RRR ಸಿನಿಮಾದಲ್ಲಿ ಬಳಸಿರುವ ಬೈಕ್ ಯಾರದ್ದು? ಪವನ್ ಕಲ್ಯಾಣ್‌ಗೂ ಬೈಕ್‌ಗೂ ಸಂಬಂಧವೇನು?
ತೆಲುಗಿನ ಬಹುನಿರೀಕ್ಷಿತ 'ಆರ್‌ಆರ್‌ಆರ್' ಸಿನಿಮಾದ ಹೊಸ ಪೋಸ್ಟರ್ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ಹಳೆಯ ಕಾಲದ ಬುಲೆಟ್ ಬೈಕ್ ಮೇಲೆ ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ ಒಟ್ಟಿಗೆ ಹೋಗುತ್ತಿರುವ ಚಿತ್ರವನ್ನು ಪೋಸ್ಟರ್ ಒಳಗೊಂಡಿದೆ.
ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ನಿರ್ವಹಿಸುತ್ತಿರುವ ಪಾತ್ರಗಳ ಬಂಧವನ್ನು ಈ ಪೋಸ್ಟರ್ ಸಾರಿ ಹೇಳುತ್ತಿದೆ. ಪೋಸ್ಟರ್‌ನಲ್ಲಿರುವ ಹಳೆಯ ಬುಲೆಟ್ ಬೈಕ್ ಸಹ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಈ ಪೋಸ್ಟರ್ ಬಳಸಿ ಸೃಷ್ಟಿಸಲಾಗಿರುವ ಹಲವು ಮೀಮ್‌ಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
'ಆರ್‌ಆರ್ಆರ್' ಸಿನಿಮಾದ ಈ ಹೊಸ ಪೋಸ್ಟರ್ ಜೊತೆಗೆ ನಟ ಪವನ್ ಕಲ್ಯಾಣ್ ಹೆಸರೂ ಸಹ ಸೇರಿಕೊಂಡಿದೆ. ಪೋಸ್ಟರ್ ನಲ್ಲಿ ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಸವಾರಿ ಹೊರಟಿರುವ ಬುಲೆಟ್ ಬೈಕ್ ಅಸಲಿಗೆ ಪವನ್ ಕಲ್ಯಾಣ್ ಅವರದ್ದು ಎಂದು ಕೆಲವರು ವಾದಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಫೋಟೊ ಒಂದು ಸಹ ವೈರಲ್ ಆಗಿದೆ.

2008 ರಲ್ಲಿ ಬಿಡುಗಡೆ ಆಗಿದ್ದ 'ಜಲ್ಸಾ' ಸಿನಿಮಾ
'ಆರ್ಆರ್ಆರ್' ಪೋಸ್ಟರ್‌ನಲ್ಲಿ ರಾಮ್ ಚರಣ್ ಹಾಗೂ ಜೂ.ಎನ್‌ಟಿಆರ್ ಸವಾರಿ ಹೊರಟಿರುವ ಬೈಕ್ ಅನ್ನು ಕೆಲವು ವರ್ಷಗಳ ಮೊದಲು ಪವನ್ ಕಲ್ಯಾಣ್ ಸಿನಿಮಾ ಒಂದರಲ್ಲಿ ಬಳಸಿದ್ದರು. 2008 ರಲ್ಲಿ ಬಿಡುಗಡೆ ಆಗಿದ್ದ 'ಜಲ್ಸಾ' ಸಿನಿಮಾದಲ್ಲಿ ಪವನ್ ಕಲ್ಯಾಣ್ ಅದೇ ಮಾದರಿ ಬುಲೆಟ್ ಬೈಕ್ ಅನ್ನು ಬಳಸಿದ್ದರು.

