For Quick Alerts
  ALLOW NOTIFICATIONS  
  For Daily Alerts

  ಸಲಾರ್ ಚಿತ್ರಕ್ಕೆ ಬಿಗ್ ಬಾಸ್ ವಿನ್ನರ್ ದಿವ್ಯಾ ಅಗರ್ವಾಲ್ ಎಂಟ್ರಿ

  By ರವೀಂದ್ರ ಕೊಟಕಿ
  |

  ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ 'ಸಲಾರ್ 'ಚಿತ್ರ ಶರವೇಗದಲ್ಲಿ ಚಿತ್ರೀಕರಣವನ್ನು ನಡೆಸುತ್ತಿದೆ. ಪ್ರಭಾಸ್-ಶ್ರುತಿ ಹಾಸನ್ ಮುಖ್ಯಭೂಮಿಕೆಯಲ್ಲಿರುವ ಈ ಪ್ಯಾನ್ ಇಂಡಿಯಾ ಸಿನಿಮಾ ಈಗಾಗಲೇ ದೊಡ್ಡ ಮಟ್ಟದಲ್ಲಿ ಸಂಚಲನವನ್ನು ಹಾಗೂ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಮುಂದಿನ ವರ್ಷದ ಎಪ್ರಿಲ್‌ನಲ್ಲಿ ಚಿತ್ರದ ಬಿಡುಗಡೆಗೆ ಚಿತ್ರತಂಡ ಸನ್ನದ್ಧವಾಗಿದೆ.

  ಪವರ್ ಫುಲ್ ಆಕ್ಷನ್ ಸಿನಿಮಾ

  ಪ್ರಶಾಂತ್ ನೀಲ್ ಸಿನಿಮಾ ಅಂದರೇ ಅದೊಂದು full packed ಆಕ್ಷನ್ ಸಿನಿಮಾ ಆಗಿರುತ್ತದೆ. ಕೆಜಿಎಫ್-2 ಬಿಡುಗಡೆಯ ನಂತರ ಸಲಾರ್ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಚಿತ್ರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇದುವರೆಗೂ ಭಾರತೀಯ ಸಿನಿಮಾರಂಗದಲ್ಲಿ ಕಾಣದಂತ ಸಾಹಸ ದೃಶ್ಯಗಳ ಸಂಯೋಜನೆ ಇಲ್ಲಿ ಮಾಡಲಾಗಿದೆ ಅಂತ ಹೇಳಲಾಗುತ್ತಿದೆ. ಅದರಲ್ಲೂ ಈ ಚಿತ್ರ ಪ್ರಭಾಸ್- ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಮೊದಲನೆಯ ಚಿತ್ರ. ಹೀಗಾಗಿ ಸಹಜವಾಗಿಯೇ ಬಾಹುಬಲಿ ನಾಯಕನ- ಕೆಜಿಎಫ್ ನಿರ್ದೇಶಕನ ಚಿತ್ರಕ್ಕಾಗಿ ದೇಶದಾದ್ಯಂತ ಸಿನಿಪ್ರೇಮಿಗಳು ಎದುರುನೋಡುತ್ತಿದ್ದಾರೆ.

  ಹೈದರಾಬಾದ್‌ನಲ್ಲಿ 'ಸಲಾರ್' ಹೊಸ ಶೆಡ್ಯೂಲ್ ಆರಂಭಿಸಿದ ಪ್ರಭಾಸ್ಹೈದರಾಬಾದ್‌ನಲ್ಲಿ 'ಸಲಾರ್' ಹೊಸ ಶೆಡ್ಯೂಲ್ ಆರಂಭಿಸಿದ ಪ್ರಭಾಸ್

