'ಅಖಂಡ- 2' ಸಿನಿಮಾ ಬಜೆಟ್, ನಟ ಬಾಲಕೃಷ್ಣ ಸಂಭಾವನೆ ಎಷ್ಟು?

ತೆಲುಗು ನಟ ನಂದಮೂರಿ ಬಾಲಕೃಷ್ಣ ಚಿತ್ರಗಳಿಗೆ ಭಾರೀ ಕ್ರೇಜ್ ಇದೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಬಾಲಯ್ಯ ಈ ವಾರ 'ಅಖಂಡ' ಅವತಾರದಲ್ಲಿ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಚಿತ್ರಕ್ಕಾಗಿ ಭಾರೀ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗ್ತಿದೆ.

3 ವರ್ಷಗಳ ಹಿಂದೆ ಬೋಯಪಾಟಿ ಶ್ರೀನು ನಿರ್ದೇಶನದ 'ಅಖಂಡ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಇದೀಗ ಸೀಕ್ವೆಲ್ ಬರ್ತಿದ್ದು ಮತ್ತೆ ದ್ವಿಪಾತ್ರದಲ್ಲಿ ಬಾಲಯ್ಯ ಅಬ್ಬರಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಅದ್ಧೂರಿಯಾಗಿ ಚಿತ್ರದ ಟ್ರೈಲರ್ ಬಿಡುಗಡೆ ಆಗಿತ್ತು. ಮತ್ತೊಮ್ಮೆ ಬಾಲಯ್ಯ ಆರ್ಭಟ, ಬೊಯಪಾಟಿ ಶ್ರೀನು ಮಾಸ್ ಎಲಿಮೆಂಟ್ಸ್ ಚಿತ್ರಕ್ಕೆ ಬಲ ತುಂಬಿದೆ. ಈ ಹಿಂದೆ ಇವರಿಬ್ಬರು ಕಾಂಬಿನೇಷನ್‌ನಲ್ಲಿ ಬಂದಿದ್ದ 'ಸಿಂಹ' ಹಾಗೂ 'ಲೆಜೆಂಡ್' ಚಿತ್ರಗಳು ಹಿಟ್ ಆಗಿತ್ತು. ಹಾಗಾಗಿ ಸಹಜವಾಗಿಯೇ 4ನೇ ಸಿನಿಮಾ ಕುತೂಹಲ ಹೆಚ್ಚಿಸಿದೆ.

Balakrishna s Akhand-2 Creates Massive Buzz with Record Remunerations and Big-Budget Hype

'ಅಖಂಡ'-2 ಚಿತ್ರದ ಪ್ರೀ ರಿಲೀಸ್ ಬ್ಯುಸಿನೆಸ್ ಜೋರಾಗಿದೆ. ಭಾರೀ ಮೊತ್ತಕ್ಕೆ ನೆಟ್‌ಫ್ಲಿಕ್ಸ್ ಓಟಿಟಿ ರೈಟ್ಸ್ ಕೊಂಡುಕೊಂಡಿದೆ. ಒಂದು ಷರತ್ತು ಸಹ ಹಾಕಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ಕೆಲವು ಕಡೆಗಳಲ್ಲಿ ಟಿಕೆಟ್ ದರ ಹೆಚ್ಚಿಸಲಾಗಿದೆ. ಇಂದು(ಡಿಸೆಂಬರ್ 4) ಸಂಜೆಯಿಂದಲೇ ಕೆಲವೆಡೆ ಪ್ರೀಮಿಯರ್ ಶೋಗಳು ಆರಂಭವಾಗಲಿದೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಹೇಗೆ ಸದ್ದು ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಕ್ರೇಜ್‌ಗೆ ತಕ್ಕಂತೆ ಬಾಲಯ್ಯ, ಬೋಯಪಾಟಿ ಶ್ರೀನು ಸಂಭಾವನೆ ಪಡೆದಿದ್ದಾರೆ ಎಂದು ಚರ್ಚೆ ನಡೀತಿದೆ. 14 ರೀಲ್ಸ್ ಪ್ಲಸ್ ಎಂಟರ್ಟೈನ್ಮೆಂಟ್ ಹಾಗೂ ಐವಿ ಎಂಟರ್ಟೈನ್ಮೆಂಟ್ ಸಂಸ್ಥೆಗಳು ಜಂಟಿಯಾಗಿ 'ಅಖಂಡ- 2' ಸಿನಿಮಾ ನಿರ್ಮಿಸಿವೆ. ಚಿತ್ರಕ್ಕಾಗಿ ಬಾಲಯ್ಯ 40 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆ ಬಂದಿದ್ದ ಡಾಕು ಮಹಾರಾಜ್ ಚಿತ್ರದಲ್ಲಿ 27 ಕೋಟಿ ರೂ. ಸಂಭಾವನೆ ಜೇಬಿಗಿಸಿದ್ದರು ಎನ್ನಲಾಗ್ತಿದೆ. ಏಕಾಏಕಿ ಈಗ 40 ಕೋಟಿ ರೂ. ಪಡೆದಿರುವುದು 'ಅಖಂಡ- 2' ಚಿತ್ರಕ್ಕಿರುವ ಕ್ರೇಜ್‌ ಕಾರಣಕ್ಕೆ ಎನ್ನಲಾಗ್ತಿದೆ.

