For Quick Alerts
  ALLOW NOTIFICATIONS  
  For Daily Alerts

  'ಲೈಗರ್' ಸಿನಿಮಾದಲ್ಲಿ ನಟಿಸಿದ್ದೆ ಮರೆತು ಹೋದ ಮೈಕ್ ಟೈಸನ್: ವಿಡಿಯೋ ವೈರಲ್!

  |

  ಟಾಲಿವುಡ್‌ನ ಡೇರಿಂಗ್ ಡೈರೆಕ್ಟರ್ ಪುರಿ ಜಗನ್ನಾಥ್ ಹಾಗೂ ವಿಜಯ್ ದೇವರಕೊಂಡ ಫಸ್ಟ್ ಕಾಂಬಿನೇಷನ್ 'ಲೈಗರ್'. ಈಗಾಗಲೇ ಈ ಸಿನಿಮಾ ಗ್ರ್ಯಾಂಡ್ ಆಗಿ ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ಪುರಿ ಜಗನ್ನಾಥ್, ಚಾರ್ಮಿ, ಕರಣ್ ಜೋಹರ್ ಜಂಟಿಯಾಗಿ ನಿರ್ಮಿಸಿದ್ದರು. ಇದರಲ್ಲಿ ಲೆಜೆಂಡರಿ ಬಾಕ್ಸರ್ ಮೈಕ್ ಟೈಸನ್ ಕೂಡ ನಟಿಸಿದ್ದಾರೆ.

  'ಲೈಗರ್' ಸಿನಿಮಾ ರಿಲೀಸ್ ಆದ ಬಳಿಕ ಮೈಕ್ ಟೈಸನ್ ನಟನೆ ಪಾತ್ರವು ಚೆನ್ನಾಗಿಲ್ಲ ಎಂದು ಪ್ರೇಕ್ಷಕರು ಬಹಿರಂಗವಾಗಿಯೇ ಟೀಕಿಸಿದ್ದಾರೆ. ಈ ಸಿನಿಮಾದಲ್ಲಿ ಮೈಕ್ ಟೈಸನ್ ಪಾತ್ರವನ್ನು ಮರೆತುಬಿಡುವುದೇ ಉತ್ತಮ ಎಂದು ಕಿಡಿಕಾರಿದ್ದಾರೆ. ಅದರಲ್ಲೂ ಮೈಕ್‌ ಟೈಸನ್ ವೀಡಿಯೋ ನೋಡಿದ ಮೇಲಂತೂ ನಿಜವಾಗಿಯೂ ನೀವು 'ಲೈಗರ್' ಸಿನಿಮಾದಲ್ಲಿ ಇದ್ದೀರಾ ಅನ್ನೋದನ್ನೇ ಪ್ರೇಕ್ಷಕರು ಮರೆತು ಬಿಟ್ಟಿದ್ದಾರೆ.

  ವಿಜಯ್ ನೀನು 'ಕೊಂಡ' ಅಲ್ಲ 'ಅನಕೊಂಡ': 'ಲೈಗರ್' ಬಾಲ ಮುದುರಿಕೊಂಡಿದ್ದೇ ನಿನ್ನ‌ ಹುಚ್ಚಾಟದಿಂದ..!ವಿಜಯ್ ನೀನು 'ಕೊಂಡ' ಅಲ್ಲ 'ಅನಕೊಂಡ': 'ಲೈಗರ್' ಬಾಲ ಮುದುರಿಕೊಂಡಿದ್ದೇ ನಿನ್ನ‌ ಹುಚ್ಚಾಟದಿಂದ..!

