ಬಾಲಿವುಡ್‌ನ ದೊಡ್ಡ 'ಸ್ಟಾರ್'ಗೆ ಗಾಳ ಹಾಕಿದ ಪ್ರಶಾಂತ್ ನೀಲ್, ತಾರಕ್ ಗೆ ವಿಲನ್ ಯಾರು ?

ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾ ಎಂದರೆ ಅಲ್ಲೊಂದು ಕುತೂಹಲ ಕೌತುಕ ಮನೆ ಮಾಡುತ್ತೆ.'ಕೆಜಿಎಫ್' ಮತ್ತು 'ಸಲಾರ್' ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದ ದಿಕ್ಕು ಬದಲಾಯಿಸಿದ ಕೀರ್ತಿ ನೀಲ್ ಅವರಿಗಿದೆ. ಅವರ ಪ್ರತಿಯೊಂದು ಪ್ರಾಜೆಕ್ಟ್ ಬಗ್ಗೆಯೂ ಈಗ ದೊಡ್ಡ ಮಟ್ಟದ ನಿರೀಕ್ಷೆ ಇರುತ್ತದೆ. ಅವರ ನಿರ್ದೇಶನದ ಬಗ್ಗೆ ಪ್ರೇಕ್ಷಕರಿಗೆ ಅಪಾರ ವಿಶ್ವಾಸ ಇದೆ.

ಸದ್ಯ ನೀಲ್ ಅವರು ಗ್ಲೋಬಲ್ ಸ್ಟಾರ್ ಜೂನಿಯರ್ ಎನ್.ಟಿ.ಆರ್ ಅವರೊಂದಿಗೆ ಮಹತ್ವದ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಟಾಲಿವುಡ್ ನ ದೊಡ್ಡ ಸ್ಟಾರ್ ಮತ್ತು ಸ್ಯಾಂಡಲ್ವುಡ್ನ ಹಿಟ್ ನಿರ್ದೇಶಕರ ಈ ಕಾಂಬಿನೇಷನ್ ಸಖತ್ ಹೈಪ್ ಸೃಷ್ಟಿಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕಾಗಿಯೇ ಎಲ್ಲರೂ ಕಾದು ಕುಳಿತಿದ್ದಾರೆ.

bollywood-sandalwood-mollywood-joins-jr-ntr-prashanth-neels-pan-india-spectacle

ಈ ಹೈ ವೋಲ್ಟೇಜ್ ಚಿತ್ರದ ಕ್ಯಾಸ್ಟಿಂಗ್ ಬಗ್ಗೆ ಒಂದು ದೊಡ್ಡ ಸುದ್ದಿ ಹೊರಬಿದ್ದಿದೆ. ನಿರ್ದೇಶಕ ನೀಲ್ ಅವರು ತಮ್ಮ ಚಿತ್ರದ ಕಲಾವಿದರ ಆಯ್ಕೆಯಲ್ಲಿ ಮತ್ತೊಮ್ಮೆ ವಿಭಿನ್ನವಾಗಿ ಯೋಚಿಸಿದ್ದಾರೆ. ಈ ಚಿತ್ರದಲ್ಲಿ ಮಲ್ಟಿಪಲ್ ಇಂಡಸ್ಟ್ರಿಯ ಮೂವರು ಪ್ರಭಾವಿ ಸ್ಟಾರ್ಗಳು ಸೇರಿಕೊಂಡಿದ್ದಾರೆ. ಇದು ಸಿನಿಮಾದ ಕ್ರೇಜ್ ಅನ್ನು ಮತ್ತಷ್ಟು ಹೆಚ್ಚಿಸಿದೆ.

ಮೆಗಾ ಪ್ರಾಜೆಕ್ಟ್ ಗೆ ವಿಲನ್ ಆಗಿ ಅನಿಲ್ ಕಪೂರ್...

ಪ್ರಶಾಂತ್ ನೀಲ್ ಚಿತ್ರಗಳಲ್ಲಿ ವಿಲನ್ ಪಾತ್ರಗಳು ಎಷ್ಟು ಪವರ್ ಫುಲ್ ಆಗಿರುತ್ತವೆ ಎಂಬುದು ಎಲ್ಲರಿಗೂ ಗೊತ್ತಿದೆ. 'ಕೆಜಿಎಫ್ 2' ಚಿತ್ರದಲ್ಲಿ ಸಂಜಯ್ ದತ್ ಅವರ 'ಅಧೀರ' ಪಾತ್ರವು ಒಂದು ಹೊಸ ಟ್ರೆಂಡ್ ಸೃಷ್ಟಿಸಿತ್ತು. ಇದೀಗ ನೀಲ್ ಮತ್ತೊಮ್ಮೆ ಬಾಲಿವುಡ್‌ನ ಹಿರಿಯ ಸ್ಟಾರ್ ನ ವಿಲನ್ ಪಾತ್ರಕ್ಕೆ ಕರೆ ತರುವ ಪ್ರಯತ್ನ ಮಾಡ್ತಿದ್ದಾರೆ.

ಹೌದು, ವರದಿಗಳ ಪ್ರಕಾರ ಬಾಲಿವುಡ್ ನ ಸ್ಟಾರ್ ನಟ ಅನಿಲ್ ಕಪೂರ್ ಜೂನಿಯರ್ ಎನ್.ಟಿ.ಆರ್ ಎದುರು ಮುಖ್ಯ ವಿಲನ್ ಆಗಿ ಅಬ್ಬರಿಸಲಿದ್ದಾರೆ. ಅನಿಲ್ ಕಪೂರ್ ಅವರಂತಹ ನಟ ವಿಲನ್ ಆಗಿರುವುದು ಸಿನಿಮಾದ ತೂಕವನ್ನು ಹೆಚ್ಚಿಸಿದೆ. ನೀಲ್ ಅವರು ಅನಿಲ್ ಕಪೂರ್ ಅವರನ್ನು ಹೊಸ ಆಯಾಮದಲ್ಲಿ ತೋರಿಸಲಿದ್ದಾರೆ ಎನ್ನಲಾಗಿದೆ. ಸಂಜಯ್ ದತ್ ಯಶಸ್ಸಿನ ನಂತರ ಈ ಆಯ್ಕೆ ಮತ್ತೊಂದು ಮೈಲಿಗಲ್ಲು ಆಗಲಿದೆ.

