Bigg Boss Telugu 7: ಹೆಚ್ಚು ನಟ, ನಟಿಯರೇ ತುಂಬಿರುವ ತೆಲುಗು ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿ ಇಲ್ಲಿದೆ
ಬಹು ನಿರೀಕ್ಷಿತ ರಿಯಾಲಿಟಿ ಶೋ ಬಿಗ್ ಬಾಸ್ ತೆಲುಗು ಸೀಸನ್ 7 ಆರಂಭವಾಗಿದೆ. ಬಿಗ್ ಬಾಸ್ ಪ್ರೀಮಿಯರ್ ಸೆಪ್ಟೆಂಬರ್ 3 ರಂದು ಸಂಜೆ 7 ಗಂಟೆಯಿಂದ ಪ್ರಸಾರವಾಗುತ್ತಿದೆ. ಧಾರಾವಾಹಿಗಳಿಂದ ಹೆಸರು ಗಳಿಸಿರುವ ನಟಿ ಪ್ರಿಯಾಂಕಾ ಜೈನ್ ಅವರ ಪರಿಚಯ ಮತ್ತು ಪ್ರವೇಶದಿಂದ ಬಿಗ್ ಬಾಸ್ ಮನೆಗೆ ಗೃಹಪ್ರವೇಶ ಆರಂಭವಾಗಿದೆ.
ನಟ ನಾಗಾರ್ಜುನ ಈ ಬಾರಿ ಬಿಗ್ ಬಾಸ್ ನಿರೂಪಣೆ ಮಾಡುತ್ತಿದ್ದು, ವೀಕ್ಷಕರಿಗೆ ಪೀಠೋಪಕರಣಗಳ ಸೆಟ್‌ಗಳೊಂದಿಗೆ ಇಡೀ ಮನೆಯನ್ನು ತೋರಿಸಿದ್ದಾರೆ. ಸ್ಪರ್ಧಿಗಳನ್ನು ಪೀಠೋಪಕರಣಗಳಿಲ್ಲದ ಮನೆಗೆ ಕಳುಹಿಸಲಾಗುತ್ತದೆ. ಅಲ್ಲಿ ಅವರು, ಟಾಸ್ಕ್‌ಗಳಲ್ಲಿ ಗೆದ್ದು ಇವುಗಳನ್ನು ಗಳಿಸಬೇಕಾಗುತ್ತದೆ.

ಬಿಗ್ ಬಾಸ್ ಸೀಸನ್ 7 ತೆಲುಗು: ಸ್ಪರ್ಧಿಗಳ ಪಟ್ಟಿ
1) ಪ್ರಿಯಾಂಕಾ ಜೈನ್: ಟಿವಿ ನಟಿ ಪ್ರಿಯಾಂಕಾ ಜೈನ್, ಮೌನ ರಾಗಂ ಮತ್ತು ಜಾನಕಿ ಕಲಗನಾಲೆಡು ಧಾರಾವಾಹಿಗಳಿಂದ ಹೆಸರು ಪಡೆದಿರುವ ಅವರು ಬಿಗ್ ಬಾಸ್ ತೆಲುಗು 7 ಗೆ ಸೀಸನ್‌ನ ಮೊದಲ ಸ್ಪರ್ಧಿಯಾಗಿ ಬಿಗ್ ಬಾಸ್ ಮಣೇ ಪ್ರವೇಶಿಸಿದ್ದಾರೆ.
ಮನೆಗೆ ಪ್ರವೇಶಿಸುತ್ತಿದ್ದಂತೆ ನಾಗಾರ್ಜುನ ಅವರು ಪ್ರಿಯಾಂಕಾ ಜೈನ್‌ಗೆ ಇತರ ಸ್ಪರ್ಧಿಗಳಿಂದ ಮನೆಯಲ್ಲಿ ನಗದು ಬಹುಮಾನದ ಸೂಟ್ಕೇಸ್ ಅನ್ನು ಮರೆಮಾಡಲು ಹೇಳಿದ್ದಾರೆ. ಇದನ್ನು ಪ್ರಿಯಾಂಕಾ ಬಿಗ್ ಬಾಸ್ ಜೈಲಿನ ವಾಶ್ ರೂಂನಲ್ಲಿ ಬಚ್ಚಿಟ್ಟಿದ್ದಾರೆ.
