For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ 'ಆದಿಪುರುಷ್' ಚಿತ್ರದಲ್ಲಿ ಬಿಗ್ ಬಾಸ್ ವಿನ್ನರ್: ಸ್ಪಷ್ಟನೆ ನೀಡಿದ ನಟ

  |

  ಬಾಲಿವುಡ್ ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷೆಯ ಆದಿಪುರುಷ್ ಸಿನಿಮಾದ ಬಗ್ಗೆ ದಿನಕ್ಕೊಂದು ಸುದ್ದಿ ಕೇಳಿಬರುತ್ತಿದೆ. ಚಿತ್ರದಲ್ಲಿ ಆ ಸ್ಟಾರ್ ನಟ ನಟಿಸುತ್ತಾರೆ ಈ ಸ್ಟಾರ್ ನಟಿ ಕಾಣಿಸಿಕೊಳ್ಳುತ್ತಾರೆ ಎಂದು ಆಗಾಗ ಸುದ್ದಿಯಾಗುತ್ತಲೆ ಇದೆ. ಇತ್ತೀಚಿಗೆ ಆದಿಪುರುಷ್ ನಲ್ಲಿ ಬಿಗ್ ಬಾಸ್ ವಿನ್ನರ್ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು.

  ಹಿಂದಿ ಬಿಗ್ ಬಾಸ್ 13 ವಿನ್ನರ್ ಸಿದ್ಧಾರ್ಥ್ ಶುಕ್ಲ ಆದಿಪುರುಷ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿತ್ತು. ರಾವಣ ಮತ್ತು ಮಂಡೋದರಿಯ ಹಿರಿಯ ಮಗನ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು.

  'ರಾಧೆ ಶ್ಯಾಮ್' ವೀಕ್ಷಿಸಿದ ಪ್ರಭಾಸ್: ಪೂಜಾ ಹೆಗ್ಡೆ ಬಗ್ಗೆ ಹೇಳಿದ್ದೇನು?'ರಾಧೆ ಶ್ಯಾಮ್' ವೀಕ್ಷಿಸಿದ ಪ್ರಭಾಸ್: ಪೂಜಾ ಹೆಗ್ಡೆ ಬಗ್ಗೆ ಹೇಳಿದ್ದೇನು?

  ಆದರೀಗ ಈ ಬಗ್ಗೆ ಸ್ವತಃ ನಟ ಸಿದ್ಧಾರ್ಥ್ ಶುಕ್ಲ ಪ್ರತಿಕ್ರಿಯೆ ನೀಡಿದ್ದಾರೆ. ಆದಿಪುರುಷ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿಯನ್ನು ತಳ್ಳಿಹಾಕಿರುವ ಸಿದ್ಧಾರ್ಥ್, ಚಿತ್ರತಂಡದಿಂದ ಯಾರು ಸಂಪರ್ಕ ಮಾಡಿಲ್ಲ ಎಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಿದ್ಧಾರ್ಥ್, 'ಪ್ರಾಮಾಣಿಕವಾಗಿ ನನ್ನನ್ನು ಯಾರು ಸಂಪರ್ಕ ಮಾಡಿಲ್ಲ. ಹಾಗಾಗಿ ಸತ್ಯ ಇದಿಯೋ ಇಲ್ಲವೋ ಎನ್ನುವುದು ನನಗೆ ಗೊತ್ತಿಲ್ಲ' ಎಂದು ಹೇಳುವ ಮೂಲಕ ವದಂತಿಗೆ ಬ್ರೇಕ್ ಹಾಕಿದ್ದಾರೆ.

  ಸಿದ್ಧಾರ್ಥ್ ಸದ್ಯ ಬ್ರೋಕನ್ ಬಟ್ ಬ್ಯೂಟಿಫುಲ್ ಎನ್ನುವ ವೆಬ್ ಸರಣಿಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ಪ್ರಮೋಷನ್ ವೇಳೆ ಆದಿಪುರುಷ್ ಚಿತ್ರದಲ್ಲಿ ನಟಿಸುವ ಬಗ್ಗೆ ಮಾತನಾಡಿದ್ದಾರೆ. ಅಂದಹಾಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಇದೆ ಆದರೆ ಈ ಬಗ್ಗೆಯೂ ಸಿನಿಮಾತಂಡ ಇನ್ನು ಸ್ಪಷ್ಟನೆ ನೀಡಿಲ್ಲ.

  Upendra ಹೆಸರಿಲ್ಲದ Prajakeeya ಪಕ್ಷ ಗೆಲ್ಲುತ್ತಾ?ಇದು ಸಾಧ್ಯಾನಾ? | Uppi's Open Challenge|Filmibeat Kannada

  ಓಂ ರಾವತ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಆದಿಪುರುಷ್ ನಲ್ಲಿ ರಾಮನಾಗಿ ಪ್ರಭಾಸ್ ಕಾಣಿಸಿಕೊಂಡರೆ, ಸೈಫ್ ಅಲಿ ಖಾನ್ ರಾವಣ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ನಟಿ ಕೃತಿ ಸನೂನ್ ಸೀತೆ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಸನ್ನಿ ಸಿಂಗ್ ಲಕ್ಷ್ಮಣ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Bigg Boss winner Sidharth Shukla reaction on Adipurush role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X