ಕೊನೆಗೂ ಆರ್‌ಜಿವಿ ಆಸೆ ತೀರಿಸಿದ ಅರಿಯಾನ.. ಬಿಕಿನಿಯಲ್ಲಿ ಬೆಡಗಿಯ ಪೋಸ್ ವೈರಲ್
ವಿವಾದಾತ್ಮಕ ಹೇಳಿಕೆಗಳಿಂದ, ಸಿನಿಮಾಗಳಿಂದ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಸದಾ ಸುದ್ದಿಯಲ್ಲಿ ಇರ್ತಾರೆ. ಇತ್ತೀಚೆಗೆ ಒಳ್ಳೆ ಸಿನಿಮಾಗಳನ್ನು ಮಾಡುವುದು ಬಿಟ್ಟು ಬರೀ ವಿವಾದಗಳಲ್ಲೇ ಆರ್‌ಜಿವಿ ಮುಳುಗಿ ಹೋಗಿದ್ದಾರೆ. ಕೆಲ ದಿನಗಳ ಹಿಂದೆ ವರ್ಮಾ ನೀಡಿದ ಕೆಲ ಸಂದರ್ಶನಗಳು ಭಾರೀ ಚರ್ಚೆ ಹುಟ್ಟಾಕ್ಕಿತ್ತು.
ಬಿಂದಾಸ್ ಬೆಡಗಿಯರ ಜೊತೆ ಚಿತ್ರ ವಿಚಿತ್ರವಾಗಿ ಸಂದರ್ಶನಗಳಲ್ಲಿ ಭಾಗವಹಿಸಿದ್ದ ಆರ್‌ಜಿವಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಅದರಲ್ಲೂ ಅಶು ರೆಡ್ಡಿ ಹಾಗೂ ಅರಿಯಾನಾ ಗ್ಲೋರಿ ಜೊತೆಗಿನ ಸಂದರ್ಶನಗಳು ಭಾರೀ ವೈರಲ್ ಆಗಿತ್ತು. ವರ್ಮಾ ಚೇಷ್ಟೆಗಳಿಂದ ಅವರಿಬ್ಬರ ಕ್ರೇಜ್ ಕೂಡ ದಿಢೀರ್ ಹೆಚ್ಚಾಗಿತ್ತು. ಅರಿಯಾನಾ ಅಂತೂ ತೆಲುಗು ಬಿಗ್‌ಬಾಸ್ ಮನೆಗೆ ಎರಡೆರಡು ಬಾರಿ ಎಂಟ್ರಿ ಕೊಟ್ಟುಬಿಟ್ಟಿದ್ದರು.

2 ವರ್ಷಗಳ ಹಿಂದೆ ನಿರೂಪಕಿ ಅರಿಯಾನಾ ಜೊತೆ ಆರ್‌ಜಿವಿ ವಿಶೇಷ ಸಂದರ್ಶನ ನೀಡಿದ್ದರು. ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಾ ಇಬ್ಬರೂ ಮಾತನಾಡಿದ್ದರು. ವಿಚಿತ್ರ ಕೋನಗಳಲ್ಲಿ ಕ್ಯಾಮರಾ ಇಟ್ಟು ಆ ಸಂದರ್ಶನಗಳನ್ನು ಸೆರೆ ಹಿಡಿಯಲಾಗಿತ್ತು. ನಿನ್ನ ದೇಹದ ಆ ಭಾಗ ಇಷ್ಟ ಅಂತೆಲ್ಲಾ ಹಸಿ ಹಸಿಯಾಗಿ ವರ್ಮಾ ಮಾತನಾಡಿದ್ದರು. ಆ ಬಳಿಕ ಮತ್ತೊಂದು ಸಂದರ್ಶನದಲ್ಲಿ ಇಬ್ಬರೂ ಭಾಗಿ ಆಗಿದ್ದರು. ಈ ವೇಳೆ ಅರಿಯಾನಾ ನಿಮ್ಮ ಆಸೆಗಳು ಏನು ಎಂದು ಕೇಳಿದ್ದರು. ಅದಕ್ಕೆ ಉತ್ತರಿಸಿದ್ದ ವರ್ಮಾ ನಿನ್ನನ್ನು ಬಿಕಿನಿಯಲ್ಲಿ ನೋಡಬೇಕು ಎನ್ನುವುದು ನನ್ನ ಆಸೆ ಎಂದುಬಿಟ್ಟಿದ್ದರು. ಇದನ್ನು ಕೇಳಿ ಒಂದು ಕ್ಷಣ ಆಕೆ ಶಾಕ್ ಆಗಿದ್ದಳು.
ಎರಡು ವರ್ಷಗಳ ಬಳಿಕ ಇದೀಗ ಅರಿಯಾನ ಗ್ಲೋರಿ ಬಿಕಿನಿಯಲ್ಲಿ ದರ್ಶನ ಕೊಟ್ಟಿದ್ದಾರೆ. ಟೂ ಪೀಸ್ ಬಿಕಿನಿಯಲ್ಲಿ ಫೋಟೊಗಳನ್ನು ಕ್ಲಿಕ್ಕಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಕೆಲವರು ಶಾಕ್ ಆಗಿದ್ದಾರೆ. ಹಾಟ್ ಹಾಟ್ ಫೋಟೊಶೂಟ್‌ನಿಂದ ಸದಾ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೀತಿದ್ದ ಚೆಲುವೆ ಈಗ ಏಕಾಏಕಿ ಬಿಕಿನಿಯಲ್ಲಿ ಕಾಣಿಸಿಕೊಂಡಿರುವುದ ಕೆಲವರಿಗೆ ಅಚ್ಚರಿ ತಂದಿದೆ.
ಅಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿನ್ನನು ಬಿಕಿನಿಯಲ್ಲಿ ನೋಡುವ ಆಸೆ ನನಗೆ ಎಂದು ಹೇಳಿದಂತೆ ಈಗ ಅರಿಯಾನಾ ತುಂಡುಡುಗೆಯಲ್ಲಿ ಕಾಣಿಸಿಕೊಂಡ್ರಾ? ಎಂದು ಚರ್ಚೆ ಆಗುತ್ತಿದೆ. ಹೋಟೆಲ್ ಕೋಣೆಯಲ್ಲಿ ಬಿಕಿನಿಯಲ್ಲಿ ಮೇಲೆ ಕವರ್ ಅಪ್ ಡ್ರೆಸ್ ತೊಟ್ಟು ಅರಿಯಾನ ಪೋಸ್ ಕೊಟ್ಟಿದ್ದಾರೆ.

