ಪ್ರಿಯರಕನ ಜೊತೆ ಬಿಗ್‌ಬಾಸ್ ಖ್ಯಾತಿಯ ಶೋಭಾ ಶೆಟ್ಟಿ ವಿಶೇಷ ಪೂಜೆ

ಕನ್ನಡ ಹಾಗೂ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ನಟಿ ಶೋಭಾ ಶೆಟ್ಟಿ. ಇತ್ತೀಚೆಗೆ ಬಿಗ್‌ಬಾಸ್ ಕನ್ನಡ ಸೀಸನ್ 11ಕ್ಕೆ ವೈಲ್ಡ್‌ ಕಾರ್ಡ್ ಎಂಟ್ರಿ ಕೊಟ್ಟು ಗಮನ ಸೆಳೆದಿದ್ದರು. ರಜತ್ ಜೊತೆ ಮನೆಯೊಳಗೆ ಹೋಗಿ ಅಬ್ಬರಿಸಿದ್ದರು. ತಮ್ಮ ವಾಗ್ದಾಳಿ ಮೂಲಕ ಇತರೆ ಸ್ಪರ್ಧಿಗಳಿಗೆ ಕೊಟ್ಟಿದ್ದರು. ಬಳಿಕ ಅಷ್ಟೇ ಬೇಗ ಸೈಲೆಂಟ್ ಆಗಿಬಿಟ್ಟರು.

ವೈಲ್ಡ್‌ ಕಾರ್ಡ್ ಮೂಲಕ ಮನೆಯೊಳಗೆ ಹೋಗಿ ಚೆನ್ನಾಗಿಯೇ ಆಡುತ್ತಿದ್ದ ಶೋಭಾ ಇದ್ದಕ್ಕಿದಂತೆ ಶೋ ಕ್ವಿಟ್ ಮಾಡಿದ್ದರು. ವೈಯಕ್ತಿಕ ಕಾರಣ ನೀಡಿ ಮನೆಯಿಂದ ಹೊರ ಬರುವುದಾಗಿ ಹೇಳಿದ್ದರು. ಇದಕ್ಕೆ ಬಿಗ್‌ಬಾಸ್ ಒಪ್ಪಿದ್ದರು. ಕೇವಲ 2 ವಾರಗಳ ಕಾಲ ಮಾತ್ರ ಆಕೆ ದೊಡ್ಮನೆ ಒಳಗೆ ಇದ್ದರು. 50ನೇ ದಿನ ಮನೆ ಪ್ರವೇಶಿಸಿದ್ದ ಶೋಭಾ 63 ದಿನಕ್ಕೆ ಹೊರ ಬಂದರು.

Bigg boss Fame Shobha Shetty and her boyfriend participate in puja at Hyderabad home

ಕನ್ನಡ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ತನು ಎಂಬ ಪಾತ್ರದಲ್ಲಿ ನಟಿಸಿ ಶೋಭಾ ಗಮನ ಸೆಳೆದಿದ್ದರು. ಬಳಿಕ ತೆಲುಗು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. 'ಕಾರ್ತಿಕ ದೀಪಂ' ಧಾರಾವಾಹಿಯಲ್ಲಿ ಆಕೆಗೆ ಒಳ್ಳೆ ಪಾತ್ರ ಸಿಕ್ಕಿತ್ತು. ಆ ಮೂಲಕ ತೆಲುಗು ವೀಕ್ಷಕರ ಮನಗೆದ್ದಿದ್ದರು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಯ ತೆಲುಗು ಶೋಗಳಲ್ಲಿ ಶೋಭಾ ಕಾಣಿಸಿಕೊಳ್ಳುತ್ತಿದ್ದಾರೆ.

ಬಿಗ್‌ಬಾಸ್ ತೆಲುಗು ಸೀಸನ್ 7ರ ಸ್ಪರ್ಧಿಯಾಗಿ ಶೋಭಾ ಮನೆ ಒಳಗೆ ಹೋಗಿದ್ದರು. ಫೈನಲ್ ಹಂತದಲ್ಲಿ ಎಲಿಮಿನೇಟ್ ಆಗಿ ತಮ್ಮ ಜರ್ನಿ ಮುಗಿಸಿದ್ದರು. ಅಲ್ಲಿ ಕೂಡ ತಮ್ಮ ನೇರಾನೇರ ಮಾತುಗಳಿಂದ ದರ್ಬಾರ್ ನಡೆಸಿದ್ದರು. ಬರೋಬ್ಬರಿ 98 ದಿನಗಳ ಕಾಲ ತೆಲುಗು ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು. ಇನ್ನು ಇದೇ ಸಮಯದಲ್ಲಿ ತಮ್ಮ ಲವ್ ಸ್ಟೋರಿ ರಿವೀಲ್ ಮಾಡಿದ್ದರು.

