ಪವನ್ ಕಲ್ಯಾಣ್ 20 ದಿನಕ್ಕೆ 45 ಕೋಟಿ ರೂಪಾಯಿ ಸಂಭಾವನೆ ಪಡೆದ ಸಿನಿಮಾ ಟೈಟಲ್ ರಿವೀಲ್

ಸಿನಿಮಾಗಳು ಗೆದ್ರು, ಸೋತ್ರು ಪವನ್ ಕಲ್ಯಾಣ್ ಕ್ರೇಜ್ ಮಾತ್ರ ಕಮ್ಮಿ ಆಗಲ್ಲ. ಒಂದ್ಕಡೆ ರಾಜಕೀಯರಂಗದಲ್ಲಿ ಆಬ್ಬರಿಸುತ್ತಿರುವ ಜನಸೇನಾನಿ ಸಿನಿಮಾಗಳಲ್ಲೂ ನಟಿಸುತ್ತಿದ್ಧಾರೆ. ಒಂದಲ್ಲ ಎರಡಲ್ಲ 4 ಸಿನಿಮಾಗಳು ಪವರ್ ಸ್ಟಾರ್ ಕೈಯಲ್ಲಿವೆ. ಸದ್ಯ ಪವನ್ ನಟನೆಯ ಹೊಸ ಸಿನಿಮಾವೊಂದರ ಟೈಟಲ್ ರಿವೀಲ್ ಆಗಿದೆ. ಕೆಲವೇ ನಿಮಿಷಗಳಲ್ಲಿ ಈ ಹ್ಯಾಷ್‌ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ.

ತಮಿಳಿನ 'ವಿನೊದಯ ಸಿತಂ' ತೆಲುಗು ರೀಮೆಕ್‌ನಲ್ಲಿ ಪವನ್ ಕಲ್ಯಾಣ್ ಹಾಗೂ ಸಾಯಿ ಧರಮ್ ತೇಜ್ ನಟಿಸಿದ್ದಾರೆ. ಈಗಾಗಲೇ ಈ ಸಿನಿಮಾ ಶೂಟಿಂಗ್ ಕೂಡ ಮುಕ್ತಾಯವಾಗಿದೆ. ತಮಿಳು ನಿರ್ದೇಶಕ ಸಮುದ್ರ ಖನಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರಕ್ಕಾಗಿ ಪವರ್ ಸ್ಟಾರ್ ಕೇವಲ 25 ದಿನ ಮಾತ್ರ ಕಾಲ್‌ಶೀಟ್ ಕೊಟ್ಟಿದ್ದರು. ಸೆಟ್‌ಗಳಲ್ಲಿ ಬಹಳ ಬೇಗ ಚಿತ್ರೀಕರಣ ಮಾಡಿ ಮುಗಿಸಲಾಗಿತ್ತು. ಅಂದಹಾಗೆ ಈ ಚಿತ್ರದಲ್ಲಿ 'ಗೋಪಾಲ ಗೋಪಾಲ' ರೀತಿಯಲ್ಲೇ ಪವನ್ ಮತ್ತೊಮ್ಮೆ ದೇವರ ಪಾತ್ರದಲ್ಲಿ ನಟಿಸಿದ್ದಾರೆ.

Bro The Avatar: Pawan Kalyan and Sai Dharam Tej starrer movie title revealed

'ವಿನೋದಯ ಸಿಥಂ' ಚಿತ್ರದಲ್ಲಿ ಸಮುದ್ರ ಖನಿ ಹಾಗೂ ತಂಬಿ ರಾಮಯ್ಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಒಬ್ಬ ವ್ಯಕ್ತಿಗೆ ದೇವರು ಎರಡನೇ ಅವಕಾಶ ನೀಡಿದರೆ ಏನೆಲ್ಲಾ ಆಗುತ್ತದೆ ಅನ್ನೋದು ಚಿತ್ರದ ಒನ್‌ಲೈನ್ ಸ್ಟೋರಿ. ತೆಲುಗು ನೇಟಿವಿಟಿಗೆ ತಕ್ಕಂತೆ ಕೊಂಚ ಬದಲಿಸಿಕೊಂಡು ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಸಾಯಿ ಧರಮ್ ಬೈಕ್ ಅಪಘಾತದಲ್ಲಿ ಸಾವಿನ ಬಾಗಿಲು ತಟ್ಟಿ ಬಂದಿದ್ದು ಗೊತ್ತೇಯಿದೆ. ಅದನ್ನು ಲಿಂಕ್ ಮಾಡಿ ಈ ಸಿನಿಮಾ ಮಾಡಿರುವ ಸಾಧ್ಯತೆಯಿದೆ.

