ಡಾಕು ಮಹಾರಾಜ್ ಗೆದ್ದ ಖುಷಿಯಲ್ಲಿ ಊವರ್ಶಿಯ 'ಖಾಸಗಿ ಭಾಗ'ಕ್ಕೆ ಗುದ್ದಲು ಮುಂದಾದ ಬಾಲಯ್ಯ..!

ಬಾಲಯ್ಯ ಅವರಿಗೆ ತೆಲುಗು ಚಿತ್ರರಂಗದಲ್ಲಿ ಅವ್ರದ್ದೇ ಆದ ಖದರ್ ಇದೆ, ತೆಲುಗು ನಾಡಿನಲ್ಲಿ ಪವರ್ ಇದೆ. ಆಂಧ್ರ ತೆಲಂಗಾಣ ಮಾತ್ರ ಅಲ್ಲ ಕರ್ನಾಟಕದಲ್ಲಿ ಕೂಡ ಬಾಲಕೃಷ್ಣ ಅವರಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ.

ಇನ್ನು ಬಾಲಯ್ಯ ತೆರೆ ಮೇಲೆ ಸಿಂಹದಂತೆ ಗರ್ಜಿಸಿ ಚಿತ್ರದ ವಿಲನ್‌ಗಳ ವಿರುದ್ಧ ನಡೆಸುವ ಆಟಾಟೋಪ ಒಂದೆರಡಲ್ಲ. ತುಪಾಕಿಯಿಂದ ಸಿಡಿದ ಗುಂಡಿನಂತೆ ಮಾತನಾಡುವ ಬಾಲಯ್ಯನ ಡೈಲಾಗ್‌ಗೆ ಚಪ್ಪಾಳೆ ಶಿಳ್ಳೆ ಖಚಿತ. ಇಂಥಾ ಬಾಲಯ್ಯ ಸದ್ಯ ತಮ್ಮ ಡಾಕೂ ಮಹಾರಾಜ್ ಚಿತ್ರ ಗೆದ್ದ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ಪಾರ್ಟಿ ಮಾಡಿದ್ದಾರೆ. ಊವರ್ಶಿ ಜೊತೆ ಥೈ ಥಕ್ಕ ಥೈ ಎಂದು ಕುಣಿದಿದ್ದಾರೆ. ಸದ್ಯಕ್ಕೆ ಬಾಲಯ್ಯ ಅವರ ಈ ವಿಡಿಯೋ ಮತ್ತು ವರ್ತನೆ ಚರ್ಚೆಗೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.

Balayya and Urvashi Rautela s Dabidi Dibide dance at the Daku Maharaj success party sparks debate

ಹೌದು, ಅಸಲಿಗೆ ಡಾಕೂ ಮಹಾರಾಜ್ ಚಿತ್ರದ ದಬಿಡಿ ದಿಬಿಡಿ ಹಾಡು ಹಿಂದೆ ವಿವಾದಕ್ಕೀಡಾಗಿತ್ತು. ಹಾಡಲ್ಲಿ ಬಾಲಯ್ಯ ಮತ್ತು ಊವರ್ಶಿ ಹಾಕಿದ ಹೆಜ್ಜೆ ಅಶ್ಲೀಲ-ಅಸಭ್ಯವಾದ ಕಾರಣ ಅನೇಕರ ಕಣ್ಣು ಕೆಂಪಾಗಿತ್ತು. ಇನ್ನೂ ಬಾಲಯ್ಯಗೆ ಈಗ 64ರ ಹರೆಯ. ಊವರ್ಶಿಗೆ ಈಗ ವಯಸ್ಸು ಕೇವಲ 30. ಹೀಗಾಗಿ ಮಗಳ ವಯಸ್ಸಿನ ನಟಿಯ ಜೊತೆ ಬಾಲಯ್ಯ ಹೀಗೆ ಕುಣಿಯುವ ಅವಶ್ಯಕತೆಯಾದರೂ ಏನಿತ್ತು ಎನ್ನುವ ಪ್ರಶ್ನೆ ಅನೇಕರನ್ನು ಕಾಡಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಯ್ಯ ಅವರನ್ನು ಹೀನಾಮಾನವಾಗಿ ಟ್ರೋಲ್ ಕೂಡ ಮಾಡಲಾಗಿತ್ತು.

