ಸಮಂತಾ ಎಲ್ಲಿ?: ಮಾಜಿ ಸೊಸೆ ಬಗ್ಗೆ ವಿಜಯ್ ದೇವರಕೊಂಡ ಬಳಿ ಕೇಳಿದ ನಟ ನಾಗಾರ್ಜುನ!

ತೆಲುಗು ಮನರಂಜನಾ ಉದ್ಯಮದ ಅತಿದೊಡ್ಡ ರಿಯಾಲಿಟಿ ಶೋ, ಬಿಗ್ ಬಾಸ್ ತೆಲುಗಿನ ಹೊಚ್ಚ ಹೊಸ ಸೀಸನ್ 7 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗಿದ್ದು, ಬಿಗ್‌ ಬಾಸ್ ನೋಡಲು ತೆಲುಗು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

ರಿಯಾಲಿಟಿ ಶೋ ಪ್ರಸಾರವಾಗಲಿರುವ ಸ್ಟಾರ್ ಮಾ ಚಾನೆಲ್ ಕಾರ್ಯಕ್ರಮದ ಪ್ರೋಮೋವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕಿಂಗ್ ನಾಗಾರ್ಜುನ ಐದನೇ ಬಾರಿಗೆ ನಿರೂಪಕರಾಗಿ ಕಿರುತೆರೆಗೆ ಮತ್ತೆ ಮರಳಿದ್ದಾರೆ. ಪ್ರೋಮೋವನ್ನು ಮತ್ತಷ್ಟು ರೋಮಾಂಚನಕಾರಿಯಾಗಿ ಮಾಡಿರುವುದು ನಟ ವಿಜಯ್ ದೇವರಕೊಂಡ.

Bigg Boss Telugu 7: Where Is Samantha, Nagarjuna Asks Vijay Deverakonda

ಬಿಗ್ ಬಾಸ್ ಸೀಸನ್ 7 ವೇದಿಕೆಯಲ್ಲಿ ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ಅಭಿನಯದ ಖುಷಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಇಬ್ಬರ ಕೆಮಿಸ್ಟ್ರಿಗೆ ಪ್ರೇಕ್ಷಕರು ವಾವ್ ಎಂದಿದ್ದಾರೆ. ಸೆಪ್ಟೆಂಬರ್ 1 ರಂದು ಬಿಡುಗಡೆಯಾದ ಖುಷಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದ್ದರೂ ಸಹ, ವಿಜಯ್ ದೇವರಕೊಂಡ ತನ್ನ ಎಲ್ಲಾ ಶಕ್ತಿ ಮೀರಿ ಸಿನಿಮಾ ಪ್ರಚಾರ ಮಾಡುವಲ್ಲಿ ತೊಡಗಿಸಿಕೊಂಡಿದ್ದಾರೆ.

ಖುಷಿ ಚಿತ್ರದ ಪ್ರಚಾರದ ಭಾಗವಾಗಿ ವಿಜಯ್ ದೇವರಕೊಂಡ ಜನಪ್ರಿಯ ರಿಯಾಲಿಟಿ ಶೋ, ಬಿಗ್ ಬಾಸ್ ತೆಲುಗು ಸೀಸನ್ 7 ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ರಿಯಾಲಿಟಿ ಶೋನ ಏಳನೇ ಸೀಸನ್ ಸೆಪ್ಟೆಂಬರ್ 3 ರಂದು ಪ್ರಸಾರವಾಗಲಿದೆ. ಸ್ಟಾರ್ ಮಾ ಚಾನೆಲ್ ವಿಜಯ್ ದೇವರಕೊಂಡ ಇರುವ ಪ್ರೋಮೋವನ್ನು ಬಿಡುಗಡೆ ಮಾಡಿದ್ದಾರೆ.