  'ಲೈಗರ್‌' ಮೇಲೆ ಭಾರೀ ನಿರೀಕ್ಷೆ ಇತ್ತು

  'ಲೈಗರ್‌' ಮೇಲೆ ಭಾರೀ ನಿರೀಕ್ಷೆ ಇತ್ತು

  ಟಾಲಿವುಡ್‌ನ ಮಾಸ್ ಡೈರೆಕ್ಟರ್ ಪುರಿ ಜಗನ್ನಾಥ್ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಒಟ್ಟಿಗೆ ಸೇರಿದ್ದಲ್ಲಿಂದ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಹುಟ್ಟಿಕೊಂಡಿತ್ತು. ಅದರಲ್ಲೂ 'ಲೈಗರ್' ಅಂತ ಹೆಸರಿಟ್ಟ ಬಳಿಕ ಆ ಕ್ರೇಜ್ ಮತ್ತಷ್ಟು ಹೆಚ್ಚಾಗಿತ್ತು. ಲೆಜೆಂಡರಿ ಬಾಕ್ಸರ್ ಮೈಕ್ ಟೈಸನ್ ನಟಿಸುತ್ತಾರೆ ಅಂದಾಗ ಜನರು ಥ್ರಿಲ್ ಆಗಿದ್ದರು. ಇನ್ನು ಸಿನಿಮಾ ಟೀಸರ್, ಟ್ರೈಲರ್ ರಿಲೀಸ್ ಆದಾಗ ಸಿನಿಮಾ ಜಾದು ಮಾಡೇ ಮಾಡುತ್ತೆ ಎನ್ನಲಾಗಿತ್ತು.

  'ಲೈಗರ್' ಹೀರೊ ವಿಜಯ್ ದೇವರಕೊಂಡ ಜೊತೆ ಯೂಟ್ಯೂಬರ್ ನಿಹಾರಿಕಾ ಫೈಟ್: ವಿಡಿಯೋ ವೈರಲ್!'ಲೈಗರ್' ಹೀರೊ ವಿಜಯ್ ದೇವರಕೊಂಡ ಜೊತೆ ಯೂಟ್ಯೂಬರ್ ನಿಹಾರಿಕಾ ಫೈಟ್: ವಿಡಿಯೋ ವೈರಲ್!

  ಟೈಸನ್ ಪಾತ್ರ ಕಾಮಿಡಿಯಾಗಿದೆ

  ಟೈಸನ್ ಪಾತ್ರ ಕಾಮಿಡಿಯಾಗಿದೆ

  ಹಲವು ನಿರೀಕ್ಷೆಗಳನ್ನು ಹೊತ್ತು 'ಲೈಗರ್' ರಿಲೀಸ್ ಆಗಿತ್ತು. ತೆಲುಗು ಅಷ್ಟೇ ಅಲ್ಲ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲೂ ರಿಲೀಸ್ ಆಗಿತ್ತು. ಆದರೆ ನಿರೀಕ್ಷೆಗಳಿಗೆ ವಿರುದ್ಧವಾಗಿತ್ತು. ಇನ್ನೊಂದು ಕಡೆ ಲೆಜೆಂಡರಿ ಬಾಕ್ಸರ್ ಮೈಕ್ ಟೈಸನ್ ಅನ್ನು ಈ ಸಿನಿಮಾದಲ್ಲಿ ಹಾಸ್ಯಾಸ್ಪದವಾಗಿ ತೋರಿಸಿದ್ದಾರೆಂದು ಪ್ರೇಕ್ಷಕರು ಕಿಡಿಕಾರಿದ್ದರು. ಕಾಮಿಡಿ ಪಾತ್ರ ಮಾಡುವುದಕ್ಕೆ ಮೈಕ್ ಟೈಸನ್ ಬೇಕಿತ್ತಾ? ಬೇರೆ ಯಾರೋ ಕಾಮಿಡಿಯನ್ ಅನ್ನು ಹಾಕಿಕೊಳ್ಳಬಹುದಿತ್ತು ಎಂದು ಶಪಿಸಿದ್ದರು.

  ಆಕ್ಟಿಂಗ್ ಬಿಟ್ಟರೆ ಒಳ್ಳೆಯದು

  ಆಕ್ಟಿಂಗ್ ಬಿಟ್ಟರೆ ಒಳ್ಳೆಯದು

  'ಲೈಗರ್' ಚಿತ್ರದಲ್ಲಿ ಮೈಕ್ ಟೈಸನ್ ನಟನೆಯನ್ನು ನೋಡಿ ಜನರು ಕಿಡಿಕಾರಿದ್ದಾರೆ. ಮೈಕ್ ಟೈಸನ್ ನಟಿಸುವುದನ್ನು ಬಿಟ್ಟರೆ ಒಳ್ಳೆಯದು ಎಂದಿದ್ದಾರೆ. ಅದರಲ್ಲೂ ಇತ್ತೀಚಿಗೆ ಪಾಡ್‌ಕ್ಯಾಸ್ಟ್ ವೀಡಿಯೊವೊಂದರಲ್ಲಿ ಮೈಕ್ ಟೈಸನ್ ಮಾತಿಗಿಳಿಸಿದ್ದರು. ಈ ವೀಡಿಯೊದಲ್ಲಿ ಮೈಕ್ ಟೈಸನ್‌ಗೆ "ಲೈಗರ್‌ನಲ್ಲಿ ನಿಮ್ಮ ಪಾತ್ರವೇನು?" ಎಂದು ಕೇಳಿದ್ದರು. ಇದರಿಂದ ಮೈಕ್ ಟೈಸನ್ ಸ್ವಲ್ಪ ಗೊಂದಲಕ್ಕೊಳಗಿದ್ದರು.

