For Quick Alerts
  ALLOW NOTIFICATIONS  
  For Daily Alerts

  Breaking: ಸಿನಿಮಾ ಆಗ್ತಿದೆ ರಾಮ್ ಗೋಪಾಲ್ ವರ್ಮ ಜೀವನ

  |

  ವಿವಾದಾತ್ಮಕ ನಿರ್ದೇಶಕ, ನೈಜ ಕಥೆಯಾಧರಿತ ಚಿತ್ರಗಳ ಸರದಾರ, ಬಯೋಪಿಕ್ ಮಾಡೋದ್ರಲ್ಲಿ ಎತ್ತಿ ಕೈ ರಾಮ್ ಗೋಪಾಲ್ ವರ್ಮಾ. ಇತ್ತೀಚಿಗೆ 'ಲಕ್ಷ್ಮೀಸ್ ಎನ್ ಟಿ ಆರ್' ಎಂಬ ಸಿನಿಮಾ ಮಾಡಿ ಆಂಧ್ರದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದರು.

  ಸದ್ಯ, 'ಕಮ್ಮ ರಾಂಜ್ಯಂಲ್ಲೋ ಕಡಪ ರೆಡ್ಡಲೂ' ಸಿನಿಮಾ ಮಾಡಿದ್ದು, ಚಂದ್ರಬಾಬು ನಾಯ್ಡು, ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ರಾಜಕೀಯ ಕುತಂತ್ರಗಳನ್ನು ಬಿಚ್ಚಿಡುತ್ತಿದ್ದಾರೆ.

  ಇಷ್ಟು ದಿನ ಬೇರೆ ಜೀವನವನ್ನ ತೆರೆಮೇಲೆ ಬರುತ್ತಿದ್ದ ವರ್ಮಾ ಅವರ ಜೀವನವೇ ಈಗ ತೆರೆಮೇಲೆ ಬರಲು ಸಜ್ಜಾಗುತ್ತಿದೆ. ಏನಿದು ಚಿತ್ರಜಗತ್ತಿನಲ್ಲಿ ಹೊಸ ಬ್ರೇಕಿಂಗ್ ನ್ಯೂಸ್? ಮುಂದೆ ಓದಿ....

  ಬರಹಗಾರ ರಾಮಲಿಂಗೇಶ್ವರ ರಾವ್ ಪ್ಲಾನ್

  ಬರಹಗಾರ ರಾಮಲಿಂಗೇಶ್ವರ ರಾವ್ ಪ್ಲಾನ್

  ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಜೊತೆ ಬಹುಕಾಲದಿಂದ ಭಿನ್ನಾಭಿಪ್ರಾಯ ಹೊಂದಿರುವ ಬರಹಗಾರ, ಜೊನ್ನವಿತುಲಾ ರಾಮಲಿಂಗೇಶ್ವರ ರಾವ್ ಅವರು, ಆರ್ ಜಿ ವಿ ಕುರಿತು ಬಯೋಪಿಕ್ ಮಾಡಲು ಚಿಂತಿಸಿದ್ದಾರೆ. ಈ ಬೆಳವಣಿಗೆ ಟಾಲಿವುಡ್ ಸಿನಿ ಕ್ಷೇತ್ರದಲ್ಲಿ ಭಾರಿ ಸದ್ದು ಮಾಡ್ತಿದೆ.

  ವರ್ಮಾ ಪಾತ್ರಕ್ಕೆ ನಟ ಸಿಕ್ಕಿ ಆಗಿದೆ

  ವರ್ಮಾ ಪಾತ್ರಕ್ಕೆ ನಟ ಸಿಕ್ಕಿ ಆಗಿದೆ

  ಸದ್ಯ ಚರ್ಚೆಯಾಗುತ್ತಿರುವ ಸುದ್ದಿಯ ಪ್ರಕಾರ, ರಾಮ್ ಗೋಪಾಲ್ ವರ್ಮಾ ಅವರ ಪಾತ್ರವನ್ನ ನಿರ್ವಹಿಸಲು ಸೂಕ್ತ ನಟ ಸಿಕ್ಕಿದ್ದಾನಂತೆ. ಸದ್ಯಕ್ಕೆ ಅವರನ್ನ ಪರಿಚಯಿಸದಿರಲು ನಿರ್ಧರಿಸಿರುವ ರಾಮಲಿಂಗೇಶ್ವರ ರಾವ್ ಶೀಘ್ರದಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರಂತೆ.

  ಆರ್ ಜಿ ವಿ ಗೆ ಟಾಂಗ್ !

  ಆರ್ ಜಿ ವಿ ಗೆ ಟಾಂಗ್ !

  ರಾಮ್ ಗೋಪಾಲ್ ವರ್ಮಾ ಅವರ ಚೊಚ್ಚಲ ಸಿನಿಮಾ 'ಶಿವ' ಚಿತ್ರಕ್ಕೂ ಮೊದಲು ಏನು ಮಾಡುತ್ತಿದ್ದರು ಎನ್ನುವುದರಿಂದ, ಇಲ್ಲಿಯವರೆಗೂ ಎಲ್ಲ ಸಂಗತಿಗಳನ್ನು ಈ ಚಿತ್ರದಲ್ಲಿ ತೋರಿಸಲು ಯೋಜಿಸಿದ್ದಾರೆ. ಪ್ರಚಾರಕ್ಕೆ ವರ್ಮಾ ಹೇಗೆ ಗಿಮಿಕ್ ಮಾಡ್ತಾರೆ ಎನ್ನುವುದು ಈ ಸಿನಿಮಾದ ಹೈಲೈಟ್ ಆಗಿರಲಿದೆಯಂತೆ.

  ಶತ್ರುಗಳಿಂದ ಬೆಂಬಲ

  ಶತ್ರುಗಳಿಂದ ಬೆಂಬಲ

  ರಾಮಲಿಂಗೇಶ್ವರ ರಾವ್ ಅವರು ಈ ಸಿನಿಮಾ ಮಾಡಲು ಕೆಲವು ರಾಜಕೀಯ ನಾಯಕರು ಹಾಗೂ ವರ್ಮಾ ಅವರಿಂದ ತೊಂದರೆಗೆ ಒಳಗಾಗಿರುವ ವ್ಯಕ್ತಿಗಳು ಬೆಂಬಲ ನೀಡುತ್ತಿದ್ದಾರೆ ಎಂಬ ಮಾತಿದೆ. ಈ ಚಿತ್ರಕ್ಕೆ 'ಪಪ್ಪು ವರ್ಮಾ' ಎಂದು ಹೆಸರಿಡಲು ತೀರ್ಮಾನಿಸಿದ್ದಾರಂತೆ. ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ನಿಜಕ್ಕೂ ಸಿನಿಮಾ ಬರುತ್ತಾ? ಆರ್ ಜಿ ವಿ ಈ ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

  English summary
  Writer Jonnavithula Ramalingeswara Rao was planning to make biopic of Ram gopal varma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X