3 ದಿನ ಆಡಿಷನ್ ಮಾಡಿದರು, ಕಾಸು ಕೊಟ್ಟರು ; ಆಮೇಲೆ ಆ ಅರ್ಥದಲ್ಲಿ ಕರೆದ್ರು- ಬಿಗ್ ಬಾಸ್ ಸ್ಫರ್ಧಿ ಭಾವುಕ

ಬಣ್ಣದ ಲೋಕದಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ಕಂಡರೆ ಮುಕ್ಕಿ ತಿನ್ನುವರು ತುಂಬಾ ಜನ ಇದ್ದಾರೆ. ಇಲ್ಲಿ ಬಹುತೇಕರಲ್ಲ ಆದರೆ ಕೆಲವರು ಮುಖವಾಡದ ಬದುಕನ್ನು ಬದುಕುತ್ತಾರೆ. ಕೆಲವರು ಪ್ರಚಾರದ ಹುಚ್ಚಿಗೆ ಬರುತ್ತಾರೆ, ಇನ್ನೂ ಕೆಲವರು ಹೆಣ್ಣಿನ ಚಪಲಕ್ಕಾಗಿ ಸಿನಿಮಾ ನಿರ್ಮಾಣ ಮಾಡಲು ಬರುತ್ತಾರೆ.

ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಹೀಗೆ.. ಆ ಇಂಡಸ್ಟ್ರೀ ಈ ಇಂಡಸ್ಟ್ರೀ ಅಂತ ಅಲ್ಲ. ಎಲ್ಲ ಚಿತ್ರೋದ್ಯಮಗಳಲ್ಲಿ ಬಹುತೇಕ ಕಡೆ ಪಾತ್ರಕ್ಕಾಗಿ ಪಲ್ಲಂಗದ ಸಂಸ್ಕೃತಿ ಇದ್ದೇ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಇಲ್ಲಿಯವರೆಗೆ ಹಲವಾರು ನಾಯಕಿಯರು ತಮ್ಮ ಕಹಿ ಅನುಭವ ಹಂಚಿಕೊಂಡಿದ್ದಾರೆ. ಬಿಕ್ಕಿದ್ದಾರೆ. ಆ ಪೈಕಿ ರೇವಾ ಕೌರಾಸೆ ಕೂಡ ಒಬ್ಬರು.

BB Marathi 6 s Reva Kaurase Exposes South Producer s Compromise Demand

ಯಾರು ಈ ರೇವಾ ಕೌರಾಸೆ ..?


ರೇವಾ ಮರಾಠಿ ಮುಲ್ಗಿ. ಆದರೆ ಇವರ ಬಣ್ಣದ ಲೋಕಕ್ಕೆ ಪರಿಚಯಿಸಿದ್ದು ದಕ್ಷಿಣ ಚಿತ್ರರಂಗ. 2021ರಲ್ಲಿ ತೆರೆಗೆ ಬಂದ ತೆಲುಗಿನ ''ಸೀತಾ ಮನೋಹರ ಶ್ರೀ ರಾಘವ'' ಚಿತ್ರದ ಮೂಲಕ ವೃತ್ತಿ ಬದುಕು ಶುರು ಮಾಡಿದ ರೇವಾ ಆ ನಂತರ ದಕ್ಷಿಣದಲ್ಲಿ ದುರ್ಬಿನ್ ಹಾಕಿಕೊಂಡು ಹುಡುಕಿಕೊಂಡು ಕಾಣಲಿಲ್ಲ.

ಯಾಕೆಂದರೆ.. ಅಷ್ಟರಲ್ಲಿ ರೇವಾ ಒಂದೇ ಚಿತ್ರಕ್ಕೆ ಮರಳಿ ಗೂಡು ಸೇರಿ ಆಗಿತ್ತು. ಬೆಳ್ಳಿತೆರೆಯಿಂದ ಮರಾಠಿ ಕಿರುತೆರೆಯತ್ತ ಮುಖ ಮಾಡಿಯಾಗಿತ್ತು. ಈ ಹಿನ್ನೆಲೆ ರೇವಾ ಅವರ ಈ ನಿರ್ಧಾರಕ್ಕೆ ಕಾರಣವೇನು..? ಕನಸೊತ್ತು ಬಂದಿದ್ದ ರೇವಾ ದಕ್ಷಿಣದಿಂದ ಕಾಲ್ಕಿತ್ತಿದ್ದು ಯಾಕೆ..? ಎಂಬ ಪ್ರಶ್ನೆಗಳಿಗೆ ಈಗ ಕೊನೆಗೂ ಉತ್ತರ ಸಿಕ್ಕಿದೆ.