  'ಲೈಗರ್‌'ನಲ್ಲಿ ನಟಿಸಿದ್ದು ನೆನಪೇ ಇಲ್ಲ

  'ಲೈಗರ್‌'ನಲ್ಲಿ ನಟಿಸಿದ್ದು ನೆನಪೇ ಇಲ್ಲ

  ಮೈಕ್ ಟೈಸನ್ ಪ್ರಶ್ನೆಯನ್ನು ಇನ್ನೊಮ್ಮೆ ಕೇಳುವಂತೆ ಹೇಳಿದ್ದರು. ಆಗ ಗೂಗಲ್‌ನಲ್ಲಿ ಹುಡುಕಿ "ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಭಾರತೀಯ ಸ್ಟೋರ್ಟ್ಸ್ ಆಕ್ಷನ್ ಸಿನಿಮಾ ಲೈಗರ್‌ನಲ್ಲಿ ನಟಿಸುತ್ತಿದ್ದಾರೆ" ಎಂದು ಟೈಸನ್ ಓದಿ ಹೇಳಿದ್ದರು. ಆ ಬಳಿಕ ಸಾಕಷ್ಟು ಚರ್ಚೆ ನಡೆಯುತ್ತೆ. 'ಲೈಗರ್' ಅನ್ನೋ ಪ್ರಾಣಿ ಕಡೆಗೆ ಸಾಗುತ್ತೆ. ಹೀಗೆ 'ಲೈಗರ್' ಸಿನಿಮಾ ಬಗ್ಗೆ ಮೈಕ್ ಟೈಸನ್‌ಗೆ ನೆನಪೇ ಇರಲಿಲ್ಲ.

  ನೆನಪಾಗಿದ್ದು ಹೇಗೆ?

  ನೆನಪಾಗಿದ್ದು ಹೇಗೆ?

  ಈ ವಿಡಿಯೋವನ್ನು ನೋಡುತ್ತಿದ್ದರೆ ಮೈಕ್ ಟೈಸನ್‌ಗೆ 'ಲೈಗರ್'ನಲ್ಲಿ ನಟಿಸಿದ್ದು ನೆನಪಿಲ್ಲ ಅನ್ನೋದು ಗೊತ್ತಾಗುತ್ತೆ. ಇದು ಕೆಲವು ದಿನಗಳ ಹಿಂದಿನ ವಿಡಿಯೋ ಆಗಿದ್ದರೂ, ಮೈಕ್ ಟೈಸನ್ ಅಂದು ಹೇಳಿದ ವಿಡಿಯೋ ಈಗ ವೈರಲ್ ಆಗುತ್ತಿದೆ. ಇನ್ನೊಂದು ಕಡೆ ಸಿನಿಮಾ ಪ್ರಚಾರದ ವೇಳೆ ಮೈಕ್ ಟೈಸನ್ ಮನವೊಲಿಸಲು ಚಾರ್ಮಿ ತುಂಬಾ ಕಷ್ಟಪಟ್ಟಿದ್ದಾರೆ ಎಂದು ಪುರಿ ಜಗನ್ನಾಥ್ ಹಲವು ಸಂದರ್ಭಗಳಲ್ಲಿ ಹೇಳಿದ್ದರು. ಇಷ್ಟೆಲ್ಲಾ ನೋಡಿದ ಮೇಲೆ ಯಾಕೆ ಅಷ್ಟು ಕಷ್ಟ ಪಟ್ಟರೋ ಅಭಿಮಾನಿಗಳು ಮಾತಾಡಿಕೊಳ್ಳುತ್ತಿದ್ದಾರೆ.

  English summary
  Boxing Icon Mike Tyson Forgot About Acted Vijay Devarakonda Starrer Liger Movie, Know More.
  Tuesday, August 30, 2022, 22:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X