ಹೈದ್ರಾಬಾದ್‌ನಲ್ಲಿ ಅವಘಡ, ಬಾಲಿವುಡ್ ಸ್ಟಾರ್ ಇಮ್ರಾನ್ ಹಶ್ಮಿಗೆ ಗಾಯ. ಹೇಗಿದ್ದಾರೆ ಈಗ...?

ಒಂದು ಕಾಲದಲ್ಲಿ ಸೀರಿಯಲ್ ಕಿಸ್ಸರ್ ಎಂದೇ ಪ್ರಖ್ಯಾತರಾದವರು ಇಮ್ರಾನ್ ಹಶ್ಮಿ. ಮರ್ಡರ್ ಚಿತ್ರದಿಂದ ಆರಂಭವಾಗಿ ಹೆಚ್ಚು ಕಡಿಮೆ ಎರಡು ಡಜನ್ ಚಿತ್ರಗಳಲ್ಲಿ ಮುತ್ತಿನ ಮಳೆ ಹೆಗ್ಗಳಿಕೆ ಇವರದ್ದು. ಆ ನಂತರ ತಮ್ಮ ಈ ಇಮೇಜ್‌ನಿಂದ ಹೊರ ಬರಲು ಇಮ್ರಾನ್ ಹಶ್ಮಿ ಮಾಡಿದ ಸರ್ಕಸ್ ಒಂದೆರಡಲ್ಲ.

ಕೇವಲ ನಾಯಕನ ಪಾತ್ರಕ್ಕೆ ಅಷ್ಟೇ ಸೀಮಿತವಾಗದೇ ಖಳನಾಯಕನ ಪಾತ್ರವನ್ನು ನಿರ್ವಹಿಸಿ ತಮ್ಮ ಅಭಿನಯ ಸಾಮರ್ಥ್ಯವನ್ನು ತೋರಿಸಿದ ಇಮ್ರಾನ್ ಹಶ್ಮಿ ಸದ್ಯಕ್ಕೆ ಉತ್ತರದಿಂದ ದಕ್ಷಿಣಕ್ಕೆ ವಲಸೆ ಬಂದಿದ್ದಾರೆ. ಅಡಿವಿ ಶೇಷ್ ನಾಯಕನಾಗಿ ಅಭಿನಯಿಸುತ್ತಿರುವ ಗೂಡಾಚಾರಿ 2 ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಇಷ್ಟೇ ಅಲ್ಲ ಚಿತ್ರದ ಕಥೆಯನ್ನೂ ಕೂಡ ತಾವೇ ಬರೆದಿದ್ದಾರೆ. ಇತ್ತೀಚೆಗೆ ಈ ಚಿತ್ರದ ಚಿತ್ರೀಕರಣದಲ್ಲಿ ಇಮ್ರಾನ್ ಹಶ್ಮಿ ಗಾಯಗೊಂಡಿದ್ದಾರೆ.

Bollywood Actor Emraan Hashmi Sustains Injury on the Set of Goodachari 2 in Hyderabad

ಹೌದು, ಹೈದ್ರಾಬಾದ್‌ನಲ್ಲಿ ಚಿತ್ರದ ಚಿತ್ರೀಕರಣವನ್ನು ಮಾಡುವಾಗ, ಇಮ್ರಾನ್ ಹಶ್ಮಿ ಮೇಲಿಂದ ಜಿಗಿಯುವ ಸನ್ನಿವೇಶವನ್ನು ಮಾಡುತ್ತಿದ್ದರು. ಈ ಸನ್ನಿವೇಶ ಮಾಡುವಾಗ ಅವಘಡ ನಡೆದಿದ್ದು ಇಮ್ರಾನ್ ಹಶ್ಮಿಗೆ ಪೆಟ್ಟಾಗಿದೆ. ಕುತ್ತಿಗೆಯ ಭಾಗದಲ್ಲಿ ಆಳವಾದ ಗಾಯವಾಗಿ ರಕ್ತ ಚಿಮ್ಮಿದೆ. ಆದರೂ.. ಇಮ್ರಾನ್ ಹಶ್ಮಿ ಚಿತ್ರದ ಚಿತ್ರೀಕರಣ ನಿಲ್ಲದಂತೆ ನೋಡಿಕೊಂಡಿದ್ದಾರೆ. ನಿರ್ಮಾಪಕರ ಹಿತದೃಷ್ಟಿಯಿಂದ ಆಸ್ಪತ್ರೆಗೆ ದಾಖಲಾಗಲು ಮತ್ತು ವಿಶ್ರಾಂತಿ ಪಡೆಯಲು ಹಿಂದೇಟು ಹಾಕಿರುವ ಇಮ್ರಾನ್ ಹಶ್ಮಿ ಪ್ರಥಮ ಚಿಕಿತ್ಸೆಯನ್ನು ಪಡೆದು ಚಿತ್ರದ ಚಿತ್ರೀಕರಣ ಮುಂದುವರೆಸಿದ್ದಾರೆ ಎಂದು ಹೈದ್ರಾಬಾದ್‌ ಮಾಧ್ಯಮಗಳು ವರದಿ ಮಾಡಿವೆ. ಸದ್ಯಕ್ಕೆ ಇಮ್ರಾನ್ ಗೆ ಗಾಯವಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ಬೇಗ ಗುಣಮುಖರಾಗಿ ಎಂದು ಹರಸಿ ಹಾರೈಸುತ್ತಿದ್ದಾರೆ.

