twitter
    For Quick Alerts
    ALLOW NOTIFICATIONS  
    For Daily Alerts

    ಮಹೇಶ್ ಬಾಬು-ವಿಜಯ್ ದೇವರಕೊಂಡ ಬಾಕ್ಸಾಫೀಸ್ ಕಾದಾಟ?

    |

    ಕೊರೊನಾ ಬಳಿಕ ಸಿನಿಮಾರಂಗದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಲಾಕ್‌ಡೌನ್‌ನಿಂದ, ಲಾಕ್‌ ಆಗಿದ್ದ ಸಿನಿಮಾಗಳು ಈಗ ಸಾಲು ಸಾಲಾಗಿ ರಿಲೀಸ್‌ಗೆ ರೆಡಿ ಆಗಿವೆ. ಜೊತೆಗೆ ಬಾಕ್ಸಾಪೀಸ್‌ನಲ್ಲಿ ಕಾದಾಡಲು ದೊಡ್ಡ, ದೊಡ್ಡ ಚಿತ್ರಗಳು ತಯಾರಾಗುತ್ತಿವೆ.

    ಸಿನಿಮಾ ತಯಾರಾಗಿ ವರ್ಷಗಳ ಕಾಲ ರಿಲೀಸ್‌ ಮಾಡಲು ಸಾಧ್ಯವಾಗದೇ ಆಗದಿದ್ದ ಕಾರಣ ಈಗ ಚಿತ್ರಗಳನ್ನು ರಿಲೀಸ್‌ ಮಾಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಗಾಗಿ ಭಾರತೀಯ ಚಿತ್ರರಂಗದ ಬಿಗ್‌ ಸಿನಿಮಾಗಳು ತುಂಬಾ ಲೆಕ್ಕಾಚಾರ ಹಾಕಿ ತೆರೆಗೆ ಬರಲು ಸಜ್ಜಾಗುತ್ತಿವೆ. ಸದ್ಯ ಬಾಕ್ಸಾಫೀಸ್ ಕಾದಟಕ್ಕೆ ಮುಂದಾಗಿದ್ದಾರೆ ವಿಜಯ್ ದೇವರಕೊಂಡ ಮತ್ತು ಮಹೇಶ್ ಬಾಬು.

    ನಟ ವಿಜಯ್ ದೇವರ ಕೊಂಡ ಮತ್ತು ಮಹೇಶ್‌ ಬಾಬು ಸಿನಿಮಾಗಳು ಒಂದೇ ದಿನಾಂಕಕ್ಕೆ ಬರಲು ತೆರೆಮರೆಯಲ್ಲಿ ತಯಾರಿ ನಡೆಸಿವೆ. ಹಾಗಾಗಿ ಬಾಕ್ಸಾಫೀಸ್‌ನಲ್ಲಿ ಪೈಪೋಟಿ ಪಕ್ಕಾ ಎನ್ನುವ ಸುದ್ದಿ ಹರಿದಾಡುತ್ತಲಿದೆ.

    ವಿಜಯ್ ದೇವರಕೊಂಡ ಮತ್ತು ಮಹೇಶ್‌ ಬಾಬು ಬಾಕ್ಸಾಫೀಸ್ ವಾರ್!

    ವಿಜಯ್ ದೇವರಕೊಂಡ ಮತ್ತು ಮಹೇಶ್‌ ಬಾಬು ಬಾಕ್ಸಾಫೀಸ್ ವಾರ್!

    ನಟ ವಿಜಯ್‌ ದೇವರಕೊಂಡ ಸದ್ಯ 'ಲೈಗರ್' ಸಿನಿಮಾದ ಕೆಲಸಗಳಲ್ಲಿ ನಿರತರಾಗಿದ್ದಾರೆ. ಸಿನಿಮಾದ ಶೂಟಿಂಗ್ ಸೇರಿದಂತೆ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಬಹುತೇಕ ಮುಗಿದಿವೆ. ಇನ್ನು ಇತ್ತ ಮಹೇಶ್‌ ಬಾಬು ಅಭಿನಯದ 'ಸರ್ಕಾರು ವಾರಿ ಪಾಠ' ಚಿತ್ರ ಕೂಡ ರಿಲೀಸ್‌ಗೆ ರೆಡಿ ಆಗುತ್ತಿವೆ.

