For Quick Alerts
  ALLOW NOTIFICATIONS  
  For Daily Alerts

  ಪವನ್ ಕಲ್ಯಾಣ್ ಮಗನಿಗೆ ಟ್ವಿಟ್ಟರ್‌ ಮೂಲಕ ಸಿನಿಮಾ ಆಫರ್ ಮಾಡಿದ ನಿರ್ಮಾಪಕ

  |

  ಸಿನಿಮಾ ಸ್ಟಾರ್ ನಟರ ಮಕ್ಕಳು ಸಿನಿಮಾ ನಟರೇ ಆಗುವುದು ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಸ್ವಜನಪಕ್ಷಪಾತ (ನೆಪೊಟಿಸಂ) ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ಬಾಲಿವುಡ್‌ನಲ್ಲಿ ನಡೆಯುತ್ತಿವೆ. ಆದರೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಇದೊಂದು ದೊಡ್ಡ ಸಮಸ್ಯೆಯೇ ಅಲ್ಲ ಎಂಬಂತಾಗಿದೆ.

  ಚಿರಂಜೀವಿ ಕುಟುಂಬದವರು ಈಗಾಗಲೇ ಹಲವಾರು ಮಂದಿ ನಾಯಕ ನಟರಾಗಿದ್ದಾರೆ. ಇತ್ತೀಚೆಗಷ್ಟೆ ಸಾಯಿ ಧರಂ ತೇಜ್ ಸಹ ನಾಯಕ ನಟರಾಗಿ 'ಉಪ್ಪೆನ' ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಚಿರಂಜೀವಿ ಕುಟುಂಬಕ್ಕೆ ಸೇರಿದ ಮತ್ತೊಬ್ಬರು ನಾಯಕ ನಟರಾಗುತ್ತಾರಾ ಎಂಬ ಅನುಮಾನ ಎದ್ದಿದೆ. ಇದಕ್ಕೆ ಕಾರಣ ತೆಲುಗಿನ ಭಾರಿ ಬಜೆಟ್‌ ನಿರ್ಮಾಪಕ ಮಾಡಿರುವ ಕಮೆಂಟ್.

  ತೆಲುಗಿನ ಸೂಪರ್ ಸ್ಟಾರ್ ನಟ, ರಾಜಕಾರಣಿ ಪವನ್ ಕಲ್ಯಾಣ್ ಇತ್ತೀಚೆಗಷ್ಟೆ ಮಗ ಅಕಿರಾ ನಂದನ್ ಜೊತೆಗಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಪವನ್‌ಗಿಂತಲೂ ಎತ್ತರ ಬೆಳೆದಿರುವ ಮಗನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗಳೇ ಆದವು. ಇದೀಗ ಟ್ವಿಟ್ಟರ್‌ ಮೂಲಕವೇ ನಿರ್ಮಾಪಕರೊಬ್ಬರು ಪವನ್ ಮಗನಿಗೆ ಸಿನಿಮಾ ಆಫರ್ ಮಾಡಿದ್ದಾರೆ.

  ಆಫರ್ ಕೊಟ್ಟಿರುವ ಬಂಡ್ಲ ಗಣೇಶ್

  ಆಫರ್ ಕೊಟ್ಟಿರುವ ಬಂಡ್ಲ ಗಣೇಶ್

  ಪವನ್ ಮಗನಿಗೆ ಸಿನಿಮಾ ಆಫರ್‌ ಮಾಡಿರುವುದು ಮತ್ಯಾರೂ ಅಲ್ಲ ತೆಲುಗಿನ ಬಿಗ್‌ ಬಜೆಟ್ ನಿರ್ಮಾಪಕರಲ್ಲಿ ಒಬ್ಬರಾಗಿರುವ ಬಂಡ್ಲ ಗಣೇಶ್. ಪವನ್ ತಮ್ಮ ಮಗನೊಂದಿಗಿರುವ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಬಂಡ್ಲ ಗಣೇಶ್, 'ನನ್ನ ದೇವರ ಜೊತೆಗೆ ನನ್ನ ಹೀರೋ' ಎಂದು ಕಮೆಂಟ್ ಮಾಡಿದ್ದಾರೆ. ಬಂಡ್ಲ ಗಣೇಶ್ ಹಲವು ತೆಲುಗು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದಾರೆ ಸಹ.

