twitter
    For Quick Alerts
    ALLOW NOTIFICATIONS  
    For Daily Alerts

    2022ರಲ್ಲಿ ನೂರು ಕೋಟಿ ಕಲೆಕ್ಷನ್ ಮಾಡಿದ್ರೂ ನಷ್ಟ ಅನುಭವಿಸಿ ಮಕಾಡೆ ಮಲಗಿದ ಚಿತ್ರಗಳಿವು!

    |

    2022 ಸಿನಿಮಾ ಕ್ಷೇತ್ರಕ್ಕೆ ಒಂದು ರೀತಿಯ ಸುವರ್ಣ ವರ್ಷ ಎಂದೇ ಹೇಳಬಹುದು. ಈ ವರ್ಷ ಬಿಡುಗಡೆಗೊಂಡ ದೇಶದ ವಿವಿಧ ಚಿತ್ರರಂಗಗಳ ಚಿತ್ರಗಳು ಗಳಿಕೆಯಲ್ಲಿ ಹಾಗೂ ಜನರನ್ನು ಮೆಚ್ಚಿಸುವಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿದವು. ಅದರಲ್ಲಿಯೂ ವಿಶೇಷವಾಗಿ ದಕ್ಷಿಣ ಭಾರತ ಚಿತ್ರರಂಗಗಳ ಚಿತ್ರಗಳು ಗೆದ್ದು ಬೀಗಿವೆ. ವಿಶೇಷವೆಂದರೆ ಈ ವರ್ಷ ಕನ್ನಡ, ತೆಲುಗು ಹಾಗೂ ತಮಿಳು ಈ ಮೂರೂ ಚಿತ್ರರಂಗಗಳೂ ಸಹ ಇಂಡಸ್ಟ್ರಿ ಹಿಟ್ ಚಿತ್ರಗಳನ್ನು ನೀಡಿ ಅಬ್ಬರಿಸಿವೆ.

    ಒಂದೆಡೆ ದಕ್ಷಿಣ ಭಾರತದ ಚಿತ್ರಗಳು ದಕ್ಷಿಣ ಮಾತ್ರವಲ್ಲದೇ ಉತ್ತರ ಭಾರತದ ಬಾಕ್ಸ್ ಆಫೀಸ್‌ನಲ್ಲೂ ಪಾರುಪತ್ಯ ಮೆರೆದಿವೆ. ಹಿಂದಿ ಭಾಷೆಯ ಚಿತ್ರಗಳನ್ನು ನೋಡಲು ಚಿತ್ರಮಂದಿರದತ್ತ ಬಾರದ ಬಾಲಿವುಡ್ ಸಿನಿ ರಸಿಕರನ್ನು ಹಿಂದಿಗೆ ಡಬ್ ಆಗಿದ್ದ ಹಲವಾರು ದಕ್ಷಿಣ ಭಾರತದ ಚಿತ್ರಗಳು ಚಿತ್ರಮಂದಿರಕ್ಕೆ ಕರೆಸುವಲ್ಲಿ ಯಶಸ್ವಿಯಾಗಿದ್ದವು.

    ಹೀಗೆ ಈ ವರ್ಷ ಪ್ಯಾನ್ ಇಂಡಿಯಾ ಟ್ರೆಂಡ್ ಅಡಿಯಲ್ಲಿ ಹಲವಾರು ಚಿತ್ರಗಳು ಬಿಡುಗಡೆಯಾಗಿ ಗೆದ್ದು ಬೀಗಿದ್ದು, ಒಟ್ಟು 30 ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿವೆ. ಹೌದು, ಈ ವರ್ಷ ಭಾರತದ ಎಲ್ಲಾ ಭಾಷೆಯ ಚಿತ್ರಗಳೂ ಸೇರಿದಂತೆ ಒಟ್ಟು 30 ಚಿತ್ರಗಳು ನೂರು ಕೋಟಿ ಗಳಿಕೆ ಮಾಡಿದ್ದು, ಈ ಪೈಕಿ ಕೆಲ ಚಿತ್ರಗಳು ನಷ್ಟವನ್ನು ಅನುಭವಿಸಿವೆ ಎಂಬುದನ್ನು ನಂಬಲೇಬೇಕು. ಹೆಚ್ಚು ಬಜೆಟ್ ಹೂಡಿ ನೂರು ಕೋಟಿ ಗಳಿಸಿದರೂ ನಷ್ಟ ಅನುಭವಿಸಿದ ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ..

    ರಾಧೆ ಶ್ಯಾಮ್

    ರಾಧೆ ಶ್ಯಾಮ್

    ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಾಯಕ ಹಾಗೂ ನಾಯಕಿಯಾಗಿ ಅಭಿನಯಿಸಿದ್ದ ರಾಧೆ ಶ್ಯಾಮ್ ಚಿತ್ರ ಬರೋಬ್ಬರಿ 300 ಕೋಟಿ ವೆಚ್ಚದಲ್ಲಿ ತಯಾರಾಗಿತ್ತು. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್‌ನ ಈ ಚಿತ್ರದ ಕಥೆಯೇ ಜನರಿಗೆ ಇಷ್ಟವಾಗದಿದ್ದ ಕಾರಣ ಪ್ರಭಾಸ್ ಸ್ಟಾರ್‌ಡಂ, ಪೂಜಾ ಹೆಗ್ಡೆ ಗ್ಲಾಮರ್, ಕಣ್ಮನ ತಣಿಸುವ ಗ್ರಾಫಿಕ್ಸ್, ಬಿಜಿಎಂ ಹಾಗೂ ಹಾಡುಗಳು ಚಿತ್ರವನ್ನು ರಕ್ಷಿಸಲು ಆಗಲೇ ಇಲ್ಲ. ಕೊನೆಗೆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 177 ಕೋಟಿ ಗಳಿಸಿ ತನ್ನ ಆಟವನ್ನು ನಿಲ್ಲಿಸಿ ವರ್ಷದ ಡಿಸಾಸ್ಟರ್ ಚಿತ್ರಗಳ ಪಟ್ಟಿ ಸೇರಿತು.

