twitter
    For Quick Alerts
    ALLOW NOTIFICATIONS  
    For Daily Alerts

    'ಅಖಂಡ' ಮೂಲಕ ಟಾಲಿವುಡ್‌ನಲ್ಲಿ ಹೊಸ ಇತಿಹಾಸ ಬರೆದ ಬಾಲಯ್ಯ- ಬೋಯಪಾಟಿ ಕಾಂಬಿನೇಷನ್!

    |

    ನಂದಮೂರಿ ಬಾಲಕೃಷ್ಣ-ಬೋಯಪಾಟಿ ಶ್ರೀನು ಕಾಂಬಿನೇಷನ್ ತೆಲುಗು ಚಿತ್ರರಂಗದಲ್ಲಿ ಒಂದು ಕ್ರೇಜಿ ಕಾಂಬಿನೇಷನ್. 'ಅಖಂಡ' ನಂದಮೂರಿ ಬಾಲಕೃಷ್ಣ-ಬೋಯಪಾಟಿ ಶ್ರೀನು ಕಾಂಬಿನೇಷನ್ ಹ್ಯಾಟ್ರಿಕ್ ಚಿತ್ರವಾಗಿದ್ದು, ಚಿತ್ರ ಕೂಡ ಹೊಸದೊಂದು ದಾಖಲೆಯನ್ನು ಬರೆದಿದೆ. ನಂದಮೂರಿ ಬಾಲಕೃಷ್ಣ-ಬೋಯಪಾಟಿ ಶ್ರೀನು ಕಾಂಬಿನೇಶನ್‌ನಲ್ಲಿ ಮೂಡಿಬಂದಿರುವ 'ಸಿಂಹ', 'ಲೆಜೆಂಡ್' ಮತ್ತು 'ಅಖಂಡ' ಚಿತ್ರಗಳು ಹೊಸ ಇತಿಹಾಸವನ್ನೇ ಸೃಷ್ಟಿಸಿವೆ.

    'ಸಿಂಹ', 'ಲೆಜೆಂಡ್', 'ಅಖಂಡ' ಈ ಮೂರು ಚಿತ್ರಗಳು ಬಾಲಯ್ಯ ವೃತ್ತಿ ಜೀವನದ ದೊಡ್ಡ ಬ್ಲಾಕ್‌ಬಸ್ಟರ್‌ಗಳು. ಅಲ್ಲದೆ ಬಾಲಯ್ಯ ಅವರ ವೃತ್ತಿಜೀವನದಲ್ಲಿ ಅತೀ ಹೆಚ್ಚು ಆದಾಯಗಳಿಸಿದ
    ಮೂರು ದೊಡ್ಡ ಚಿತ್ರಗಳು ಸಹ ಇವೇ ಆಗಿವೆ. ಬಾಲಯ್ಯ-ಬೋಯಪಾಟಿ ಕಾಂಬಿನೇಷನ್‌ನ್‌ ಹ್ಯಾಟ್ರಿಕ್ ಹಿಟ್ ಸಾಧನೆ ಮಾಡಿದ್ದು, 'ಅಖಂಡ' 175 ದಿನಗಳನ್ನು ಪೂರೈಸಿ ಈಗ ಹೊಸ ಇತಿಹಾಸವನ್ನು ನಿರ್ಮಿಸಿದೆ.

    ಚಿರಂಜೀವಿ ಹಾಗೂ ಬಾಲಕೃಷ್ಣ ಸಿನಿಮಾಗಳ ಮೇಲೆ ಕಣ್ಣಿಟ್ಟಿದ್ದೇಕೆ ಟಾಲಿವುಡ್‌?ಚಿರಂಜೀವಿ ಹಾಗೂ ಬಾಲಕೃಷ್ಣ ಸಿನಿಮಾಗಳ ಮೇಲೆ ಕಣ್ಣಿಟ್ಟಿದ್ದೇಕೆ ಟಾಲಿವುಡ್‌?

    ಸೂಪರ್ ಹಿಟ್ ಆಗಿತ್ತು 'ಸಿಂಹ'

    ಸೂಪರ್ ಹಿಟ್ ಆಗಿತ್ತು 'ಸಿಂಹ'