13 ವರ್ಷದ ಹಿಂದೆ ಅದೇ ಬೈಕ್ ಬಳಸಿದ್ದ ಪವನ್ ಕಲ್ಯಾಣ್!
'ಜಲ್ಸಾ' ಸಿನಿಮಾದ ಹಾಡೊಂದರಲ್ಲಿ ಪವನ್ ಕಲ್ಯಾಣ್ ಹಳೆಯ ಬುಲೆಟ್ ಮೇಲೆ ಕುಳಿತಿರುವ ದೃಶ್ಯವೊಂದಿದೆ. ಪವನ್ ಕಲ್ಯಾಣ್ ಕುಳಿತಿರುವ ಬೈಕ್‌ಗೂ 'ಆರ್ಆರ್ಆರ್' ಸಿನಿಮಾದಲ್ಲಿ ಬಳಸಲಾಗಿರುವ ಬೈಕ್‌ಗೂ ಬಹಳ ಸಾಮ್ಯತೆ ಇದೆ. ಎರಡೂ ಬೈಕ್‌ಗಳು ಒಂದೇ ಎನ್ನಲಾಗುತ್ತಿದೆ. 'ಜಲ್ಸಾ' ಸಿನಿಮಾವನ್ನು ತ್ರಿವಿಕ್ರಮ್ ನಿರ್ದೇಶನ ಮಾಡಿದ್ದರು.

ಪ್ರಾಪರ್ಟಿ ಸರಬರಾಜು ಮಾಡುವ ಸಂಸ್ಥೆಗೆ ಸೇರಿದ ಬೈಕ್
ತೆಲುಗು ಪತ್ರಿಕೆಯೊಂದರ ವರದಿಯಂತೆ ತೆಲುಗು ಸಿನಿಮಾಗಳಿಗೆ ಪ್ರಾಪರ್ಟಿಗಳನ್ನು ಸರಬರಾಜು ಮಾಡುವ ಸಂಸ್ಥೆಯೊಂದಕ್ಕೆ ಸೇರಿದ್ದ ಬೈಕ್ ಅದಾಗಿದ್ದು, 'ಆರ್ಆರ್ಆರ್' ಸಿನಿಮಾದ ಕಲಾ ನಿರ್ದೇಶಕರು ಬೈಕ್ ಅನ್ನು ಸಿನಿಮಾಕ್ಕೆ ಬಳಸಿಕೊಂಡಿದ್ದಾರೆ. 'ಜಲ್ಸಾ' ಸಿನಿಮಾಕ್ಕೂ ಅದೇ ಬೈಕ್ ಅನ್ನು ಬಾಡಿಗೆಗೆ ನೀಡಲಾಗಿತ್ತು, ಈಗ 'ಆರ್ಆರ್ಆರ್' ಸಿನಿಮಾಕ್ಕೂ ನೀಡಲಾಗಿದೆ. ಆ ಬೈಕ್ ಚಲಿಸುವ ಸ್ಥಿತಿಯಲ್ಲಿರಲಿಲ್ಲ. 'ಆರ್‌ಆರ್‌ಆರ್' ಸಿನಿಮಾಕ್ಕಾಗಿ ಅದನ್ನು ಚಲಿಸುವ ಸ್ಥಿತಿಗೆ ತರಲಾಗಿದೆ ಎನ್ನಲಾಗಿದೆ.
Recommended Video

ಹಲವು ಮೀಮ್‌ಗಳು ಹರಿದಾಡುತ್ತಿವೆ
ಪವನ್ ಕಲ್ಯಾಣ್ ಹಳೆಯ ಬುಲೆಟ್ ಮೇಲೆ ಕುಳಿತಿರುವ ಚಿತ್ರವನ್ನು 'ಆರ್‌ಆರ್‌ಆರ್' ಸಿನಿಮಾದ ಪೋಸ್ಟರ್‌ನೊಂದಿಗೆ ಕೊಲ್ಯಾಜ್ ಮಾಡಿ ಪವನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆಯೂ ಕೆಲವು ಮೀಮ್‌ಗಳು ಹರಿದಾಡುತ್ತಿದ್ದು, ರಾಮ್ ಚರಣ್, ''ಚಿಕ್ಕಪ್ಪ ನಿಮ್ಮ ಬೈಕ್ ಕೊಡಿ ಸುತ್ತಾಡಿ ಬರುತ್ತೇವೆ'' ಎಂದು ಪವನ್ ಬಳಿ ಕೇಳಿ, ಅದಕ್ಕೆ ಪ್ರತಿಯಾಗಿ ''ಸರಿ ಆದರೆ ಜಾಗೃತೆ'' ಎಂದು ಪವನ್ ಕಲ್ಯಾಣ್ ಹೇಳುತ್ತಿರುವಂತೆ ಮೀಮ್‌ಗಳನ್ನು ಮಾಡಲಾಗಿದೆ.


Click it and Unblock the Notifications











