ಬಾಕ್ಸಾಫೀಸ್‌ನಲ್ಲಿ ಫ್ಲಾಪ್ ಆದ ಚಿತ್ರವನ್ನ ಯೂಟ್ಯೂಬ್‌ನಲ್ಲಿ ಮುಗಿಬಿದ್ದು ನೋಡಿದ ಜನ; 9 ವರ್ಷದ ನಂತರ ದಾಖಲೆ ಬರೆದ ಸಿನಿಮಾ

ಬೆಳ್ಳಿಪರದೆಯಲ್ಲಿ ಚಿತ್ರವನ್ನು ನೋಡುವ ಮಜಾನೇ ಬೇರೆ. ಆದರೆ ಇಂದು ಕಾಲ ಬದಲಾಗಿದೆ. ಬದಲಾದ ಕಾಲದಲ್ಲಿ ಓಟಿಟಿಯ ಮೂಲಕ ಸಿನಿಮಾ ಮನೆಯ ಲಿವಿಂಗ್ ರೂಮ್‌ವರೆಗೆ ಬಂದಿದೆ. ಆ ಕಾಲದಲ್ಲಿ ಚಿತ್ರವೊಂದು ಚಿತ್ರಮಂದಿರದಲ್ಲಿ ಸೋತರೆ ಕಥೆ ಮುಕ್ತಾಯವಾದಂತೆ ಇತ್ತು.

ಆದರೆ ಇಂದು ಓಟಿಟಿ ಅಥವಾ ಯೂಟ್ಯೂಬ್‌ಗಳ ಮೂಲಕ ಚಿತ್ರಗಳು ಎರಡನೇ ಜನ್ಮ ಪಡೆಯುತ್ತಿವೆ. ಹೀಗೆ ಓಟಿಟಿ ಅಥವಾ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗುವ ಚಿತ್ರಗಳಲ್ಲಿ ಕೆಲ ಚಿತ್ರಗಳು ಹಲವರ ಬದುಕು ಬದಲಿಸಿವೆ. ಚಿತ್ರಮಂದಿರದಲ್ಲಿ ಸೋತ ಚಿತ್ರಗಳಲ್ಲಿ ಕೆಲ ಚಿತ್ರಗಳು ಓಟಿಟಿ/ಯೂಟ್ಯೂಬ್‌ನಲ್ಲಿ ಸದ್ದು ಮಾಡಿವೆ. ಇನ್ನೂ ಕೆಲ ಚಿತ್ರಗಳು ಐತಿಹಾಸಿಕ ದಾಖಲೆಯನ್ನು ಕೂಡ ಬರೆದಿವೆ. ಉದಾಹರಣೆಗೆ ''ಜಯ ಜಾನಕಿ ನಾಯಕ''.

Box Office Disaster to YouTube Legend Jaya Janaki Nayaka Achieves Rare 1-Billion-View Record

ಹೌದು, ''ಜಯ ಜಾನಕಿ ನಾಯಕ''.. 9 ವರ್ಷಗಳ ಹಿಂದೆ ತೆರೆಗೆ ಬಂದಿದ್ದ ಚಿತ್ರ. ಮಾಸ್ ಡೈರೆಕ್ಟರ್ ಬೋಯಪಾಟಿ ಶ್ರೀನು ನಿರ್ದೇಶನದ ಈ ಚಿತ್ರದಲ್ಲಿ ಬೆಲ್ಲಂಕೊಂಡ ಶ್ರೀನಿವಾಸ್ ಮತ್ತು ರಕುಲ್ ಪ್ರೀತ್ ಸಿಂಗ್ ನಾಯಕ-ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು. ಬಿಡುಗಡೆಯ ಮುನ್ನ ಈ ಚಿತ್ರದ ಮೇಲೆ ಅಪಾರವಾದ ನಿರೀಕ್ಷೆಗಳಿದ್ದವು.