    ವಿಕ್ರಮ್ ವೇದಾ

    ವಿಕ್ರಮ್ ವೇದಾ

    ಜನರು ರಿಮೇಕ್ ಚಿತ್ರಗಳನ್ನು ವಿರೋಧಿಸುತ್ತಿರುವಾಗ ಬಾಲಿವುಡ್‌ ಮಂದಿ ತಮಿಳಿನ ನಾಲ್ಕು ವರ್ಷಗಳ ಹಳೆಯ ಮಾಸ್ಟರ್ ಪೀಸ್ ಚಿತ್ರವಾದ 'ವಿಕ್ರಮ್ ವೇದಾ' ಚಿತ್ರವನ್ನು ಅದೇ ಶೀರ್ಷಿಕೆ ಅಡಿಯಲ್ಲಿ ಈ ವರ್ಷ ರಿಮೇಕ್ ಮಾಡಿ ಕೈಸುಟ್ಟುಕೊಂಡಿದ್ದಾರೆ. ಮೂಲ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕರೇ ಈ ಚಿತ್ರವನ್ನು ನಿರ್ದೇಶಿಸಿದರೂ ಸಹ ಚಿತ್ರ ಗೆಲ್ಲಲಿಲ್ಲ. ಸೈಫ್ ಅಲಿ ಖಾನ್ ಹಾಗೂ ಹೃತಿಕ್ ರೋಷನ್ ಬಗ್ಗೆ ಚಿತ್ರದ ಟ್ರೈಲರ್ ಬಿಡುಗಡೆಯಾದಾಗ ವ್ಯಕ್ತವಾದ ಪ್ರಶಂಸೆ ಚಿತ್ರಮಂದಿರದಲ್ಲಿ ಚಿತ್ರಗಳು ಬಿಡುಗಡೆಯಾದಾಗ ವ್ಯಕ್ತವಾಗಲಿಲ್ಲ. ಹೀಗಾಗಿ 150 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ವಿಕ್ರಮ್ ವೇದಾ ಚಿತ್ರ 135 ಕೋಟಿ ಕಲೆಹಾಕಿ ನಷ್ಟ ಅನುಭವಿಸಿತು.

    ಲಾಲ್ ಸಿಂಗ್ ಛಡ್ಡಾ

    ಲಾಲ್ ಸಿಂಗ್ ಛಡ್ಡಾ

    ಆಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಈ ವರ್ಷ ಮಕಾಡೆ ಮಲಗಿದ ಚಿತ್ರಗಳಲ್ಲೊಂದು. ಚಿತ್ರತಂಡ ಎಷ್ಟೇ ಪ್ರಚಾರದ ಸರ್ಕಸ್ ಮಾಡಿದರೂ ಚಿತ್ರವನ್ನು ಮಾತ್ರ ಉಳಿಸಲಾಗಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬಾಯ್‌ಕಟ್‌ ಅಭಿಯಾನದಡಿಯಲ್ಲಿ ಭಾರೀ ವಿರೋಧ ಎದುರಿಸಿದ ಈ ಚಿತ್ರ 180 ಕೋಟಿ ವೆಚ್ಚದಲ್ಲಿ ತಯಾರಾಗಿ 133 ಕೋಟಿ ಗಳಿಸಿ ಮಕಾಡೆ ಮಲಗಿತು.

    ಗಾಡ್ ಫಾದರ್

    ಗಾಡ್ ಫಾದರ್

    ಚಿರಂಜೀವಿ ಅಭಿನಯದ ಗಾಡ್ ಫಾದರ್ ಚಿತ್ರ ಕೂಡ ಈ ವರ್ಷ ಬಾಕ್ಸ್ ಆಫೀಸ್‌ ವಿಚಾರದಲ್ಲಿ ನಷ್ಟ ಕಂಡ ಚಿತ್ರವೇ. 100 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದ ಈ ಚಿತ್ರ 105 ಕೋಟಿ ಗಳಿಸುವಷ್ಟರಲ್ಲಿ ಸುಸ್ತಾಗಿತ್ತು. ಬಜೆಟ್‌ಗಿಂತ ಹೆಚ್ಚು ಗಳಿಸಿದರೂ ವಿತರಕರಿಗೆ ಬರೋಬ್ಬರಿ 14 ಕೋಟಿ ಶೇರ್ ನಷ್ಟವನ್ನು ಗಾಡ್ ಫಾದರ್ ಉಂಟು ಮಾಡಿತ್ತು. ಈ ಚಿತ್ರ ಮಲಯಾಳಂನ ಲೂಸಿಫರ್ ಚಿತ್ರದ ರಿಮೇಕ್ ಆಗಿತ್ತು.

    English summary
    List of films which became flop even after collecting 100 crore at box office in 2022. Take a look
    Friday, December 2, 2022, 17:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X