Jr NTR Vs Balakrishna: "ತಾರಕ್ ಫ್ಲೆಕ್ಸ್, ಬ್ಯಾನರ್ ಕಿತ್ತು ಬಿಸಾಕಿ": ಬಾಲಯ್ಯ- ಜ್ಯೂ. NTR ನಡುವಿನ ಶೀತಲ ಸಮರ ಬಯಲು?

ತೆಲುಗು ನಟ ಎನ್‌ಟಿಆರ್‌ 28ನೇ ಪುಣ್ಯಸ್ಮರಣೆ ಸಂದರ್ಭದಲ್ಲಿ ತಾರಕ್- ಬಾಲಯ್ಯ ನಡುವಿನ ಭಿನ್ನಾಭಿಪ್ರಾಯ ಹೊರಬಿದ್ದಿದೆ. ಇಂದು(ಜನವರಿ 18) ತೆಲುಗು ನಟ ಹಾಗೂ ಆಂಧ್ರದ ಮಾಜಿ ಸಿಎಂ ದಿವಂಗತ ಎನ್‌ಟಿಆರ್ ಪುಣ್ಯಸ್ಮರಣೆ. ಈ ಸಂದರ್ಭದಲ್ಲಿ ಮಕ್ಕಳು, ಮೊಮ್ಮಕ್ಕಳು ಹೈದರಾಬಾದ್‌ನ ಎನ್‌ಟಿಆರ್ ಸಮಾಧಿಗೆ ನಮನ ಸಲ್ಲಿಸಿದ್ದಾರೆ. ಇದೇ ವೇಳೆ ತಾರಕ್ ಹಾಗೂ ಬಾಲಯ್ಯ ಶೀತಲ ಸಮಯ ಬಯಲಾಗಿದೆ.

ಜ್ಯೂ. ಎನ್‌ಟಿಆರ್ ಹಾಗೂ ಚಿಕ್ಕಪ್ಪ ಬಾಲಕೃಷ್ಣ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ನಡೀತಿತ್ತು. ಕೆಲ ಭಿನ್ನಾಭಿಪ್ರಾಯಗಳ ಕಾರಣಕ್ಕೆ ಒಬ್ಬರನ್ನು ಕಂಡಂರೆ ಮತ್ತೊಬ್ಬರಿಗೆ ಆಗಲ್ಲ. ಇಬ್ಬರೂ ಇತ್ತೀಚೆಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ. ಎನ್‌ಟಿಆರ್‌ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲೂ ಯಂಗ್ ಟೈಗರ್ ಭಾಗಿ ಆಗಿಲ್ಲ. ಭಿನ್ನಾಭಿಪ್ರಾಯವೇ ಇದಕ್ಕೆಲ್ಲಾ ಕಾರಣ ಎನ್ನಲಾಗಿತ್ತು. ಇದು ಈಗ ಬಹಿರಂಗವಾಗಿದೆ.

Balakrishna Orders To Remove Jr NTR Banners At Sr NTR Ghat

ಎನ್‌ಟಿಆರ್ ಪುಣ್ಮಸ್ಮರಣೆ ಹಿನ್ನೆಲೆ ಸಮಾಧಿ ಬಳಿ ಅಭಿಮಾನಿಗಳು ಸಾಕಷ್ಟು ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕಿದ್ದರು. ಅದರಲ್ಲಿ ಜ್ಯೂ. ಎನ್‌ಟಿಆರ್ ಫೋಟೊಗಳಿದ್ದ ಬ್ಯಾನರ್‌ಗಳು ಇದ್ದವು. ತಂದೆ ಸಮಾಧಿಗೆ ನಮನ ಸಲ್ಲಿಸಲು ಬಂದ ಬಾಲಕೃಷ್ಣ ಅಲ್ಲಿ ತಾರಕ್ ಬ್ಯಾನರ್‌ಗಳನ್ನು ನೋಡಿ ಗರಂ ಆಗಿದ್ದಾರೆ. ಕೂಡಲೇ ಅದನ್ನೆಲ್ಲೇ ತೆಗೆದು ಬಿಸಾಕಿ ಎಂದು ಖಾರವಾಗಿಯೇ ಸೂಚಿಸಿದ್ದಾರೆ. ಕೂಡಲೇ ಅಲ್ಲಿದ್ದವರು ಆ ಫ್ಲೆಕ್ಸ್, ಬ್ಯಾನರ್ ತೆಗೆದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಜ್ಯೂ. ಎನ್‌ಟಿಆರ್ ಬಂದು ತಾತನ ಸಮಾಧಿಗೆ ಶ್ರದ್ದಾಂಜಲಿ ಸಲ್ಲಿಸಿ ಹೋದ ಬಳಿಕ ಬಾಲಕೃಷ್ಣ ಅಲ್ಲಿಗೆ ಬಂದರು. ಬಾಲಕೃಷ್ಣ ಅಲ್ಲಿ ಹಾಕಿದ್ದ ಬ್ಯಾನರ್, ಫ್ಲೆಕ್ಸ್ ಎಲ್ಲಾ ನೋಡಿ ಕೂಡಲೇ ತೆಗೆಸಿಬಿಡಿ ಎಂದು ಆಪ್ತರಿಗೆ ಗರಂ ಆಗಿ ಹೇಳಿದ್ದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಬಾಲಯ್ಯ ಹೀಗೆ ಹೇಳುತ್ತಿದ್ದಂತೆ ಒಂದಷ್ಟು ಜನ ಜ್ಯೂ. ಎನ್‌ಟಿಆರ್ ಬ್ಯಾನರ್ ತೆಗೆದಿದ್ದಾರೆ. ಬಾಲಯ್ಯ ಹೇಳಿದ್ದಕ್ಕೆ ಬ್ಯಾನರ್ ತೆರವು ಮಾಡಲಾಯಿತು ಎನ್ನಲಾಗುತ್ತಿದೆ.

