ಬಾಲಯ್ಯ ಹುಟ್ಟುಹಬ್ಬಕ್ಕೆ ಡಬಲ್ ಧಮಾಕ: 'ಭಗವಂತ್ ಕೇಸರಿ' ಆಗಿ ನಟಸಿಂಹ ಘರ್ಜನೆ

ತೆಲುಗು ನಟ ಬಾಲಕೃಷ್ಣ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಸಂಭ್ರಮ ಡಬಲ್ ಮಾಡಲು 'ಭಗವಂತ್ ಕೇಸರಿ' ಸಿನಿಮಾ ಟೀಸರ್ ರಿಲೀಸ್ ಆಗಿದೆ. ಬಾಲಯ್ಯ ಜಬರ್ದಸ್ತ್ ಡೈಲಾಗ್ಸ್ ಮಿಕ್ಸ್ ಮಾಡಿ ಈ ಆಕ್ಷನ್ ಪ್ಯಾಕ್ಡ್ ಝಲಕ್ ಕಟ್ ಮಾಡಲಾಗಿದೆ. ಅನಿಲ್ ರಾವಿಪುಡಿ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಕಾಜಲ್ ಅಗರ್‌ವಾಲ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ಬಾಲಿವುಡ್ ನಟ ಅರ್ಜುನ್ ರಾಂಪಾಲ್ 'ಭಗವಂತ್ ಕೇಸರಿ' ಬಾಲಯ್ಯ ಎದುರು ವಿಲನ್ ಆಗಿ ಅಬ್ಬರಿಸಿದ್ದಾರೆ. ಎಸ್. ತಮನ್ ಸೌಂಡಿಂಗ್ ಬಿಜಿಎಂ ಹಿನ್ನಲೆಯಲ್ಲಿ ಟೀಸರ್ ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ. ಬಾಲಯ್ಯ ಲುಕ್, ಖದರ್ ನೋಡಿ ನಂದಮೂರಿ ಅಭಿಮಾನಿಗಳು ಫಿದಾ ಆಗಿದ್ದಾರೆ. "ರಾಜ ತನ್ನ ಹಿಂದೆ ಇರುವ ನೂರಾರು ಜನರನ್ನು ತೋರಿಸುತ್ತಾನೆ. ಮಾಡರೆ ಮೊಂಡ ತನಗಿರುವ ಒಂದೇ ಒಂದು ಗುಂಡಿಗೆಯನ್ನು ತೋರಿಸುತ್ತಾನೆ" ಎನ್ನುವ ಡೈಲಾಗ್ ಮೂಲಕ ಟೀಸರ್ ಆರಂಭವಾಗುತ್ತದೆ.

Balakrishna Starrer Bhagavanth Kesari Teaser Released on the occasion of actors birthday

ಇದು ಬಾಲಕೃಷ್ಣ ನಟನೆಯ 108ನೇ ಸಿನಿಮಾ. NBK108 ಹೆಸರಿನಲ್ಲಿ ಸಿನಿಮಾ ಚಿತ್ರೀಕರಣ ಆರಂಭಿಸಲಾಗಿತ್ತು. ಒಂದು ಪವರ್‌ಫುಲ್ ಟೈಟಲ್‌ಗಾಗಿ ಹುಡುಕಾಟ ನಡೆಸಿದ್ದ ಚಿತ್ರತಂಡ ಇತ್ತೀಚೆಗೆ 'ಭಗವಂತ್ ಕೇಸರಿ' ಟೈಟಲ್ ಫಿಕ್ಸ್ ಮಾಡಿತ್ತು. ಇದೀಗ ಬಾಲಯ್ಯ ಹುಟ್ಟುಹಬ್ಬದ ವಿಶೇಷವಾಗಿ ಪವರ್ ಪ್ಯಾಕ್ಡ್ ಟೀಸರ್ ಗಿಫ್ಟ್ ಕೊಟ್ಟಿದ್ದಾರೆ.

ಪಕ್ಕಾ ಆಕ್ಷನ್ ಎಂಟರ್‌ಟೈನರ್

ಬಾಲಕೃಷ್ಣ ಸಿನಿಮಾಗಳು ಅಂದ್ರೆ ಮೊದಲಿನಿಂದಲೂ ಮಾಸ್ ಎಲಿಮೆಂಟ್ಸ್‌ ಹೆಚ್ಚಿನ ಮಹತ್ವ ಕೊಡಲಾಗುತ್ತಿದೆ. ಅವರ ಇಮೇಜ್‌ಗೆ ತಕ್ಕಂತೆ 'ಭಗವಂತ್ ಕೇಸರಿ' ಚಿತ್ರವನ್ನು ಅನಿಲ್ ರವಿಪುಡಿ ಕಟ್ಟಿಕೊಡುತ್ತಿದ್ದಾರೆ. ಇನ್ನು ಕಾಮಿಡಿ ನಿರ್ದೇಶಕರ ಟ್ರೇಡ್ ಮಾರ್ಕ್‌. ಅದಕ್ಕೂ ಸ್ಕೋಪ್ ಇರುವಂತೆ ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಟೀಸರ್ ಕೊನೆಯಲ್ಲಿ ಬ್ಯಾಟ್‌ನ ಗಿಟಾರ್‌ ರೀತಿ ಹಿಡಿದ ಬಾಲಯ್ಯನನ್ನು ತೋರಿಸಿ ಕಮಾಲ್ ಮಾಡಿದ್ದಾರೆ.

