ಪ್ರಭಾಸ್ 'ಆದಿಪುರುಷ್' ಸಿನಿಮಾಗೆ ಎಂಟ್ರಿ ಕೊಟ್ಟ 'ಬಿಗ್ ಬಾಸ್' ವಿನ್ನರ್

ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಈಗಾಗಲೇ ಚಿತ್ರೀಕರಣ ಪ್ರಾರಂಭ ಮಾಡಿದ್ದ ಚಿತ್ರತಂಡ ಸದ್ಯ ಕೊರೊನಾ ಕಾರಣ ಬ್ರೇಕ್ ಹಾಕಿದೆ. ಈ ನಡುವೆ ಆದಿಪುರುಷ್ ಚಿತ್ರದಲ್ಲಿ ಕನ್ನಡದ ಖ್ಯಾತ ನಟ ಸುದೀಪ್ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದ ಬೆನ್ನಲ್ಲೇ ಮತ್ತೊಂದು ಬ್ರೇಕಿಂಗ್ ನ್ಯೂಸ್ ಹೊರಬಂದಿದೆ.

ಹಿಂದಿ ಬಿಗ್ ಬಾಸ್ 13 ವಿನ್ನರ್ ಆಗಿ ಹೊರಹೊಮ್ಮಿದ್ದ ಸಿದ್ಧಾರ್ಥ್ ಶುಕ್ಲಾ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಸಿದ್ಧಾರ್ಥ್, ಆದಿಪುರುಷ್ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಹೌದು, ರಾವಣ ಮತ್ತು ಮಂಡೋದರಿಯ ಹಿರಿಯ ಮಗನ ಪಾತ್ರದಲ್ಲಿ ಸಿದ್ಧಾರ್ಥ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

Bigg Boss 13 winner Siddharth Shukla joins Prabhas starrer Adipurush team

ಭಾರತದ ಬಿಗ್ ಬಜೆಟ್ ಪೌರಾಣಿಕ ಚಿತ್ರದಲ್ಲಿ ನಟಿಸಲು ಅವಕಾಶ ಗಿಟ್ಟಿಸಿಕೊಂಡ ನಟ ಸಿದ್ಧಾರ್ಥ್ ಫುಲ್ ಖುಷ್ ಆಗಿದ್ದಾರಂತೆ. ಓಂ ರಾವತ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ರಾಮನಾಗಿ ಪ್ರಭಾಸ್ ಕಾಣಿಸಿಕೊಂಡರೆ, ಸೈಫ್ ಅಲಿ ಖಾನ್ ರಾವಣ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ನಟಿ ಕೃತಿ ಸನೂನ್ ಸೀತೆ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಸನ್ನಿ ಸಿಂಗ್ ಲಕ್ಷ್ಮಣ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Bigg Boss 13 winner Siddharth Shukla joins Prabhas starrer Adipurush team

ಸಿನಿಮಾದಲ್ಲಿ ರಾವಣನ ಕಿರಿಯ ಸಹೋದರ ವಿಭೀಷಣ ಪಾತ್ರದಲ್ಲಿ ನಟಿಸಲು ಕಿಚ್ಚನಿಗೆ ಆಫರ್ ಮಾಡಿದ್ದಾರಂತೆ. ಆದರೆ ಕಿಚ್ಚನ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆಯಾ ಎನ್ನುವ ಮಾಹಿತಿ ಬಹಿರಂಗವಾಗಿಲ್ಲ. ಒಂದು ವೇಳೆ ಸುದೀಪ್ ನಟಿಸಲು ಒಪ್ಪಿಕೊಂಡಿದ್ದೆ ಆಗಿದ್ದರೆ ನಟ ಸೈಫ್ ಅಲಿ ಖಾನ್ ಸಹೋದರನಾಗಿ ಬಣ್ಣಹಚ್ಚಲಿದ್ದಾರೆ. ಈ ಬಗ್ಗೆ ಸಿನಿಮಾತಂಡ ಸದ್ಯದಲ್ಲೇ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.

Recommended Video

Kotigobba 3 |100 ಕೋಟಿ ಗಳಿಸೋದು ಪಕ್ಕಾ ಆಯ್ತು | Filmibeat Kannada

More from Filmibeat

English summary
Bigg Boss 13 winner Siddharth Shukla joins Prabhas starrer Adipurush team.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X