ನನ್ನ ದೇಹ ಸೌಂದರ್ಯ ನನಗೆ ಅಸಹ್ಯವಾಗಿತ್ತು: ಬಾಲಿಕಾ ವಧು ನಟಿ ಹೇಳಿಕೆ!
ಕನ್ನಡದ ಕಿರುತೆರೆಯಲ್ಲಿ ಬಂದು ದೊಡ್ಡ ಮಟ್ಟದ ಯಶಸ್ಸು ಕಂಡ ಧಾರಾವಾಹಿಗಳಲ್ಲಿ 'ಪುಟ್ಟಗೌರಿ ಮದುವೆ' ಕೂಡ ಒಂದು. ಕನ್ನಡಕ್ಕೂ ಮೊದಲು ಈ ಧಾರಾವಾಹಿ ಹಿಂದಿಯಲ್ಲಿ 'ಬಾಲಿಕಾ ವಧು' ಎನ್ನುವ ಟೈಟಲ್‌ನಲ್ಲಿ ಬಂದಿತ್ತು. ಈ ಧಾರಾಹಿಯಲ್ಲಿ ಬಾಲ್ಯದ ಪಾತ್ರದಲ್ಲಿ ಅವಿಕಾ ಗೋರ್ ನಟಿಸಿದ್ದರು.
ಬಾಲನಟಿಯಾಗಿ ಹಲವು ವರ್ಷಗಳಿಂದ ಸಿನಿಮಾರಂಗದಲ್ಲಿ ಸಕ್ರಿಯ ಆಗಿರುವ ಅವಿಕಾ ಅವರು ಈಗ ಅಚ್ಚರಿಯ ಹೇಳಿಕೆ ಒಂದನ್ನು ನೀಡಿದ್ದಾರೆ. ಸಿನಿಮಾ ರಂಗದಲ್ಲಿ ಅವಿಕಾ ಅವಮಾನ ಎದುರಿಸಿದ್ದಾರಂತೆ. ಈ ಬಗ್ಗೆ ಅವಿಕಾ ಹೇಳಿಕೊಂಡಿದ್ದಾರೆ.
ಅವಿಕಾ ಗೋರ್ ಅವರು ಈಗ ಹೊಸ ಹೇಳಿಕೆ ನೀಡುವ ಮೂಲಕ ಸುದ್ದಿ ಆಗಿದ್ದಾರೆ. ಸಿನಿಮಾ ತಾರೆಯರು ಅಂದ ಮೇಲೆ ತಮ್ಮ ಲುಕ್ ಬಗ್ಗೆ ಸಾಕಷ್ಟು ಗಮನ ವಹಿಸುತ್ತಾರೆ. ಆದರೆ ಬಾಲಿಕಾ ವಧು ಖ್ಯಾತಿಯ ಅವಿಕಾ ಅವರಿಗೆ ಮಾತ್ರ ತಮ್ಮ ದೇಹ ಅಂದರೆ ಅವರಿಗೆ ಇಷ್ಟ ಇರಲಿಲ್ಲ ಅಂತೆ.

ನನ್ನ ದೇಹ ನನಗೆ ಅಸಹ್ಯ ತರುತ್ತಿತ್ತು: ಅವಿಕಾ ಗೋರ್!
ನಟಿ ಅವಿಕಾ ಗೋರ್ ಅವರು ಕಿರುತೆರೆ ಮಾತ್ರವಲ್ಲ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಈಕೆಗೆ ತಮ್ಮದೇ ಆದ ಅಭಿಮಾನ ಬಳಗ ಇದೆ. ಆದರೆ ಈಕೆಗೆ ತನ್ನ ದೇಹದ ಬಗ್ಗೆ ದೊಡ್ಡ ಅಸಡ್ಡೆ ಇತ್ತಂತೆ. ತನ್ನ ದೇಹದ ಬಗ್ಗೆ ತನಗೇ ಅಸಹ್ಯ ಹುಟ್ಟಿತ್ತಂತೆ. ಹಾಗಾಗಿ ಹಲವು ವರ್ಷಗಳ ಕಾಲ ದೇಹದ ಸೌಂದರ್ಯದ ಬಗ್ಗೆ ಗಮನ ಕೊಡುತ್ತಲೇ ಇರಲಿಲ್ಲವಂತೆ. ಕೇವಲ ಅಭಿನಯವನ್ನು ಉತ್ತಮ ಮಾಡಿಕೊಳ್ಳುವ ನಿಟ್ಟಿನಲ್ಲಿ ಸದಾ ಪ್ರಯತ್ನ ಮಾಡುತ್ತಿದ್ದರಂತೆ.

