"ನನ್ನ ಪತಿ ಜೊತೆ ಬಿಗ್‌ಬಾಸ್ ಸ್ಪರ್ಧಿಗೆ ಅಫೇರ್"; ವೀಡಿಯೋ ಬಿಟ್ಟ ನಟನ ಪತ್ನಿ

ತೆಲುಗು ಬಿಗ್‌ಬಾಸ್ ಸೀಸನ್ 9 ಇತ್ತೀಚೆಗೆ ಶುರುವಾಗಿತ್ತು. ಕನ್ನಡ ನಟ ಸಂಜನಾ ಗರ್ಲಾನಿ ಕೂಡ ಮನೆಯೊಳಗೆ ಇದ್ದಾರೆ. ಇನ್ನು ನಟಿ, ನಿರೂಪಕಿ, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ರಿತು ಚೌಧರಿ ಕೂಡ ಈ ಬಾರಿ ಸ್ಪರ್ಧಿಯಾಗಿ ಒಳಗೆ ಹೋಗಿದ್ದಾರೆ. ಅದರ ಬೆನ್ನಲ್ಲೇ ಆಕೆಯ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.

ಸದ್ಯ ಬಿಗ್‌ಬಾಸ್ ಮನೆಯಲ್ಲಿರುವ ರಿತು ಚೌಧರಿಯಿಂದ ನನ್ನ ಜೀವನವೇ ಹಾಳಾಯಿತು ಎಂದು ನಟನ ಪತ್ನಿ ಆರೋಪಿಸಿದ್ದಾರೆ. ರಿತು ನನ್ನ ಪತಿ ಜೊತೆ ಅಫೇರ್ ಇಟ್ಟುಕೊಂಡಿದ್ದಾಳೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು ತನ್ನ ಪತಿಯ ಜೊತೆ ರಿತು ಅನ್ಯೋನ್ಯವಾಗಿರುವ ವೀಡಿಯೋ ಇಲ್ಲಿದೆ ನೋಡಿ ಎಂದು ಸಿಸಿಟಿವಿ ಫುಟೇಜ್ ಹಂಚಿಕೊಂಡಿದ್ದಾರೆ.

Bigg Boss Telugu 9 Actress Ritu Chaudhary Faces Affair Allegations From Actor Dharma s Wife Gautami

ಅತ್ತ ರಿತು ಚೌಧರಿ ಬಿಗ್‌ಬಾಸ್ ಮನೆಯೊಳಗೆ ಇದ್ದರೆ ಇತ್ತ ಆಕೆಯ ವಿರುದ್ಧ ಗಂಭೀರ ಕೇಳಿಬಂದಿದೆ. ತೆಲುಗು ನಟ ಧರ್ಮ ಮಹೇಶ್ ಹಾಗೂ ಪತ್ನಿ ಗೌತಮಿ ಚೌಧರಿ ಕೌಟುಂಬಿಕ ಕಲಹ ಕೆಲ ದಿನಗಳಿಂದ ಭಾರೀ ಸದ್ದು ಮಾಡ್ತಿದೆ. ಒಬ್ಬ ಯುವತಿ ಜೊತೆಗಿನ ಅಫೇರ್ ಕಾರಣಕ್ಕೆ ನನ್ನ ಜೊತೆ ಪತಿ ಜಗಳ ಮಾಡುತ್ತಿದ್ದರು ಎಂದು ಗೌತಮಿ ಆರೋಪಿಸಿದ್ದರು. ಸೆಲೆಬ್ರೆಟಿ ನಟಿಯ ಜೊತೆ ನನ್ನ ಪತಿ ಧರ್ಮ ಮಹೇಶ್ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾನೆ ಎಂದು ಗೌತಮಿ ಆರೋಪಿಸಿದ್ದರು.

ನನ್ನ ಪತಿ ಧರ್ಮ ಮಹೇಶ್ ಜೊತೆ ಅಫೇರ್ ಇಟ್ಟುಕೊಂಡಿದ್ದು ಮತ್ಯಾರು ಅಲ್ಲ ನಟಿ, ನಿರೂಪಕಿ ರಿತು ಚೌಧರಿ ಎಂದು ಇದೀಗ ಗೌತಮಿ ಆರೋಪಿಸಿದ್ದಾರೆ. ರಿತು ಚೌಧರಿ ಬಗ್ಗೆ ಪತಿ ಮಹೇಶ್ ಜೊತೆ ವಾಟ್ಸಪ್‌ನಲ್ಲಿ ಚಾಟ್ ಮಾಡಿರುವ ಸ್ಕ್ರೀನ್ ಶಾಟ್ ಅನ್ನು ಕೂಡ ಗೌತಮಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಗೌತಮಿ ಗರ್ಭಿಣಿ ಆಗಿದ್ದ ಸಮಯದಲ್ಲಿ ರಿತು ಚೌಧರಿ ಜೊತೆ ಧರ್ಮ ಮಹೇಶ್ ಅಫೇರ್ ಇಟ್ಟುಕೊಂಡಿದ್ದಾಗಿ ಆ ಬಗ್ಗೆ ಪ್ರಶ್ನಿಸಿದ್ದಕ್ಕೆ ನಮ್ಮಿಬ್ಬರ ನಡುವೆ ಜಗಳ ಆಯಿತು ಎಂದು ಗೌತಮಿ ಹೇಳಿದ್ದಾರೆ.