    ಸದ್ಯದ ಸುದ್ದಿ ಏನಂದ್ರೆ ಈ ಎರಡೂ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಮುಖಾ ಮುಖಿ ಆಗಲಿವೆ. ಈಗಾಗಲೇ 'ಸರ್ಕಾರು ವಾರಿ ಪಾಠ' ಚಿತ್ರದ ರಿಲೀಸ್ ದಿನಾಂಕ ನಿಗದಿ ಆಗಿದೆ. 2022ರ ಏಪ್ರಿಲ್‌ನಲ್ಲಿ ತೆರೆಗೆ ಬರಲು 'ಸರ್ಕಾರು ವಾರಿ ಪಾಠ' ಚಿತ್ರ ತಯಾರಾಗಿದೆ. ಅದಕ್ಕಾಗಿ ಚಿತ್ರದ ಕೆಲಸಗಳನ್ನು ಚಿತ್ರ ತಂಡ ಆದಷ್ಟು ಬೇಗ ಮುಗಿಸಲು ಮುಂದಾಗಿದೆ.

    2022 ಏಪ್ರಿಲ್ 1ಕ್ಕೆ ಲೈಗರ್ ರಿಲೀಸ್?

    2022 ಏಪ್ರಿಲ್ 1ಕ್ಕೆ ಲೈಗರ್ ರಿಲೀಸ್?

    ಆದರೆ ಈಗ ವಿಜಯ್ ದೇವರಕೊಂಡ ಅಭಿನಯದ 'ಲೈಗರ್' ಸಿನಿಮಾ ಹೊಸ ಬಾಂಬ್ ಸಿಡಿಸಿದೆ. ಮುಂದಿನ ವರ್ಷ ಏಪ್ರಿಲ್ 1ಕ್ಕೆ 'ಲೈಗರ್'‌ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿದೆಯಂತೆ. 'ಲೈಗರ್' ಚಿತ್ರ ತಂಡ ಈ ವಿಚಾರವನ್ನು ಅಧಿಕೃತವಾಗಿ ಖಚಿತ ಪಡಿಸಿಲ್ಲ. ಆದರೆ ಚಿತ್ರ ತಂಡದ ಪ್ಲ್ಯಾನ್ ಇದೆ ಆಗಿದೆ ಎನ್ನುತ್ತಿವೆ ಮೂಲಗಳು.

    'ಲೈಗರ್' ಚಿತ್ರ ನಟ ವಿಜಯ್ ದೇವರಕೊಂಡ ಅವರ ಸಿನಿಮಾ ಜರ್ನಿಯಲ್ಲೇ ಅತಿ ಮುಖ್ಯವಾದ ಚಿತ್ರ ಎಂದು ಅವರೇ ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ವಿಜಯ್ ಸತತ ಎರಡು ವರ್ಷಗಳನ್ನು ಮೀಸಲಿಟ್ಟಿದ್ದಾರೆ. ಜೊತೆಗೆ ಅವರು ದೇಹವನ್ನು ಅಪಾರವಾಗಿ ದಂಡಿಸಿ, ದೈಹಿಕ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದು, ನಟಿ ಚಾರ್ಮಿ ಬಂಡವಾಳ ಹೂಡಿದ್ದಾರೆ. ಈ ಚಿತ್ರ ವಿಜಯ್‌ ದೇವರಕೊಂಡ ಅವರಿಗೆ ಮಾತ್ರವಲ್ಲ, ನಿರ್ದೇಶಕ ಪುರಿ ಜಗನ್ನಾಥ್ ಅವರಿಗೂ ಅತಿ ಮುಖ್ಯ ಈ ಚಿತ್ರದ ಮೂಲಕ ಹಿಟ್ ಕೊಡಲು ನಿರ್ದೇಶಕ ಮುಂದಾಗಿದ್ದಾರೆ.

