ರಶ್ಮಿಕಾಗೆ ಪ್ರಪೋಸ್ ಮಾಡಿ ವಿಜಯ್ ದೇವರಕೊಂಡಗೆ ಖಡಕ್ ವಾರ್ನಿಂಗ್ ಕೊಟ್ಟ ಬಾಲಯ್ಯ!

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಚರ್ಚೆ ಇಂದು ನಿನ್ನೆಯದಲ್ಲ. 'ಗೀತಾ ಗೋವಿಂದಂ' ಚಿತ್ರದಲ್ಲಿ ಇಬ್ಬರು ಮೊದಲಿಗೆ ನಟಿಸಿದ ಮೇಲೆ ಇಬ್ಬರ ಡೇಟಿಂಗ್ ರೂಮರ್ ಶುರುವಾಯಿತು. ಆ ಚಿತ್ರದ ಲಿಪ್‌ಲಾಕ್ ವಿಡಿಯೋ ಲೀಕ್ ಆಗಿ ಭಾರೀ ರಾದ್ಧಾಂತವಾಯಿತು.

ಆ ಲಿಪ್‌ಲಾಕ್ ವಿಡಿಯೋ ಕಾರಣಕ್ಕೆ ರಕ್ಷಿತ್ ಶೆಟ್ಟಿ ಜೊತೆಗಿನ ರಶ್ಮಿಕಾ ಎಂಗೇಜ್‌ಮೆಂಟ್ ಮುರಿದುಬಿತ್ತು ಎಂದು ಕೆಲವರು ಆರೋಪಿಸಿದರು. ಬಳಿಕ ಇಬ್ಬರು ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾದರು. ಇನ್ನು ವಿಜಯ್ ದೇವರಕೊಂಡ ಜೊತೆ 'ಡಿಯರ್ ಕಾಮ್ರೆಡ್' ಚಿತ್ರದಲ್ಲಿ ರಶ್ಮಿಕಾ ನಟಿಸಿದರು. ಮತ್ತೊಮ್ಮೆ ಇಬ್ಬರೂ ಲಿಪ್‌ಲಾಕ್ ಮಾಡಿ ಸುದ್ದಿಯಾದರು. ವಿಜಯ್ ಫ್ಯಾಮಿಲಿ ಹಾಗೂ ಫ್ರೆಂಡ್ಸ್‌ಗೂ ರಶ್ಮಿಕಾ ಆಪ್ತರಾಗಿದ್ದಾರೆ.

Balakrishna proposes to Rashmika mandanna on his talk show and warns Vijay devarakonda

ವಿಜಯ್ ಹಾಗೂ ಸ್ನೇಹಿತರ ಜೊತೆ ರಶ್ಮಿಕಾ ಆಗಿಂದಾಗ್ಗೆ ಪ್ರವಾಸ ಕೈಗೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಇಬ್ಬರ ವಿದೇಶ ಪ್ರವಾಸದ ಫೋಟೊಗಳು ವೈರಲ್ ಆಗಿತ್ತು. ಮೊನ್ನೆ ಮೊನ್ನೆ ದೇವರಕೊಂಡ ಮನೆಯಲ್ಲೇ ರಶ್ಮಿಕಾ ದೀಪಾವಳಿ ಆಚರಿಸಿದ್ದಾರೆ ಎಂದು ಸುದ್ದಿಯಾಗಿತ್ತು. ವಿಜಯ್ ಹಾಗೂ ರಶ್ಮಿಕಾ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಗುಸುಗುಸು ಪದೇ ಪದೆ ಕೇಳಿಬರುತ್ತಲೇ ಇದೆ. ಆದರೆ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ಇಬ್ಬರು ಹೇಳುತ್ತಾ ಬರುತ್ತಿದ್ದಾರೆ.