ಅಂದ್ಹಾಗೇ ಗೂಡಾಚಾರಿ 2 ಚಿತ್ರವನ್ನು ವಿನಯ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕರಾಗಿ ಇದು ಇವರ ಮೊದಲ ಅನುಭವ. ಇನ್ನೂ ಗೂಡಾಚಾರಿ ಚಿತ್ರದ ಮುಂದುವರೆದ ಭಾಗವಾಗಿರುವ ಈ ಚಿತ್ರದಲ್ಲಿ ನಾಗಚೈತನ್ಯ ಅವರ ಭಾವಿ ಪತ್ನಿ ಶೋಭಿತಾ ಧುಲಿಪಾಲ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಜಗಪತಿ ಬಾಬು ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡುತ್ತಿದ್ಧಾರೆ.

Bollywood Actor Emraan Hashmi Sustains Injury on the Set of Goodachari 2 in Hyderabad

ಇನ್ನೂ ಗೂಡಾಚಾರಿ 2 ಮಾತ್ರವಲ್ಲದೇ ಇಮ್ರಾನ್ ಹಶ್ಮಿ, ಪವನ್ ಕಲ್ಯಾಣ್ ಅಭಿನಯದ 'ಓಜಿ' ಚಿತ್ರದಲ್ಲಿ ಕೂಡ ಆಕ್ಟ್ ಮಾಡುತ್ತಿದ್ದಾರೆ. ಆದರೆ, ಸದ್ಯ ಪವನ್ ಕಲ್ಯಾಣ್ ಆಂಧ್ರದ ಉಪ ಮುಖ್ಯಮಂತ್ರಿಯಾದ ಹಿನ್ನೆಲೆ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗುತ್ತೆ, ಯಾವಾಗ ಬಿಡುಗಡೆಯಾಗುತ್ತೆ ಎನ್ನುವುದು ಸದ್ಯಕ್ಕೆ ಉತ್ತರ ಇರದ ಪ್ರಶ್ನೆಯಾಗಿ ಅನೇಕರನ್ನು ಕಾಡುತ್ತಿದೆ.

ಇನ್ನುಳಿದಂತೆ ಗೂಢಾಚಾರಿ ಆರು ವರ್ಷದ ಹಿಂದೆ ಬಂದಿತ್ತು. ಶಿ ಕಿರಣ್ ಟಿಕ್ಕಾ ನಿರ್ದೇಶನದ ಈ ಸ್ಪೈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಅಡಿವಿ ಶೇಷ್ ಹೀರೊ ಆಗಿ ನಟಿಸಿದ್ದರು. ಯಾವುದೇ ನಿರೀಕ್ಷೆ ಇಲ್ಲದೇ ಬಂದ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಅಂದಾಜು 6 ಕೋಟಿ ರೂ. ಬಜೆಟ್ ಸಿನಿಮಾ 25-30 ಕೋಟಿ ರೂ. ದೋಚಿತ್ತು. ಸದ್ಯ ಗೂಡಚಾರಿ 2 ಚಿತ್ರಕ್ಕೆ 'ಕಾರ್ತೀಕೇಯ- 2', 'ಮೇಜರ್' ಹಾಗೂ 'ಕಾಶ್ಮೀರಿ ಫೈಲ್ಸ್'ನಂತ ಸೂಪರ್ ಹಿಟ್ ಸಿನಿಮಾ ನಿರ್ಮಾಣ ಮಾಡಿರೋ ದೊಡ್ಡ ನಿರ್ಮಾಣ ಸಂಸ್ಥೆಗಳು 'ಗೂಢಚಾರಿ- 2'ಗೆ ಬಂಡವಾಳ ಹೂಡುತ್ತಿವೆ. ಪೀಪಲ್ ಮೀಡಿಯಾ ಫ್ಯಾಕ್ಟರಿ, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಮತ್ತು AK ಎಂಟಟೈನ್ಮೆಂಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಬ್ಯಾನರ್ ನಡಿ ಟಿಜಿ. ವಿಶ್ವಪ್ರಸಾದ್ ಮತ್ತು ಅಭಿಷೇಕ್ ಅಗರ್ ವಾಲ್ ಜಂಟಿಯಾಗಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.

More from Filmibeat

English summary
Actor Emraan Hashmi sustained an injury while performing an action scene for his upcoming film 'Goodachari 2' in Hyderabad. He received a deep cut on his neck and is expected to return to Mumbai early Tuesday."
Read more about: emraan hashmi injury tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X