Jailer vs Bhola Shankar: ಮೆಗಾಸ್ಟಾರ್ ಚಿರಂಜೀವಿ ಚಿತ್ರವನ್ನು ತೆಲುಗು ರಾಜ್ಯಗಳಲ್ಲೇ ಸೋಲಿಸಿದ ಜೈಲರ್!

ಆಗಸ್ಟ್ ತಿಂಗಳ ಎರಡನೇ ವಾರ ತಮಿಳು ಹಾಗೂ ತೆಲುಗಿನ ಇಬ್ಬರು ದೊಡ್ಡ ಸೂಪರ್ ಸ್ಟಾರ್‌ಗಳ ಸಿನಿಮಾಗಳು ಬಿಡುಗಡೆಗೊಂಡಿವೆ. ಈ ಪೈಕಿ ಓರ್ವ ಸ್ಟಾರ್ ನಟನ ಚಿತ್ರ ಗೆದ್ದು ಬೀಗಿದರೆ, ಮತ್ತೋರ್ವ ಸ್ಟಾರ್ ನಟನ ಚಿತ್ರ ಹೀನಾಯವಾಗಿ ಸೋತಿದೆ. ಹೌದು, ಮೊನ್ನೆ ಗುರುವಾರ ( ಆಗಸ್ಟ್ 10 ) ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಚಿತ್ರ ಬಿಡುಗಡೆಗೊಂಡು ಅಬ್ಬರಿಸಿ ಬೊಬ್ಬಿರಿಯುತ್ತಿದ್ದರೆ, ಶುಕ್ರವಾರ ( ಆಗಸ್ಟ್ 11 ) ಬಿಡುಗಡೆಗೊಂಡ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ನಟನೆಯ ಭೋಳ ಶಂಕರ್ ಹೀನಾಯವಾಗಿ ಸೋತಿದೆ.

ರಜನಿಕಾಂತ್ ಬಹು ದಿನಗಳ ಬಳಿಕ ತಮ್ಮ ಸ್ಟಾರ್‌ಡಂ ರೇಂಜಿನ ಸಿನಿಮಾದಲ್ಲಿ ನಟಿಸಿದ್ದರೆ, ನಿರ್ದೇಶಕ ನೆಲ್ಸನ್ ದೊಡ್ಡ ಸೋಲಿನ ಬಳಿಕ ಮೈ ಕೊಡವಿ ಎದ್ದು ನಿಂತಿದ್ದಾರೆ. ಇನ್ನು ಜೈಲರ್ ಚಿತ್ರದ ಮೂಲಕ ಈ ಇಬ್ಬರು ಮಾತ್ರವಲ್ಲದೇ ಕನ್ನಡದ ಸ್ಟಾರ್ ನಟ ಶಿವರಾಜ್‌ಕುಮಾರ್ ಹಾಗೂ ಮಲಯಾಳಂನ ಮೋಹನ್ ಲಾಲ್ ಸಹ ಭರ್ಜರಿ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದ್ದಾರೆ.

jailer-movie-to-replace-bhola-shankar

ನೆಲ್ಸನ್ ಕುಮಾರ್ ಹಾಗೂ ರಜಿನಿಕಾಂತ್ ಕಾಂಬಿನೇಶನ್ ವರ್ಕ್ ಆಗಿದ್ದು, ಸಿನಿ ರಸಿಕರು ಮೋಹನ್ ಲಾಲ್ ಮತ್ತು ಶಿವರಾಜ್‌ಕುಮಾರ್ ನಟನೆಗೂ ಜೈ ಎಂದಿದ್ದಾರೆ. ಅದರಲ್ಲಿಯೂ ಶಿವರಾಜ್‌ಕುಮಾರ್ ಅತಿಥಿ ಪಾತ್ರಕ್ಕೆ ಇಡೀ ಸೌತ್ ಇಂಡಸ್ಟ್ರಿ ಫಿದಾ ಆಗಿದ್ದು, ಚಿತ್ರ ಮೊದಲ ಶೋ ಮುಗಿಯುತ್ತಿದಂತೆಯೇ ಸೂಪರ್ ಹಿಟ್ ಹಂತವನ್ನು ತಲುಪಿಬಿಟ್ಟಿದೆ.