    'ಸರ್ಕಾರು ವಾರಿ ಪಾಠ' ಮಹೇಶ್ ಬಾಬುಗೆ ಅತಿ ಮುಖ್ಯವಾದ ಚಿತ್ರ!

    'ಸರ್ಕಾರು ವಾರಿ ಪಾಠ' ಮಹೇಶ್ ಬಾಬುಗೆ ಅತಿ ಮುಖ್ಯವಾದ ಚಿತ್ರ!

    ಇನ್ನು 'ಸರ್ಕಾರು ವಾರಿ ಪಾಠ' ಚಿತ್ರ ಮಹೇಶ್ ಬಾಬು ಅವರಿಗೂ ಅಷ್ಟೇ ಮುಖ್ಯ. ಯಾಕೆಂದರೆ 'ಭರತ್ ಅನೆ ನೇನು' ಚಿತ್ರದ ಬಳಿಕ ಬಂದ 'ಮಹರ್ಷಿ' ಮತ್ತು 'ಸರಿಲೇರು ನೀಕೆವ್ವರು' ಚಿತ್ರಗಳು ಅಂದು ಕೊಂಡ ಮಟ್ಟಿಗೆ ದೊಡ್ಡ ಯಶಸ್ಸು ಕಾಣಲಿಲ್ಲ. ಹಾಗಾಗಿ ಈ ಚಿತ್ರದ ಮೂಲಕ ಬ್ಲಾಕ್ ಬಸ್ಟರ್ ಹಿಟ್ ನೀಡಲು ಮಹೇಶ್ ಬಾಬು ತಯಾರಿ ನಡೆಸಿದ್ದಾರೆ. ಚಿತ್ರದಲ್ಲಿ ಮಹೇಶ್ ಬಾಬು ಜೊತೆಗೆ ನಟಿ ಕೀರ್ತಿ ಸುರೇಶ್ ನಾಯಕಿ ಆಗಿ ತೆರೆಹಂಚಿಕೊಳ್ತಿದ್ದಾರೆ.

    ವಿಜಯ್ ದೇವರಕೊಂಡ-ಮಹೇಶ್ ಬಾಬು ನಡುವಿದೆ ಉತ್ತಮ ಬಾಂಧವ್ಯ!

    ವಿಜಯ್ ದೇವರಕೊಂಡ-ಮಹೇಶ್ ಬಾಬು ನಡುವಿದೆ ಉತ್ತಮ ಬಾಂಧವ್ಯ!

    ಇನ್ನು ಸಿನಿಮಾ ಮಂದಿಯ ನಡೆ ಹೇಗಿರುತ್ತದೆ ಎನ್ನುವುದನ್ನು ಊಹಿಸುವುದು ಕಷ್ಟ. ಬಣ್ಣ ಲೋಕದಲ್ಲಿ ಯಾವಾಗ ಏನು ಬೇಕಾದರು ಬದಲಾಗಬಹುದು. ಹಾಗಾಗಿ ಈಗ ಏಪ್ರಿಲ್ ಒಂದಕ್ಕೆ ಈ ಎರಡೂ ಚಿತ್ರಗಳ ರಿಲೀಸ್‌ ಆಗಬೇಕು ಎನ್ನುವ ಆಲೋಚನೆಯಲ್ಲಿ ಚಿತ್ರತಂಡಗಳು ಇದ್ದರೂ ಮುಂದೆ ಅದು ಬದಲಾಗುವ ಸಾಧ್ಯತೆ ಇದೆ. ಇನ್ನು ನಟ ವಿಜಯ್ ದೇವರಕೊಂಡ ಮತ್ತು ಮಹೇಶ್ ಬಾಬು ನಡುವೆ ಉತ್ತಮ ಬಾಂಧವ್ಯ ಇದೆ. ಹಾಗಾಗಿ ಬಹುತೇಕ ಚಿತ್ರದ ರಿಲೀಸ್ ದಿನಾಂಕ ಬದಲಾಗುದ ಸಾಧ್ಯತೆ ಇದೆ.

    English summary
    Big clash On Tollywood boxoffice: sarkaru vaari paata and Liger On same date, know more,
    Monday, November 29, 2021, 17:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X