ಬೆಂಗಳೂರು ರೇವ್ ಪಾರ್ಟಿ ಕೇಸ್; ನಾನು ಯಾವುದೇ ಪರೀಕ್ಷೆಗೂ ಸಿದ್ದ ಎಂದು ಹೇಮಾ ಸವಾಲ್

ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಕೊಲ್ಲ ಸಿಕ್ಕಿಬಿದ್ದಿದ್ದರು. ಸಿಸಿಬಿ ದಾಳಿ ವೇಳೆ ಆಕೆ ಅಲ್ಲಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ಆಕೆ ನಾನು ಪಾರ್ಟಿಗೆ ಹೋಗಿರಲಿಲ್ಲ ಎಂದು ವಾದಿಸಿದ್ದರು. ಕೊನೆಗೆ ಆಕೆಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಜಾಮೀನು ಪಡೆದು ಹೊರಬಂದಿದ್ದ ನಟಿ ತಮ್ಮ ಮೇಲಿನ ಆರೋಪಗಳು ಸುಳ್ಳು ಎಂದಿದ್ದರು.

ಇದೀಗ ನಟಿ ಹೇಮಾ ಕೊಲ್ಲ ಮತ್ತೊಂದು ವೀಡಿಯೋ ಮಾಡಿ ಮಾತನಾಡಿದ್ದಾರೆ. ನಾನು ಯಾವುದೇ ಪರೀಕ್ಷೆಗೆ ಸಿದ್ಧ. ನನಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಹಾಗೂ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಅವರನ್ನು ಭೇಟಿ ಮಾಡಲು ಅಪಾಯಿಂಟ್ಮೆಂಟ್ ಬೇಕು ಎಂದು ಮನವಿ ಮಾಡಿದ್ದಾರೆ. ಇನ್‌ಸ್ಟಾಗ್ರಾಂಮ್‌ನಲ್ಲಿ ವೀಡಿಯೋವನ್ನು ಹೇಮಾ ಹಂಚಿಕೊಂಡಿದ್ದಾರೆ.

Bengaluru rave party case once again telugu actress Hema kolla reacts

"ಮಾಧ್ಯಮಗಳು ನನ್ನ 35 ವರ್ಷಗಳ ಪ್ರತಿಷ್ಠೆಯನ್ನು ಹೇಗೆ ಹಾಳು ಮಾಡಿವೆ ಎಂಬುದು ನಿಮಗೆಲ್ಲ ಗೊತ್ತೇ ಇದೆ. ಇದು ಲಾ ಅಂಡ್ ಆರ್ಡರ್ ವಿಚಾರವಾಗಿದ್ದರಿಂದ ನಾನು ತಕ್ಷಣ ಹೊರಗೆ ಬಂದು ಮಾತನಾಡಲು ಆಗಲಿಲ್ಲ. ಏನಾಯಿತು ಎಂದು ನನಗೆ ಹೇಳಲಾಗಲಿಲ್ಲ. ಈಗಲೂ ಈ ವಿಷಯ ನ್ಯಾಯಾಲಯದಲ್ಲಿದೆ. ತನ್ನ ತಪ್ಪು ಇಲ್ಲದಿದ್ದರೆ ಹೇಮಾ ಯಾಕೆ ಬಹಿರಂಗವಾಗಿ ಬಂದು ಮಾತನಾಡಲಿಲ್ಲ ಎಂದು ನನ್ನ ಅಕ್ಕ-ತಂಗಿ, ಅಣ್ಣ-ತಮ್ಮಂದಿರು ಎಂದು ಭಾವಿಸುತ್ತಿದ್ದಾರೆ"

"ನ್ಯಾಯಾಲಯದ ವ್ಯವಹಾರಗಳ ಬಗ್ಗೆ ನಿಮಗೆ ತಿಳಿದಿದೆ. ಅದು ಇತ್ಯರ್ಥವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ತೀರ್ಪು ಬಂದ ಮೇಲೆ ಪ್ರೆಸ್ ಮೀಟ್ ಮಾಡಿ ಏನಾಯ್ತು ಅಂತ ಹೇಳ್ತೀನಿ. ನನಗೆ ಬಹಳ ನೋವು ತಂದೆ ವಿಷಯ ಏನು ಅಂದ್ರೆ. ನನ್ನ ಸ್ಯಾಂಪಲ್‌ಗಳು ಪೊಲೀಸರ ಬಳಿ ಇಲ್ಲದಿರುವಾಗ ನನಗೆ ಪಾಸಿಟಿವ್ ಬಂದಿರುವ ಬಗ್ಗೆ ಹೇಗೆ ಸುದ್ದಿ ಹಬ್ಬಿಸುತ್ತಾರೆ ಎಂದು ಹೇಮಾ ಕೆಲ ಮಾಧ್ಯಮಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

