ಆರು ವರ್ಷಗಳ ನಂತರ ಮತ್ತೆ ಜೊತೆಯಾದ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ, ಐತಿಹಾಸಿಕ ಚಿತ್ರದಲ್ಲಿ ಜಗದ್ವಿಖ್ಯಾತ ಜೋಡಿ

ಸಾಮಾನ್ಯವಾಗಿ ಚಿತ್ರರಂಗದಲ್ಲಿ ಒಂದು ಜೋಡಿ ಯಶಸ್ವಿಯಾದರೆ, ಆ ಜೋಡಿಯನ್ನೇ ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲು ಅನೇಕರು ಮುಂದಾಗುತ್ತಾರೆ.ಪ್ರೇಕ್ಷಕರು ಕೂಡ ತಮ್ಮ ನೆಚ್ಚಿನ ಜೋಡಿಯನ್ನೇ ಮತ್ತೆ ಮತ್ತೆ ತೆರೆಯ ಮೇಲೆ ನೋಡಲು ಬಯಸುತ್ತಾರೆ.ಇದಕ್ಕೆ ಉದಾಹರಣೆ ಎನ್ನುವಂತೆ ಯಶ್-ರಾಧಿಕಾ ಪಂಡಿತ್ ಒಂದಾದ ಮೇಲೊಂದು ಸಿನಿಮಾ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೋಡಿಯನ್ನು ರಿಯಲ್ ಮತ್ತು ರೀಲ್ ಲೈಫ್‌ನಲ್ಲಿ ಕೂಡ ಜನ ಮೆಚ್ಚಿದ್ದಾರೆ.

ಇನ್ನು ಡಾ.ರಾಜ್ ಕುಮಾರ್ ಮತ್ತು ಜಯಂತಿ ಅವರದ್ದು ಆ ಕಾಲದ ದಿ ಬೆಸ್ಟ್ ಜೋಡಿ. 36 ಚಿತ್ರಗಳಲ್ಲಿ ಜೊತೆಯಾಗಿ ಅಭಿನಯಿಸಿದ್ದರು ಇಬ್ಬರು. ಕೇವಲ ಕನ್ನಡ ಮಾತ್ರವಲ್ಲ ಬಾಲಿವುಡ್‌..ಟಾಲಿವುಡ್.. ಕಾಲಿವುಡ್‌ ನಲ್ಲಿ ಕೂಡ ಅನೇಕ ಜೋಡಿಗಳು ಅಭಿಮಾನಿಗಳ ಹೃದಯವನ್ನು ಗೆದ್ದಿವೆ. ಆ ಪೈಕಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಕೂಡ ಒಂದು.

Blockbuster Duo Returns Vijay Deverakonda amp amp Rashmika Mandanna Reteam After 6 Years for VD14

ಹೌದು. ಎಲ್ಲರಿಗೆ ಗೊತ್ತಿರುವಂತೆ ರಶ್ಮಿಕಾ ಮಂದಣ್ಣ ಅವರಿಗೆ ತೆಲುಗು ಚಿತ್ರರಂಗದಲ್ಲಿ ಅಡಿಪಾಯ ಹಾಕಿದ್ದೇ ವಿಜಯ್ ದೇವರಕೊಂಡ. ಇವರಿಬ್ಬರ ಕಾಂಬಿನೇಷನ್‌ನಲ್ಲಿ 2018ರಲ್ಲಿ ಬಂದಿದ್ದ ''ಗೀತ ಗೋವಿಂದಂ'' ಆ ಕಾಲದಲ್ಲಿ ವ್ಯಾಪಕ ಸದ್ದು ಮಾಡಿತ್ತು. ಇಬ್ಬರ ನಡುವೆ ಸಂಬಂಧವನ್ನು ಬೆಸೆಯುವಲ್ಲಿ ಪ್ರಮುಖವಾದ ಪಾತ್ರವನ್ನು ಕೂಡ ನಿರ್ವಹಿಸಿತ್ತು. ತಮ್ಮ ವೃತ್ತಿ ಬದುಕಿನಲ್ಲಿ ಅರ್ಜುನ್ ರೆಡ್ಡಿ ಹೊರತು ಪಡಿಸಿದರೆ ವಿಜಯ್ ದೇವರಕೊಂಡ ಬಹುದೊಡ್ಡ ಗೆಲುವನ್ನೇನಾದರೂ ಕಂಡಿದ್ದರೆ ಅದು ಈ ಚಿತ್ರದಲ್ಲಿಯೇ.

''ಗೀತ ಗೋವಿಂದಂ'' ಚಿತ್ರದ ನಂತರ ಮರು ವರ್ಷವೇ ಅಂದರೆ 2019ರಲ್ಲಿ ವಿಜಯ್ ದೇವರಕೊಂಡ ಮತ್ತೆ ರಶ್ಮಿಕಾ ಮಂದಣ್ಣ ಅವರ ಕೈ ಹಿಡಿದಿದ್ದರು. ಇಬ್ಬರು ''ಡಿಯರ್ ಕಾಮ್ರೇಡ್'' ಎಂಬ ಚಿತ್ರ ಮಾಡಿದ್ದರು.