ಯಶ್ವಂತ್ ರೆಡ್ಡಿ ಎಂಬುವವರನ್ನು ಶೋಭಾ ಶೆಟ್ಟಿ ಪ್ರೀತಿಸುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಇಬ್ಬರ ಮದುವೆ ನಿಶ್ಚಯವಾಗಿತ್ತು. ಎಂಗೇಜ್‌ಮೆಂಟ್ ಬಗ್ಗೆ ಕೂಡ ಶೋಭಾ ಮಾಹಿತಿ ನೀಡಿದ್ದರು. ಆದರೆ ಮದುವೆ ಯಾವಾಗ ಎನ್ನುವುದು ಗೊತ್ತಿಲ್ಲ. ಇದೆಲ್ಲದರ ನಡುವೆ ಪ್ರಿಯಕರನ ಜೊತೆ ಸೇರಿ ತಮ್ಮ ಮನೆಯಲ್ಲಿ ಶೋಭಾ ವಿಶೇಷ ಪೂಜೆ ಮಾಡಿದ್ದಾರೆ. ಈ ಬಗ್ಗೆ ವೀಡಿಯೋ ಮಾಡಿ ತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ.

16 ಕಲಶಗಳನ್ನಿಟ್ಟು ನಡುವೆ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ ಮಾಡಿ ಪೂಜೆ ಮಾಡಿದ್ದಾರೆ. ಈ ವಿಶೇಷ ಪೂಜೆ ಮಾಡಲು ಕಾರಣ ಏನು ಇನ್ನುವುದನ್ನು ವೀಡಿಯೋದಲ್ಲಿ ವಿವರಿಸಿದ್ದಾರೆ. ಆಪ್ತರು ಕೂಡ ಈ ವೇಳೆ ಹಾಜರಿದ್ದರು. ವಿಶೇಷ ಭೋಜನ ವ್ಯವಸ್ಥೆ ಕೂಡ ಇತ್ತು. ನನಗೆ ದೇವರು, ಪೂಜೆ ಎಂದು ಬಹಳ ನಂಬಿಕೆ. ಇದರಿಂದ ಪಾಸಿಟಿವ್ ವೈಬ್ಸ್ ಇರುತ್ತದೆ ಎಂದು ಶೋಭಾ ಹೇಳಿದ್ದಾರೆ.

"ನಾನು ಈ ಮನೆಗೆ ಬಂದು 8 ತಿಂಗಳಾಯಿತು. ಆಗ ಗೃಹಪ್ರವೇಶ ಮಾಡಿ ಪೂಜೆ ಸಲ್ಲಿಸಿ ಮನೆಯ ಮುಂದೆ ದೃಷ್ಟಿಗೆ ಕುಂಬಳಕಾಯಿ ಕಟ್ಟಿದ್ದೆವು. ಆದರೆ ಅದು ಬಹಳ ಬೇಗ ಹಾಳಾಯಿತು. ಇಟ್ಟು ಬೇಗ ಆ ರೀತಿ ಆಗಲ್ಲ, ದೃಷ್ಟಿ ತಾಗಿರಬಹುದು ಎಂದು ಹಿರಿಯರು ಹೇಳಿದರು. ಅದಕ್ಕೆ ಪುರೋಹಿತರನ್ನು ಕರೆಸಿ ಈ ವಿಶೇಷ ಪೂಜೆ ಸಲ್ಲಿಸಿದೆವು ಎಂದು ವಿವರಿಸಿದ್ದಾರೆ.

ನನ್ನ ಭಾವಿ ಪತಿ ಯಶ್ವಂತ್ ಇದನ್ನೆಲ್ಲಾ ನಂಬಲ್ಲ. ಆದರೆ ನನಗಾಗಿ ಪೂಜೆಯಲ್ಲಿ ಭಾಗಿ ಆಗಿದ್ದರು. ಬಹಳ ಖುಷಿಯಾಯಿತು. ಪೂಜೆ ಮಾಡಿದ್ದೇವೆ ಇನ್ನು ಮುಂದೆ ಎಲ್ಲಾ ಚೆನ್ನಾಗಿರುತ್ತದೆ ಎನ್ನುವ ಧನಾತ್ಮಕ ಚಿಂತನೆ ಬಂದಿದೆ ಎಂದು ಶೋಭಾ ಹೇಳಿದ್ದಾರೆ. ಪೂಜೆ ನಡೆಸಿದ ತಯಾರಿ, ಸೀರೆ ಉಟ್ಟು ತಯಾರಾಗಿದ್ದು ಎಲ್ಲವನ್ನು ವೀಡಿಯೋದಲ್ಲಿ ತಿಳಿಸಿದ್ದಾರೆ. ಅಭಿಮಾನಿಗಳು ವಿಡಿಯೋಗೆ ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

More from Filmibeat

English summary
Bigg Boss star Shobha Shetty, along with her boyfriend, performed a puja at their Hyderabad home;
Read more about: bigg boss actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X