ಕಾಸ್ಟಿಂಗ್ ಕೌಚ್ ಕಹಿ ಅನುಭವ

ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಕಹಿ ಅನುಭವ ಹಂಚಿಕೊಂಡಿರುವ ರೇವಾ ಕೌರಾಸೆ, ಚಿತ್ರವೊಂದಕ್ಕೆ ಹೈದರಾಬಾದ್‌ಗೆ ನನ್ನನ್ನು ಕರೆಯಲಾಗಿತ್ತು. ಆದರೆ ಅಲ್ಲಾಗಿದ್ದು ಮಾತ್ರ ಆಘಾತಕಾರಿ ಅನುಭವ ಎಂದು ಹೇಳಿದ್ದಾರೆ.

ಹೈದರಾಬಾದ್‌ನಲ್ಲಿ ಚಿತ್ರವೊಂದಕ್ಕೆ ಮೂರು ದಿನಗಳ ಕಾಲ ನನ್ನ ಲುಕ್ ಟೆಸ್ಟ್ ಮಾಡಿದರು. ಕ್ಯಾಮರಾ ಟ್ರಯಲ್ಸ್‌ ಅಂತ ಮಾಡಿದರು. ಇಷ್ಟೇ ಅಲ್ಲ ವರ್ಕ್‌ಶಾಪ್ ಕೂಡ ನಡೆಯಿತು. ತುಂಬಾನೇ ವೃತ್ತಿಪರವಾದ ವಾತಾವರಣ ಇತ್ತು.

BB Marathi 6 s Reva Kaurase Exposes South Producer s Compromise Demand

ಈ ಹಿನ್ನೆಲೆ ನಾನು ನನಗೆ ಚಿತ್ರ ಸಿಕ್ಕಿತು ಎಂದುಕೊಂಡಿದ್ದೆ, ಖುಷಿಯಾಗಿದ್ದೆ ಎಂದು ಹೇಳಿರುವ ರೇವಾ ಅವತ್ತೊಂದು ದಿನ ನನಗೆ ಸೈನಿಂಗ್ ಅಮೌಂಟ್ ಕೂಡ ಅವರು ನೀಡಿದರು, ಒಳ್ಳೆಯ ದಿನ ನೋಡಿ ಒಪ್ಪಂದ ಕೂಡ ಮಾಡಿಕೊಂಡು ಬಿಡೋಣ ಅಂದರು. ಇದರಿಂದ ನನ್ನ ಈ ಖುಷಿ ಇನ್ನೂ ಹೆಚ್ಚಾಗಿತ್ತು ಎಂದಿದ್ದಾರೆ.

ಆ ನಂತರ ಮಾತಿಲ್ಲ. ಕಥೆ ಇಲ್ಲ

ಆದರೆ, ಇದೆಲ್ಲ ಆದ ಕೆಲ ದಿನಗಳ ನಂತರ ಅವರಿಂದ ಮಾತು ಇಲ್ಲ. ಕಥೆಯೂ ಇಲ್ಲ. ಹೀಗಾಗಿ ನಾನೇ ಕೊನೆಗೆ ಅವರಿಗೆ ಖುದ್ದಾಗಿ ಕೇಳಿದೆ ಎಂದು ಹೇಳಿರುವ ರೇವಾ, ಆಗ ಅವರು ನಿರ್ಮಾಪಕರಲ್ಲಿ ಒಬ್ಬರು ನಿಮ್ಮ ಜೊತೆ ಮಲಗಬೇಕೆಂಬ ಆಸೆ ವ್ಯಕ್ತಪಡಿಸುತ್ತಿದ್ದಾರೆ ಎಂಬರ್ಥದಲ್ಲಿ ಮಾತನಾಡಿ ಬಾಂಬ್ ಎಸೆದರು ಎಂದು ಹೇಳಿದ್ಧಾರೆ.

