ನಟ ಪ್ರಭಾಸ್ ಸಿನಿಮಾಗೆ ಎಂಟ್ರಿ ಕೊಟ್ಟ ಬಾಲಿವುಡ್ ಖ್ಯಾತ ನಟಿ
ಟಾಲಿವುಡ್ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಸದ್ಯ ಇನ್ನೂ ಹೆಸರಿಡದ ಪ್ರಭಾಸ್ 20 (ತಾತ್ಕಾಲಿಕ ಹೆಸರು) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಪೂಜಾ ಹೆಗಡೆ ಕಾಣಿಸಿಕೊಳ್ಳುತ್ತಿದ್ದಾರೆ.
ಹಾಗಾದರೆ ಚಿತ್ರದಲ್ಲಿ ಇಬ್ಬರು ನಾಯಕಿನಾ? ಅಂತ ಅಂದ್ಕೋಬೇಡಿ. ಪೂಜ ಹೆಗ್ಡೆಯೇ ನಾಯಕಿಯಾಗಿ ಕಾಣಿಕೊಳ್ಳಲಿದ್ದಾರೆ. ಅಷ್ಟಕ್ಕು ಮತ್ತೋರ್ವ ಸ್ಟಾರ್ ನಟಿ ಮತ್ಯಾರು ಅಲ್ಲ, ಬಾಲಿವುಡ್ ನ ಭಾಗ್ಯಶ್ರೀ. ಸಲ್ಮಾನ್ ಖಾನ್ ಅಭಿನಯದ ಮೈನೆ ಪ್ಯಾರ್ ಕಿಯಾ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಭಾಗ್ಯಶ್ರೀ, ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲೂ ಮಿಂಚಿದ್ದಾರೆ. ಮುಂದೆ ಓದಿ..

51 ವರ್ಷದ ನಟಿ ಭಾಗ್ಯಶ್ರೀ
51 ವರ್ಷದ ನಟಿ ಭಾಗ್ಯಶ್ರೀ ಮದುವೆ ನಂತರ ಬ್ರೇಕ್ ಪಡೆದಿದ್ದರು. ಆ ನಂತರ 2019ರಲ್ಲಿ ಮತ್ತೆ ಕನ್ನಡದ ಸೀತಾರಾಮ ಕಲ್ಯಾಣ ಸಿನಿಮಾ ಮೂಲಕ ವಾಪಸ್ ಆಗಿದ್ದಾರೆ. ಸದ್ಯ ತೆಲುಗಿನ ಎರಡು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಪ್ರಭಾಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಸ್ವತಹ ಭಾಗ್ಯಶ್ರೀ ಬಹಿರಂಗಪಡಿಸಿದ್ದಾರೆ.

ಭಾಗ್ಯಶ್ರೀ ಹೇಳಿದ್ದೇನು?
ಇತ್ತೀಚಿಗೆ ಆಂಗ್ಲ ವೆಬ್ ಪೋರ್ಟಲ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಭಾಗ್ಯಶ್ರೀ, ಮತ್ತೆ ಅಭಿನಯಿಸಲು ಪ್ರಾರಂಭಿಸಿದ್ದು, ಸ್ಕ್ರಿಪ್ಟ್ ಗಳನ್ನು ಓದುತ್ತಿದ್ದೀನಿ. ಪ್ರಭಾಸ್ ಅವರ ಜೊತೆ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದೀನಿ, ಆದರೆ ಇನ್ನೂ ಟೈಟಲ್ ಅನೌನ್ಸ್ ಆಗಿಲ್ಲ. ಲಾಕ್ ಡೌನ್ ಆಗುವ ಸ್ವಲ್ಪ ಮುಂಚೆ ಚಿತ್ರೀಕರಣ ಪ್ರಾರಂಭಿಸಿದ್ದೆ. ವಿಭಿನ್ನವಾದ ಮತ್ತು ಇಂಟ್ರೆಸ್ಟಿಂಗ್ ಪಾತ್ರ ಇದಾಗಿದೆ. ಈ ಪಾತ್ರಕ್ಕಾಗಿ ಸಾಕಷ್ಟು ಕಲಿತೆ" ಎಂದು ಹೇಳಿದ್ದಾರೆ.

ವರ್ಕೌಟ್ ನಲ್ಲಿ ಬ್ಯುಸಿ ಭಾಗ್ಯಶ್ರೀ
ಕೊರೊನಾ ಲಾಕ್ ಡೌನ್ ನಿಂದ ಮನೆಯಲ್ಲಿಯೇ ಇರುವ ನಟಿ ಭಾಗ್ಯಶ್ರೀ ಸಖತ್ ವರ್ಕೌಟ್ ಮಾಡುತ್ತಿದ್ದಾರೆ. ಪತಿಯ ಜೊತೆ ವರ್ಕೌಟ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕುಟುಂಬದ ಜೊತೆ ಇದ್ದು ಈ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರೆ.

ಭಾಗ್ಯಶ್ರೀ ಸಿನಿಮಾ ಪಯಣ
ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಅಭಿನಯದ ಮೈನೆ ಪ್ಯಾರ್ ಕಿಯಾ ಸಿನಿಮಾ ಮೂಲಕ ನಾಯಕಿಯಾಗಿ ಮಿಂಚಿದ್ದ ಭಾಗ್ಯಶ್ರೀಗೆ ಮೊದಲ ಸಿನಿಮಾನೇ ದೊಡ್ಡ ಮಟ್ಟದ ಸಕ್ಸಸ್ ತಂದುಕೊಟ್ಟಿತು. ಆ ನಂತರ ಕನ್ನಡದ ಅಮ್ಮವರ ಗಂಡ ಸಿನಿಮಾ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ತೆಲುಗು, ಭೋಜಪುರಿ, ಮರಾಠಿ ಸಿನಿಮಾಗಳು ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಪತಿ ಹಿಮಾಲಯ ದುಸ್ಸಾನಿ
ಭಾಗ್ಯಶ್ರೀ ಪತಿ ಹಿಮಾಲಯ ದುಸ್ಸಾನಿ, ಇತ್ತೀಚಿಗೆ ಜೂಜು ಪ್ರಕರಣದಲ್ಲಿ ಭಾಗವಾಗಿ ಮುಂಬೈ ಅಂಬೋಲಿ ಪೊಲೀಸರು ಅರೆಸ್ಟ್ ಮಾಡಿದ್ದರು.ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಭಾಗ್ಯಶ್ರೀಗೆ ಇಬ್ಬರು ಮಕ್ಕಳು. ಇತ್ತೀಚಿಗೆ ಮಗ ಅಭಿಮನ್ಯು ಮರ್ದ್ ಕೊ ದರ್ದ್ ನಹಿ ಹೋತಾ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.


Click it and Unblock the Notifications