ಆದರೆ .. ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಬೋರಲು ಬಿತ್ತು. ನಿರ್ಮಾಪಕರಿಗೆ ಹಾಕಿದ ಬಂಡವಾಳ ಕೂಡ ಬರಲಿಲ್ಲ. ಆದರೆ ಆ ನಂತರ ನಡೆದಿದ್ದು ಪವಾಡ. ಪ್ಯಾನ್ ಇಂಡಿಯಾದ ಈ ಕಾಲದಲ್ಲಿ 9 ವರ್ಷದ ಹಿಂದೆಯೇ ಚಿತ್ರವನ್ನು ಹಿಂದಿಗೆ ಡಬ್ ಮಾಡಿ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಯ್ತು. ''ಜಯ ಜಾನಕಿ ನಾಯಕ ಖೂನ್ಖಾರ್'' ಎಂಬ ಹೆಸರಿನಲ್ಲಿ ಅಪ್‌ಲೋಡ್ ಮಾಡಲಾಯ್ತು.

ಇಲ್ಲಿಂದ ಲೆಕ್ಕಾಚಾರವೆಲ್ಲವೂ ಬದಲಾಯ್ತು. ದಿನಗಳು ಉರುಳಿದಂತೆ ಆಯಸ್ಕಾಂತದಂತೆ ಎಲ್ಲರನ್ನು ಅದರಲ್ಲಿಯೂ ಉತ್ತರ ಭಾರತದ ಪ್ರೇಕ್ಷಕರನ್ನು ಈ ಚಿತ್ರ ಸೆಳೆಯತೊಡಗಿತು. ಚಿತ್ರದಲ್ಲಿನ ಆಕ್ಷನ್ ಸಿಕ್ವೆನ್ಸ್, ಭಾವನಾತ್ಮಕ ಸನ್ನಿವೇಶಕ್ಕೆ ಹಲವರು ಮನ ಸೋತರು.

ಇದೆಲ್ಲದಕ್ಕೆ ಕೈಗನ್ನಡಿ ಎಂಬಂತೆ ನೋಡ..ನೋಡುತ್ತಾ ಈ ಚಿತ್ರ ಈಗ ಯೂಟ್ಯೂಬ್‌ನಲ್ಲಿ ಚರಿತ್ರೆ ಸೃಷ್ಟಿಸಿದೆ. 1 ಬಿಲಿಯನ್ (100 ಕೋಟಿಗೂ ಅಧಿಕ) ವೀಕ್ಷಣೆಯನ್ನು ಪಡೆದಿದೆ. ನೆನಪಿರಲಿ.. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಈ ಸಾಧನೆ ಮಾಡಲು ಯಾರಿಂದಲೂ ಕೂಡ ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಅಸಾಧ್ಯವಾದದ್ದನ್ನು ಸಾಧ್ಯವನ್ನಾಗಿಸಿದೆ ''ಜಯ ಜಾನಕಿ ನಾಯಕ ಖೂನ್ಖಾರ್''.

box-office-disaster-to-youtube-legend-jaya-janaki-nayaka-achieves-rare-1-billion-view-record

ಸಂಭ್ರಮದ ಅಲೆಯಲ್ಲಿ ರಕುಲ್ ಪ್ರೀತ್ ಸಿಂಗ್

ಸಹಜವಾಗಿ ತಮ್ಮ ಚಿತ್ರಕ್ಕೆ ಸಿಕ್ಕ ಈ ಪ್ರತಿಕ್ರಿಯೆಯಿಂದ ರಕುಲ್ ಪ್ರೀತ್ ಸಿಂಗ್ ಪುಳಕಿತರಾಗಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಖುಷಿ ಹಂಚಿಕೊಂಡಿರುವ ರಕುಲ್ , ಕೆಲವು ಪಾತ್ರಗಳು ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಬಿಡುತ್ತವೆ. ಅಂಥ ಪಾತ್ರಗಳಲ್ಲಿ 'ಜಾನಕಿ' ಯಾವಾಗಲೂ ನನಗೆ ಅತ್ಯಂತ ವಿಶೇಷ. ನಮ್ಮ ''ಜಯ ಜಾನಕಿ ನಾಯಕ'' ಚಿತ್ರವನ್ನು ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಭಾರತೀಯ ಸಿನಿಮಾವನ್ನಾಗಿ ಮಾಡಿದ್ದಕ್ಕಾಗಿ ಪ್ರೇಕ್ಷಕರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಉತ್ತರ ಭಾರತದಲ್ಲಿ ಬೆಲ್ಲಂಕೊಂಡ ಶ್ರೀನಿವಾಸ್ ಕ್ರೇಜ್

