"ಬಾಲಯ್ಯ ಮದ್ಯ ಸೇವಿಸಿ ಆ ರೀತಿ ವರ್ತಿಸಿಲ್ಲ, ಅದೆಲ್ಲಾ ಗ್ರಾಫಿಕ್ಸ್"; ನಿರ್ಮಾಪಕ

'ಗ್ಯಾಂಗ್ಸ್ ಆಫ್ ಗೋದಾವರಿ' ಚಿತ್ರದ ಕಾರ್ಯಕ್ರಮದಲ್ಲಿ ಬಾಲಯ್ಯ ವರ್ತನೆ ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ವೇದಿಕೆಯಲ್ಲಿ ನಟಿ ಅಂಜಲಿ ಅವರನ್ನು ನೂಕಿದ ಘಟನೆ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆ ಆಗುತ್ತಿದೆ. ಬಾಲಕೃಷ್ಣ ಕಾರ್ಯಕ್ರಮದ ನಡುವೆ ಮದ್ಯ ಸೇವಿಸಿದ್ದರು. ಅದಕ್ಕೆ ಆ ರೀತಿ ನಡೆದುಕೊಂಡರು ಎನ್ನುವ ಆರೋಪ ಕೇಳಿಬರ್ತಿದೆ.

ಕಾರ್ಯಕ್ರಮದ ಆರಂಭದಲ್ಲಿ ಬಾಲಕೃಷ್ಣ ಕುಳಿತ್ತಿದ್ದಾಗ ಕಾಲಿನ ಬಲಿ ಬಾಟಲ್‌ನಲ್ಲಿ ಮದ್ಯ ಇದ್ದಂತೆ ವೀಡಿಯೋವೊಂದು ವೈರಲ್ ಆಗುತ್ತಿದೆ. ಈ ಬಗ್ಗೆ ಚಿತ್ರದ ನಟ ವಿಶ್ವಕ್ ಸೇನ್ ಹಾಗೂ ನಿರ್ಮಾಪಕ ನಾಗವಂಶಿ ಪ್ರತಿಕ್ರಿಯಿಸಿದ್ದಾರೆ. ಅದೆಲ್ಲಾ ಸುಳ್ಳು ಆರೋಪ ಎಂದಿದ್ದಾರೆ. ಕ್ಯಾಶ್ಯೂವಲ್ ಆಗಿ ಬಾಲಯ್ಯ ವೇದಿಕೆ ಮೇಲೆ ಅಂಜಲಿ ಅವರನ್ನು ನೂಕಿದರು ಅಷ್ಟೇ ಎಂದಿದ್ದಾರೆ.

Balakrishna Pushes Anjali At An Event Vishwak Sen and Naga Vamsi issue clarification

"ಈಗ ನಾನು, ವಿಶ್ವಕ್ ನೀವು ಮಾತಾಡ್ತಾ ಇದ್ದೀವಿ ಎಂದುಕೊಳ್ಳಿ. ನಾನು ನಿಮ್ಮನ್ನು ಕೊಂಚ ಪಕ್ಕಕ್ಕೆ ಹೋಗಗಿ ಎಂದು ಹೇಳ್ತೀನಿ. ನಿಮಗೆ ಕೇಳಿಸಲಿಲ್ಲ, ವಿಶ್ವಕ್‌ಗೂ ನಿಮಗೂ ಒಳ್ಳೆ ಬಾಂಧವ್ಯ ಇದ್ದಾಗ ಕ್ಯಾಶ್ಯೂವಲ್ ಆಗಿ ಹೀಗೆ ಹಿಂದೆ ಹೋಗಿ ಎಂದು ತಳ್ಳುತ್ತಾರೆ. ಅಲ್ಲಿ ನಡೆದದ್ದು ಅದೇ. ಅದನ್ನು ವಿವಾದ ಮಾಡಲು ಕೆಲವರು ಬಯಸಿದರು. ಅದಕ್ಕೆ ಯಾಕೆ ಹೆಚ್ಚು ಪ್ರಾಮುಖ್ಯತೆ ಕೊಡುವುದು. ಆ ಬಳಿಕ ಇಬ್ಬರೂ ಹೈ-ಫೈ ಮಾಡಿದರು. ಅದು ಕಾಣಿಸಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇನ್ನು ಬಾಲಯ್ಯ ಕುಳಿತಿದ್ದ ಸೀಟಿನ ಬಳಿ ನೀರಿನ ಬಾಟಲಿಯಲ್ಲಿ ಮದ್ಯ ಕಾಣಿಸಿದ ವಿಡಿಯೋ ಕುರಿತು ನಾಗವಂಶಿ ಸ್ಪಷ್ಟನೆ ನೀಡಿದ್ದಾರೆ. " ಬಾಲಯ್ಯನ ಬಳಿ ಬಾಟಲ್ ಇತ್ತು ಎನ್ನುತ್ತಾರೆ. ಎದೆಲ್ಲಾ ಸಿಜಿಯಲ್ಲಿ (ಕಂಪ್ಯೂಟರ್ ಗ್ರಾಫಿಕ್ಸ್) ಮಾಡಿರುವುದು. ಅಲ್ಲಿ ಏನು ಇರಲಿಲ್ಲ. ಈವೆಂಟ್ ಮಾಡಿದ್ದು ನಾನೇ ನನಗೆ ಗೊತ್ತು. ಅಲ್ಲಿ ಏನು ಇರಲಿಲ್ಲ" ಎಂದು ನಿರ್ಮಾಪಕ ನಾಗವಂಶಿ ಹೇಳಿದ್ದಾರೆ. ಆದರೆ "ಸಿಜಿ ಮಾಡುವ ಅಗತ್ಯ ಏನಿತ್ತು" ಎಂದು ಪ್ರಶ್ನಿಸಿದ್ದಾಗ ನಟ ವಿಶ್ವಕ್ ಸೇನ್ 'ಗ್ಯಾಂಗ್ಸ್ ಆಫ್ ಗೋದಾವರಿ' ಸಿನಿಮಾ ಬಗ್ಗೆ ಮಾತನಾಡಿ, ಆ ಕಥೆಬಿಡಿ ಎಂದು ಜಾರಿಕೊಂಡಿದ್ದಾರೆ.