  ಪವನ್‌ರ ದೊಡ್ಡ ಅಭಿಮಾನಿ ಬಂಡ್ಲ ಗಣೇಶ್

  ಪವನ್‌ರ ದೊಡ್ಡ ಅಭಿಮಾನಿ ಬಂಡ್ಲ ಗಣೇಶ್

  ಬಂಡ್ಲ ಗಣೇಶ್, ಪವನ್ ಕಲ್ಯಾಣ್ ಅವನ ಪಕ್ಕಾ ಅಭಿಮಾನಿ ಜೊತೆಗೆ ಅಪ್ರತಿಮ ಬೆಂಬಲಿಗರೂ ಹೌದು. ಹಾಗಾಗಿಯೇ ಪವನ್ ಅನ್ನು ದೇವರು ಎಂದು ಬಂಡ್ಲ ಗಣೇಶ್ ಕರೆದಿದ್ದಾರೆ. ಅಲ್ಲದೆ ಪರೋಕ್ಷವಾಗಿ ಪವನ್ ಮಗನ ಸಿನಿಮಾವನ್ನು ತಾವೇ ನಿರ್ಮಾಣ ಮಾಡುವುದಾಗಿಯೂ ಹೇಳಿದ್ದಾರೆ. ಪವನ್ ಕಲ್ಯಾಣ್ ನಟಿಸಿರುವ 'ತೀನ್ ಮಾರ್', 'ಗಬ್ಬರ್ ಸಿಂಗ್' ಸಿನಿಮಾಗಳನ್ನು ಬಂಡ್ಲ ಗಣೇಶ್ ನಿರ್ಮಾಣ ಮಾಡಿದ್ದಾರೆ.

  ಅಕಿರಾ ನಂದನ್‌ಗೆ ಹದಿನೇಳು ವರ್ಷ ವಯಸ್ಸು

  ಅಕಿರಾ ನಂದನ್‌ಗೆ ಹದಿನೇಳು ವರ್ಷ ವಯಸ್ಸು

  ಅಕಿರಾ ನಂದನ್‌ಗೆ ಈಗಿನ್ನೂ ಹದಿನೇಳು ವರ್ಷ ವಯಸ್ಸು. ಪವನ್‌ ಕಲ್ಯಾಣ್‌ರ ಎರಡನೇ ಪತ್ನಿ ರೇಣು ದೇಸಾಯಿ ಮಗ ಅಕಿರಾ ನಂದನ್. ಇನ್ನೂ ಈಗಷ್ಟೆ ಕಾಲೇಜು ಮೆಟ್ಟಿಲು ಹತ್ತಿರುವ ಚಿಗುರು ಮೀಸೆ ಹುಡುಗ ಅಕಿರಾ ನಂದನ್‌ಗೆ ಈಗಲೇ ನಾಯಕನಾಗಿ ನಟಿಸಲು ಆಫರ್ ಬಂದಿದೆ.

  ಮತ್ತೊಂದು ಹೊಸ ದಾಖಲೆ ಬರೆದು ಭಾರತದಲ್ಲೇ No 1 ಆದ KGF 2 | Filmibeat Kannada
  ಪವನ್‌ ಕಲ್ಯಾಣ್‌ಗೆ ನಾಲ್ಕು ಜನ ಮಕ್ಕಳು

  ಪವನ್‌ ಕಲ್ಯಾಣ್‌ಗೆ ನಾಲ್ಕು ಜನ ಮಕ್ಕಳು

  ನಟ ಪವನ್ ಕಲ್ಯಾಣ್‌ಗೆ ಒಟ್ಟು ನಾಲ್ಕು ಮಂದಿ ಮಕ್ಕಳು. ರೇಣು ದೇಸಾಯಿ ಜೊತೆಗೆ ಅಕಿರಾ ನಂದನ್ ಹಾಗೂ ಆದ್ಯ ಹೆಸರಿನ ಹೆಣ್ಣು ಮಗು ಇದೆ. ನಂತರ ರಷ್ಯಾದ ಅನ್ನಾ ಲೆಜ್ನೇವಾ ಜೊತೆಗೆ ಪೊಲೇನಾ ಅಂಜನಾ ಪಾವನೋವಾ ಹೆಸರಿನ ಹೆಣ್ಣು ಮಗು ಹಾಗೂ ಮಾರ್ಕ್ ಶಂಕರ್ ಪಾವನೋವಿಚ್ ಹೆಸರಿನ ಗಂಡು ಮಗುವಿದೆ. ಪವನ್ ಕಲ್ಯಾಣ್‌ ಮೊದಲ ಹೆಂಡತಿಯೊಂದಿಗೆ ಮಕ್ಕಳಿಲ್ಲ. ಪವನ್ ಸದ್ಯಕ್ಕೆ ರಷ್ಯಾದ ಅನ್ನಾ ಲೆಜ್ನೇವಾ ಜೊತೆಗೆ ದಾಂಪತ್ಯ ನಡೆಸುತ್ತಿದ್ದಾರೆ.

  English summary
  Actor, Producer Bandla Ganesh gave movie offer to Pawan Kalyan's son Akira Nanda.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X