  ಪ್ರಭಾಸ್ ಅವರ ರಾಧೇಶ್ಯಾಮ್ ಮುಂದಿನ ಸಂಕ್ರಾಂತಿಗೆ ಬಿಡುಗಡೆಯಾಗುತ್ತಿದೆ. ಪ್ರಸ್ತುತ ಅವರು ಸಲಾರ್ ಜೊತೆಗೆ ಆದಿಪುರುಷ್ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇನ್ನೊಂದೆಡೆ ಪ್ರಶಾಂತ್ ನೀಲ್ ಅವರ ಬಹುನಿರೀಕ್ಷಿತ ಕೆಜಿಎಫ್ -2 ಬಿಡುಗಡೆಗೆ ಸಿದ್ಧವಾಗಿದ್ದು, ಮುಂದಿನ ಏಪ್ರಿಲ್ನಲ್ಲಿ ಬಹುಶಃ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಸಲಾರ್ ಮತ್ತು ಕೆಜಿಎಫ್-2 ಈ ಎರಡು ಚಿತ್ರಗಳನ್ನು ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವುದರಿಂದ ಎರಡೂ ಚಿತ್ರಗಳ ಬಿಡುಗಡೆಯ ಮಧ್ಯೆ ಒಂದು ಗ್ಯಾಪ್ ಇರಲಿದೆ. ಹೀಗಾಗಿಯೇ ಏಪ್ರಿಲ್ನಲ್ಲಿ ಸಲಾರ್ ಬಿಡುಗಡೆಯಾಗುವ ಸಾಧ್ಯತೆಗಳು ತೀರಾ ಕಮ್ಮಿ ಇದೆ. ಏಕೆಂದರೆ ಏಪ್ರಿಲ್ ಸಮಯದಲ್ಲಿ ಕೆಜಿಎಫ್-2 ಕೂಡ ಬಿಡುಗಡೆಯಾಗುತ್ತಿದೆ.

  ಚಿತ್ರತಂಡಕ್ಕೆ ಎಂಟ್ರಿಕೊಟ್ಟ ಬಿಗ್ ಬಾಸ್ ಬ್ಯೂಟಿ!

  ತೀವ್ರ ಕುತೂಹಲ ಕೆರಳಿಸಿದ್ದ ಹಿಂದಿ ಬಿಗ್ ಬಾಸ್ OTT ಟೈಟಲನ್ನು ಕೈವಶ ಮಾಡಿಕೊಂಡ ದಿವ್ಯಾ ಅಗರ್ವಾಲ್ ಕಿರುತೆರೆಯ ನಟಿ, ಮಾಡೆಲ್, ಡ್ಯಾನ್ಸರ್ ಕೂಡ ಆಗಿದ್ದಾಳೆ. ದಿವ್ಯಾ 'MTV Splitsvilla-10' ರನ್ನರ್ ಅಪ್ ಮತ್ತು 'Ace of Space-1' ಇದರಲ್ಲಿ ವಿನ್ನರ್ ಕೂಡ ಆಗಿದ್ದಾಳೆ. ಮ್ಯೂಸಿಕಲ್ ವಿಡಿಯೋ ಗಳಲ್ಲಿ ಕೂಡ ಕುಣಿದಿರುವ ದಿವ್ಯಾ ರಾಗಿನಿ- MMS ರಿಟರ್ನ್ಸ್ 2, ಹಾರರ್ ವೆಬ್ ಸಿರೀಸ್ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು.

  ಪ್ರಶಾಂತ್ ನೀಲ್ ಜೊತೆ ಪ್ರಭಾಸ್ ಇನ್ನೊಂದು ಚಿತ್ರ: ನಿರ್ಮಾಪಕ ಯಾರು?ಪ್ರಶಾಂತ್ ನೀಲ್ ಜೊತೆ ಪ್ರಭಾಸ್ ಇನ್ನೊಂದು ಚಿತ್ರ: ನಿರ್ಮಾಪಕ ಯಾರು?

  ಬಿಗ್ ಬಾಸ್ OTT ಬಿಗ್ ಚೆಲುವೆ ಶೀಘ್ರದಲ್ಲೇ ಸಲಾರ್ ಚಿತ್ರತಂಡವನ್ನು ಸೇರಲಿದ್ದಾರೆ. ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಇವರನ್ನು ಆಯ್ಕೆ ಮಾಡಿದ್ದು ಶೀಘ್ರದಲ್ಲೇ ಅಧಿಕೃತವಾಗಿ ಈ ಬಗ್ಗೆ ಚಿತ್ರದ ನಿರ್ಮಾಪಕರು ಘೋಷಿಸುವ ಸಾಧ್ಯತೆಗಳಿವೆ ಅಂತ ಮುಂಬೈ ಸರ್ಕಲ್ ನಿಂದ ಕೇಳಿಬರುತ್ತಿದೆ.

  Bigg Boss OTT winner Divya Agarwal on board for Prabhass Salaar

  ಈಗಾಗಲೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿರುವ ಸಲಾರ್ ಚಿತ್ರಕ್ಕೆ ಹಿಂದಿಯ ಜನಪ್ರಿಯ ಕಿರುತೆರೆಯ ನಟಿ ದಿವ್ಯಾ ಎಂಟ್ರಿಯಾದರೆ ಚಿತ್ರದ ಮೇಲಿನ ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗಲಿದೆ.

  English summary
  Bigg Boss OTT winner Divya Agarwal on board for Prabhas's Salaar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X