ಸೋಶಿಯಲ್ ಮೀಡಿಯಾ ಇನ್‌ಫ್ಲುರೆನ್ಸರ್ ಆಗಿರುವ ಗೌತಮಿ ಕೆಲ ದಿನಗಳ ಹಿಂದೆ ವರದಕ್ಷಿಣೆ ಕಿರುಕುಳ ಆರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಬೇರೆ ಯುವತಿ ಜೊತೆ ಅಫೇರ್ ಇಟ್ಟುಕೊಂಡು ನನ್ನನ್ನು ಹಿಂಸಿಸುತ್ತಿದ್ದಾನೆ ಎಂದು ಪತಿ ಧರ್ಮ ಮಹೇಶ್ ವಿರುದ್ಧ ಆರೋಪ ಮಾಡಿದ್ದರು. ಆಗ ಆ ಯುವತಿ ಯಾರು ಎಂದು ಹೇಳಿರಲಿಲ್ಲ. ಧರ್ಮ ಹಾಗೂ ರಿತು ನಿಜಕ್ಕೂ ರಿಲೇಷನ್‌ಶಿಪ್‌ನಲ್ಲಿ ಇದ್ದಾರಾ? ಅಥವಾ ಡ್ರಗ್ಸ್ ತೆಗೆದುಕೊಳ್ಳಲು ಭೇಟಿ ಆಗಿದ್ರಾ? ಎಂದು ಚರ್ಚೆ ನಡೀತಿದೆ.

'ಸಿಂಧೂರಂ' ಹಾಗೂ 'ಡ್ರಿಂಕರ್ ಸಾಯಿ' ಎಂಬ ಸಿನಿಮಾಗಳಲ್ಲಿ ಧರ್ಮ ಮಹೇಶ್ ನಟಿಸಿದ್ದರು. 2019ರಲ್ಲಿ ಗೌತಮಿ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಎರಡು ವರ್ಷದ ಹಿಂದೆ ದಂಪತಿ ಗಂಡು ಮಗುವಿನ ಜನ್ಮ ನೀಡಿದ್ದರು. ಅದರ ಬೆನ್ನಲ್ಲೇ ಕೌಟುಂಬಿಕ ಕಲಹ ವಿಚಾರ ಬೀದಿಗೆ ಬಂದಿತ್ತು. ಇದೀಗ ರಿತು ಚೌಧರಿ ಬಿಗ್‌ಬಾಸ್ ಮನೆ ಒಳಗೆ ಇರುವಾಗ ಗೌತಮಿ ಆರೋಪ ಮಾಡಿದ್ದು ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಕಾದು ನೋಡಬೇಕಿದೆ.

ಬಿಗ್‌ಬಾಸ್ ತೆಲುಗು ಸೀಸನ್ 9 ಸೆಪ್ಟೆಂಬರ್ 7ರಂದು ಶುರುವಾಗಿತ್ತು. ಈಗಾಗಲೇ ಇಬ್ಬರು ಎಲಿಮಿನೇಟ್ ಆಗಿದ್ದಾರೆ. ಈ ಬಾರಿ ಕೂಡ ನಾಗಾರ್ಜುನ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದಾರೆ. ನಟಿ ತನುಜಾ ಪುಟ್ಟಸ್ವಾಮಿ, ಕಾಮಿಡಿಯನ್ ಇಮಾನ್ಯುಯೆಲ್, ನಟ ಭರಣಿ ಶಂಕರ್, ಕೊರಿಯೋಗ್ರಫರ್ ಶಾಸ್ತ್ರಿ ವರ್ಮಾ ಸೇರಿ ಹಲವರು ಈ ಬಾರಿ ದೊಡ್ಮನೆ ಒಳಗೆ ಹೋಗಿದ್ದಾರೆ.

More from Filmibeat

English summary
Affair Row Hits Bigg Boss Telugu 9 as Dharma Mahesh’s Wife Claims Ritu Chaudhary Ruined Her Marriage
Read more about: bigg boss tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X