ಶಿವರಾಜ್‌ಕುಮಾರ್ 'ಶಿವ ವೇದ' ಚಿತ್ರಕ್ಕೆ ಬಾಲಕೃಷ್ಣ ಸಾಥ್
ಕಳೆದ ವರ್ಷದ ಡಿಸೆಂಬರ್ 23ರಂದು ಬಿಡುಗಡೆಗೊಂಡು ಯಶಸ್ಸು ಕಂಡಿದ್ದ ಸ್ಯಾಂಡಲ್‌ವುಡ್ ಕಿಂಗ್ ಶಿವ ರಾಜ್‌ಕುಮಾರ್ ನಟನೆಯ ವೇದ ಚಿತ್ರದ ತೆಲುಗು ವರ್ಷನ್ ಚಿತ್ರ 'ಶಿವ ವೇದ' ಎಂಬ ಶೀರ್ಷಿಕೆ ಅಡಿಯಲ್ಲಿ ಬಿಡುಗಡೆಯಾಗಲಿದೆ. ಹೌದು. ಈ ಚಿತ್ರ ಫೆಬ್ರವರಿ 9ರಂದು ತೆಲುಗು ರಾಜ್ಯಗಳಲ್ಲಿ ಬಿಡುಗಡೆಯಾಗಲಿದೆ.
ಇನ್ನು ಈ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮವನ್ನು ನಡೆಸಲು ಚಿತ್ರತಂಡ ನಿರ್ಧರಿಸಿದ್ದು, ನಾಳೆ ( ಫೆಬ್ರವರಿ 7 ) ದಾಸ್‌ಪಲ್ಲದಲ್ಲಿ ನಡೆಯಲಿದೆ. ಕಾರ್ಯಕ್ರಮ ಸಂಜೆ ಆರು ಗಂಟೆಗೆ ಶುರುವಾಗಲಿದ್ದು, ಈ ಪ್ರಿ ರಿಲೀಸ್ ಇವೆಂಟ್‌ಗೆ ತೆಲುಗಿನ ಗಾಡ್ ಆಫ್ ಮಾಸಸ್ ಎಂದೇ ಖ್ಯಾತಿಯನ್ನು ಪಡೆದಿರುವ ನಟ ನಂದಮೂರಿ ಬಾಲಕೃಷ್ಣ ಮುಖ್ಯ ಅತಿಥಿಯಾಗಿ ಸಾಥ್ ನೀಡಲಿದ್ದಾರೆ.
ಹಿಂದಿನಿಂದಲೂ ಶಿವ ರಾಜ್‌ಕುಮಾರ್ ಹಾಗೂ ರಾಜ್ ಫ್ಯಾಮಿಲಿ ಜತೆ ಒಳ್ಳೆಯ ಬಾಂಧವ್ಯವನ್ನು ಹೊಂದಿರುವ ಬಾಲಕೃಷ್ಣ ಶಿವ ರಾಜ್‌ಕುಮಾರ್‌ಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಇದೇ ಮೊದಲ ಬಾರಿಗೆ ಶಿವ ರಾಜ್‌ಕುಮಾರ್ ನಟಿಸಿರುವ ಚಿತ್ರದ ತೆಲುಗು ವರ್ಷನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದಾರೆ. ಇದು ಶಿವ ರಾಜ್‌ಕುಮಾರ್ ಪಾಲಿನ ಮೊದಲ ತೆಲುಗು ಬಿಡುಗಡೆ ಸಹ ಆಗಿದೆ.

ಇನ್ನು ಮೊದಲಿಗೆ ಕನ್ನಡ ಹಾಗೂ ತಮಿಳು ವರ್ಷನ್‌ಗಳಲ್ಲಿ ಬಿಡುಗಡೆಯಾಗಿ ಸಿನಿ ರಸಿಕರ ಮೆಚ್ಚುಗೆಗೆ ಪಾತ್ರವಾಗಿದ್ದ ವೇದ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ಬಿಡುಗಡೆ ಮಾಡಬಹುದಿತ್ತು ಎಂಬ ಅಭಿಪ್ರಾಯವನ್ನು ಹಲವು ಸಿನಿ ರಸಿಕರು ವ್ಯಕ್ತಪಡಿಸಿದ್ದರು. ತೆಲುಗಿಗೂ ಸಹ ಡಬ್ ಮಾಡಿ ಎಂಬ ಬೇಡಿಕೆ ತೆಲುಗು ಸಿನಿ ರಸಿಕರಿಂದ ಬಂದಿತ್ತು. ಈ ಬೇಡಿಕೆ ಈಗ ನೆರವೇರುತ್ತಿದ್ದು, ವೇದ ಚಿತ್ರ ತೆಲುಗಿನಲ್ಲಿ ಶೀರ್ಷಿಕೆಯಲ್ಲಿ ಕೊಂಚ ಬದಲಾವಣೆಯ ಜತೆಗೆ 'ಶಿವ ವೇದ' ಆಗಿ ಬಿಡುಗಡೆಯಾಗ್ತಿದೆ.
ವೇದ ಹೆಣ್ಣುಮಕ್ಕಳ ಮೇಲೆ ನಡೆಯುವ ಶೋಷಣೆ ವಿರುದ್ಧ ಅಪ್ಪ ಮಗಳು ನಡೆಸುವ ರಕ್ತ ಸಿಕ್ತ ಹೋರಾಟದ ಕಥೆಯನ್ನು ಹೊಂದಿದ್ದು, ಅಪ್ಪ ಮಗಳ ಪಾತ್ರದಲ್ಲಿ ಶಿವ ರಾಜ್‌ಕುಮಾರ್ ಹಾಗೂ ಅದಿತಿ ಸಾಗರ್ ಅದ್ಭುತವಾಗಿ ನಟಿಸಿದ್ದಾರೆ. ಇನ್ನುಳಿದಂತೆ ಚಿತ್ರದ ನಟಿ ಘಾನವಿ ಲಕ್ಷ್ಮಣ್, ಶ್ವೇತ ಚೆಂಗಪ್ಪ, ವೀಣ ಪೊನ್ನಪ್ಪ, ಉಮಾಶ್ರೀ ಸಹ ತಮ್ಮ ಅಭಿನಯಕ್ಕಾಗಿ ಶಹಬ್ಬಾಷ್‌ಗಿರಿ ಗಿಟ್ಟಿಸಿಕೊಂಡಿದ್ದರು.


Click it and Unblock the Notifications











