ಬಾಲಕೃಷ್ಣ-ಜೂ ಎನ್‌ಟಿಆರ್ ನಡುವೆ ಬಿರುಕು ಇನ್ನಷ್ಟು ಹೆಚ್ಚು!

ತೆಲುಗು ಚಿತ್ರರಂಗದ ಪ್ರಮುಖ ಕುಟುಂಬವಾದ ನಂದಮೂರಿ ಕುಟುಂಬ 'ಮನೆಯೊಂದು ಮೂರು ಬಾಗಿಲು' ಎಂಬಂತಾಗಿದೆ. ಇದೇನೂ ಹೊಸ ಪರಿಸ್ಥಿತಿಯಲ್ಲ, ಹಿರಿಯ ಎನ್‌ಟಿಆರ್ ಬದುಕಿದ್ದಾಗಿನಿಂದಲೂ ಇದೇ ಸ್ಥಿತಿ ಇದೆ.

ಸೀನಿಯರ್ ಎನ್‌ಟಿಆರ್ ಬದುಕಿದ್ದಾಗ ಅವರನ್ನೇ ಒಂದು ಸಮಯದಲ್ಲಿ ದೂರ ಮಾಡಿದ್ದ ಕುಟುಂಬ. ಎನ್‌ಟಿಆರ್ ನಿಧನದ ಬಳಿಕವೂ ಒಳಜಗಳಗಳು ಹಾಗೆಯೇ ಮುಂದುವರೆಸಿದವು. ಹೊರಗೆ ಎಷ್ಟೇ 'ನಾವೆಲ್ಲ ಚೆನ್ನಾಗಿದ್ದೇವೆ' ಎಂಬ ಫೋಸು ನೀಡಿದರು ಕುಟುಂಬದ ವೈಮನಸ್ಯಗಳು ಆಗಾಗ್ಗೆ ಹೊರಗೆ ಇಣುಕುತ್ತಲೇ ಇರುತ್ತವೆ.

ಬಾಲಕೃಷ್ಣ ಹಾಗೂ ಜೂ ಎನ್‌ಟಿಆರ್ ತೆಲುಗು ಚಿತ್ರರಂಗದಲ್ಲಿ ಸದ್ಯಕ್ಕೆ ಅತಿ ಹೆಚ್ಚು ಸ್ಟಾರ್‌ಗಿರಿ ಉಳ್ಳ ನಂದಮೂರಿ ಕುಟುಂಬದ ನಟರು. ಜೂ ಎನ್‌ಟಿಆರ್‌ಗೆ, ಬಾಲಕೃಷ್ಣ ಚಿಕ್ಕಪ್ಪ ಆಗುತ್ತಾರೆ. ಬಾಲಕೃಷ್ಣ, ಜೂ ಎನ್‌ಟಿಆರ್ ತಂದೆ ಹರಿಕೃಷ್ಣ ಅವರ ಸಹೋದರ. ಹರಿಕೃಷ್ಣ ಬದುಕಿದ್ದಾಗಲೂ ಬಾಲಕೃಷ್ಣ ಹಾಗೂ ಹರಿಕೃಷ್ಣ ಸಂಬಂಧ ಅಷ್ಟಾಗಿಯೇನೂ ಸರಿಯಿರಲಿಲ್ಲ. ಹರಿಕೃಷ್ಣ ನಿಧನದ ಬಳಿಕವೂ ಎರಡೂ ಕುಟುಂಬಗಳ ನಡುವೆ ಮನಸ್ತಾಪ ಹಾಗೇ ಮುಂದುವರೆದಿದೆ.

