For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ಚಾಪ್ಟರ್-2 ಚಿತ್ರದಲ್ಲಿ ತೆಲುಗು ನಟ ಬಾಲಕೃಷ್ಣ?

  |

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸುದ್ದಿ ಕಂಡು ತೆಲುಗು ನಟ ಬಾಲಕೃಷ್ಣ ಅಭಿಮಾನಿಗಳು ಬಹಳ ಥ್ರಿಲ್ ಆಗಿದ್ದಾರೆ. ಸದ್ಯ ತೆಲುಗು ಮಾಯಾನಗರಿಯಲ್ಲಿ ಚರ್ಚೆಯಾಗುತ್ತಿರುವ ಪ್ರಕಾರ ಹಿರಿಯ ನಟ ಬಾಲಕೃಷ್ಣ ಕೆಜಿಎಫ್ 2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

  ಈ ಕುರಿತು ಚಿತ್ರತಂಡದ ಯಾರೂ ಅಧಿಕೃತವಾಗಿ ಮಾತನಾಡಿಲ್ಲ. ಆದರೆ, ಇಂತಹದೊಂದು ಅನುಮಾನಕ್ಕೆ, ಕುತೂಹಲಕ್ಕೆ ಕಾರಣವಾಗಿರುವುದು ಗೂಗಲ್‌ ಸರ್ಚ್‌ನಲ್ಲಿ ಸಿಕ್ಕಿರುವ ಉತ್ತರ.

  ಕೆಜಿಎಫ್ 2 ಚಿತ್ರೀಕರಣ ಮುಗಿದರೂ ಮನೆಗೆ ಹೋಗದೆ ಹೋಟೆಲ್‌ನಲ್ಲಿ ಉಳಿದ ಯಶ್!?ಕೆಜಿಎಫ್ 2 ಚಿತ್ರೀಕರಣ ಮುಗಿದರೂ ಮನೆಗೆ ಹೋಗದೆ ಹೋಟೆಲ್‌ನಲ್ಲಿ ಉಳಿದ ಯಶ್!?

  ಗೂಗಲ್‌ನಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರತಂಡ (KGF Chapter 2 cast) ಎಂದು ಹುಡುಕಿದರೆ ಅದರಲ್ಲಿ ಬಾಲಕೃಷ್ಣ ಅವರ ಫೋಟೋ ಸಹ ಬರ್ತಿದೆ. ಇನ್ನುಳಿದಂತೆ ಕೆಜಿಎಫ್ ಸಿರೀಸ್‌ನಲ್ಲಿ ನಟಿಸಿರುವ ಕಲಾವಿದರ ಫೋಟೋ ತೋರಿಸುತ್ತಿದೆ. ಇದು ಈ ಅನುಮಾನಕ್ಕೆ ಕಾರಣವಾಗಿದೆ.

  'ಕೆಜಿಎಫ್ 3' ಸಿನಿಮಾ ಕುರಿತು ಪ್ರಶಾಂತ್ ನೀಲ್ ಕೊಟ್ಟರು ಸ್ಪಷ್ಟನೆ'ಕೆಜಿಎಫ್ 3' ಸಿನಿಮಾ ಕುರಿತು ಪ್ರಶಾಂತ್ ನೀಲ್ ಕೊಟ್ಟರು ಸ್ಪಷ್ಟನೆ

  ಇನಾಯತ್ ಖಲೀಲ್ ಪಾತ್ರದಲ್ಲಿ ಬಾಲಕೃಷ್ಣ?

  ಇನಾಯತ್ ಖಲೀಲ್ ಪಾತ್ರದಲ್ಲಿ ಬಾಲಕೃಷ್ಣ?

