ಪ್ರಭಾಸ್ ಚಿತ್ರಕ್ಕಾಗಿ ಓಡೋಡಿ ಬಂದ ಶಿವರಾಜ್ ಕುಮಾರ್ ಹೀರೋಯಿನ್.!

Recommended Video

ಪ್ರಭಾಸ್ ಚಿತ್ರಕ್ಕಾಗಿ ಓಡೋಡಿ ಬಂದ್ರು ಭಾಗ್ಯಶ್ರೀ | FILMIBEAT KANNADA

1993 ರಲ್ಲಿ ತೆರೆಕಂಡ 'ಅಮ್ಮಾವ್ರ ಗಂಡ' ಚಿತ್ರವನ್ನು ನೋಡಿದ್ದೀರಾ.? ಈ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಜೋಡಿ ಆಗಿದ್ದವರು ಭಾಗ್ಯಶ್ರೀ.

ಅದಾಗಲೇ ಬಾಲಿವುಡ್ ನಲ್ಲಿ 'ಮೈನೇ ಪ್ಯಾರ್ ಕಿಯಾ' ಅಂತಹ ಹಿಟ್ ಸಿನಿಮಾ ಕೊಟ್ಟಿದ್ದ ಭಾಗ್ಯಶ್ರೀ ಚಂದನವನದಲ್ಲಿ 'ಅಮ್ಮಾವ್ರ ಗಂಡ' ಎಂಬ ಸಿನಿಮಾ ಮಾಡಿದರು. ಬಳಿಕ 'ಓಂಕಾರಂ' ಎಂಬ ಚಿತ್ರದ ಮೂಲಕ ತೆಲುಗು ಸಿನಿ ಅಂಗಳಕ್ಕೂ ಭಾಗ್ಯಶ್ರೀ ಕಾಲಿಟ್ಟರು.

ಕನ್ನಡ, ತೆಲುಗು, ಬೆಂಗಾಲಿ, ಭೋಜ್ ಪುರಿ, ಮರಾಠಿ ಸೇರಿದಂತೆ ಭಾರತದ ಹಲವು ಚಿತ್ರರಂಗಗಳನ್ನು ಭಾಗ್ಯಶ್ರೀ ಒಂದು ರೌಂಡ್ ಹಾಕಿ ಬಂದಿದ್ದಾರೆ. ಕಳೆದ ವರ್ಷವಷ್ಟೇ ಕನ್ನಡದ 'ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ಅಭಿನಯಿಸಿದ್ದ ಭಾಗ್ಯಶ್ರೀ ಇದೀಗ ಟಾಲಿವುಡ್ ಕಡೆ ಮರಳಿದ್ದಾರೆ. 'ಬಾಹುಬಲಿ' ಪ್ರಭಾಸ್ ಚಿತ್ರಕ್ಕಾಗಿ ನಟಿ ಭಾಗ್ಯಶ್ರೀ ಓಡೋಡಿ ಬಂದಿದ್ದಾರೆ. ಮುಂದೆ ಓದಿರಿ...

ಪ್ರಭಾಸ್ ಚಿತ್ರದಲ್ಲಿ ಭಾಗ್ಯಶ್ರೀ

ಪ್ರಭಾಸ್ ಚಿತ್ರದಲ್ಲಿ ಭಾಗ್ಯಶ್ರೀ

ಟಾಲಿವುಡ್ ನಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ, ಪ್ರಭಾಸ್ ಆಕ್ಟ್ ಮಾಡುತ್ತಿರುವ ಹೊಸ ಚಿತ್ರದಲ್ಲಿ ಭಾಗ್ಯಶ್ರೀ ಕೂಡ ಅಭಿನಯಿಸುತ್ತಿದ್ದಾರೆ. #Prabhas20 (ಪ್ರಭಾಸ್ ಅಭಿನಯದ 20ನೇ ಚಿತ್ರ)ದಲ್ಲಿ ನಟಿ ಭಾಗ್ಯಶ್ರೀ ಅವರಿಗೂ ಬಹು ಮುಖ್ಯ ಪಾತ್ರ ನೀಡಲಾಗಿದೆ.

