ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್‌ಗೆ ಚಪ್ಪಲಿ ಸ್ವಾಗತ: BJP MLA ರಾಜಾ ಸಿಂಗ್

ತೆಲುಗಿನ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್‌ ಅವರ ಹೆಸರು ಈಗ ವಿವಾದಲ್ಲಿ ಸಿಲುಕಿ ಕೊಂಡಿದೆ. ದೇವಿಶ್ರೀ ಪ್ರಸಾದ್ ಒಂದು ಸಿನಿಮಾಕ್ಕೆ ಸಂಗೀತ ನೀಡುತ್ತಾರೆ ಅಂದರೆ ಅದುವೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕುತ್ತದೆ. ಇವರ ಡೇಟ್‌ಗಳಿಗಾಗಿ ಹಲವು ಸ್ಟಾರ್‌ ನಟರ ಸಿನಿಮಾಗಳು ಕಾಯುತ್ತವೆ. ಹೀಗಿರುವಾಗ ದೇವಿಶ್ರೀ ಪ್ರಸಾದ್ ತಮ್ಮದೇ ಹಾಡಿನ ಬಗ್ಗೆ ಮಾತನಾಡಿ ವಿವಾದ ಸೃಷ್ಟಿ ಇದ್ದಾರೆ.

ಸದ್ಯ ಪುಷ್ಪ ಸಿನಿಮಾ ರಿಲೀಸ್‌ ಆಗಿದ್ದು, ಎಲ್ಲೆಡೆ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಆದರೆ ಇತ್ತ ಇದೇ ಚಿತ್ರದ ಹಾಡಿನಿಂದಾಗಿ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ವಿವಾದಕ್ಕೆ ಸಿಲುಕಿದ್ದಾರೆ. ಅಂದು ಅವರು ನೀಡಿರುವ ಹೇಳಿಕೆ ಅವರನ್ನು ಸುಳಿಗೆ ಸಿಲುಕಿಸಿದೆ.

ಇತ್ತೀಚೆಗೆ ಪುಷ್ಪ ಚಿತ್ರದ ಸುದ್ದಿ ಗೋಷ್ಟಿಯಲ್ಲಿ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್‌ ಅವರು ಮಾತನಾಡಿದ್ದಾರೆ. ಅವರು ಈ ಚಿತ್ರದಲ್ಲಿ ಸಮಂತಾ ಹೆಜ್ಜೆ ಹಾಕಿದ್ದ ವಿಶೇಷ ಹಾಡಿನ ಬಗ್ಗೆ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದರು. ಐಟಂ ಹಾಡುಗಳು ನನಗೆ ದೇವರ ಹಾಡಿಗೆ ಸರಿ ಸಮ ಎಂದು ಹೇಳಿದ್ದರು.

'ಊ ಅಂಟಾವಾ ಮಾವ' ಹಾಡಿನ ಬಗ್ಗೆ ಮಾತನಾಡಿದ್ದ ದೇವಿಶ್ರೀ ಪ್ರಸಾದ್!

'ಊ ಅಂಟಾವಾ ಮಾವ' ಹಾಡಿನ ಬಗ್ಗೆ ಮಾತನಾಡಿದ್ದ ದೇವಿಶ್ರೀ ಪ್ರಸಾದ್!

ಸುದ್ದಿಗೋಷ್ಟಿಯಲ್ಲಿ ಮಾತಾನಾಡುತ್ತಾ ಪುಷ್ಪ ಚಿತ್ರದ ಐಟಂ ಹಾಡಿನ ಬಗ್ಗೆ ಮಾತನಾಡಿದರು. "ನನಗೆ ಐಟಂ ಹಾಡುಗಳು ದೇವರ ಹಾಡಿದ್ದಂತೆ. ಅಲ್ಲದೆ ಈ ಹಾಡುಗಳು ಧ್ಯಾನದ ಒಂದು ಪ್ರಕಾರ" ಎಂದು ಹೇಳಿದ್ದರು. ದೇವಿ ಶ್ರೀ ಪ್ರಸಾದ್‌ ಈ ರೀತಿಯ ಹೇಳಿಕೆ ಅಚ್ಚರಿ ಮೂಡಿಸಿತ್ತು. ಈಗ ಇದೇ ಹೇಳಿಕೆ ಹಲವರ ಕಣ್ಣು ಕೆಂಪಾಗುವಂತೆ ಮಾಡಿದೆ. ಅವರು ಹೇಳಿಕೆ ಹಿಂಪಡೆದು ಕ್ಷಮೆ ಕೇಳುವಂತೆ ಆಗ್ರಹಿಸಲಾಗುತ್ತಿದೆ.

