ಕೆಜಿಎಫ್ ಚಾಪ್ಟರ್-2 ಚಿತ್ರದಲ್ಲಿ ತೆಲುಗು ನಟ ಬಾಲಕೃಷ್ಣ?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸುದ್ದಿ ಕಂಡು ತೆಲುಗು ನಟ ಬಾಲಕೃಷ್ಣ ಅಭಿಮಾನಿಗಳು ಬಹಳ ಥ್ರಿಲ್ ಆಗಿದ್ದಾರೆ. ಸದ್ಯ ತೆಲುಗು ಮಾಯಾನಗರಿಯಲ್ಲಿ ಚರ್ಚೆಯಾಗುತ್ತಿರುವ ಪ್ರಕಾರ ಹಿರಿಯ ನಟ ಬಾಲಕೃಷ್ಣ ಕೆಜಿಎಫ್ 2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಚಿತ್ರತಂಡದ ಯಾರೂ ಅಧಿಕೃತವಾಗಿ ಮಾತನಾಡಿಲ್ಲ. ಆದರೆ, ಇಂತಹದೊಂದು ಅನುಮಾನಕ್ಕೆ, ಕುತೂಹಲಕ್ಕೆ ಕಾರಣವಾಗಿರುವುದು ಗೂಗಲ್ ಸರ್ಚ್‌ನಲ್ಲಿ ಸಿಕ್ಕಿರುವ ಉತ್ತರ.
ಗೂಗಲ್‌ನಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರತಂಡ (KGF Chapter 2 cast) ಎಂದು ಹುಡುಕಿದರೆ ಅದರಲ್ಲಿ ಬಾಲಕೃಷ್ಣ ಅವರ ಫೋಟೋ ಸಹ ಬರ್ತಿದೆ. ಇನ್ನುಳಿದಂತೆ ಕೆಜಿಎಫ್ ಸಿರೀಸ್‌ನಲ್ಲಿ ನಟಿಸಿರುವ ಕಲಾವಿದರ ಫೋಟೋ ತೋರಿಸುತ್ತಿದೆ. ಇದು ಈ ಅನುಮಾನಕ್ಕೆ ಕಾರಣವಾಗಿದೆ.

ಇನಾಯತ್ ಖಲೀಲ್ ಪಾತ್ರದಲ್ಲಿ ಬಾಲಕೃಷ್ಣ?
ಕೆಜಿಎಫ್ ಚಾಪ್ಟರ್ ಒಂದರ ದೃಶ್ಯವೊಂದರಲ್ಲಿ ಬಂದು ಹೋಗುವ ಇನಾಯತ್ ಖಲೀಲ್ ಎಂಬ ಪಾತ್ರದಲ್ಲಿ ಬಾಲಕೃಷ್ಣ ನಟಿಸಿದ್ದಾರೆ ಎಂದು ತೋರಿಸುತ್ತಿದೆ. ಹಾಗ್ನೋಡಿದ್ರೆ, ಚಾಪ್ಟರ್ 2ರಲ್ಲಿ ಈ ಪಾತ್ರ ಪ್ರಮುಖವಾಗಿದೆ. ಅಧೀರನ ನಂತರ ಇನಾಯತ್ ಖಲೀಲ್ ಪಾತ್ರ ಮುಖ್ಯವಾಗಿದೆ.

ನಿಜ ಏನಪ್ಪಾ ಅಂದ್ರೆ....
ಇನಾಯತ್ ಖಲೀಲ್ ಪಾತ್ರದಲ್ಲಿ ಬಾಲಕೃಷ್ಣ ನಟಿಸಿರುವುದು ನಿಜ. ಆದ್ರೆ, ಅದು ತೆಲುಗು ನಟ ಬಾಲಕೃಷ್ಣ ಅಲ್ಲ. ಯುವ ನಟ ಆದರ್ಶ್ ಅವರ ತಂದೆ ಬಾಲಕೃಷ್ಣ ಈ ಪಾತ್ರವನ್ನು ನಿರ್ವಹಿಸಿದ್ದಾರೆ. ಆ ಬಾಲಕೃಷ್ಣ ಬದಲು ಲೆಜೆಂಡ್ ಬಾಲಯ್ಯ ಫೋಟೋವನ್ನು ಗೂಗಲ್ ತಪ್ಪಾಗಿ ತೋರಿಸುತ್ತಿದೆ.

ಜನವರಿ 8ಕ್ಕೆ ಕೆಜಿಎಫ್ ಟೀಸರ್
ನಟ ಯಶ್ ಅವರ ಹುಟ್ಟುಹಬ್ಬದ ಹಿನ್ನೆಲೆ ಜನವರಿ 8 ರಂದು ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ. ಈ ಕುರಿತು ಈಗಾಗಲೇ ಪ್ರಶಾಂತ್ ನೀಲ್ ಮತ್ತು ಚಿತ್ರತಂಡ ಪ್ರಕಟಣೆ ಮಾಡಿದೆ. ಸಿನಿಮಾ ಬಿಡುಗಡೆಗೆ ಬಗ್ಗೆ ಸದ್ಯಕ್ಕೆ ಖಚಿತ ಮಾಹಿತಿ ಇಲ್ಲ.
Recommended Video

ಅಧೀರನ ಪಾತ್ರದಲ್ಲಿ ಸಂಜಯ್ ದತ್
ಕೆಜಿಎಫ್ ಚಾಪ್ಟರ್ 2ರಲ್ಲಿ ಹಲವು ಪ್ರಮುಖ ಕಲಾವಿದರ ಎಂಟ್ರಿಯಾಗಿದೆ. ಅಧೀರನ ಪಾತ್ರದಲ್ಲಿ ಸಂಜಯ್ ದತ್ ನಟಿಸಿದ್ದಾರೆ. ಹಿರಿಯ ನಟ ಪ್ರಕಾಶ್ ರೈ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ರವೀನಾ ಟಂಡನ್ ಭಾರತದ ಪ್ರಧಾನಮಂತ್ರಿಯಾಗಿ ಅಭಿನಯಿಸಿದ್ದಾರೆ.


Click it and Unblock the Notifications