    ಏಪ್ರಿಲ್ 30, 2010 ನಂದಮೂರಿ ಬಾಲಕೃಷ್ಣ ನಟ 'ಸಿಂಹ' ನಾಗಿ ಕಾಣಿಸಿಕೊಂಡ ದಿನ. 'ಸಿಂಹ' ಬಿಡುಗಡೆಯಾಗಿ ದಾಖಲೆಗಳನ್ನು ಸೃಷ್ಟಿ ಮಾಡಿತ್ತು. 'ಸಿಂಹ ' ಮೂಲಕ ನಂದಮೂರಿ ಬಾಲಕೃಷ್ಣ ಆಕ್ಷನ್ ಇಮೇಜನ್ನು ಹೊಸ ಅವತಾರದಲ್ಲಿ ತೋರಿಸಿದರು ಬೋಯಪಾಟಿ. ಅದರಲ್ಲೂ ಆ ಚಿತ್ರದ ಒಂದೊಂದು ಡೈಲಾಗ್ ಆ ಸಮಯಕ್ಕೆ ಭಾರೀ ಜನಪ್ರಿಯತೆ ಗಳಿಸಿತ್ತು. ಹೀಗಾಗಿಯೇ 'ಸಿಂಹ' 2010ರ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿತು. 'ಸಿಂಹ' 338 ಕೇಂದ್ರಗಳಲ್ಲಿ 50 ದಿನ ಹಾಗೂ 92 ಕೇಂದ್ರಗಳಲ್ಲಿ 100 ದಿನ ಆಚರಿಸಿ ದಾಖಲೆ ನಿರ್ಮಿಸಿತು. ಅಲ್ಲದೆ ಚಿತ್ರ ಮೂರು ಚಿತ್ರಮಂದಿರಗಳಲ್ಲಿ ಸಿಲ್ವರ್ ಜ್ಯೂಬಿಲಿ ಪ್ರದರ್ಶನವನ್ನು ಕೂಡ ಕಂಡಿತ್ತು.

    ಜೂ.ಎನ್‌ಟಿಆರ್ ಬರ್ತ್‌ಡೇ: NTR 30 ಮೋಷನ್ ಪೋಸ್ಟರ್ ಹೊರಬಿಟ್ಟ ಕೊರಟಾಲ ಶಿವಜೂ.ಎನ್‌ಟಿಆರ್ ಬರ್ತ್‌ಡೇ: NTR 30 ಮೋಷನ್ ಪೋಸ್ಟರ್ ಹೊರಬಿಟ್ಟ ಕೊರಟಾಲ ಶಿವ

    ಲೆಜೆಂಡ್ ಲುಕ್‌ನಲ್ಲಿ ಬಾಲಕೃಷ್ಣ ಮಿಂಚಿಂಗ್

    ಲೆಜೆಂಡ್ ಲುಕ್‌ನಲ್ಲಿ ಬಾಲಕೃಷ್ಣ ಮಿಂಚಿಂಗ್

    'ಸಿಂಹ' ನಂತರ ಬಾಲಯ್ಯ- ಬೋಯಪಾಟಿ ಕಾಂಬಿನೇಷನ್‌ನಲ್ಲಿ ಬಂದ ಎರಡನೆಯ ಚಿತ್ರ 'ಲೆಜೆಂಡ್'. 'ಸಿಂಹ' ಭರ್ಜರಿ ಯಶಸ್ಸಿನ ನಂತರ ಮೂಡಿಬಂದ ಚಿತ್ರವಾದ ಕಾರಣ 'ಲೆಜೆಂಡ್' ಬಗ್ಗೆ ಸಾಕಷ್ಟು ನಿರೀಕ್ಷೆಗಳು ಮೊದಲೇ ಮೂಡಿತ್ತು. ಮಾರ್ಚ್ 28, 2014 ರಂದು ಬಿಡುಗಡೆಯಾದ 'ಲೆಜೆಂಡ್' ಮತ್ತೊಮ್ಮೆ ಸಿನಿಮಾ ರಂಗದಲ್ಲಿ ಹಳೆಯ ದಾಖಲೆಗಳನ್ನು ಮುರಿದು ಹಾಕಿತು. 'ಇತಿಹಾಸ ಸೃಷ್ಟಿಸೋರು ನಾವೇ.. ಇತಿಹಾಸ ಮತ್ತೆ ಬರೆಯುವರೂ ನಾವೇ' ಅಂತ ಬಾಲಯ್ಯ 'ಲೆಜೆಂಡ್'ಲ್ಲಿ ಅಬ್ಬರಿಸಿದ್ದರು. 'ಸಿಂಹ' ಚಿತ್ರದಲ್ಲಿ ದ್ವಿಪಾತ್ರದಲ್ಲಿ ಮಿಂಚಿದ್ದ ಬಾಲಕೃಷ್ಣ ಈ ಚಿತ್ರದಲ್ಲಿ ಜಯದೇವ್ (ಲೆಜೆಂಡ್) ಮತ್ತು ಕೃಷ್ಣ ಪಾತ್ರಗಳಲ್ಲಿ ಮಿಂಚಿದರು. 'ಲೆಜೆಂಡ್' ಬಾಲಯ್ಯ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗುವುದರೊಂದಿಗೆ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿತು. 31 ಕೇಂದ್ರಗಳಲ್ಲಿ 100 ದಿನಗಳು ಮತ್ತು 2 ಕೇಂದ್ರಗಳಲ್ಲಿ ಸಿಲ್ವರ್ ಜ್ಯೂಬಿಲಿ ಪ್ರದರ್ಶನ ಕಂಡ 'ಲೆಜೆಂಡ್' ಬಾಲಯ್ಯ ಕೆರಿಯರ್‌ನಲ್ಲೇ ಅತಿದೊಡ್ಡ ಯಶಸ್ಸಿನ ಚಿತ್ರವಾಯಿತು.

