ್ಲಿ ಕುಡಿಯುತ್ತಿರುವ ಫೋಟೊವೊಂದು ವೈರಲ್ ಆಗಿದೆ. ಈ ಫೋಟೊ ಸಾಮಾಜಿಕ ಜಾಲತಾಣದ ತುಂಬಾ ಹರಿದಾಡಿದ್ದು, ನೆಟ್ಟಿಗರು ಭಿನ್ನ ವಿಭಿನ್ನ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇನ್ನು ನಟಿ ಹನಿ ರೋಸ್ ಮೂಲತಃ ಮಲಯಾಳಂನವರಾಗಿದ್ದು, ವೀರಸಿಂಹ ರೆಡ್ಡಿ ಮೂಲಕ ಟಾಲಿವುಡ್ ಪ್ರವೇಶಿಸಿದ್ದಾರೆ. ಈ ಚಿತ್ರದಲ್ಲಿ ಹನಿ ರೋಸ್ ಬಾಲಕೃಷ್ಣ ಪತ್ನಿ ಮೀನಾಕ್ಷಿ ಪಾತ್ರವನ್ನು ನಿರ್ವಹಿಸಿದ್ದರು. ಇನ್ನು ಸಕ್ಸಸ್ ಪಾರ್ಟಿಯಲ್ಲಿ ನೇರಳೆ ಬಣ್ಣದ ಗೌನ್ ಧರಿಸಿದ್ದ ನಟಿ ಹನಿ ರೋಸ್ ಕ್ಯಾಮೆರಾಗೆ ಹಾಟ್ ಪೋಸ್ ಕೊಟ್ಟಿದ್ದು, ಈ ಚಿತ್ರಗಳೂ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಷ್ಟೇ ಅಲ್ಲದೇ ಅನಿಲ್ ರವಿಪುಡಿ ನಿರ್ದೇಶಿಸಲಿರುವ ಬಾಲಕೃಷ್ಣ ನಟನೆಯ ಮುಂದಿನ ಚಿತ್ರಕ್ಕೂ ಸಹ ಹನಿ ರೋಸ್ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಇನ್ನು ಈ ಬಾರಿಯ ಸಂಕ್ರಾಂತಿ ಪ್ರಯುಕ್ತ ಇದೇ ಜನವರಿ 12ರಂದು ಬಿಡುಗಡೆಯಾಗಿದ್ದ ವೀರಸಿಂಹ ರೆಡ್ಡಿ 11 ದಿನಗಳಲ್ಲಿ 124 ಕೋಟಿ ಗಳಿಕೆ ಮಾಡಿದ್ದು, ಯಶಸ್ಸು ಗಳಿಸಿ ಅಬ್ಬರಿಸಿದೆ.

More from Filmibeat

English summary
Balakrishna and Honey Rose photo from Veera Simha Reddy success party goes viral. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X