2) ಶಿವಾಜಿ: ಶಿವಾಜಿ ಟಾಲಿವುಡ್‌ನ ಜನಪ್ರಿಯ ನಟ. ಫ್ಯಾಮಿಲಿ ನಟನಾಗಿ ಗುರುತಿಸಿಕೊಂಡಿರುವ ಇವರು, ತೆಲುಗಿನಲ್ಲಿ ಹಲವಾರು ಬ್ಲಾಕ್‌ಬಸ್ಟರ್ ಸಿನಿಮಾಗಳ ಭಾಗವಾಗಿದ್ದರು. ಅವರು ಎರಡನೇ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ್ದಾರೆ.
3) ದಾಮಿನಿ ಭಟ್ಲ: ದಾಮಿನಿ ಜನಪ್ರಿಯ ಹಿನ್ನೆಲೆ ಗಾಯಕಿ. ಆಸ್ಕರ್ ಪ್ರಶಸ್ತಿ ವಿಜೇತ ಸಂಯೋಜಕ ಎಂಎಂ ಕೀರವಾಣಿ ಅವರ ನಿರ್ದೇಶನದಲ್ಲಿ ಅವರು ಹಲವಾರು ಹಾಡುಗಳಿಗೆ ದನಿಯಾಗಿದ್ದಾರೆ.
4) ಪ್ರಿನ್ಸ್ ಯವಾರ್: ಫಿಟ್‌ನೆಸ್ ಫ್ರಿಕ್, ಮಾಡೆಲ್ ಮತ್ತು ನಟ ಪ್ರಿನ್ಸ್ ಯವಾರ್ ಚಿತ್ರರಂಗದಲ್ಲಿ ಅದೃಷ್ಟವನ್ನು ಪರೀಕ್ಷಿಸಿ ಸೋಲು ಕಂಡು ಚಿತ್ರರಂಗ ತೊರೆದವರು. "ಬಿಗ್ ಬಾಸ್‌ನಿಂದ ನನಗೆ ಅವಕಾಶ ಬಂದಿದೆ. ಇಂದಿನಿಂದ ನನ್ನ ಜೀವನ ಬದಲಾಗಲಿ ಎಂದು ನಾನು ಆಶಿಸುತ್ತೇನೆ" ಎಂದು ಹೇಳಿದ್ದಾರೆ.
5) ಸುಭಾ ಶ್ರೀ ರಾಯಗುರು: ಐದನೇ ಸ್ಪರ್ಧಿಯಾಗಿರುವ ಸುಭಾಶ್ರೀ ವಕೀಲಿ ಮತ್ತು ನಟಿ. ಕುಟುಂಬದವ ಮಾತಿನಂತೆ ಕಾನೂನು ಕಲಿತ ಇವರು, ನಂತರ ನಟನೆ ಮತ್ತು ನೃತ್ಯದ ಮೇಲಿನ ಆಸಕ್ತಿಯಿಂದಾಗಿ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
6) ಶಕೀಲಾ: ಶಕೀಲಾ ಸಿ ಜಾನ್ ದಕ್ಷಿಣ ಭಾರತದ ಸಿನಿಮಾ ಪ್ರೇಕ್ಷಕರಿಗೆ ಚಿರಪರಿಚಿತ ಹೆಸರು. ಅವರು ಬಿಗ್ ಬಾಸ್ ತೆಲುಗು 7 ಕಾರ್ಯಕ್ರಮಕ್ಕೆ ಆರನೇ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ. ತಾನು ಹೇಗೆ ತನ್ನ ಹಣವನ್ನು ಕಳೆದುಕೊಂಡದ್ದು, ಚಿತ್ರರಂಗಕ್ಕೆ ಬರಲು ಕಾರಣಗಳ ಬಗ್ಗೆ ವಿವರಿಸಿದ್ದಾರೆ.
7) ಆಟ ಸಂದೀಪ್: 'ಆಟ' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಮೂಲಕ ಜನಪ್ರಿಯತೆಗೆ ಏರಿದ ನೃತ್ಯ ನಿರ್ದೇಶಕ, ನಟ ಆಟ ಸಂದೀಪ್ ಏಳನೇ ಸ್ಪರ್ಧಿಯಾಗಿ ಮನೆಗೆ ಕಾಲಿಟ್ಟಿದ್ದಾರೆ. ಬಿಗ್ ಬಾಸ್ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ.