ಆದರೆ.. ''ಗೀತ ಗೋವಿಂದಂ'' ಮಾಡಿದ ಸದ್ದನ್ನು ಮಾಡುವಲ್ಲಿ ಈ ಚಿತ್ರ ವಿಫಲವಾಯ್ತು. ಆದರೂ ಕೂಡ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಕೆಮೆಸ್ಟ್ರೀಗೆ ಹಲವರು ಮನ ಸೋತಿದ್ದರು. ಅಲ್ಲಿಂದ ಇಲ್ಲಿಯವರೆಗೆ ಈ ಜೋಡಿ ಕಂಡಿದ್ದು ತೆರೆಯ ಹಿಂದೆಯಷ್ಟೇ. ಈ ಕಾರಣಕ್ಕೆ ಅನೇಕರು ಇಬ್ಬರು ಮತ್ತೆ ಒಂದಾಗಿ ಸಿನಿಮಾ ಮಾಡಿ ಎಂಬ ಮನವಿಯನ್ನು ಇಬ್ಬರ ಬಳಿ ಮಾಡುತ್ತಲೇ ಬಂದಿದ್ದರು.

ಆದರೆ ಅದಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಆದರೆ ಈಗ ಕಾಲ ಕೂಡಿ ಬಂದಿದೆ. ಬೆಳ್ಳಿತೆರೆಯ ಮೇಲೆ ಮತ್ತೊಮ್ಮೆ ಮೋಡಿ ಮಾಡಲು ಈ ಜಗದ್ವಿಖ್ಯಾತ ಜೋಡಿ ರೆಡಿಯಾಗಿದೆ. ಹೌದು, ''ಪಿಂಕ್‌ವಿಲ್ಲಾ'' ಈ ಕುರಿತು ವರದಿಯನ್ನು ಮಾಡಿದ್ದು ವಿಜಯ್ ದೇವರಕೊಂಡ ಅವರ ಹದಿನಾಲ್ಕನೇ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿಬ ಆಯ್ಕೆಯಾಗಿದ್ಧಾರೆ.

Blockbuster Duo Returns Vijay Deverakonda amp amp Rashmika Mandanna Reteam After 6 Years for VD14

ಈ ಹಿಂದೆ ವಿಜಯ್ ದೇವರಕೊಂಡ ಅವರಿಗೆ ''ಟ್ಯಾಕ್ಸಿವಾಲಾ'' ಚಿತ್ರವನ್ನು ನಿರ್ದೇಶಿಸಿದ್ದ ರಾಹುಲ್ ಸಂಕೃತ್ಯನ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದ್ದು, 1800ರ ದಶಕದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ನಡೆದ ಕಥೆಯನ್ನು ಈ ಚಿತ್ರ ಹೊಂದಿದೆ ಎಂದು ವರದಿಯಾಗಿದೆ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಪಾತ್ರ ಹಾಗೂ ಪೋಷಾಕು ವಿಭಿನ್ನವಾಗಿರಲಿದ್ದು ಈ ಐತಿಹಾಸಿಕ ಕಥೆ ವಿಜಯ್ ದೇವರಕೊಂಡ ವೃತ್ತಿ ಬದುಕಿನ ಬಹುದೊಡ್ಡ ಚಿತ್ರವಾಗಲಿದೆ ಎಂದು ಕೂಡ ಸದ್ಯ ಹೇಳಲಾಗುತ್ತಿದೆ.

ಇನ್ನು ಫ್ರೆಂಚ್‌ನ ಖ್ಯಾತ ಸಿನಿಮ್ಯಾಟೋಗ್ರಾಫರ್ ಎರಿಕ್ ಗೌಟಿಯರ್ ಈ ಚಿತ್ರವನ್ನು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿಯಲಿದ್ದು, ಬಾಲಿವುಡ್ ಮತ್ತು ಮರಾಠಿ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರಾದ ಅಜಯ್-ಅತುಲ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಹಾಲಿವುಡ್‌ನ ಸೂಪರ್ ಸ್ಟಾರ್‌ ಅರ್ನಾಲ್ಡ್ ಕೂಡ ಈ ಚಿತ್ರದಲ್ಲಿದ್ದಾರೆ ಎನ್ನುವ ಸುದ್ದಿ ಕೂಡ ಸದ್ಯ ಗುಲ್ಲಾಗಿದೆ. ಸದ್ಯದಲ್ಲಿಯೇ ಈ ಚಿತ್ರದ ಕುರಿತು ಇನ್ನುಳಿದ ವಿವರಗಳು ಹೊರ ಬೀಳುವ ನಿರೀಕ್ಷೆಗಳಿವೆ.

More from Filmibeat

English summary
The wait is finally over! Vijay Deverakonda and Rashmika Mandanna, the 'Geetha Govindam' duo, are back together for 'VD14.' Learn what we know about this reunion
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X