  ಕೆಜಿಎಫ್ ಚಾಪ್ಟರ್ ಒಂದರ ದೃಶ್ಯವೊಂದರಲ್ಲಿ ಬಂದು ಹೋಗುವ ಇನಾಯತ್ ಖಲೀಲ್ ಎಂಬ ಪಾತ್ರದಲ್ಲಿ ಬಾಲಕೃಷ್ಣ ನಟಿಸಿದ್ದಾರೆ ಎಂದು ತೋರಿಸುತ್ತಿದೆ. ಹಾಗ್ನೋಡಿದ್ರೆ, ಚಾಪ್ಟರ್ 2ರಲ್ಲಿ ಈ ಪಾತ್ರ ಪ್ರಮುಖವಾಗಿದೆ. ಅಧೀರನ ನಂತರ ಇನಾಯತ್ ಖಲೀಲ್ ಪಾತ್ರ ಮುಖ್ಯವಾಗಿದೆ.

  ನಿಜ ಏನಪ್ಪಾ ಅಂದ್ರೆ....

  ನಿಜ ಏನಪ್ಪಾ ಅಂದ್ರೆ....

  ಇನಾಯತ್ ಖಲೀಲ್ ಪಾತ್ರದಲ್ಲಿ ಬಾಲಕೃಷ್ಣ ನಟಿಸಿರುವುದು ನಿಜ. ಆದ್ರೆ, ಅದು ತೆಲುಗು ನಟ ಬಾಲಕೃಷ್ಣ ಅಲ್ಲ. ಯುವ ನಟ ಆದರ್ಶ್ ಅವರ ತಂದೆ ಬಾಲಕೃಷ್ಣ ಈ ಪಾತ್ರವನ್ನು ನಿರ್ವಹಿಸಿದ್ದಾರೆ. ಆ ಬಾಲಕೃಷ್ಣ ಬದಲು ಲೆಜೆಂಡ್ ಬಾಲಯ್ಯ ಫೋಟೋವನ್ನು ಗೂಗಲ್‌ ತಪ್ಪಾಗಿ ತೋರಿಸುತ್ತಿದೆ.

  ಜನವರಿ 8ಕ್ಕೆ ಕೆಜಿಎಫ್ ಟೀಸರ್

  ಜನವರಿ 8ಕ್ಕೆ ಕೆಜಿಎಫ್ ಟೀಸರ್

  ನಟ ಯಶ್ ಅವರ ಹುಟ್ಟುಹಬ್ಬದ ಹಿನ್ನೆಲೆ ಜನವರಿ 8 ರಂದು ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ. ಈ ಕುರಿತು ಈಗಾಗಲೇ ಪ್ರಶಾಂತ್ ನೀಲ್ ಮತ್ತು ಚಿತ್ರತಂಡ ಪ್ರಕಟಣೆ ಮಾಡಿದೆ. ಸಿನಿಮಾ ಬಿಡುಗಡೆಗೆ ಬಗ್ಗೆ ಸದ್ಯಕ್ಕೆ ಖಚಿತ ಮಾಹಿತಿ ಇಲ್ಲ.

  ಸಲಾರ್ ಸಿನಿಮಾದಲ್ಲಿ ನಟಿಸಲು ಮತ್ತೊಂದು ಅವಕಾಶ ನೀಡಿದ ಪ್ರಶಾಂತ್ ನೀಲ್ | Filmibeat Kannada
  ಅಧೀರನ ಪಾತ್ರದಲ್ಲಿ ಸಂಜಯ್ ದತ್

  ಅಧೀರನ ಪಾತ್ರದಲ್ಲಿ ಸಂಜಯ್ ದತ್

  ಕೆಜಿಎಫ್ ಚಾಪ್ಟರ್ 2ರಲ್ಲಿ ಹಲವು ಪ್ರಮುಖ ಕಲಾವಿದರ ಎಂಟ್ರಿಯಾಗಿದೆ. ಅಧೀರನ ಪಾತ್ರದಲ್ಲಿ ಸಂಜಯ್ ದತ್ ನಟಿಸಿದ್ದಾರೆ. ಹಿರಿಯ ನಟ ಪ್ರಕಾಶ್ ರೈ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ರವೀನಾ ಟಂಡನ್ ಭಾರತದ ಪ್ರಧಾನಮಂತ್ರಿಯಾಗಿ ಅಭಿನಯಿಸಿದ್ದಾರೆ.

  English summary
  Telugu actor Balakrishna Played key role in Rocking star yash starrer KGF Chapter 2? its really true?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X