"ಒಂದು ರಾತ್ರಿಗೆ ನನ್ನ ರೇಟ್ ಎಷ್ಟು ಅಂದ್ರೆ?" ಬಿಗ್‌ಬಾಸ್ ಪ್ರಿಯಾಂಕ ಸಿಂಗ್ ಕಾಮೆಂಟ್ಸ್ ವೈರಲ್
ಸೋಶಿಯಲ್ ಮೀಡಿಯಾವನ್ನು ಒಳ್ಳೆ ವಿಚಾರಕ್ಕೆ ಬಳಸುವವರಿಗಿಂತ ಕೆಟ್ಟದಾಗಿ ಬಳಸುವವರೇ ಹೆಚ್ಚು ಎನ್ನುವಂತಾಗಿಬಿಟ್ಟಿದೆ. ಫೇಸ್‌ಬುಕ್, ಇನ್‌ಸ್ಟಾ, ಟ್ವಿಟರ್ ಪುಣ್ಯದಿಂದ ಸೆಲೆಬ್ರೆಟಿಗಳು ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಪೋಸ್ಟ್, ಕಾಮೆಂಟ್ ಅಂತೆಲ್ಲಾ ನಟ, ನಟಿಯರ ಜೊತೆ ನೆಟ್ಟಿಗರು ಸಂಭಾಷಣೆ ನಡೆಸುತ್ತಾರೆ. ಇನ್ನು ಇನ್‌ಸ್ಟಾ, ಫೇಸ್‌ಬುಕ್ ಲೈವ್ ಮೂಲಕ ಕೂಡ ಚಾಟ್ ಮಾಡುವ ಅವಕಾಶ ಸಿಗುತ್ತಿದೆ.
ಕಿಡಿಗೇಡಿಗಳು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಕೆಟ್ಟ ಕೆಟ್ಟ ಪೋಸ್ಟ್, ಕಾಮೆಂಟ್ ಮಾಡುವ ಚಾಳಿಯೂ ಹೆಚ್ಚಾಗಿದೆ. ಇನ್ನು ನಟ, ನಟಿಯರ ಬಗ್ಗೆ ಕಾಮೆಂಟ್ ಮಾಡುವಾಗಲು ಕೆಟ್ಟದಾಗಿ ಮಾತನಾಡುವವರು ಇದ್ದಾರೆ. ಅಸಭ್ಯ ಪ್ರಶ್ನೆಗಳನ್ನು ಕೇಳುವವರು ಇದ್ದಾರೆ. ಈ ಬಗ್ಗೆ ಕೆಲವರು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಕೆಲವರು ತಿರುಗೇಟು ನೀಡುತ್ತಾರೆ. ಸ್ಕ್ರೀನ್‌ಶಾಟ್ ಸಮೇತ ಬಂಡವಾಳ ಬಯಲು ಮಾಡುತ್ತಾರೆ.