ಗ್ಲೋಬಲ್ ಸ್ಟಾರ್ ಗೆ ಜೊತೆಯಾದ ಕನ್ನಡತಿ...

ಈ ದೊಡ್ಡ ಚಿತ್ರದಲ್ಲಿ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲಕ್ಕೆ ಹಿಂದೆ ತೆರೆ ಬಿದ್ದಿದೆ. ಕನ್ನಡಿಗರ ಹೆಮ್ಮೆಯ ನಟಿ ರುಕ್ಮಿಣಿ ವಸಂತ್ ಈ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಇದೆ. 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಮೂಲಕ ಎಲ್ಲರ ಮನ ಗೆದ್ದಿದ್ದ ರುಕ್ಮಿಣಿ ವಸಂತ್ ಅವರ ಬೇಡಿಕೆ ಹೆಚ್ಚಿದೆ.

bollywood-sandalwood-mollywood-joins-jr-ntr-prashanth-neels-pan-india-spectacle

ಈಗ ರುಕ್ಮಿಣಿ ಜೂನಿಯರ್ ಎನ್.ಟಿ.ಆರ್ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದು ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಲಿದೆ. ಕನ್ನಡತಿಯೊಬ್ಬರು ಪ್ಯಾನ್ ಇಂಡಿಯಾ ಹೀರೋ ಎದುರು ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಅವರ ಅಭಿನಯದ ಬಗ್ಗೆ ಪ್ರೇಕ್ಷಕರು ಈಗಾಗಲೇ "ಕಾಂತಾರ 1" ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಲಯಾಳಂನ ಸ್ಟಾರ್ ಪವರ್...

ಬಾಲಿವುಡ್ ಮತ್ತು ಸ್ಯಾಂಡಲ್ವುಡ್ ಜೊತೆಗೆ ಈ ಚಿತ್ರಕ್ಕೆ ಮಲಯಾಳಂ ಇಂಡಸ್ಟ್ರಿಯ ಸ್ಟಾರ್ ಟೋವಿನೋ ಥಾಮಸ್ ಸಹ ಸೇರಿಕೊಂಡಿದ್ದಾರೆ. ವೈವಿಧ್ಯಮಯ ಪಾತ್ರಗಳಿಗೆ ಹೆಸರುವಾಸಿಯಾದ ಟೋವಿನೋ ಥಾಮಸ್ ಉಪಸ್ಥಿತಿ ಸಿನಿಮಾದ ಹೈಪ್ ಮತ್ತಷ್ಟು ಹೆಚ್ಚಿಸಿದೆ. ಬಹು ಭಾಷಾ ಕಲಾವಿದರನ್ನು ಒಂದೆಡೆ ಸೇರಿಸುವ ನೀಲ್ ಅವರ ವಿಷನ್ ಮೆಚ್ಚುವಂತದ್ದು.

ಶೂಟಿಂಗ್ ವಿಳಂಬ ಮತ್ತು ಹೊಸ ಬಿಡುಗಡೆ ದಿನಾಂಕ

ಈ ಭರವಸೆಯ ಪ್ರಾಜೆಕ್ಟ್ ಕೆಲವು ಅನಿರೀಕ್ಷಿತ ವಿಳಂಬಗಳನ್ನು ಎದುರಿಸಿದೆ. ಜೂನಿಯರ್ ಎನ್.ಟಿ.ಆರ್ ಶೂಟಿಂಗ್ ನ ಕೆಲವು ಔಟ್ಪುಟ್ ತೃಪ್ತಿ ನೀಡಿಲ್ಲ. ಇದರಿಂದಾಗಿ ಪ್ರಶಾಂತ್ ನೀಲ್ ಸ್ಕ್ರಿಪ್ಟ್ನಲ್ಲಿ ಬದಲಾವಣೆ ಮಾಡಬೇಕಾಯಿತು. ಈ ಕಾರಣದಿಂದ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ . ಈ ಹಿಂದೆ ಜನವರಿಯಲ್ಲಿ ಬಿಡುಗಡೆ ಆಗಬೇಕಿದ್ದ ಚಿತ್ರವು ಈಗ 2026ರ ಜೂನ್ ಗೆ ನಿಗದಿಯಾಗಿದೆ. ವಿ.ಎಫ್.ಎಕ್ಸ್ ಕೆಲಸಕ್ಕೆ ಹೆಚ್ಚು ಸಮಯ ಬೇಕಿರುವುದರಿಂದ ಇದು ಮತ್ತಷ್ಟು ಮುಂದಕ್ಕೆ ಹೋಗುವ ಸಾಧ್ಯತೆಯೂ ಇದೆ. ಈ ಎಲ್ಲಾ ಬೆಳವಣಿಗೆಗಳು ಆದರೂ ಈ ಕಾಂಬಿನೇಷನ್ನ ಸಿನಿಮಾ ಖಂಡಿತಾ ಬಾಕ್ಸ್ ಆಫೀಸ್ನಲ್ಲಿ ಸಖತ್ ಅಬ್ಬರಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

More from Filmibeat

Read more about: prashanth neel jr ntr tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X