ಜೂ ಎನ್‌ಟಿಆರ್‌ಗೆ ಆಹ್ವಾನ ಇಲ್ಲ

ಜೂ ಎನ್‌ಟಿಆರ್‌ಗೆ ಆಹ್ವಾನ ಇಲ್ಲ

ನಿನ್ನೆಯಷ್ಟೆ ಬಾಲಕೃಷ್ಣ ನಟನೆಯ 'ಅಖಂಡ' ಸಿನಿಮಾದ ಪ್ರೀ ರಿಲೀಸ್ ಇವೆಂಟ್‌ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ತಮ್ಮದೇ ಕುಟುಂಬದ ಸ್ಟಾರ್ ನಟ ಜೂ ಎನ್‌ಟಿಆರ್ ಅನ್ನು ಕರೆಯುವ ಬದಲಿಗೆ ತಮ್ಮ ಪ್ರತಿಸ್ಪರ್ಧಿ ಕುಟುಂಬಕ್ಕೆ ಸೇರಿದ ಅಲ್ಲು ಅರ್ಜುನ್ ಅನ್ನು ಬಾಲಕೃಷ್ಣ ಆಹ್ವಾನ ಮಾಡಿದರು. ಇದು ಚರ್ಚೆಗೆ ಕಾರಣವಾಗಿದೆ.

ಬಾಲಯ್ಯ ಅಭಿಮಾನಿಗಳಿಗೇ ಅಚ್ಚರಿ

ಬಾಲಯ್ಯ ಅಭಿಮಾನಿಗಳಿಗೇ ಅಚ್ಚರಿ

ಈ ಹಿಂದಿನ ಬಾಲಕೃಷ್ಣರ ಕೆಲವು ಸಿನಿಮಾಗಳ ಕಾರ್ಯಕ್ರಮಗಳಿಗೆ ಜೂ ಎನ್‌ಟಿಆರ್ ಅತಿಥಿಯಾಗಿ ಪಾಲ್ಗೊಂಡು ಚಿಕ್ಕಪ್ಪನಿಗೆ ಆಲ್‌ ದಿ ಬೆಸ್ಟ್ ಹೇಳಿದ್ದರು. ಆದರೆ ಈಗ ಇಬ್ಬರ ನಡುವಿನ ಮುನಿಸು ಹೆಚ್ಚಾಗಿರುವ ಕಾರಣ ಬಾಲಕೃಷ್ಣ, ಜೂ ಎನ್‌ಟಿಆರ್ ಅನ್ನು ಹೊರಗಿಟ್ಟು ಆ ಜಾಗಕ್ಕೆ ಅಲ್ಲು ಅರ್ಜುನ್ ಅನ್ನು ಕರೆತಂದಿದ್ದಾರೆ. ಸಾಮಾನ್ಯವಾಗಿ ಚಿರಂಜೀವಿ ಕುಟುಂಬದಿಂದ ಅಂತರ ಕಾಯ್ದುಕೊಳ್ಳುತ್ತಿದ್ದ ಬಾಲಕೃಷ್ಣ, ಅದೇ ಕುಟುಂಬಕ್ಕೆ ಸೇರಿದ ಅಲ್ಲು ಅರ್ಜುನ್ ಅನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಸ್ವತಃ ಬಾಲಯ್ಯ ಅಭಿಮಾನಿಗಳಿಗೆ ಆಶ್ಚರ್ಯ ತರಿಸಿದೆ.