ಕೃಷ್ಣ ಚೈತನ್ಯಾ ನಿರ್ದೇಶನದ 'ಗ್ಯಾಂಗ್ಸ್ ಆಫ್ ಗೋದಾವರಿ' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಹಾಗಾಗಿ ಪ್ರೀ ರಿಲೀಸ್ ಈವೆಂಟ್ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಾಲಯ್ಯ ಮುಖ್ಯ ಅತಿಥಿಯಾಗಿ ಬಂದಿದ್ದರು. ವೇದಿಕೆ ಏರಿದಾಗ ಅಂಜಲಿ ಅವರನ್ನು ಪಕ್ಕಕ್ಕೆ ಸರಿಯಲು ಹೇಳಿದರು. ಅವರು ಸ್ವಲ್ಪ ಸರಿದಾಗ, ಇನ್ನು ದೂರ ಎಂದು ತಳ್ಳಿದ್ದರು.

Balakrishna Pushes Anjali At An Event Vishwak Sen and Naga Vamsi issue clarification

ಬಾಲಯ್ಯ ವರ್ತನೆ ಸರಿ ಇರಲಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಅಂಜಲಿ ಜೊತೆ ಕೂಡ ಬಾಲಕೃಷ್ಣ ನಟಿಸಿದ್ದಾರೆ. ಆ ಸಲುಗೆಯಿಂದಲೇ ವೇದಿಕೆಯಲ್ಲಿ ಆ ರೀತಿ ನಡೆದುಕೊಂಡಿದ್ದಾರೆ ಎನ್ನುವುದು ಅಭಿಮಾನಿಗಳು ಹೇಳುತ್ತಿದ್ದಾರೆ. ಈ ಹಿಂದೆ ಕೂಡ ಬಾಲಯ್ಯ ಅಭಿಮಾನಿಗಳ ಜೊತೆ ಸಾರ್ವಜನಿಕವಾಗಿ ಈ ರೀತಿ ನಡೆದುಕೊಂಡ ಘಟನೆಗಳು ನಡೆದಿತ್ತು.

ಬಾಲಕೃಷ್ಣ ನಟರಾಗಿ ಮಾತ್ರವಲ್ಲದೇ ಆಂಧ್ರದ ಶಾಸಕರಾಗಿದ್ದಾರೆ. ಮೂರನೇ ಬಾರಿ ಹಿಂದೂಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಹಾಗಾಗಿ ಪ್ರತಿಪಕ್ಷಗಳು ಕೂಡ ವೇದಿಕೆಯಲ್ಲಿ ಬಾಲಕೃಷ್ಣ ವರ್ತನೆಯನ್ನು ಟೀಕಿಸಿವೆ. ಬಾಲಿವುಡ್ ನಿರ್ದೇಶಕ ಹನ್ಸಲ್ ಮೆಹ್ತಾ ಪ್ರತಿಕ್ರಿಯಿಸಿ ಬಾಲಕೃಷ್ಣ ಒಬ್ಬ ಕ್ರೂರಿ ಎಂದು ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಬಾಲಯ್ಯ ಸ್ಪಷ್ಟನೆ ನೀಡಬೇಕಿದೆ.

More from Filmibeat

English summary
Balakrishna havent consume alcohol, its CG, Vishwak Sen and Naga Vamsi reacts
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X