ತೆಲುಗು ಬಿಗ್‌ಬಾಸ್ ಸೀಸನ್ 5ರಲ್ಲಿ ಪ್ರಿಯಾಂಕಾ ಸಿಂಗ್ ಸ್ಪರ್ಧಿಯಾಗಿ ಭಾಗವಹಿಸಿದ್ದರು. 13 ವಾರಗಳ ಕಾಲ ಮನೆಯಲ್ಲಿ ಉಳಿದುಕೊಂಡು ವೀಕ್ಷಕರ ಮನಗೆದ್ದಿದ್ದರು. ತೆಲುಗು ಕಿರುತೆರೆ ವೀಕ್ಷಕರಿಗೆ ಪ್ರಿಯಾಂಕಾ ಸಿಂಗ್ ಚೆನ್ನಾಗಿ ಗೊತ್ತು. ಜಬರ್ದಸ್ತ್ ಕಾಮೆಡಿ ಶೋನಲ್ಲಿ ಸಾಯಿ ತೇಜ ಆಗಿ ಗಮನ ಸೆಳೆದಿದ್ದರು. ಶೋನಲ್ಲಿ ಲೇಡಿ ಗೆಟಪ್‌ಗಳನ್ನು ಹಾಕಿ ರಂಜಿಸುತ್ತಿದ್ದರು. ಬಳಿಕ ದಿಢೀರ್ ನಾಪತ್ತೆ ಆಗಿದ್ದರು. ಅದೇ ಸಮಯದಲ್ಲಿ ಸಾಯಿ ತೇಜ, ಪ್ರಿಯಾಂಕ ಸಿಂಗ್ ಆಗಿ ಬದಲಾಗಿದ್ದರು.
ಸಾಯಿ ತೇಜ ಲಿಂಗ ಬದಲಾವಣೆ ಸರ್ಜರಿ ಮೂಲಕ ಪ್ರಿಯಾಂಕ ಸಿಂಗ್ ಆಗಿದ್ದರು. ಬಿಗ್‌ಬಾಸ್ ಶೋನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದರು. ಸರ್ಜರಿ ಬಳಿಕ ಮಾನಸಿಕವಾಗಿ ಆರ್ಥಿಕವಾಗಿ ಪ್ರಿಯಾಂಕ ಸಿಂಗ್ ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಯಾವುದೇ ಅವಕಾಶಗಳಿಲ್ಲದೇ ಖಾಲಿ ಕೂರುವಂತಾಗಿತ್ತು. ಅದೇ ಸಮಯದಲ್ಲಿ ಬಿಗ್‌ಬಾಸ್ ಶೋಗೆ ಸ್ಪರ್ಧಿಯಾಗುವ ಅವಕಾಶ ಸಿಕ್ಕಿತ್ತು. ಅಲ್ಲಿಂದ ಮುಂದೆ ಆಕೆಗೆ ಜನಪ್ರಿಯತೆ ಶುರುವಾಯಿತು. ತೃತೀಯಲಿಂಗಿಯಾಗಿದ್ದರೂ, ಪ್ರಿಯಾಂಕಾ ಸಿಂಗ್ ಸೌಂದರ್ಯ ಯಾವ ಹುಡುಗಿಯರಿಗಿಂತ ಕಮ್ಮಿ ಇಲ್ಲ ಎನ್ನುವಂತಿದೆ.
ಸೋಶಿಯಲ್ ಮೀಡಿಯಾದಲ್ಲಿ ಪ್ರಿಯಾಂಕ ಸಿಂಗ್ ಫೋಟೊಗಳು ಸಖತ್ ವೈರಲ್ ಆಗುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಒಂದು ಯೂಟ್ಯೂಬ್ ಚಾನಲ್ ಕೂಡ ಇದೆ. ಕೆಲವೊಮ್ಮೆ ಆನ್‌ಲೈನ್‌ನಲ್ಲಿ ಅಭಿಮಾನಿಗಳ ಚಾಟ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಆಕೆ ಇನ್‌ಸ್ಟಾ ಲೈವ್‌ನಲ್ಲಿ ಅಭಿಮಾನಿಗಳ ಜೊತೆ ಮಾತನಾಡಿದ್ದರು. ಸಾಕಷ್ಟು ಜನ ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಒಬ್ಬರ ಪ್ರಶ್ನೆಗೆ ಆಕ್ರೋಶಕ್ಕೆ ಕಾರಣವಾಗಿತ್ತು. ಸ್ಕ್ರೀನ್‌ಶಾಟ್ ಸಮೇತ ಅದಕ್ಕೆ ತಿರುಗೇಟು ನೀಡಿದ್ದಾರೆ.

ನೆಟ್ಟಿಗನೊಬ್ಬ ಕಾಮೆಂಟ್ ಮಾಡಿ ಪ್ರಿಯಾಂಕಾ ನೀವು ನನ್ನೊಂದಿಗೆ ಡೇಟಿಂಗ್ ಮಾಡುತ್ತೀಯಾ? ಒಂದು ರಾತ್ರಿಗೆ ಎಷ್ಟು ತಗೋತಿಯಾ? ಎಂದು ಕೇಳಿದ್ದಾನೆ. ಈ ಪ್ರಶ್ನೆಗೆ ಪ್ರಿಯಾಂಕ ಸಿಂಗ್ ಕೆಂಡಾಮಂಡಲವಾಗಿದ್ದಾರೆ. ನನಗೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ, "ಒಂದು ಕೆಲಸ ಮಾಡು, ನಿಮ್ಮ ತಂದೆ ನಿಮ್ಮ ತಾಯಿ ಜೊತೆ ಆ ಕೆಲಸ ಮಾಡಲು ಎಷ್ಟು ತೆಗೆದುಕೊಂಡರೋ ಕೇಳಿ ತಿಳಿದುಕೊಂಡು ಅಷ್ಟು ನನಗೆ ಕೊಡು" ಎಂದು ಖಾರವಾಗಿ ರಿಪ್ಲೇ ಮಾಡಿದ್ದಾರೆ. ಇದನ್ನು ಕೇಳಿ ಆತ ಶಾಕ್ ಆಗಿದ್ದು ಪ್ರಿಯಾಂಕ ಸಿಂಗ್ ಕಾಮೆಂಟ್ ಹಾಗೂ ಅದಕ್ಕೆ ಸಂಬಂಧಿಸಿ ಸ್ಕ್ರೀನ್‌ಶಾಟ್ ವೈರಲ್ ಆಗುತ್ತಿದೆ.
ಪ್ರಿಯಾಂಕ ಸಿಂಗ್ ಸದ್ಯ ತೆಲುಗು ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. 3 ತಿಂಗಳ ಹಿಂದೆಯಷ್ಟೆ ಒಂದು ಕಾರು ಖರೀದಿಸಿದ್ದರು. 13 ವರ್ಷಗಳ ಕನಸು, ನನ್ನ ಪರಿಶ್ರಮದಿಂದ ಈ ಕಾರು ಖರೀದಿಸಿದ್ದೀನಿ. 150 ರೂ. ಇಟ್ಟುಕೊಂಡು ಮೊದಲು ಹೈದರಾಬಾದ್‌ಗೆ ನಾನು ಬಂದ ದಿನ ನನಗಿನ್ನು ನೆನಪಿದೆ" ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.


Click it and Unblock the Notifications










