For Quick Alerts
  ALLOW NOTIFICATIONS  
  For Daily Alerts

  #BoycottLigerInKarnataka : ಕರ್ನಾಟಕದಲ್ಲಿ 'ಲೈಗರ್' ಬಾಯ್‌ಕಾಟ್ ಟ್ರೆಂಡ್!

  |

  ಪ್ಯಾನ್ ಸಿನಿಮಾಗಳ ಸಾಲಿನಲ್ಲಿ ದೊಡ್ಡ ಮಟ್ಟದ ಕ್ರೇಜ್ ಹುಟ್ಟು ಹಾಕಿರುವ ಮತ್ತೊಂದು ಸಿನಿಮಾ ಎಂದರೆ ಅದು 'ಲೈಗರ್'. ವಿಜಯ್ ದೇವರಕೊಂಡ ಅಭಿನಯದ 'ಲೈಗರ್' ಸಿನಿಮಾ ತೆರೆಗೆ ಬರಲಿರುವ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾ.

  ಸಿನಿಮಾ ರಿಲೀಸ್ ದಿನಾಂಕ ಹತ್ತಿರ ಆಗುತ್ತಿದ್ದ ಹಾಗೆ, ಸಿನಿಮಾದ ಪ್ರಚಾರ ಕಾರ್ಯವನ್ನು ಸಿನಿಮಾ ತಂಡ ದೊಡ್ಡ ಮಟ್ಟದಲ್ಲಿ ಮಾಡುತ್ತಿದೆ. ಪ್ರಚಾರದ ಭಾಗವಾಗಿ ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ ಮತ್ತು ಇಡೀ ಚಿತ್ರತಂಡ ಭಾರತದಾದ್ಯಂತ ಸುತ್ತುತ್ತಿದೆ.

  'ಪುಷ್ಪ' ಮಾದರಿಯಲ್ಲಿರಲಿದೆ 'ಲೈಗರ್' ಕ್ಲೈಮ್ಯಾಕ್ಸ್!'ಪುಷ್ಪ' ಮಾದರಿಯಲ್ಲಿರಲಿದೆ 'ಲೈಗರ್' ಕ್ಲೈಮ್ಯಾಕ್ಸ್!

  'ಲೈಗರ್' ಸಿನಿಮಾ ತಂಡ ಸದ್ಯ ಪ್ರಚಾರ ಕಾರ್ಯದಲ್ಲಿ ಮುಳಗಿದೆ. ಭಾರತದಾದ್ಯಂತ ಸುದ್ದಿ ಹಲವೆಡೆ ಸಿನಿಮಾ ಪ್ರಚಾರವನ್ನು ಕೈಗೊಂಡಿದೆ. ಇದೇ ಸಲುವಾಗಿ 'ಲೈಗರ್' ಸಿನಿಮಾತಂಡ ಬೆಂಗಳೂರಿಗೆ ಬಂದು ಇಲ್ಲಿಯೂ ಸಿನಿಮಾ ಪ್ರಚಾರ ಮಾಡಿ ಹೋಗಿದೆ. ಇದೇ ಬೆನ್ನಲ್ಲೇ ಈಗ ಬಾಯ್‌ಕಾಟ್ ಲೈಗರ್ ಟ್ರೆಂಡ್ ಆಗುತ್ತಿದೆ.

  'ಲೈಗರ್'ಗೆ ಬಾಯ್‌ಕಾಟ್ ಕಾಟ!

  'ಲೈಗರ್'ಗೆ ಬಾಯ್‌ಕಾಟ್ ಕಾಟ!

  'ಲೈಗರ್' ಸಿನಿಮಾದ ಪ್ರಚಾರದಲ್ಲಿ ನಿರತರಾಗಿರುವ ವಿಜಯ್ ದೇವರಕೊಂಡ, 'ಲಾಲ್ ಸಿಂಗ್ ಚಡ್ಡ' ಸಿನಿಮಾ ಮತ್ತು ಆಮಿರ್ ಖಾನ್ ಅನ್ನು ಬೆಂಬಲಿಸದ ಕಾರಣಕ್ಕೆ ವಿಜಯ್ ದೇವರಕೊಂಡ ಸಿನಿಮಾಕ್ಕೂ ಬಾಯ್‌ಕಾಟ್ ಬಿಸಿ ತಟ್ಟಿದೆ. 'ಲಾಲ್ ಸಿಂಗ್ ಚಡ್ಡ' ಸಿನಿಮಾವನ್ನು ಬಹಿಷ್ಕಾರ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಲಾಗಿದೆ. ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ.

  'ಲೈಗರ್' ಕನ್ನಡದಲ್ಲಿ ಕಡಿಮೆ ಶೋ!

