Sanjay Dutt: 'ಬಿಗ್‌ಬುಲ್' ಸಂಜು ಎಂಟ್ರಿ: ಸೋತವರಿಗೆ 'ಡಬಲ್' ಶಕ್ತಿ ತುಂಬಲು ಬಂದ ಅಧೀರ

ಬಾಲಿವುಡ್ ನಟ ಸಂಜಯ್ ದತ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಒಂದ್ಕಾಲದಲ್ಲಿ ಹೀರೊ ಆಗಿ ಬಾಲಿವುಡ್‌ನಲ್ಲಿ ಮೆರೆದ ಸಂಜು ಈಗ ಪೋಷಕ ನಟರಾಗಿ ದಕ್ಷಿಣಭಾರತದ ಚಿತ್ರಗಳಲ್ಲೂ ನಟಿಸ್ತಿದ್ದಾರೆ. 'KGF'-2ನಲ್ಲಿ ಅಧೀರನಾಗಿ ಸಂಜಯ್ ದತ್ ಸ್ಯಾಂಡಲ್‌ವುಡ್ ಪ್ರವೇಶಿಸಿದರು. ಇದೀಗ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿಬಿಟ್ಟಿದ್ದಾರೆ. ಇದೀಗ ಮತ್ತೊಂದು ತೆಲುಗು ಚಿತ್ರಕ್ಕೆ ಸಂಜು ಆಯ್ಕೆ ಆಗಿದ್ದಾರೆ.

ರಾಮ್ ಪೋತಿನೇನಿ ಹಾಗೂ ಸೆನ್ಸೇಷನಲ್ ಡೈರೆಕ್ಟರ್ ಪುರಿ ಜಗನ್ನಾಥ್ ಜೋಡಿಯ ಕ್ರೇಜಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ 'ಡಬಲ್ ಇಸ್ಮಾರ್ಟ್' ಶೂಟಿಂಗ್ ಭರದಿಂದ ಸಾಗುತ್ತಿದೆ. ಕಳೆದ ತಿಂಗಳಷ್ಟೇ ಅದ್ಧೂರಿಯಾಗಿ ಹೈದ್ರಾಬಾದ್‌ನಲ್ಲಿ ಸಿನಿಮಾ ಸೆಟ್ಟೇರಿತ್ತು. ಈ ಚಿತ್ರಕ್ಕಾಗಿ ರಾಮ್ ಕಂಪ್ಲೀಟ್ ಲುಕ್ ಬದಲಿಸಿದ್ದು, ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಪುರಿ ಕನೆಕ್ಟ್ಸ್ ಬ್ಯಾನರ್‌ನಡಿ ಸ್ವತಃ ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಸದ್ಯ 'ಡಬಲ್ ಇಸ್ಮಾರ್ಟ್' ಸಿನಿಮಾ ಅಂಗಳಕ್ಕೆ ಬಾಲಿವುಡ್ ನಟ ಸಂಜಯ್ ದತ್ ಎಂಟ್ರಿಯಾಗಿದೆ.

Bigg Bull: Sanjay Dutt joins hands with RaM potineni for Double iSmart

ಸಂಜಯ್ ದತ್ ಇತ್ತೀಚೆಗೆ ಸೌತ್ ಸಿನಿಮಾಗಳದತ್ತ ಚಿತ್ತ ಹರಿಸುತ್ತಿದ್ದಾರೆ. ಸಂಜು ಹುಟ್ಟುಹಬ್ಬದ ಸ್ಪೆಷಲ್ ಆಗಿ 'ಡಬಲ್ ಇಸ್ಮಾರ್ಟ್' ಚಿತ್ರತಂಡ ಸ್ಪೆಷಲ್ ಪೋಸ್ಟರ್ ಬಿಡುಗಡೆ ಮಾಡಿದೆ ಶುಭ ಕೋರಿದೆ. ಗಡ್ಡ ಬಿಟ್ಟು ಬಿಟ್ಟು ಸ್ಟೈಲಿಶ್ ಲುಕ್‌ನಲ್ಲಿ ಸಿಗಾರ್ ಸೇದುತ್ತಾ ರಗಡ್ ಆಗಿ ಅಧೀರ ಕಾಣಿಸಿಕೊಂಡಿದ್ದು, ಈ ಪಾತ್ರಕ್ಕೆ ಬಿಗ್ ಬುಲ್ ಎಂದು ಹೆಸರಿಡಲಾಗಿದೆ. ಸಂಜಯ್ ದತ್‌ನ ಹಿಂದೆಂದೂ ಪ್ರೇಕ್ಷಕರು ನೋಡಿರದ ರೀತಿಯಲ್ಲಿ ತೋರಿಸಲು ನಿರ್ದೇಶಕ ಪುರಿ ಜಗನ್ನಾಥ್ ಪ್ರಯತ್ನಿಸುತ್ತಿದ್ದಾರೆ.