    ಈ ಜೋಡಿಯ ಮೂರನೇ ಸಿನಿಮಾ 'ಅಖಂಡ'

    ಈ ಜೋಡಿಯ ಮೂರನೇ ಸಿನಿಮಾ 'ಅಖಂಡ'

    'ಸಿಂಹ' ಮತ್ತು 'ಲೆಜೆಂಡ್' ಚಿತ್ರಗಳ ಅಪಾರ ಯಶಸ್ಸಿನ ನಂತರ ಬಾಲಯ್ಯ- ಬೋಯಪಾಟಿ ಕಾಂಬಿನೇಶನ್‌ನಲ್ಲಿ ಬಂದ ಚಿತ್ರ 'ಅಖಂಡ'. ಈ ಚಿತ್ರಕ್ಕೆ ತೆಲುಗು ಸಿನಿಮಾ ರಂಗದಲ್ಲಿ ವಿಶೇಷವಾದ
    ಗೌರವವಿದೆ. ಕೊರೊನಾ ಕಾರಣದಿಂದ ಬಹುತೇಕ ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದ ಸಮಯದಲ್ಲಿ, ಚಿತ್ರೋದ್ಯಮ ತೀರ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಬಿಡುಗಡೆಯಾದ ಚಿತ್ರವೇ 'ಅಖಂಡ'. ಮೊದಲಿನಂತೆ ಪ್ರೇಕ್ಷಕರು ಥಿಯೇಟರ್‌ಗೆ ಬರುವುದು ಕಡಿಮೆಯಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಪ್ರೇಕ್ಷಕರನ್ನು ಪ್ರವಾಹದಂತೆ ಥಿಯೇಟರ್‌ಗೆ ಕರೆತಂದವರು ನಂದಮೂರಿ ಬಾಲಕೃಷ್ಣ- ಬೋಯಪಾಟಿ ಶ್ರೀನು. ಇವರಿಬ್ಬರ ಕಾಂಬಿನೇಷನ್‌ನಲ್ಲಿ 2021ರ ಡಿಸೆಂಬರ್ 2 ರಂದು ಹ್ಯಾಟ್ರಿಕ್ ಚಿತ್ರವಾಗಿ ಪ್ರೇಕ್ಷಕರ ಮುಂದೆ ಬಂದ 'ಅಖಂಡ' ಚಿತ್ರಮಂದಿರಗಳಿಗೆ ಗತವೈಭವ ತಂದುಕೊಟ್ಟಿತು.

    ಕನ್ನಡದಲ್ಲಿ ಬಿಡುಗಡೆಯಾದ ಮೊದಲ ಐದು ಟಾಕಿ ಚಿತ್ರಗಳು ಯಾವುವು ಗೊತ್ತೆ?ಕನ್ನಡದಲ್ಲಿ ಬಿಡುಗಡೆಯಾದ ಮೊದಲ ಐದು ಟಾಕಿ ಚಿತ್ರಗಳು ಯಾವುವು ಗೊತ್ತೆ?

    Recommended Video

    ಜಯರಾಜ್‌ನ ನಾನು ಹೊಡ್ದಿರೋದು ಅಲ್ಲ ಅಂತ ತೋರಿಸಿ ಎಂದಿದ್ರು ರೈ | Ravi Srivatsa | Muthappa Rai
    ಪ್ರೇಕ್ಷಕರನ್ನು ಗೆದ್ದ 'ಅಖಂಡ'

    ಪ್ರೇಕ್ಷಕರನ್ನು ಗೆದ್ದ 'ಅಖಂಡ'