  'ಲೈಗರ್' ಕನ್ನಡದಲ್ಲಿ ಕಡಿಮೆ ಶೋ!

  ಬಾಯ್‌ಕಾಟ್ 'ಲೈಗರ್' ಟ್ರೆಂಟ್ ಈಗ ಇದು ಕರ್ನಾಟದಲ್ಲೂ ಶುರುವಾಗಿದೆ. 'ಲೈಗರ್' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡದಲ್ಲೂ ಕೂಡ ಸಿನಿಮಾ ತೆರೆಗೆ ಬರ್ತಿದೆ. ಆದರೆ ಕನ್ನಡ ಅವತರಣಿಕೆಯ ಶೋಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಹಾಗಾಗಿ 'ಬಾಯ್‌ಕಾಟ್ ಲೈಗರ್ ಇನ್ ಕರ್ನಾಟಕ' ಎನ್ನುವ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗುತ್ತಿದೆ. ಹಾಗಂತಾ ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿಲ್ಲ. ಯಾಕೆಂದರೆ ವಿಜಯ್ ದೇವರಕೊಂಡ ಸಿನಿಮಾಗೆ ಕರ್ನಾಟಕದಲ್ಲೂ ಹೆಚ್ಚಿನ ಕ್ರೇಜ್ ಇದೆ.

  'ಲಾಲ್ ಸಿಂಗ್ ಚಡ್ಡ' ಬಗ್ಗೆ ವಿಜಯ್ ಮಾತು!

  'ಲಾಲ್ ಸಿಂಗ್ ಚಡ್ಡ' ಬಗ್ಗೆ ವಿಜಯ್ ಮಾತು!

  ಸಂದರ್ಶನವೊಂದರಲ್ಲಿ ಮಾತನಾಡಿದ್ದ ವಿಜಯ್ ದೇವರಕೊಂಡ, ''ಸಿನಿಮಾ ಎಂದರೆ ಒಬ್ಬರು ನಟರಿಗೆ ಮಾತ್ರವೇ ಸಂಬಂಧಿಸಿದ್ದಲ್ಲ. 'ಲಾಲ್ ಸಿಂಗ್ ಚಡ್ಡ' ಆಮಿರ್ ಖಾನ್ ಒಬ್ಬರಿಗೇ ಸಂಬಂಧಿಸಿದ್ದಲ್ಲ. ಒಂದು ಸಿನಿಮಾದ ಹಿಂದೆ ಸಾವಿರಾರು ಮಂದಿ ಕೆಲಸ ಮಾಡಿರುತ್ತಾರೆ. ಸಿನಿಮಾ ಒಂದನ್ನು ಬಹಿಷ್ಕರಿಸಿದರೆ ಆ ಎಲ್ಲ ಕುಟುಂಬಗಳಿಗೂ ಸಮಸ್ಯೆ ಆಗುತ್ತದೆ'' ಎಂದಿದ್ದರು. ಜೊತೆಗೆ ಆಮಿರ್ ಖಾನ್ ನಟನೆಯನ್ನು, ಅವರ ಸಿನಿಮಾಗಳನ್ನು ವಿಜಯ್ ದೇವರಕೊಂಡ ಹೊಗಳಿದ್ದರು.

  ಆಗಸ್ಟ್ 25 ರಂದು 'ಲೈಗರ್' ರಿಲೀಸ್!

  ಆಗಸ್ಟ್ 25 ರಂದು 'ಲೈಗರ್' ರಿಲೀಸ್!

  ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆಗೆ ನಾಯಕಿಯಾಗಿ ಅನನ್ಯಾ ಪಾಂಡೆ ನಟಿಸಿದ್ದಾರೆ. ತಾಯಿಯಾಗಿ ರಮ್ಯಕೃಷ್ಣ ನಟಿಸಿದ್ದು ವಿಶೇಷ ಪಾತ್ರವೊಂದರಲ್ಲಿ ಜಗತ್‌ ವಿಖ್ಯಾತ ಬಾಕ್ಸರ್ ಮೈಕ್ ಟೈಸನ್ ನಟಿಸಿದ್ದಾರೆ. ಸಿನಿಮಾವನ್ನು ನಿರ್ದೇಶನ ಮಾಡುವ ಜೊತೆಗೆ ಸಹ ನಿರ್ಮಾಪಕರೂ ಆಗಿದ್ದಾರೆ ಪುರಿ ಜಗನ್ನಾಥ್. ಸಿನಿಮಾವು ಆಗಸ್ಟ್ 25 ರಂದು ಬಿಡುಗಡೆ ಆಗಲಿದೆ.

  English summary
  Boycott Liger In Karnataka trends in twitter as less Kannada version shows screening in Karnataka, Know More,
  Tuesday, August 23, 2022, 12:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X