ಆದರೆ, ಮೊದಲಿಂದ ಬಾಯಿಗೆ ಬಂದಂತೆ ಮಾತನಾಡುವುದನ್ನೇ ರೂಢಿ ಮಾಡಿಕೊಂಡು ಬಂದ ಬಾಲಯ್ಯ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಕೆಡಿಸಿಕೊಳ್ಳುವುದು ಇಲ್ಲ. ಇದಕ್ಕೆ ಪುರಾವೆ ಎನ್ನುವಂತೆ ಡಾಕೂ ಮಹಾರಾಜ್ ಗೆದ್ದ ಖುಷಿಯಲ್ಲಿ ಊವರ್ಶಿ ರೌಟೇಲಾ ಜೊತೆ ಬಾಲಯ್ಯ ಪಾರ್ಟಿ ಮಾಡಿದ್ದಾರೆ. ಕೇವಲ ಪಾರ್ಟಿ ಮಾಡಿ ಜೊತೆಯಲ್ಲಿ ಕುಳಿತು ಊಟ ಮಾಡಿದ್ದರೆ ಯಾರು ಕೇಳಿತ್ತಿರಲಿಲ್ಲ. ಆದರೆ. ಬಾಲಯ್ಯ ಮತ್ತದೇ ಕೆಲಸವನ್ನು ಮಾಡಿದ್ದಾರೆ. ಊವರ್ಶಿ ಜೊತೆ ತಮ್ಮ ದಬಿಡಿ ದಿಬಿಡಿ ಹಾಡಿಗೆ ಕುಣಿದಿದ್ದಾರೆ. ಸಾಲದಕ್ಕೆ ಊವರ್ಶಿಯ ಖಾಸಗಿ ಭಾಗಕ್ಕೆ ದಬಿಡಿ ದಿಬಿಡಿ ಎಂದು ಗುದ್ದಲು ಹೋಗಿದ್ದಾರೆ.

ಈ ವಿಡಿಯೋ ಈಗ ಅನೇಕರನ್ನು ಕೆರಳಿಸಿದೆ. ಬಾಲಯ್ಯ ವಿರುದ್ಧ ಅಸಮಾಧಾನ ಮತ್ತು ಆಕ್ರೋಶದ ಅಲೆ ಇನ್ನೊಮ್ಮೆ ಎದ್ದಿದೆ. ಕೆಲವರಿಗೆ ಕಂಠಪೂರ್ತಿ ಕುಡಿದಿದ್ದಾರೆ ಎಂದು ಅನ್ಸಿದರೆ ಇನ್ನು ಕೆಲವರು ಬಾಲಯ್ಯ ಅವರ ವರ್ತನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವವರು ಘನತೆಯನ್ನು ಕಾಪಾಡಿಕೊಳ್ಳಬೇಕು ಅದನ್ನು ಬಿಟ್ಟು ಹೀಗೆ ಹುಚ್ಚಾಪಟ್ಟೆ ಆಡಬಾರದು ಎಂದು ಕಿಡಿ ಕಾರುತ್ತಿದ್ದಾರೆ.

ಅಂದ್ಹಾಗೇ ಅನಂತಪುರದಲ್ಲಿ ಡಾಕು ಮಹಾರಾಜ್ ಚಿತ್ರದ ಬಿಡುಗಡೆಗೆ ಮುನ್ನ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಅದು ಆಗಲಿಲ್ಲ. ಈ ಕಾರಣಕ್ಕೆ ಚಿತ್ರ ಗೆದ್ದ ಹಿನ್ನೆಲೆ ಅನಂತಪುರದಲ್ಲಿ ದೊಡ್ಡ ಸಂಭ್ರಮಾಚರಣೆಯ ಕಾರ್ಯಕ್ರಮ ಹಮ್ಮಿಕೊಳ್ಳುವ ಆಲೋಚನೆಯಲ್ಲಿ ಚಿತ್ರತಂಡ ಇದೆ. ಅಲ್ಲಿನ ಅಭಿಮಾನಿಗಳಲ್ಲಿ ಬಾಲಯ್ಯ ಅವರ ಮಾತು ಕೇಳುವ ಅವರನ್ನು ನೋಡುವ ಆತುರತೆ ಕೂಡ ಇದೆ. ಇನ್ನುಳಿದಂತೆ ಅಖಂಡ, ವೀರನರಸಿಂಹ ರೆಡ್ಡಿ, ಭಗವಂತ ಕೇಸರಿ ಚಿತ್ರಗಳ ಮೂಲಕ ಒಂದಾದ ಮೇಲೊಂದು ಗೆಲುವನ್ನು ಕಂಡ ಬಾಲಯ್ಯ ಡಾಕು ಮಹಾರಾಜ್ ಮೂಲಕ ನಾಲ್ಕನೇ ಬಾರಿ ಗೆದ್ದು ಬೀಗಿದ್ದಾರೆ. ನಕ್ಕು ಸುಮ್ಮನಾಗದೇ ಸಕ್ಸಸ್ ಪಾರ್ಟಿ ನೆಪದಲ್ಲಿ ಊವರ್ಶಿ ಜೊತೆ ಮತ್ತೊಮ್ಮೆ ಡ್ಯಾನ್ಸ್ ಮಾಡಿ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

More from Filmibeat

Read more about: balakrishna viral video tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X