ಜೂ ಎನ್‌ಟಿಆರ್ ವಿರುದ್ಧ ಹೇಳಿಕೆ ನೀಡಿದ್ದ ಬಾಲಕೃಷ್ಣ

ಜೂ ಎನ್‌ಟಿಆರ್ ವಿರುದ್ಧ ಹೇಳಿಕೆ ನೀಡಿದ್ದ ಬಾಲಕೃಷ್ಣ

ಬಾಲಕೃಷ್ಣ ಹಾಗೂ ಜೂ ಎನ್‌ಟಿಆರ್ ನಡುವೆ ಮನಸ್ಥಾಪ ಹೆಚ್ಚಾಗಲು ಕಾರಣ ಬಾಲಕೃಷ್ಣ ನೀಡಿದ್ದ ಸಂದರ್ಶನ. ''ಟಿಡಿಪಿ ಪಕ್ಷ ಹೀನಾಯ ಸ್ಥಿತಿಯಲ್ಲಿದೆ, ಈ ಹಂತದಲ್ಲಿ ಯುವಕರನ್ನು ಪಕ್ಷಕ್ಕೆ ಕರೆತರಲು ಜೂ ಎನ್‌ಟಿಆರ್ ಸೂಕ್ತ ವ್ಯಕ್ತಿ ಎನಿಸುವುದಿಲ್ಲವೇ ಅವರನ್ನು ಸಕ್ರಿಯ ರಾಜಕೀಯಕ್ಕೆ ಏಕೆ ಕರೆತರುತ್ತಿಲ್ಲ?'' ಎಂಬ ಸಂದರ್ಶಕಿಯ ಪ್ರಶ್ನೆಗೆ ಉತ್ತರಿಸಿದ ಬಾಲಕೃಷ್ಣ, ''ಜೂ ಎನ್‌ಟಿಆರ್ ಬಂದರೆ ಪಕ್ಷಕ್ಕೆ ಪ್ಲಸ್ ಆಗುತ್ತದೆ ಎನ್ನುತ್ತಿದ್ದಾರೆ, ಆದರೆ ಅದು ಮೈನಸ್ ಆಗಿಬಿಟ್ಟರೆ. ಯುವಕರನ್ನು ಸೆಳೆಯಲು ಅವನೇ ಏಕೆ ಬರಬೇಕು? ನನ್ನ ಕೈಯಿಂದ ಆಗುವುದಿಲ್ಲವೇ? ನಾನೇ ಯುವಕರನ್ನು ಕರೆತರುತ್ತೇನೆ ನೋಡುತ್ತಿರಿ'' ಎಂದಿದ್ದರು. ಇದು ಇಬ್ಬರ ನಡುವಿನ ಮುನಿಸು ಮತ್ತಷ್ಟು ಹೆಚ್ಚಲು ಕಾರಣವಾಯ್ತು.

ಡಿಸೆಂಬರ್ 02ರಂದು ಸಿನಿಮಾ ಬಿಡುಗಡೆ

ಡಿಸೆಂಬರ್ 02ರಂದು ಸಿನಿಮಾ ಬಿಡುಗಡೆ

ಇನ್ನು ಬಾಲಕೃಷ್ಣ ನಟನೆಯ 'ಅಖಂಡ' ಸಿನಿಮಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಲ್ಲು ಅರ್ಜುನ್, 'ಬಾಲಕೃಷ್ಣ ನನಗೆ ತಂದೆ ಇದ್ದಂತೆ. ಅಲ್ಲು ಕುಟುಂಬ ಹಾಗೂ ಎನ್‌ಟಿಆರ್ ಕುಟುಂಬದ ನಡುವಿನ ಬಂಧ ಬಹಳ ಹಳೆಯದ್ದು, ನಮ್ಮ ತಾತನವರು ಎನ್‌ಟಿಆರ್ ಅವರ ಕುಟುಂಬಕ್ಕೆ ಬಹಳ ಆಪ್ತರಾಗಿದ್ದರು. ನಾನು ನಟ ಚಿರಂಜೀವಿ, ಬಾಲಕೃಷ್ಣ ಅವರುಗಳ ಸಿನಿಮಾ ನೋಡಿಕೊಂಡು ಬೆಳೆದವನು. 'ಅಖಂಡ' ಸಿನಿಮಾ ಬಹಳ ದೊಡ್ಡ ಹಿಟ್ ಆಗಲಿ'' ಎಂದು ಹಾರೈಸಿದರು. 'ಅಖಂಡ' ಸಿನಿಮಾ ಡಿಸೆಂಬರ್ 02 ರಂದು ಬಿಡುಗಡೆ ಆಗಲಿದೆ.

More from Filmibeat

English summary
Actor Balakrishna invited Allu Arjun to Akhanda movie pre release event instead of Jr NTR. Diffrences between two of them growing big.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X