Don't Miss!
- News
'ಏಕನಾಥ್ ಶಿಂಧೆ ಮಾಡೆಲ್' ಜಾರಿಗೆ ಬಿಜೆಪಿ ಯತ್ನ: ಜೆಡಿಯು ಮುಖಂಡನ ಆರೋಪ?
- Lifestyle
Today Rashi Bhavishya: ಮಂಗಳವಾರದ ದಿನ ಭವಿಷ್ಯ: ಕರ್ಕ, ತುಲಾ, ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಜಾಗರೂಕರಾ
- Sports
Asia Cup 2022: ಏಷ್ಯಾಕಪ್ಗೆ ಪ್ರಕಟವಾದ ತಂಡದಲ್ಲಿ ಬೌಲಿಂಗ್ ಅಸ್ತ್ರ ಬುಮ್ರಾ ಇಲ್ಲದಿರಲು ಇದೇ ಕಾರಣ
- Automobiles
ಹೊಸ ತಂತ್ರಜ್ಞಾನ ಪ್ರೇರಿತ ಹೋಂಡಾ ಸಿಬಿ300ಎಫ್ ಸ್ಟ್ರೀಟ್ಫೈಟರ್ ಬೈಕ್ ಬಿಡುಗಡೆ
- Finance
ಕೇರಳ ಲಾಟರಿ: 'ವಿನ್ ವಿನ್ W-680' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Technology
ಸೋನಿ ಸಂಸ್ಥೆಯಿಂದ ಹೊಸ ಸ್ಮಾರ್ಟ್ಟಿವಿ ಲಾಂಚ್! ಫೀಚರ್ಸ್ ಹೇಗಿದೆ ಗೊತ್ತಾ?
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ದಳಪತಿ ವಿಜಯ್ ಅಭಿನಯದ 'ಬೀಸ್ಟ್' ಸಿನಿಮಾ ಒಟಿಟಿಗೆ ಲಗ್ಗೆ
ದಳಪತಿ ವಿಜಯ್ ಹಾಗೂ ಪೂಜಾ ಹೆಗಡೆ ಅಭಿನಯಿಸಿದ್ದ 'ಬೀಸ್ಟ್' ಸಿನಿಮಾ ಥಿಯೇಟರ್ಗಳಲ್ಲಿ ಅಷ್ಟೇನೂ ಸೌಂಡ್ ಮಾಡಲಿಲ್ಲ. 'ಕೆಜಿಎಫ್ 2'ಗಿಂತ ದಾಖಲೆ ಪ್ರಮಾಣದಲ್ಲಿ ಕಲೆಕ್ಷನ್ ಮಾಡುತ್ತೆ ಬೀಸ್ಟ್ ಸಿನಿಮಾ ಅಂತ ಹೇಳಲಾಗ್ತಿತ್ತು. ಆದರೆ, ಯಾವಾಗ ಕೆಜಿಎಫ್ 2 ರಿಲೀಸ್ ಆಯ್ತು ಬೀಸ್ಟ್ ಸಿನಿಮಾ ಕಲೆಕ್ಷನ್ ಸಂಪೂರ್ಣ ಇಳಿಕೆಯಾಯಿತು.
ಏಪ್ರಿಲ್ 13 ರಂದು ರಿಲೀಸ್ ಆಗಿದ್ದ ಬೀಸ್ಟ್ಗೆ ಮೊದಲ ದಿನ ಉತ್ತಮ ಸ್ಪಂದನೆ ಸಿಕ್ಕಿತ್ತು. ಆದರೆ, ಏಪ್ರಿಲ್ 14 ರಂದು ಕೆಜಿಎಫ್ 2 ರಿಲೀಸ್ ಆದ ಬಳಿಕ ಬೀಸ್ಟ್ ಸಿನಿಮಾ ನೋಡುವವರ ಸಂಖ್ಯೆ ಇಳಿಕೆಯಾಗುತ್ತಾ ಹೋಯಿತು. ವಿಶ್ವದಾದ್ಯಂತ ಬೀಸ್ಟ್ ಸಿನಿಮಾ 240 ಕೋಟಿ ರೂ ಬಾಚಿಕೊಂಡಿತ್ತು. ಆದರೆ, ಸಿನಿಮಾ ಪ್ರೇಕ್ಷಕರನ್ನ ರಂಜಿಸುವಲ್ಲಿ ವಿಫಲವಾಯಿತು.