ಅದ್ಧೂರಿ 'ಡಬಲ್ ಇಸ್ಮಾರ್ಟ್'

ಪುರಿ ಜಗನ್ನಾಥ್ ಕಥೆ ಬರೆದು ನಿರ್ದೇಶಿಸುತ್ತಿರುವ 'ಡಬಲ್ ಇಸ್ಮಾರ್ಟ್' ಚಿತ್ರಕ್ಕೆ ಹಾಲಿವುಡ್ ಗಿಯಾನಿ ಜಿಯಾನೆಲ್ಲಿ ಛಾಯಾಗ್ರಹಣವಿದೆ. ಇನ್ನು 'ಲೈಗರ್' ಸಿನಿಮಾದಲ್ಲಿ ಖಳನಾಯಕ ಘರ್ಜಿಸಿದ್ದ ವಿಷು ರೆಡ್ಡಿ ಪುರಿ ಕನೆಕ್ಟ್ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ. ಭಾರೀ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿರಲಿದೆ. ಮುಂದಿನ ವರ್ಷ ಶಿವರಾತ್ರಿ ಹಬ್ಬಕ್ಕೆ ತೆಲುಗು, ತಮಿಳು, ಕನ್ನಡ, ಹಿಂದಿ ಹಾಗೂ‌ ಮಲಯಾಳಂ ಭಾಷೆಗಳಲ್ಲಿ 'ಡಬಲ್ ಇಸ್ಮಾರ್ಟ್' ದರ್ಬಾರ್‌ ಶುರುವಾಗಲಿದೆ. ಇನ್ನುಳಿದ ಕಲಾವಿದರು, ತಂತ್ರಜ್ಞರ ಮಾಹಿತಿ ಮುಂದಿನ ದಿನಗಳಲ್ಲಿ ಸಿಗಲಿದೆ.

Bigg Bull: Sanjay Dutt joins hands with RaM potineni for Double iSmart

ದಕ್ಷಿಣದ ಸಿನಿಮಾಗಳಲ್ಲಿ ಸಂಜು

'KGF'-2 ಚಿತ್ರದಲ್ಲಿ ಅಧೀರನಾಗಿ ಸಂಜಯ್ ದತ್ ಅಬ್ಬರಿಸಿದ್ದರು. ಬಳಿಕ ಈಗ ತಮಿಳಿನ ಲಿಯೋ, ಕನ್ನಡದ 'KD' ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಪ್ರಭಾಸ್ ನಟನೆಯ 'ರಾಜಾ ಡೀಲಕ್ಸ್' ಚಿತ್ರದಲ್ಲಿ ಬಣ್ಣ ಹಚ್ತಾರೆ ಎನ್ನಲಾಗ್ತಿದೆ. ಒಂದ್ಕಾಲದಲ್ಲಿ ದಕ್ಷಿಣದ ಸಿನಿಮಾಗಳ ಕಡೆ ತಿರುಗಿಯೂ ನೋಡದ ಬಾಲಿವುಡ್ ಸ್ಟಾರ್‌ಗಳು ಈಗ ನಟಿಸೋಕೆ ಆರಂಭಿಸಿದ್ದಾರೆ. ಅದರಲ್ಲಿ ಸಂಜಯ್ ದತ್ ಹೆಚ್ಚು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ.

ಗೆಲುವಿಗಾಗಿ ಪೂರಿ ಕರಸತ್ತು

ಪೂರಿ ಜಗನ್ನಾಥ್ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್‌ನಲ್ಲಿ ಬಂದ 'ಲೈಗರ್' ಸಿನಿಮಾ ಕಳೆದ ಹೀನಾಯವಾಗಿ ಸೋಲುಂಡಿತ್ತು. ಒಂದ್ಕಾಲದಲ್ಲಿ ಸ್ಟಾರ್ ನಿರ್ದೇಶಕ ಎನಿಸಿಕೊಂಡಿದ್ದ ಪೂರಿನ ಈಗ ಯಾರು ಕ್ಯಾರೇ ಎನ್ನುತ್ತಿಲ್ಲ. ಹೇಗಾದರೂ ಮಾಡಿ ಕಂಬ್ಯಾಕ್ ಮಾಡಬೇಕು ಎಂದು ಪೂರಿ ಪಣ ತೊಟ್ಟಿದ್ದಾರೆ. ಅದಕ್ಕೆ ಸೂಪರ್ ಹಿಟ್ 'ಇಸ್ಮಾರ್ಟ್ ಶಂಕರ್' ಸೀಕ್ವೆಲ್ ಕೈಗೆತ್ತಿಕೊಂಡಿದ್ದಾರೆ.

ಭಾರೀ ನಷ್ಟ ತಂದಿಟ್ಟ 'ಲೈಗರ್'

ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಲೈಗರ್' ಸಿನಿಮಾ ನಿರ್ಮಾಣವಾಗಿತ್ತು. ನಿರ್ದೇಶನದ ಜೊತೆಗೆ ಪೂರಿ ಜಗನ್ನಾಥ್ ಚಿತ್ರಕ್ಕೆ ಬಂಡವಾಳ ಹಾಕಿದ್ದರು. ಆದರೆ ಸಿನಿಮಾ ಫಸ್ಟ್ ಡೇ ಫಸ್ಟ್ ಶೋನಿಂದಲೇ ನೆಗೆಟಿವ್ ಟಾಕ್ ಪಡೆದುಕೊಂಡಿತ್ತು. ಮತ್ತೆ ಮೇಲೆ ಎಳಲೇಯಿಲ್ಲ. ವಿತರಕರು, ಪ್ರದರ್ಶಕರು ನಷ್ಟ ಅನುಭವಿಸುವಂತಾಯಿತು. ವಿತರಕರು ನಷ್ಟ ಭರಿಸುವಂತೆ ಪೂರಿ ಜಗನ್ನಾಥ್ ಬಳಿ ಕೇಳಿದ್ದರು. ತಡವಾಗಿದ್ದಕ್ಕೆ ಪ್ರತಿಭಟನೆ ನಡೆಸಿದರು. ಒಟ್ಟಾರೆ 'ಲೈಗರ್' ಪೂರಿ ಜೀವನದಲ್ಲಿ ಕಹಿ ನೆನಪಾಗಿ ಉಳಿದು ಬಿಟ್ಟಿದೆ.

More from Filmibeat

English summary
Bigg Bull: Sanjay Dutt On Board for Puri Jagannadh's Double Ismart. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X