ದಡೂತಿ ದೇಹದಿಂದ ಅವಮಾನ ಪಟ್ಟಿದ್ದ ನಟಿ!
ಇನ್ನು ಅವಿಕಾ ಗೋರ್ ಒಂದು ಸಮಯದಲ್ಲಿ ಹೆಚ್ಚು ದಪ್ಪ ಆಗಿದ್ದರಂತೆ. ಹಾಗಾಗಿ ಆಕೆಯನ್ನು ಹಲವು ಬಾರಿ ಕೆಟ್ಟದಾಗಿ ನಿಂದಿಸಲಾಗಿತ್ತಂತೆ. ಇದರಿಂದ ಬೇಸರಗೊಂಡ ಅವಿಕಾ ಅವರು ತಮ್ಮ ದೇಹದ ಬಗ್ಗೆ, ಲುಕ್ ಬಗ್ಗೆ ಗಮನ ಕೊಡುವುದನ್ನೇ ಬಿಟ್ಟು ಬಿಟ್ಟರಂತೆ. ಹೇಗಿದ್ದರೂ ಜನ ಕಮೆಂಟ್ ಮಾಡುತ್ತಾರೆ ಎಂದು ಬದಲಾಗಲು ಪ್ರಯತ್ನಿಸಲೇ ಇಲ್ಲವಂತೆ. ಜೊತೆಗೆ ಕೆಟ್ಟ ಕಮೆಂಟ್‌ಗಳನ್ನು ಕೇಳಿ, ಕೇಳಿ ತನಗೆ ತನ್ನ ದೇಹ ಸೌಂದರ್ಯದ ಮೇಲೆ ಅಸಹ್ಯ ಆಗಿತ್ತಂತೆ. ಇದನ್ನು ಇತ್ತೀಚಿನ ಸಂದರ್ಶನ ಒಂದಲ್ಲಿ ಅವಿಕಾ ಅವರು ಹೇಳಿಕೊಂಡಿದ್ದಾರೆ.

ಗ್ಲ್ಯಾಮರ್ ಗೊಂಬೆಯಂತೆ ಆಗಿರುವ ಅವಿಕಾ!
ಇದರಿಂದ ನಿಧಾನವಾಗಿ ಹೊರ ಬಂದ ನಟಿ ಅವಿಕಾ ಅವರು ಕ್ರಮೇಣ ಬದಲಾಗಿದ್ದಾರೆ. ಈಗ ಈ ನಟಿ ಥೇಟ್ ಗ್ಲ್ಯಾಮರ್ ಗೊಂಬೆಯಂತೆ ಇದ್ದಾರೆ. ಯಾವ ಬಾಲಿವುಡ್ ನಟಿಗೂ ಈಕೆ ಕಡಿಮೆ ಇಲ್ಲ ಎನ್ನುವ ಹಾಗೆ ಕಂಗೊಳಿತ್ತಾರೆ. ಬಣ್ಣದ ಲೋಕ ಬಯಸುವ ಹಾಗೆ ತೆರೆ ಮೇಲೆ ಮಿಂಚುತ್ತಾರೆ. ಈ ಸುಂದರಿ ಹಲವು ವರ್ಷ ಬಾಡಿ ಶೇಮಿಂಗ್‌ನಿಂದ ಖಿನ್ನತೆಗೆ ಒಳಗಾಗಿದ್ದರಂತೆ.

ತೆಲುಗಿನ ಸಿನಿಮಾಗಳಿಂದ ಖ್ಯಾತಿ ಪಡದ ನಟಿ!
ಬಾಲಿಕಾ ವಧು ಹಿಂದಿ ಮತ್ತು ತೆಲುಗು ಅವತರಣಿಯಲ್ಲಿ ಅವಿಕಾ ಅಭಿನಯಿಸಿದ್ದಾರೆ. ಬಳಿಕ ಎರಡೂ ಚಿತ್ರರಂಗದಲ್ಲೂ ಅವಿಕಾ ಗೋರ್ ಸಕ್ರಿಯವಾಗಿ ಇದ್ದಾರೆ. 'ಲಕ್ಷ್ಮೀ ರಾವೆ ಮಾ ಇಂಟಿಕಿ', 'ಉಯ್ಯಲಾ ಜಂಪಾಲಾ', 'ಎಕ್ಕಡಿಕಿ ಪೋತವು ಚಿನ್ನವಾಡ', ರಾಜು ಗಾರಿ ಗಾಡಿ3' ಸೇರಿದಂತೆ ಹಲವು ತೆಲುಗು ಸಿನಿಮಾಗಳ ಮೂಲಕ ಖ್ಯಾತಿ ಪಡೆದಿದ್ದಾರೆ ಅವಿಕಾ ಗೋರ್. ಜೊತೆಗೆ ಹಿಂದಿಯ ಒಂದಷ್ಟು ಸಿನಿಮಾಗಳಲ್ಲೂ ಕೂಡ ನಟಿ ಅವಿಕಾ ಅಭಿನಯಿಸಿದ್ದಾರೆ.


Click it and Unblock the Notifications