KGF
2
vs
Beast
box
office
collection:
'ಬೀಸ್ಟ್'
ಹಾಗೂ
'ಕೆಜಿಎಫ್
2'
ಕಲೆಕ್ಷನ್
ನಡುವಿನ
ಅಂತರವೆಷ್ಟು?
ಸದ್ಯ ಈಗ ದಳಪತಿ ವಿಜಯ್ ಹಾಗೂ ಪೂಜಾ ಹೆಗೆಡೆ ಅಭಿನಯದ ಆಕ್ಷನ್ ಥ್ರಿಲರ್ ಸಿನಿಮಾ ಇಂದು (ಮೇ 11) ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲು ಸಿದ್ದವಾಗಿದೆ. ಥಿಯೇಟರ್ಗಳಲ್ಲಿ ಅಷ್ಟಾಗಿ ಓಡದ ಬೀಸ್ಟ್ ಈಗ ಒಟಿಟಿ ಪ್ಲಾಟ್ ಫಾರ್ಮ್ನಲ್ಲಾದರೂ ದಾಖಲೆ ಮಟ್ಟದಲ್ಲಿ ವೀಕ್ಷಣೆ ಪಡೆಯುತ್ತಾ ನೋಡಬೇಕಿದೆ.
Beast
Movie
Review:
ಹಳೆ
ಸೂತ್ರಗಳ,
ಹೊಸ
ಆ್ಯಕ್ಷನ್
ಚಿತ್ರ
'ಬೀಸ್ಟ್'!
ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬೀಸ್ಟ್ ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬೀಸ್ಟ್ ಸಿನಿಮಾ ಲಭ್ಯವಾಗಲಿದೆ. ಸದ್ಯ ಒಟಿಟಿ ವೇದಿಕೆಯಲ್ಲಾದರೂ ಸಿನಿಮಾ ಓಡುತ್ತಾ ಎಂದು ಕಾದು ನೋಡಬೇಕಿದೆ. ಚಿತ್ರದಲ್ಲಿ ವಿಜಯ್ RAW ಏಜೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಸೆಲ್ವರಾಘವನ್, ಶೈನ್ ಟಾಮಮ್ ಚಾಕೊ, ಯೋಗಿ ಬಾಬು, ರೆಡಿನ್ ಕಿಂಗ್ಲ್ಸಿ, ವಿಟಿವಿ ಗಣೇಶ್, ಶಾಜಿ ಚೇನ್ ಮತ್ತು ಅಪರ್ಣಾ ದಾಸ್ ಕಾಣಿಸಿಕೊಂಡಿದ್ದಾರೆ.
ಖಡಕ್
ಟ್ರೈಲರ್
ಮೂಲಕ
'ಟಕ್ಕರ್'
ಕೊಟ್ಟು
ಸಿನಿಮಾ
ನೋಡಿ
ಅಂತಿದೆ
ಟೀಮ್

ಬೀಸ್ಟ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಪೂಜಾ ಹೆಗಡೆ ಇದೇ ಮೊದಲ ಬಾರಿಗೆ ದಳಪತಿ ವಿಜಯ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಈ ಹಿಂದೆ ರಿಲೀಸ್ ಆಗಿದ್ದ ರಾಧೆಶ್ಯಾಮ್ ಕೂಡ ಪೂಜಾಗೆ ಅಷ್ಟಾಗಿ ಖ್ಯಾತಿ ತಂದುಕೊಟ್ಟಿರಲಿಲ್ಲ. ಈಗ ಬೀಸ್ಟ್ ಸಿನಿಮಾ ಕೂಡ ಅದೇ ಸಾಲಿಗೆ ಸೇರಿದೆ. ಸದ್ಯಕ್ಕೆ ಪೂಜಾಹೆಗಡೆ ಮುಂದಿನ ಚಿತ್ರ ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ಕಭಿ ಈದ್ ಕಭಿ ದೀವಾಲಿ, ರಣವೀರ್ ಸಿಂಗ್ ಜೊತೆ ಸರ್ಕಸ್ ಮತ್ತು ಮಹೇಶ್ ಬಾಬು ಜೊತೆ SSMB28 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.