''ಜಯ ಜಾನಕಿ ನಾಯಕ'' ಚಿತ್ರದ ಕಥಾನಾಯಕ ಬೆಲ್ಲಂಕೊಂಡ ಶ್ರೀನಿವಾಸ್‌ಗೆ ಉತ್ತರ ಭಾರತದಲ್ಲಿ ಪ್ರೇಕ್ಷಕರ ವಲಯ ಇದೆ. ಇವರ ಚಿತ್ರಗಳು ಅಲ್ಲಿ ಚಿತ್ರಮಂದಿರಗಳಲ್ಲಿ ಓಡಿದರಬಹುದು. ಆದರೆ ಇವರ ಚಿತ್ರವನ್ನು ಡಬ್ ಮಾಡಿ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದರೆ ಲಕ್ಷಾಂತರ ವ್ಯೂವ್ಸ್ ಕನ್ಫರ್ಮ್‌.

ಇದಕ್ಕೆ ಕೈಗನ್ನಡಿ ಎಂಬಂತೆ ಕೇವಲ ''ಜಯ ಜಾನಕಿ ನಾಯಕ'' ಮಾತ್ರ ಅಲ್ಲ. ಇವರ ಹಿಂದಿನ ಸಾಹಸ ಪ್ರಧಾನ ಚಿತ್ರಗಳಾದ ''ಕವಚಂ''.. ''ಸೀತಾ''..ಮತ್ತು ''ರಾಕ್ಷಸುಡು'' ಚಿತ್ರದ ಹಿಂದಿ ಡಬ್ಡ್ ವರ್ಷನ್‌ಗಳು ಕೂಡ ಯೂಟ್ಯೂಬ್‌ನಲ್ಲಿ ಲಕ್ಷಾಂತರ ವೀಕ್ಷಣೆಯನ್ನು ಪಡೆದಿವೆ. ಆದರೆ ''ಜಯ ಜಾನಕಿ ನಾಯಕ'' ಚಿತ್ರ ಈ ಎಲ್ಲಾ ಚಿತ್ರಗಳ ದಾಖಲೆಯನ್ನು ಪುಡಿಪುಡಿ ಮಾಡಿದೆ.

''ಜಯ ಜಾನಕಿ ನಾಯಕ''ದ ಈ ಅಭೂತಪೂರ್ವ ಸಾಧನೆ, ಚಿತ್ರಂಗದಲ್ಲಿ ಚಿತ್ರದ ಭವಿಷ್ಯ ನಿರ್ಧಾರವಾಗಲ್ಲ. ಗಲ್ಲಾಪೆಟ್ಟಿಗೆಯ ಗಳಿಕೆ ಮಾತ್ರ ಚಿತ್ರದ ಸೋಲು ಗೆಲುವು ನಿರ್ಧಾರ ಮಾಡಲ್ಲ. ಬದಲಿಗೆ ಡಿಜಿಟಲ್ ಯುಗದಲ್ಲಿ ಯಾವತ್ತು ಬೇಕಾದರೂ ಎಂತಹ ಪವಾಡ ಕೂಡ ನಡೆಯಬಹುದು, ಥಿಯೇಟರ್ ನಲ್ಲಿ ಸೆಳೆಯಲು ವಿಫಲವಾದ ಸಿನಿಮಾ ಸ್ಮಾರ್ಟ್‌ ಫೋನ್‌ಗಳ ಮೂಲಕ ಕಲ್ಟ್ ಕ್ಲಾಸಿಕ್ ಚಿತ್ರವಾಗಿ ಹೊರ ಹೊಮ್ಮಬಹುದು ಎನ್ನುವುದನ್ನು ಸಾಬೀತು ಪಡಿಸಿದೆ.

English summary
From a box office flop to a global YouTube legend! This Telugu action film just shattered records by hitting 1 billion views. Inside the ultimate cinematic redemption.
Read more about: tollywood youtube
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X