ಸದ್ಯ ರಣ್‌ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಅನಿಮಲ್' ಸಿನಿಮಾ ಶೀಘ್ರದಲ್ಲೇ ತೆರೆಗೆ ಬರ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವನ್ನು ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಸಂದೀಪ್ ರೆಡ್ಡಿ ವಂಗಾ ಈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ರಣ್‌ಬೀರ್ ಹಾಗೂ ರಶ್ಮಿಕಾ ಕೆಮೆಸ್ಟ್ರಿ ಬಗ್ಗೆ ಬಾಲಿವುಡ್‌ನಲ್ಲಿ ಚರ್ಚೆ ಶುರುವಾಗಿದೆ. ಚಿತ್ರದ ಹಾಡೊಂದರಲ್ಲಿ ಇಬ್ಬರು ಲಿಪ್‌ಲಾಕ್ ಮಾಡಿರೋದು ಸಖತ್ ವೈರಲ್ ಆಗಿತ್ತು.

Balakrishna proposes to Rashmika mandanna on his talk show and warns Vijay devarakonda

ಡಿಸೆಂಬರ್ 1ಕ್ಕೆ 'ಅನಿಮಲ್' ಸಿನಿಮಾ ಕನ್ನಡ ಸೇರಿದಂತ್ 5 ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಸದ್ಯ ಚಿತ್ರತಂಡ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಸಿನಿಮಾ ತೆಲುಗಿನಲ್ಲೂ ರಿಲೀಸ್ ಆಗ್ತಿದ್ದು ಬಾಲಕೃಷ್ಣ ನಿರೂಪಣೆಯ ಅನ್‌ಸ್ಟಾಪಬರ್‌-2 ಶೋನಲ್ಲಿ ಚಿತ್ರತಂಡ ಭಾಗಿ ಆಗಿದೆ. ಈ ಹಿಂದೆ ಕೂಡ ರಶ್ಮಿಕಾ ಈ ಶೋನಲ್ಲಿ ಕಾಣಿಸಿಕೊಂಡಿದ್ದರು.

ನಂದಮೂರಿ ಬಾಲಕೃಷ್ಣ ಕನ್ನಡದಲ್ಲೇ ಕೊಡಗಿನ ಕುವರಿಯನ್ನು ಹಾಡಿ ಹೊಗಳಿದ್ದರು. ಈಗಿನ ನಟಿಯರಲ್ಲಿ ರಶ್ಮಿಕಾ ಅಂದ್ರೆ ಬಹಳ ಇಷ್ಟ ಎಂದು ಕೂಡ ಹೇಳಿದ್ದರು. ಇದೀಗ ಮತ್ತೆ ತಮ್ಮ ಶೋಗೆ ಬಂದಿರುವ ರಶ್ಮಿಕಾಗೆ ಬಾಲಯ್ಯ ಪ್ರಪೋಸ್ ಮಾಡಿದ್ದಾರೆ. ಅಷ್ಟೇ ಅಲ್ಲ ವೇದಿಕೆಯಿಂದಲೇ ನೇರವಾಗಿ ವಿಜಯ್ ದೇವರಕೊಂಡಗೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಅನ್‌ಸ್ಟಾಪಬರ್ ವಿತ್ ಎನ್‌ಬಿಕೆ ಹೊಸ ಪ್ರೋಮೊ ಈಗ ಸಖತ್ ವೈರಲ್ ಆಗುತ್ತಿದೆ.