ಲಾಂಗ್ ಗ್ಯಾಪ್ ನಂತರ ಟಾಲಿವುಡ್ ಕಡೆ ಭಾಗ್ಯಶ್ರೀ

ಲಾಂಗ್ ಗ್ಯಾಪ್ ನಂತರ ಟಾಲಿವುಡ್ ಕಡೆ ಭಾಗ್ಯಶ್ರೀ

ಟಾಲಿವುಡ್ ನಲ್ಲಿ 1997 ರಲ್ಲಿ ತೆರೆಕಂಡ 'ಓಂಕಾರಂ' ಮತ್ತು 1998 ರಲ್ಲಿ ಬಿಡುಗಡೆ ಆದ 'ರಾಣಾ' ಚಿತ್ರಗಳಲ್ಲಿ ಭಾಗ್ಯಶ್ರೀ ಅಭಿನಯಿಸಿದ್ದರು. ಅದಾದ ಮೇಲೆ ಟಾಲಿವುಡ್ ಕಡೆ ಭಾಗ್ಯಶ್ರೀ ಮುಖ ಮಾಡಿರಲಿಲ್ಲ. ಇದೀಗ ಎರಡು ದಶಕಗಳ ಲಾಂಗ್ ಗ್ಯಾಪ್ ಬಳಿಕ ಭಾಗ್ಯಶ್ರೀ ತೆಲುಗು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಪ್ರಭಾಸ್ ತಾಯಿ ಪಾತ್ರದಲ್ಲಿ ಭಾಗ್ಯಶ್ರೀ.?

ಪ್ರಭಾಸ್ ತಾಯಿ ಪಾತ್ರದಲ್ಲಿ ಭಾಗ್ಯಶ್ರೀ.?

ಮೂಲಗಳ ಪ್ರಕಾರ, #Prabhas20 (ಪ್ರಭಾಸ್ ಅಭಿನಯದ 20ನೇ ಚಿತ್ರ)ದಲ್ಲಿ ಪ್ರಭಾಸ್ ಗೆ ತಾಯಿಯಾಗಿ ನಟಿ ಭಾಗ್ಯಶ್ರೀ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ, ಹೈದರಾಬಾದ್ ನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಚಿತ್ರೀಕರಣದಲ್ಲಿ ನಟಿ ಭಾಗ್ಯಶ್ರೀ ಪಾಲ್ಗೊಂಡಿದ್ದಾರೆ.

ಪ್ರಭಾಸ್ ಚಿತ್ರದ ಕುರಿತು...

ಪ್ರಭಾಸ್ ಚಿತ್ರದ ಕುರಿತು...

'ಸಾಹೋ' ಬಳಿಕ ಹೊಸ ಚಿತ್ರದ ಚಿತ್ರೀಕರಣದಲ್ಲಿ ಪ್ರಭಾಸ್ ಬಿಜಿಯಾಗಿದ್ದಾರೆ. ಮೂಲಗಳ ಪ್ರಕಾರ, ಚಿತ್ರಕ್ಕೆ 'ಜಾನ್' ಎಂಬ ಟೈಟಲ್ ಇಡಲಾಗಿದೆ. ಈ ಚಿತ್ರದಲ್ಲಿ ಪ್ರಭಾಸ್ ಗೆ ಪೂಜಾ ಹೆಗ್ಡೆ ಜೋಡಿ ಆಗಿದ್ದಾರೆ. ಜೊತೆಗೆ ಭಾಗ್ಯಶ್ರೀ ಕೂಡ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

More from Filmibeat

English summary
Bollywood Actress Bhagya Shree has a crucial role in Prabhas Film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X