ಅವರ ಈ ಮಾತು ಕೇಳಿ ನನಗೆ ಶಾಕ್ ಆಯ್ತು ಎಂದು ಹೇಳಿರುವ ರೇವಾ, ಆಗಷ್ಟೇ ನಾನು ಚಿತ್ರರಂಗದಲ್ಲಿ ಅಂಬೆಗಾಲಿಡುತ್ತಿದೆ. ಯಾರಾದರೂ ಈ ತರಹ ಮಾತನಾಡಲು ಹೇಗೆ ಸಾಧ್ಯ ಅಂತ ನನಗೆ ನಂಬೋಕೆ ಆಗ್ಲಿಲ್ಲ ಎಂದು ಹೇಳಿದ್ದಾರೆ. ಅವರ ಆ ಮಾತಿಗೆ ನಾನು ಯಾವುದೇ ಕಾರಣಕ್ಕೂ ಕಾಂಪ್ರಮೈಸ್ ಆಗಲ್ಲ ಎಂದು ಹೇಳಿ ಆ ಪ್ರಾಜೆಕ್ಟ್‌ದಿಂದ ಹೊರ ಬಂದೆ ಎಂದಿದ್ದಾರೆ.

ನಮ್ಮಿಂದ ನಿರೀಕ್ಷೆ ಮಾಡುತ್ತಿದ್ದಾರೆ ಅಂದರೆ, ಆ ವಿಚಾರವನ್ನು ಅವರು ಮೊದಲೇ ಹೇಳಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿರುವ ರೇವಾ ಕೌರಾಸೆ, ನನ್ನ ಅತ್ಯಮೂಲ್ಯ ಸಮಯ ಹಾಳು ಮಾಡಿದರು ಎಂದು ಕಿಡಿ ಕಾರಿದ್ದಾರೆ.


ವಾಪಸ್ ಬರೋಕೆ ಟಿಕೆಟ್ ಕೂಡ ಬುಕ್ ಮಾಡಲಿಲ್ಲ

ಮುಂದುವರೆದು ಅಲ್ಲಿ ನನಗೆ ಸುರಕ್ಷಿತ ಭಾವನೆ ಮೂಡಲಿಲ್ಲ. ವಾಪಸ್ ಬರಲು ನನಗೆ ಟಿಕೆಟ್ ಕೂಡ ಅವರು ಬುಕ್ ಮಾಡಲಿಲ್ಲ ಎಂದು ಹೇಳಿರುವ ರೇವಾ, ಆ ನಂತರ ನಾನೇ ನನ್ನ ಕೈಯಾರೆ ದುಡ್ಡು ಹಾಕಿ ಪುಣೆಗೆ ವಾಪಸ್ ಬಂದೆ ಎಂದು ಹೇಳಿದ್ಧಾರೆ.

ಈ ಘಟನೆಯಿಂದ ನಾನು ಮಾನಸಿಕವಾಗಿ ಸಂಪೂರ್ಣ ಕುಗ್ಗಿ ಹೋಗಿದ್ದೆ, ನನ್ನ ಫ್ಯಾಮಿಲಿಯವರೆಗೆ ಕೂಡ ನಾನು ಈ ವಿಚಾರ ಹೇಳಲಿಲ್ಲ ಎಂದು ಹೇಳಿರುವ ರೇವಾ, ನಿಜಾ ಹೇಳಬೇಕು ಅಂದರೆ ಆ ಆಘಾತದಿಂದ ಹೊರ ಬರಲು ನನಗೆ ತುಂಬಾ ದಿನಗಳೇ ಬೇಕಾದವು ಎಂದಿದ್ದಾರೆ. ಎರಡ್ಮೂರು ತಿಂಗಳು ನಾನು ಸೋಶಿಯಲ್ ಮೀಡಿಯಾದಿಂದ ಸಂಪೂರ್ಣ ದೂರ ಇದ್ದೆ ಎಂದಿದ್ದಾರೆ.

ಅಂದ್ಹಾಗೇ ದಕ್ಷಿಣದಿಂದ ಉತ್ತರಕ್ಕೆ ಮರಳಿದ ನಂತರ ರೇವಾ ''ದೀವಾನಿಯಾತ್''.. ''ಪ್ಯಾರ್ ಕಾ ಪೆಹ್ಲಾ ಅಧ್ಯಾಯ್ - ಶಿವ ಶಕ್ತಿ''.. ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೇ ರೇವಾ ಮರಾಠಿಯ ''ಬಿಗ್ ಬಾಸ್'' ಆರನೇ ಸೀಸನ್‌ನಲ್ಲಿ ಕೂಡ ಭಾಗವಹಿಸಿದ್ದರು.

English summary
BB Marathi 6's Reva Kaurase breaks her silence on facing the casting couch in the South film industry, revealing how a producer's demand for personal favors left her deeply shaken.
Read more about: casting couch biggboss tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X