    'ಅಖಂಡ' ಮೂಲಕ ಬಾಕ್ಸಾಫೀಸ್‌ನಲ್ಲಿ ಬಾಲಯ್ಯ ಘರ್ಜಿಸಿದರು. A, B, C ಹೀಗೆ ಎಲ್ಲಾ ಕೇಂದ್ರಗಳಲ್ಲಿ ಮತ್ತು ಎಲ್ಲಾ ವರ್ಗದ ಪ್ರೇಕ್ಷಕರನ್ನು ರಂಜಿಸುವುದರಲ್ಲಿ 'ಅಖಂಡ' ಸಫಲವಾಯಿತು. ಚಿತ್ರಮಂದಿರಗಳಲ್ಲಿ ಮತ್ತೆ ವೈಭವವನ್ನು 'ಅಖಂಡ' ತಂದುಕೊಟ್ಟಿತು. ಪ್ರೇಕ್ಷಕರು ಕೂಡ ಧೈರ್ಯವಾಗಿ ಚಿತ್ರಮಂದಿರಗಳ ಕಡೆ ಮುಖ ಮಾಡಿದ್ದು 'ಅಖಂಡ' ಮೂಲಕವೇ. 'ಅಖಂಡ' ಚಿತ್ರದ ಪ್ರದರ್ಶನ ನೋಡಿ ಬೇರೆ ಸಿನಿಮಾಗಳ ನಿರ್ಮಾಪಕರು ಕೂಡ ಚಿತ್ರಗಳನ್ನು ಬಿಡುಗಡೆ ಮಾಡುವ ಧೈರ್ಯವನ್ನು ಮುಂದೆ ತೋರಿದ್ದರು. 'ಅಖಂಡ' ಬಾಲಯ್ಯ ಕೆರಿಯರ್‌ನಲ್ಲಿ ಅತಿ ದೊಡ್ಡ ಹಿಟ್ ಚಿತ್ರ ಎನಿಸಿಕೊಂಡಿದೆ.

    ಕ್ರೇಜಿ ಜೋಡಿಯ ಹ್ರ್ಯಾಟ್ರಿಕ್ ಸಿನಿಮಾ

    ಕ್ರೇಜಿ ಜೋಡಿಯ ಹ್ರ್ಯಾಟ್ರಿಕ್ ಸಿನಿಮಾ

    ಬಾಲಕೃಷ್ಣ 'ಅಖಂಡ' ಚಿತ್ರದಲ್ಲಿ ಮುರಳಿ ಕೃಷ್ಣ ಮತ್ತು ಶಿವನ ದ್ವಿಪಾತ್ರದಲ್ಲಿ ನಟಿಸಿ ಮತ್ತೊಮ್ಮೆ ತಮ್ಮ ನಟನಾ ಚಾತುರ್ಯವನ್ನು ಅಭಿಮಾನಿಗಳಿಗೆ ಉಣಬಡಿಸಿದ್ದಾರೆ. ವಿಶೇಷವಾಗಿ 'ಅಘೋರ' ಪಾತ್ರವನ್ನು ಬಾಲಕೃಷ್ಣ ನಿರ್ವಹಿಸಿದ ರೀತಿ ಅತ್ಯದ್ಭುತವಾದ ವಿಮರ್ಶೆಗೆ ಒಳಗಾಗಿದೆ. 'ಅಖಂಡ' ನೀಡುವ ದೇವಾಲಯಗಳ ಸಂರಕ್ಷಣೆ, ಪ್ರಕೃತಿ, ಧರ್ಮ ಸಂರಕ್ಷಣೆಯ ಸಂದೇಶ ಎಲ್ಲರ ಮನಗೆದ್ದಿದೆ. ಬಾಲಕೃಷ್ಣ-ಬೋಯಪಾಟಿ ಜೋಡಿಯ 'ಅಖಂಡ' ತೆಲುಗು ಇಂಡಸ್ಟ್ರಿಯಲ್ಲಿ ಹೊಸ ದಾಖಲೆಯನ್ನು ಮತ್ತೆ ಬರೆದಿದೆ. 175 ದಿನಗಳ ಸಂಭ್ರಮದೊಂದಿಗೆ ಬ್ಲಾಕ್ ಬಸ್ಟರ್ ಜೊತೆಗೆ ಮೂರನೇ ಸಿಲ್ವರ್ ಜ್ಯೂಬಿಲಿ ಚಿತ್ರವಾಗಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಇದೂವರೆಗೆ ಯಾವುದೇ ಒಬ್ಬ ನಟ ಮತ್ತು ನಿರ್ದೇಶಕನ ಕಾಂಬಿನೇಷನ್‌ನಲ್ಲಿ ಹೀಗೆ ಸತತವಾಗಿ ಮೂರು ಚಿತ್ರಗಳು ಸಿಲ್ವರ್ ಜ್ಯೂಬಿಲಿ ಆಚರಣೆ ಮಾಡಿಕೊಂಡ ಇತಿಹಾಸ ಇಲ್ಲ. ಇಂತಹ ಒಂದು ಹೊಸ ಇತಿಹಾಸವನ್ನು ಬಾಲಯ್ಯ -ಬೋಯಪಾಟಿ ಕಾಂಬಿನೇಶನ್‌ ಸಾಧ್ಯವಾಗಿಸಿದೆ.

    English summary
    boyapati srinu- balayya's combination has crated new history in Tollywood. This crazy combination is delivered hatrick sliver jubilee hits.
    Monday, May 30, 2022, 12:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X