8) ಶೋಭಾ ಶೆಟ್ಟಿ: ಕಿರುತೆರೆ ನಟಿ ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ತೆಲುಗು 7 ರ ಎಂಟನೇ ಸ್ಪರ್ಧಿಯಾಗಿ ರಿಯಾಲಿಟಿ ಶೋಗೆ ಪಾದಾರ್ಪಣೆ ಮಾಡಿದರು. ಅವರು ಕಾರ್ತಿಕಾ ದೀಪಂನ ಖಳನಾಯಕಿ 'ಮೋನಿತಾ' ಪಾತ್ರಧಾರಿಯಾಗಿದ್ದಾರೆ.
9) ಟೇಸ್ಟಿ ತೇಜಾ: ಯೂಟ್ಯೂಬರ್ ಮತ್ತು ಜಬರ್ದಸ್ತ್ ಹಾಸ್ಯನಟ ಟೇಸ್ಟಿ ತೇಜಾ, ಒಂಬತ್ತನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ದಕ್ಷಿಣ ಭಾರತದ ನಟ ನಟಿಯರೊಂದಿಗೆ ತಾರೆಯರೊಂದಿಗೆ ವಿಭಿನ್ನವಾಗಿ ಅವರ ಚಲನಚಿತ್ರ ಪ್ರಚಾರಗಳನ್ನು ಮಾಡುತ್ತಾರೆ.
10) ರಥಿಕಾ: ರಥಿಕಾ ರೋಸ್ ನಟಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತಿ ಗಳಿಸಿದವರು. ಬಿಗ್ ಬಾಸ್ ತೆಲುಗು 7 ಮೂಲಕ ಹೆಚ್ಚು ಜನರನ್ನು ತಲುಪಲು ಮತ್ತು ಜನಪ್ರಿಯರಾಗಲು ಬಯಸುತ್ತಿದ್ದಾರೆ. ಆಕೆ ಹತ್ತನೇ ಸ್ಪರ್ಧಿಯಾಗಿ ಮನೆಗೆ ಬಂದಿದ್ದಾರೆ.
11) ಡಾ ಗೌತಮ್ ಕೃಷ್ಣ: ಡಾ ಗೌತಮ್ನಟನಾಗಲು ಬಯಸಿದ್ದರು. ಆದರೆ ಅವರ ಪೋಷಕರ ಬೆಂಬಲದ ಕೊರತೆಯಿಂದಾಗಿ ಅವರ ಆಸಕ್ತಿಯಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಆದರೂ, ಅವರು 'ಆಕಾಸ ಬೀದಿಲೋ..' ಚಿತ್ರದೊಂದಿಗೆ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು
12) ಕಿರಣ್ ರಾಥೋಡ್: ನಟಿ ಕಿರಣ್ ರಾಥೋಡ್ ಟಾಲಿವುಡ್‌ನಲ್ಲಿ ಜನಪ್ರಿಯ ಮುಖ. ಅವರು ಹಿಂದಿ ಜೊತೆಗೆ ತೆಲುಗು, ತಮಿಳು, ಮಲಯಾಳಂನ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದಲ್ಲಿ ಸ್ವಲ್ಪ ಕಾಲದಿಂದ ಕಾಣೆಯಾಗಿದ್ದವರು, ಈ ಶೋ ಮೂಲಕ ತೆಲುಗು ಕಲಿಯುವ ಮತ್ತು ತೆಲುಗು ಜನರ ಮನಗೆಲ್ಲುವ ವಿಶ್ವಾಸ ಹೊರಹಾಕಿದ್ದಾರೆ.
13) ಪಲ್ಲವಿ ಪ್ರಶಾಂತ್: ಬಿಗ್ ಬಾಸ್ ತೆಲುಗು ಸೀಸನ್ 7 ರ ಹದಿಮೂರನೇ ಸ್ಪರ್ಧಿ ಪಲ್ಲವಿ ಪ್ರಶಾಂತ್. ಇವರು ಕೃಷಿಕ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್, ಕೃಷಿ ವಿಷಯಗಳ ಮೇಲೆ ಆಸಕ್ತಿ ಹೊಂದಿದ್ದಾರೆ.
14) ಅಮರ್‌ದೀಪ್ ಚೌದರಿ: ಜಾನಕಿ ಕಲಗನಾಲೇಡು ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಹೆಸರುವಾಸಿಯಾದ ಕಿರುತೆರೆ ನಟ ಅಮರ್‌ದೀಪ್ ಚೌಧರಿ ಬಿಗ್ ಬಾಸ್ ತೆಲುಗು 7 ರ 14 ನೇ ಸ್ಪರ್ಧಿಯಾಗಿದ್ದಾರೆ.


Click it and Unblock the Notifications