ದೇವಿಶ್ರೀ ಪ್ರಸಾದ್‌ ಕ್ಷಮೆ ಕೇಳಲೇ ಬೇಕು: ರಾಜಾ ಸಿಂಗ್

ದೇವಿಶ್ರೀ ಪ್ರಸಾದ್‌ ಕ್ಷಮೆ ಕೇಳಲೇ ಬೇಕು: ರಾಜಾ ಸಿಂಗ್

ಇನ್ನು ಈ ವಿಚಾರವಾಗಿ ಬಿಜೆಪಿ ಎಂಎಲ್‌ಎ ರಾಜಾ ಸಿಂಗ್ ಅವರು ಮಾತನಾಡಿದ್ದಾರೆ. "ದೇವಿ ಶ್ರೀ ಪ್ರಸಾದ್‌ ಒಬ್ಬ ಹೆಸರಾಂತ ಸಂಗೀತ ನಿರ್ದೇಶಕ. ಅವರು ಹೇಗೆ ಐಟಂ ಹಾಡುಗಳನ್ನು ದೇವರ ಹಾಡುಗಳಿಗೆ ಹೋಲಿಕೆ ಮಾಡುತ್ತಾರೆ. ಇದು ಅವರಿಗೆ ಅಗತ್ಯ ಇರಲಿಲ್ಲ. ಇದರಿಂದ ಹಲವರಿಗೆ ನೋವು ಉಂಟಾಗಿದೆ. ಹಾಗಾಗಿ ಅವರು ಬೇಷರತ್ತು ಕ್ಷಮೆ ಕೇಳಲೇಬೇಕು. ಇಲ್ಲವಾದಲ್ಲಿ ಅವರಿಗೆ ಚಪ್ಪಲಿಯಿಂದ ಸ್ವಾಗತ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲ ಹಿಂದೂಗಳು ಬಿಸಿ ಮುಟ್ಟಿಸುತ್ತಾರೆ. ತೆಲಂಗಾಣದಲ್ಲಿ ಅವರು ನೆಮ್ಮದಿ ಇಂದ ಇರಲು ಸಾಧ್ಯವಿಲ್ಲ " ಎಂದು ಕೆಂಡಾಮಂಡಲವಾಗಿದದ್ದಾರೆ.

ವಿವಾದದ ಬಗ್ಗೆ ತುಟಿ ಬಿಚ್ಚದ ದೇವಿಶ್ರೀ ಪ್ರಸಾದ್!

ವಿವಾದದ ಬಗ್ಗೆ ತುಟಿ ಬಿಚ್ಚದ ದೇವಿಶ್ರೀ ಪ್ರಸಾದ್!

ಅವರು ಐಟಂ ಹಾಡಿನ ಬಗ್ಗೆ ಹೇಳಿಕೆ ನೀಡಿದ ಬಳಿಕ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಆದರೆ ಅವರು ಮಾತ್ರ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಅಥವ ಅವರು ಹಾಗೆ ಹೇಳಲು ಕಾರಣ ಏನು ಎನ್ನುವುದನ್ನು ಕೂಡ ಹೇಳಿಕೊಂಡಿಲ್ಲ. ಹಾಗಾಗಿ ಈ ವಿವಾದದ ಕಿಡಿ ಹೆಚ್ಚುತ್ತಲೇ ಇದೆ. ಇನ್ನಾದರೂ ದೇವಿಶ್ರೀ ಪ್ರಸಾದ್ ಈ ಬಗ್ಗೆ ಮಾತನಾಡುತ್ತಾರೆ ಎನ್ನುವ ನಿರೀಕ್ಷೆ ಮೂಡಿದೆ.

ಪುಷ್ಪ ಗುಂಗಲ್ಲಿ ದೇವಿಶ್ರೀ ಪ್ರಸಾದ್ !

ಪುಷ್ಪ ಗುಂಗಲ್ಲಿ ದೇವಿಶ್ರೀ ಪ್ರಸಾದ್ !

ದೇವಿ ಶ್ರೀ ಪ್ರಸಾದ್‌ ಸಂಗೀತ ನೀಡಿರುವ ಪುಷ್ಪ ಚಿತ್ರ ರಿಲೀಸ್‌ ಆಗಿದೆ. ಚಿತ್ರದ ಹಾಡುಗಳು ಚಿತ್ರ ರಿಲೀಸ್ ಆಗುವ ಮುನ್ನವೇ ಸೂಪರ್‌ ಹಿಟ್‌ ಆಗಿವೆ. ಶ್ರೀವಲ್ಲಿ, ಏ ಬಿಡ್ಡ, ಸಾಮಿ, ಊ ಅಂಟಾವ ಮಾವ ಹಾಡುಗಳು ಈಗಾಗಲೇ ಸಿನಿ ಪ್ರಿಯರ ಸಾಂಗ್ ಲಿಸ್ಟ್‌ ಸೇರಿವೆ. ಆದರೆ ಏನೋ ಹೇಳಲು ಹೋಗಿ ಇನ್ನೇನೋ ಹೇಳಿ ದೇವಿ ಪ್ರಸಾದ್ ವಿವಾದವನ್ನು ಮೈ ಮೇಲೆ ಎಳೆದು ಕೊಂಡಿದ್ದಾರೆ. ಸದ್ಯ ಪುಷ್ಪ ರಿಲೀಸ್‌ ಆಗಿದ್ದು, ಬಾಕ್ಸಾಫೀಸ್‌ನಲ್ಲಿ ಭರ್ಜರಿ ಬೇಟೆ ಶುರು ಮಾಡಿದೆ.

More from Filmibeat

English summary
BJP MLA Raja Singh Demand Apology From Devi Sri Prasad For comments On Bhakti Song
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X