ಗುಲಾಬಿ ಹೂ ಹಿಡಿದು "ನನ್ನ ಮನಸ್ಸು ನನ್ನ ಕೈಯಲ್ಲಿಲ್ಲ. ಯಾಕೋ ಏನೇನೋ ಅನ್ನಿಸ್ತಿದೆ. ಬಂದುಬಿಡಮ್ಮ ರಶ್ಮಿಕಾ" ಎಂದು ಶೋಗೆ ಕೊಡಗಿನ ಬೆಡಗಿಯನ್ನು ಬಾಲಯ್ಯ ಸ್ವಾಗತಿಸಿದ್ದಾರೆ. ಆಕೆಯ ಜೊತೆ ಹೆಜ್ಜೆ ಹಾಕಿದ್ದಾರೆ. ಬಳಿಕ ಶೋ ನಡುವೆ ರಶ್ಮಿಕಾ ಮಂದಣ್ಗೆ ಗುಲಾಬಿ ಹೂ ನೀಡಿ ಪ್ರಪೋಸ್ ಮಾಡಿದ್ದಾರೆ. ಬಳಿಕ ವಿಜಯ್ ದೇವರಕೊಂಡ ಹೆಸರು ಪ್ರಸ್ತಾಪವಾಗಿದೆ. 'ಅರ್ಜುನ್ ರೆಡ್ಡಿ ಮತ್ತು 'ಅನಿಮಲ್'ಚಿತ್ರಗಳ ಪೋಸ್ಟರ್‌ಗಳನ್ನು ತೋರಿಸಿದ ಬಾಲಯ್ಯ, ಈ ಇಬ್ಬರಲ್ಲಿ ಯಾರು ಉತ್ತಮ ಎಂದು ರಶ್ಮಿಕಾ ಅವರನ್ನು ಕೇಳಿದರು. ರಣಬೀರ್ ಕಪೂರ್ ಕೂಡ ಈ ಬಗ್ಗೆ ಪ್ರಚೋದಿಸುವಂತೆ ಇಬ್ಬರಲ್ಲಿ ಯಾರು ಬೆಸ್ಟ್ ಕೇಳಿ ಎಂದಿದ್ದಾರೆ. ಇದರಿಂದ ರಶ್ಮಿಕಾ ಕಂಗಾಲಾಗಿದ್ದಾರೆ.

ಶೋಗೆ ವಿಜಯ್ ದೇರವಕೊಂಡ ಫೋನ್ ಮಾಡಿ ಮಾತನಾಡಿದ್ದಾರೆ. ವಾಟ್ಸಪ್‌ ರೇ ಎಂದು ರಶ್ಮಿಕಾನ ಕೇಳಿದ್ದು ಬಾಲಕೃಷ್ಣ ಎಕ್ಸ್‌ಪ್ರೆಶನ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ. ಇನ್ನು ವೇದಿಕೆ ಮೇಲೆ ಈ ಪಾರ್ಟಿ ಏನಪ್ಪಾ? ಎಂದು ಬಾಲಯ್ಯ ಕೇಳಿದ್ದು ಶೋಗೆ ಬಂದಿದ್ದ ಅಭಿಮಾನಿಗಳು ಓಹ್ ಎಂದು ಕಿರುಚಿದ್ದಾರೆ.

ಕೊನೆಗೆ ನಿರ್ದೇಶಕ ಸಂದೀಪ್ ರೆಡ್ಡಿ ಫೋನ್ ತೆಗೆದುಕೊಂಡು ವಿಜಯ್ ದೇವರಕೊಂಡ ಜೊತೆ ಮಾತನಾಡುತ್ತಿದ್ದರು. ಈ ವೇಳೆ ಹತ್ತಿರ ಹೋದ ಬಾಲಯ್ಯ "ನಿಮ್ಮ ಹೀರೊಗೆ ಹೇಳಪ್ಪ, ಐ ಲವ್ ರಶ್ಮಿಕಾ" ಎಂದಿದ್ದಾರೆ. ಆಕೆಯನ್ನು ಬಿಟ್ಟುಬಿಡು ಎಂದು ವಾರ್ನಿಂಗ್ ಕೊಡುವಂತೆ ಬಾಲಯ್ಯ ಹೇಳಿರುವುದು ಪ್ರೋಮೊದಲ್ಲಿ ಹೈಲೆಟ್ ಆಗಿದೆ.

More from Filmibeat

English summary
Balakrishna love propose to Rashmika mandanna in Unstoppable With NBK show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X