ಬಿಕಿನಿಯಲ್ಲಿ ಅರಿಯಾನಾ ಹಾಟ್ ಅವತಾರಕ್ಕೆ ತರಹೇವಾರಿ ಕಾಮೆಂಟ್ಸ್ ಬರ್ತಿದೆ. ಪಡ್ಡೆ ಹುಡುಗರು ಅರಿಯಾನ ಮೈಮಾಟ ಕಂಡು ಫಿದಾ ಆಗಿದ್ದಾರೆ. ಇನ್ನು ಕೆಲವರು ಬಿಗ್‌ಬಾಸ್ ಮನೆಯಲ್ಲಿ ನಿನ್ನನ್ನು ಬೆಂಬಲಿಸಿ ತಪ್ಪು ಮಾಡಿದೆವು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆಕೆಯ ಪೋಸ್ಟ್‌ಗೆ 50 ಸಾವಿರಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ.
ಯೂಟ್ಯೂಬರ್ ಆಗಿದ್ದ ಅರಿಯಾನಾ, ನಿರ್ದೇಶಕ ಆರ್‌ಜಿವಿ ಜೊತೆಗಿನ ಬೋಲ್ಡ್ ಸಂದರ್ಶನದಿಂದಲೇ ದಿಢೀರ್ ಫೇಮಸ್ ಆಗಿದ್ದರು. ಎರಡನೇ ಬಾರಿ ಬಿಗ್‌ಬಾಸ್ ಮನೆಯಲ್ಲಿ ಫೈನಲಿಸ್ಟ್ ಕೂಡ ಆಗಿಬಿಟ್ಟಿದ್ದರು. ಸಿನಿಮಾಗಳಲ್ಲಿ ನಟಿಸೋ ಇಂಗಿತ ವ್ಯಕ್ತಪಡಿಸಿದ್ದ ಚೆಲುವೆಗೆ ಅವಕಾಶಗಳು ಮಾತ್ರ ಸಿಗಲಿಲ್ಲ.
ಬಿಗ್‌ಬಾಸ್ ಮನೆಯಿಂದ ಹೊರಬಂದ ಬಳಿಕ ಕೆಲ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುತ್ತಾ, ಹಾಟ್ ಫೋಟೋಶೂಟ್ ಮಾಡುತ್ತಾ ಬ್ಯುಸಿಯಾಗಿರುವ ಚೆಲುವೆ ಈಗ ಬಿಕಿನಿಯಲ್ಲಿ ಕಾಣಿಸಿಕೊಂಡು ಮತ್ತೆ ಸುದ್ದಿಯಲ್ಲಿದ್ದಾರೆ. ಬಳಕುವ ಬಳ್ಳಿಯಂತಿದ್ದ ಚೆಲುವೆ ಬಿಗ್‌ಬಾಸ್ ಮನೆಗೆ ಹೋಗಿ ಬಂದ ಮೇಲೆ ದುಂಡು ಮಲ್ಲಿಗೆಯಂತಾಗಿದ್ದಾರೆ. ಸ್ವಲ್ಪ ಸಣ್ಣಗಾಗಿ ನೋಡೋಕೆ ಆಗುತ್ತಿಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಲೇ ಇರುತ್ತಾರೆ.


Click it and Unblock the Notifications