ಮಾಜಿ ಸೊಸೆಯನ್ನು ನೆನಪಿಸಿಕೊಂಡ ನಾಗಾರ್ಜುನ

ಚಾನೆಲ್ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ನಟ ನಾಗಾರ್ಜುನ್ ವಿಜಯ್ ದೇವಕೊಂಡ ಅವರನ್ನು ಕಂಡ ಕೂಡಲೇ "ನಿಮ್ಮ ನಾಯಕಿ ಸಮಂತಾ ಎಲ್ಲಿ?" ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ನಟ ವಿಜಯ್ ದೇವರಕೊಂಡ ಸೇರಿದಂತೆ ನಾಗಾರ್ಜುನ, ಸಮಂತಾ ಮತ್ತು ವಿಜಯ್ ದೇವರಕೊಂಡ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

Bigg Boss Telugu 7: Where Is Samantha, Nagarjuna Asks Vijay Deverakonda

ನಟಿ ಸಮಂತಾ ರುತ್ ಪ್ರಭು ನಾಗಾರ್ಜುನ ಅಕ್ಕಿನೇನಿ ಅವರ ಸೊಸೆಯಾಗಿದ್ದವರು. ಸಮಂತಾ ಈ ಹಿಂದೆ ನಾಗಾರ್ಜುನ ಅವರ ಮಗ ನಾಗ ಚೈತನ್ಯ ಅವರನ್ನು ಮದುವೆಯಾಗಿದ್ದರು. ಮದುವೆಯಾದ ನಾಲ್ಕು ವರ್ಷಗಳ ನಂತರ ಅವರು ಕಳೆದ ವರ್ಷ ಅಕ್ಟೋಬರ್ 21 ರಂದು ವಿಚ್ಛೇದನ ಪಡೆದರು. ಸಮಂತಾ ಅಕ್ಕಿನೇನಿ ಆಗಿದ್ದವರು ಮತ್ತೆ ತಮ್ಮ ಹೆಸರನ್ನು ಸಮಂತಾ ರುತ್ ಪ್ರಭು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬದಲಿಸಿಕೊಂಡಿದ್ದರು.

ಸಮಂತಾ ಸದ್ಯ ಖುಷಿ ಸಿನಿಮಾ ಯಶಸ್ಸಿನಲ್ಲಿದ್ದಾರೆ. ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ನಾಯಕ - ನಾಯಕಿಯರಾಗಿ ನಟಿಸಿರುವ ಈ ಚಿತ್ರವು ಅದರ ಸರಳ ಪ್ರೇಮಕಥೆ ಮತ್ತು ಪಾತ್ರಗಳಲ್ಲಿನ ಅಭಿನಯಕ್ಕಾಗಿ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ವೈವಾಹಿಕ ಜೀವನದ ಏರು ಪೇರುಗಳನ್ನು ದಾಟಿ ತಮ್ಮ ವೃತ್ತಿ ಜೀವನದ ಕಡೆಗೆ ದಾಪುಗಾಲು ಇಡುತ್ತಿರುವ ನಟಿ ಹಲವು ಸಿನಿಮಾಗಳನ್ನು ತಮ್ಮ ಬುಟ್ಟಿಯಲ್ಲಿಟ್ಟುಕೊಂಡಿದ್ದಾರೆ. ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಲೇ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಪ್ರಸ್ತುತ ಸಮಂತಾ ವಿದೇಶದಲ್ಲಿದ್ದು, ಅಲ್ಲಿಂದಲೇ ತಮ್ಮ ಅಭಿಮಾನಿಗಳಿಗೆ ಖುಷಿ ಸಿನಿಮಾ ಗೆಲ್ಲಿಸಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ. ನ್ಯೂಯಾರ್ಕ್, ಅಮೆರಿಕಾ ಎಂದು ಪ್ರವಾಸ ಮಾಡುತ್ತಿರುವ ಸಮಂತಾ ಅಲ್ಲಿಯೇ ಚಿಕಿತ್ಸೆ ಪಡೆಯಲಿದ್ದಾರೆ ಎಂಬ ವದಂತಿಯಿದೆ. ನಟಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಆಕ್ಟಿವ್ ಆಗಿದ್ದು, ಆಗಾಗ್ಗೆ ತಮ್ಮ ಅಭಿಮಾನಿಗಳಿಗಾಗಿ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.

More from Filmibeat

English summary
Nagarjuna Asks Vijay Deverakonda about ex daughter-in-law Samantha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X