ಮೂರನೇ ದಿನವೂ ಸಹ ಶೇ. 80 ಪ್ರದರ್ಶನಗಳು ತುಂಬು ಮಂದಿರಗಳ ಪ್ರದರ್ಶನವನ್ನು ಜೈಲರ್ ಕಾಣುತ್ತಿದ್ದು, ಮೊದಲೆರಡು ದಿನಗಳಲ್ಲಿ ದಾಖಲೆಯ ಕಲೆಕ್ಷನ್ ಮಾಡಿ ಅಬ್ಬರಿಸುತ್ತಿದೆ. ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 95 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದ ಜೈಲರ್ ಚಿತ್ರ ಎರಡನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಬ್ಬರವನ್ನು ಮುಂದುವರಿಸುತ್ತಿದ್ದು, ಎರಡನೇ ದಿನ 70 ಕೋಟಿ ಕಲೆಕ್ಷನ್ ಮಾಡಿ ಎರಡು ದಿನಗಳಲ್ಲಿ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 165 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ.

ಹೀಗೆ ಜೈಲರ್ ಚಿತ್ರ ಭರ್ಜರಿ ಗೆಲುವು ಸಾದಿಸಿದ್ದರೆ, ಜೈಲರ್ ಚಿತ್ರದ ಅಬ್ಬರದ ನಡುವೆಯೇ ತೆರೆಗೆ ಬಂದ ಚಿರಂಜೀವಿ ನಟನೆಯ ಭೋಳ ಶಂಕರ್ ಮಕಾಡೆ ಮಲಗಿದೆ. ಹೌದು, 2015ರಲ್ಲಿ ತೆರೆಗೆ ಬಂದಿದ್ದ ತಮಿಳಿನ ವೇದಾಲಂ ಚಿತ್ರದ ರಿಮೇಕ್ ಸಿನಿಮಾ ತೆಲುಗಿನ ಭೋಳ ಶಂಕರ್ ಹೊಸತನದ ಚಿತ್ರಗಳನ್ನು ಇಷ್ಟಪಡುವ ಸಿನಿ ರಸಿಕರಿಂದ ತಿರಸ್ಕರಿಸಲ್ಪಟ್ಟಿದೆ.

ಹೌದು, ಭೋಳ ಶಂಕರ್ ಚಿತ್ರವನ್ನು ಸಿನಿ ರಸಿಕರು ಕೈಬಿಟ್ಟಿದ್ದು, ಮೆಗಾಸ್ಟಾರ್ ಇದ್ದರೂ ಸಹ ಚಿತ್ರ ಮೊದಲ ದಿನವೇ ಹಲವೆಡೆ ಹೌಸ್‌ಫುಲ್ ಪ್ರದರ್ಶನ ಕಾಣಲಾಗದೇ ತೀವ್ರ ಹಿನ್ನಡೆ ಅನುಭವಿಸಿದೆ. ತೆಲುಗು ರಾಜ್ಯಗಳಲ್ಲಿಯೂ ಸಹ ಭೋಳ ಶಂಕರ್ ಮೊದಲ ದಿನವೇ ಹಲವೆಡೆ ಖಾಲಿ ಹೊಡೆದಿದ್ದು, ಅಂತಹ ಹಲವು ಕೇಂದ್ರಗಳಿಂದ ಭೋಳ ಶಂಕರ್ ಚಿತ್ರವನ್ನು ತೆರವುಗೊಳಿಸಿ ಅವುಗಳಲ್ಲಿ ಜೈಲರ್ ಚಿತ್ರವನ್ನು ಪ್ರದರ್ಶಿಸಲು ಚಿತ್ರಮಂದಿರದ ಮಾಲೀಕರು ಹಾಗೂ ವಿತರಕರು ತೀರ್ಮಾನಿಸಿದ್ದಾರೆ. ಈ ಮೂಲಕ ಭೋಳ ಶಂಕರ್ ತನ್ನದೇ ರಾಜ್ಯದಲ್ಲಿ ಎದ್ದಿರುವ ಜೈಲರ್ ಹವಾ ಮುಂದೆ ತೀವ್ರ ಹಿನ್ನಡೆ ಅನುಭವಿಸಿದೆ.

More from Filmibeat

English summary
Bhola Shankar: Jailer movie to replace Bhola Shankar in many theatres of Telugu States
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X