"ಆಗ ನಾನು ಮಾತನಾಡಿದರೆ ಓವರ್ ಆಕ್ಟಿಂಗ್ ಎಂದರು. ಈಗ ನಾನು ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದೇನೆ. ಈ ಬಗ್ಗೆ ವರದಿಯಲ್ಲಿ ನೆಗೆಟಿವ್ ಎಂದು ಬಂದಿದೆ. ಈಗ ಕೂಡ ನಾನು ಯಾವುದೇ ಪರೀಕ್ಷೆಗೆ ಒಳಗಾಗಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಎಪಿ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಭೇಟಿ ಆಗಿ ಮಾತನಾಡಬೇಕು. ಅದಕ್ಕೆ ಅಪಾಯಿಂಟ್‌ಮೆಂಟ್ ಬೇಕು. ನೀವೆಲ್ಲರೂ ಈ ವಿಡಿಯೋ ಅವರ ಗಮನಕ್ಕೆ ತಂದು ಸಹಾಯ" ಮಾಡಿ ಎಂದು ಕೇಳಿಕೊಂಡಿದ್ದಾರೆ.

"ನನಗೆ ಕೆಲ ಮಾಧ್ಯಮಗಳು ಬ್ಲ್ಯಾಕ್‌ಮೇಲ್ ಮಾಡಿದವು. ಸೆಟಲ್‌ಮೆಂಟ್ ಮಾಡಿಕೊಳ್ಳುವಂತೆ ಕೇಳಿದರು. ನನಗೂ ಮೀಡಿಯಾಗೂ ಯಾವುದೇ ಜಗಳ ಇಲ್ಲ. ಹಾಗಿರುವಾಗ ಯಾಕೆ ಹೆದರಬೇಕು, ತಪ್ಪು ಮಾಡದಿರುವಾಗ ಯಾಕೆ ಸೆಟಲ್‌ಮೆಂಟ್ ಮಾಡಿಕೊಳ್ಳಬೇಕು? ಯಾರು ನನಗೆ ಬ್ಲ್ಯಾಕ್‌ ಮೇಲ್ ಮಾಡಿದ್ರೋ ರಾಜಿ ಕರೆದರೋ ಎಲ್ಲರ ಆಧಾರ ನನ್ನ ಬಳಿ ಇದೆ ಎಂದು ನಟಿ ಹೇಮಾ ವೀಡಿಯೋದಲ್ಲಿ ವಿವರಿಸಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ. ಆರ್ ಫಾರ್ಮ್‌ಹೌಸ್‌ನಲ್ಲಿ ಕಳೆದ ಮೇ ತಿಂಗಳಲ್ಲಿ ಈ ಪಾರ್ಟಿ ನಡೆದಿತ್ತು. ಸಿಸಿಬಿ ದಾಳೆ ವೇಳೆ ಡ್ರಗ್ಸ್ ಪತ್ತೆಯಾಗಿತ್ತು. 103 ಜನರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ನಟಿ ಹೇಮಾ ತಾನು ಬೆಂಗಳೂರು ಪಾರ್ಟಿಗೆ ಹೋಗಿಲ್ಲ. ಹೈದರಾಬಾದ್‌ನ ರೆಸಾರ್ಟ್‌ನಲ್ಲಿದ್ದೀನಿ ಎಂದು ಹೇಳಿ ಒಂದು ವೀಡಿಯೋ ಮಾಡಿ ತೇಲಿಬಿಟ್ಟಿದ್ದರು. ಆದರೆ ಬಳಿಕ ನಾನು ಪಾರ್ಟಿಗೆ ಹೋಗಿದ್ದು ನಿಜ. ಶನಿವಾರ ಹೋಗಿದ್ದೆ. ಭಾನುವಾರ ಅಲ್ಲಿರಲಿಲ್ಲ ಎಂದಿದ್ದರು.

More from Filmibeat

English summary
Actress Hema kolla issue clarification on Bengaluru rave party case;
Read more about: telugu actress tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X