ಬಾಲಕೃಷ್ಣ ಹಾಗೂ ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಹಳ ಆತ್ಮೀಯರು. ಬೀಗರು ಆಗಬೇಕು. ಇತ್ತೀಚೆಗೆ ಸ್ಕಿಲ್ ಸ್ಕ್ಯಾಮ್ ವಿಚಾರವಾಗಿ ಚಂದ್ರಬಾಬು ನಾಯ್ಡು ಬಂಧನವಾಗಿತ್ತು. ಕೆಲ ದಿನಗಳ ಕಾಲ ಜೈಲುವಾಸ ಅನುಭವಿಸಿ ಬಂದರು. ಆ ಸಂದರ್ಭದಲ್ಲಿ ಜ್ಯೂ. ಎನ್‌ಟಿಆರ್ ಪ್ರತಿಕ್ರಿಯಿಸಿರಲಿಲ್ಲ. ನಂದಮೂರಿ ಕುಟುಂಬ ಸದಸ್ಯರೆಲ್ಲಾ ಚಂದ್ರಬಾಬು ಪರ ನಿಂತಿದ್ದಾರೆ. ತಾರಕ್ ಮಾತ್ರ ಸುಮ್ಮನಿದ್ದರು. ಇದೇ ವಿಚಾರಕ್ಕೆ ಬಾಲಯ್ಯ ಹಾಗೂ ತಾರಕ್ ನಡುವೆ ಭಿನ್ನಾಭಿಪ್ರಾಯ ಶುರುವಾಯಿತು ಎನ್ನಲಾಗ್ತಿದೆ.

ಚಂದ್ರಬಾಬು ಜೊತೆಗೆ ಬಾಲಕೃಷ್ಣ ಹಾಗೂ ಜೂ. ಎನ್‌ಟಿಆರ್ ನಡುವಿನ ಅಂತರ ಹೆಚ್ಚಾಗಿದೆ. ನಂದಮೂರಿ ಕುಟುಂಬದ ನಡುವೆಯೂ ಸಾಕಷ್ಟೂ ಭಿನ್ನಾಭಿಪ್ರಾಯ ಇದೆ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ಎನ್‌ಟಿಆರ್ ಘಾಟ್ ಬಳಿ ಹಾಕಿದ್ದ ತಾರಕ್ ಬ್ಯಾನರ್, ಫ್ಲೆಕ್ಸ್ ತೆಗೆದು ಚಂದ್ರಬಾಬು ಹಾಗೂ ಬಾಲಕೃಷ್ಣ ಫ್ಲೆಕ್ಸಿಗಳನ್ನಷ್ಟೇ ಹಾಕಿರುವುದು ಭಾರೀ ಚರ್ಚೆ ಹುಟ್ಟಾಕ್ಕಿದೆ.

ನಿಜಕ್ಕೂ ಬಾಲಕೃಷ್ಣ ಹಾಗೂ ತಾರಕ್ ನಡುವೆ ಭಿನ್ನಾಭೀಪ್ರಾಯ ಇರುವುದು ನಿಜವೇ? ಫ್ಲೆಕ್ಸಿ ತೆಗೆಯಲು ಹೇಳಿದ್ದು ಯಾರು? ತೆಗೆದಿದ್ದು ಯಾರೂ? ಯಾಕೆ ತೆಗೆದರು? ಎನ್ನುವ ಬಗ್ಗೆ ಖಚಿತ ಮಾಹಿತಿ ಸಿಗಬೇಕಿದೆ. ಬಾಲಕೃಷ್ಣ ಸಹೋದರ ಹರಿಕೃಷ್ಣ ಪುತ್ರ ಜ್ಯೂ. ಎನ್‌ಟಿಆರ್. ತಾತ ಹಾಗೂ ತಂದೆಯ ಹಾದಿಯಲ್ಲೇ ಚಿತ್ರರಂಗಕ್ಕೆ ಬಂದರು. ತಂದೆಯ ಬಳಿಕ ಪುತ್ರ ಬಾಲಕೃಷ್ಣ ಚಿತ್ರರಂಗಕ್ಕೆ ಬಂದು ಗೆದ್ದರು.

Balakrishna Orders To Remove Jr NTR Banners At Sr NTR Ghat

ಜ್ಯೂ. ಎನ್‌ಟಿಆರ್ ಸದ್ಯ 'ದೇವರ' ಸರಣಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಬಾಲಿವುಡ್‌ನಲ್ಲಿ 'ವಾರ್- 2' ಚಿತ್ರಕ್ಕೆ ಸಹಿ ಮಾಡಿದ್ದಾರೆ. ಕಳೆದ ವರ್ಷ 'ಭಗವಂತ್ ಕೇಸರಿ' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದ ಬಾಲಯ್ಯ ಸದ್ಯ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Balakrishna Angry over Jr Ntr Flex, Banners at NTR Ghat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X