Balakrishna s Akhand-2 Creates Massive Buzz with Record Remunerations and Big-Budget Hype

ಇನ್ನು ನಿರ್ದೇಶಕ ಬೊಯಪಾಟಿ ಶ್ರೀನು 30 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ. ಇನ್ನುಳಿಂದ ಹರ್ಷಾಲಿ, ಪೂರ್ಣ ಅವರಿಗೆ ತಲಾ 50 ಲಕ್ಷ ರೂ. ಸಂಭಾವನೆ ಸಿಕ್ಕಿದೆ ಎಂದು ಹೇಳಲಾಗ್ತಿದೆ. ವಿಲನ್ ಆಗಿ ಅಬ್ಬರಿಸಿರುವ ಆಡಿ ಪಿನಿಶೆಟ್ಟಿ 1 ಕೋಟಿ ರೂ. ಸಂಭಾವನೆ ಪಡೆದಿದ್ದರೆ ಸಂಗೀತ ನಿರ್ದೇಶಕ ತಮನ್ ಬರೋಬ್ಬರಿ 15 ಕೋಟಿ ರೂ. ಜೇಬಿಗಿಳಿಸಿದ್ದಾರೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿದೆ.

ಥ್ರಿಯೇಟ್ರಿಕಲ್ ರೈಟ್ಸ್ 115 ಕೋಟಿ ರೂ. ಓಟಿಟಿ ರೈಟ್ಸ್ 85 ಕೋಟಿ ರೂ. ಹಾಗೂ ಸ್ಯಾಟಲೈಟ್ ರೈಟ್ಸ್ 60 ಕೋಟಿ ರೂ.ಗೆ ಬಿಕರಿಯಾಗಿದೆ ಎನ್ನಲಾಗ್ತಿದೆ. ಆ ಮೂಲಕ ಭಾರೀ ಬ್ಯುಸಿನೆಸ್ ನಡೆದಿರುವುದು ಗೊತ್ತಾಗುತ್ತಿದೆ. ಬರೋಬ್ಬರಿ 200 ಕೋಟಿ ರೂ. ಬಜೆಟ್‌ನಲ್ಲಿ 'ಅಖಂಡ'-2 ಸಿನಿಮಾ ನಿರ್ಮಾಣವಾಗಿದೆ ಎನ್ನಲಾಗ್ತಿದೆ. ಆದರೂ ನಿರ್ಮಾಪಕರು ಈಗಾಗಲೇ ಸೇಫ್ ಆಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

'ಅಖಂಡ- 2' ಸಿನಿಮಾ ಗೆಲ್ಲಬೇಕು ಅಂದ್ರೆ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಬೇಕಿದೆ. ಈಗಾಗಲೇ ಟ್ರೈಲರ್ ಹಿಟ್ ಆಗಿದೆ. ಬಾಲಯ್ಯ ಡೈಲಾಗ್ಸ್, ಆಕ್ಷನ್ ದರ್ಬಾರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿ ಬಂದರೆ ಗೆಲುವು ಕಷ್ಟ ಏನಲ್ಲ. ಸಂಯುಕ್ತ, ಕಬೀರ್ ದುಹಾನ್ ಸಿಂಗ್, ಅಚ್ಯುತ್‌ ಕುಮಾರ್, ಸಾಯಿ ಕುಮಾರ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.

More from Filmibeat

Read more about: tollywood balakrishna
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X