Balakrishna Starrer Bhagavanth Kesari Teaser Released on the occasion of actors birthday

ಮಗಳ ಸೆಂಟಿಮೆಂಟ್ ಕಥೆ

ಆಕ್ಷನ್ ಸಿನಿಮಾಗಳಲ್ಲಿ ಎಮೋಷನ್ ಇರಲೇಬೇಕು. ಈ ಚಿತ್ರದಲ್ಲಿ ಡಾಟರ್ ಸೆಂಟಿಮೆಂಟ್ ಹೈಲೆಟ್ ಎನ್ನಲಾಗ್ತಿದೆ. ಭಗವಂತ್ ಕೇಸರಿ ಮಗಳ ಪಾತ್ರದಲ್ಲಿ ಮಗಳ ಪಾತ್ರದಲ್ಲಿ ಶ್ರೀಲೀಲಾ ನಟಿಸಿದ್ದಾರೆ ಎನ್ನಲಾಗ್ತಿದೆ. ಇವರಿಬ್ಬರ ನಡುವಿನ ಸನ್ನಿವೇಶಗಳು ಚಿತ್ರದ ಪ್ಲಸ್ ಪಾಯಿಂಟ್ ಎನ್ನುವ ಮಾತುಗಳು ಟಾಲಿವುಡ್‌ನಲ್ಲಿ ಕೇಳಿಬರ್ತಿದೆ. ಬಾಲಯ್ಯ ಹಿಂದಿ ಡೈಲಾಗ್ಸ್ ಕೇಳಿದ್ರೆ ಕಥೆ ಉತ್ತರ ಭಾರತದಲ್ಲೂ ಸಾಗುವಂತೆ ಕಾಣುತ್ತಿದೆ. ಇನ್ನು ತೆಲಂಗಾಣ ಶೈಲಿಯಲ್ಲಿ ಡೈಲಾಗ್ಸ್ ಹೇಳಿ ನಟಸಿಂಹ ಆರ್ಭಟಿಸಿದ್ದಾರೆ.

ದಸರಾಗೆ ಸಿನಿಮಾ ರಿಲೀಸ್

ಈ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ 'ವೀರಸಿಂಹ ರೆಡ್ಡಿ'ಯಾಗಿ ಬಾಲಯ್ಯ ಪ್ರೇಕ್ಷಕರನ್ನು ರಂಜಿಸಿದ್ದರು. ದಸರಾ ಹಬ್ಬಕ್ಕೆ ಭಗವಂತ್ ಕೇಸರಿ ದರ್ಬಾರ್ ಶುರುವಾಗಲಿದೆ. ವಯಸ್ಸು 60 ದಾಟಿದ್ರು ಬಾಲಕೃಷ್ಣ ಆರ್ಭಟ ಮಾತ್ರ ಕಮ್ಮಿ ಆಗಿಲ್ಲ. ಟೀಸರ್ ನೋಡಿದ ಅಭಿಮಾನಿಗಳು ಸಿನಿಮಾ ಸೂಪರ್ ಹಿಟ್ ಗ್ಯಾರೆಂಟಿ ಎನ್ನುತ್ತಿದ್ದಾರೆ. ಶೈನ್ ಸ್ರೀನ್ಸ್‌ ಬ್ಯಾನರ್ ಅಡಿಯಲ್ಲಿ ಸಾಹು ಗರಪಾಟಿ ಹಾಗೂ ಹರೀಶ್ ಪೆದ್ದಿ ಸಿನಿಮಾ ನಿರ್ಮಿಸಿದ್ದಾರೆ.

NBK109 ಮುಹೂರ್ತ

ಬಾಲಕೃಷ್ಣ 63ನೇ ಹುಟ್ಟುಹಬ್ಬದ ಸಂಭ್ರಮದಲ್ಲೇ ಮತ್ತೊಂದು ಸಿನಿಮಾ ಮುಹೂರ್ತ ನೆರವೇರಿದೆ. ಇದು ಬಾಲಯ್ಯ 109ನೇ ಸಿನಿಮಾ ಆಗಿದ್ದು NBK109 ಎನ್ನುವ ಟೆಂಟಿಟೀವ್ ಟೈಟಲ್‌ನಲ್ಲಿ ಸಿನಿಮಾ ಶುರುವಾಗಿದೆ. ನಾಗವಂಶಿ ಹಾಗೂ ಸಾಯಿ ಸೌಜನ್ಯ ನಿರ್ಮಾಣದ ಈ ಚಿತ್ರಕ್ಕೆ ಬಾಬಿ ಕೊಲ್ಲಿ ಆಕ್ಷನ್ ಕಟ್ ಹೇಳ್ತಿದ್ದಾರೆ. ಮುಹೂರ್ತ ಸಮಾರಂಭದಲ್ಲಿ ಕೇಕ್ ಕತ್ತರಿಸಿ ಬಾಲಯ್ಯ ಹುಟ್ಟುಹಬ್ಬ ಆಚರಿಸಲಾಗಿದೆ.

More from Filmibeat

English summary
Balakrishna Starrer Bhagavanth Kesari Teaser Released on the occasion of actor's birthday. NBK109 Movie also Launched. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X