ಚಿತ್ರಕ್ಕೆ ಟೈಟಲ್ ಫಿಕ್ಸ್ 'ಬ್ರೋ'

ಒಂದೊಳ್ಳೆ ಟೈಟಲ್‌ಗಾಗಿ ಚಿತ್ರತಂಡ ಬಹಳ ಹುಡುಕಾಟ ನಡೆಸಿತ್ತು. ಫೈನಲಿ ಚಿತ್ರಕ್ಕೆ 'ಬ್ರೋ' ದಿ ಅವತಾರ್‌ ಎಂದು ನಾಮಕರಣ ಮಾಡಲಾಗಿದೆ. ಟೈಟಲ್ ಸಮೇತ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಪೋಸ್ಟರ್‌ನಲ್ಲಿ ಗಡಿಯಾರ, ಶಿವನ ರೂಪದ ಹಿನ್ನೆಲೆಯಲ್ಲಿ ಪವನ್ ಸ್ಟೈಲಿಶ್ ಲುಕ್‌ನಲ್ಲಿ ಕೈ ಚಾಚಿ ನಿಂತಿರುವ ಲುಕ್ ರಿವೀಲ್ ಆಗಿದೆ. ಇನ್ನು ಎಸ್‌. ತಮನ್ ಬಿಜಿಎಂ ಮೋಷನ್ ಪೋಸ್ಟರ್‌ ಖದರ್ ಹೆಚ್ಚಿಸಿದೆ.

ಟ್ರೆಂಡಿಂಗ್‌ನಲ್ಲಿ 'ಬ್ರೋ'

ಸದ್ಯ ಟೈಟಲ್ ರಿವೀಲ್ ಆಗುತ್ತಿದ್ದಂತೆ 'ಬ್ರೋ' ದಿ ಅವತಾರ್‌ ಹ್ಯಾಷ್‌ಟ್ಯಾಗ್‌ ಟ್ರೆಂಡ್ ಆಗುತ್ತಿದೆ. ಪವನ್ ಕಲ್ಯಾಣ್ ಕ್ರೇಜ್ ಎಂಥದ್ದು ಅಂತ ಮತ್ತೊಮ್ಮೆ ಸಾಬೀತಾಗುತ್ತಿದೆ. ಟ್ವಿಟ್ಟರ್‌ ಟ್ರೆಂಡಿಂಗ್‌ನ ಮೊದಲ ಸ್ಥಾನದಲ್ಲಿದೆ. ಇನ್ನು ಪವನ್ ಸ್ಟೈಲಿಶ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೇ ಪೋಸ್ಟರ್‌ನ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಸ್ ಹಾಗೂ ಮೊಬೈಲ್ ಡಿಸ್‌ಪ್ಲೇಗೆ ಹಾಕಿಕೊಳ್ಳುತ್ತಿದ್ದಾರೆ.

Bro The Avatar: Pawan Kalyan and Sai Dharam Tej starrer movie title revealed

20 ದಿನಕ್ಕೆ 45 ಕೋಟಿ ರೂ. ಸಂಭಾವನೆ

ರಾಜಕೀಯರಂಗದಲ್ಲಿ ಸಕ್ರಿಯರಾಗಿರುವ ಪವನ್ ಕಲ್ಯಾಣ್ ಯಾವುದೇ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ನಿರ್ಮಾಪಕರು ತೀರ ಬೇಡಿಕೆ ಇಟ್ಟರೆ ಭಾರೀ ಸಂಭಾವನೆಗೆ ಕಾಲ್‌ಶೀಟ್ ಕೊಡುತ್ತಿದ್ದಾರೆ. 'ಬ್ರೋ' ಚಿತ್ರಕ್ಕಾಗಿ ಪವನ್ ಕೇವಲ 20ರಿಂದ 22 ದಿನ ಕಾಲ್‌ಶೀಟ್ ಕೊಟ್ಟಿದ್ದರು. ಇದಕ್ಕಾಗಿ ಈ ಚಿತ್ರಕ್ಕಾಗಿ ದಿನಕ್ಕೆ 2 ಕೋಟಿ ರೂ. ಸಂಭಾವನೆ ತೆಗೆದುಕೊಳ್ಳುತ್ತಿದ್ದೇನೆ. ಅಂದರೆ 22 ದಿನಕ್ಕೆ ಅಂದಾಜು 45 ಕೋಟಿ ರೂ." ಎಂದು ಕೆಲ ದಿನಗಳ ಸ್ವತಃ ಹಿಂದೆ ಪವರ್ ಸ್ಟಾರ್ ಬಹಿರಂಗವಾಗಿ ಘೋಷಿಸಿದ್ದರು.

ಜುಲೈ 28ಕ್ಕೆ ಸಿನಿಮಾ ರಿಲೀಸ್

ಕಳೆದ ವರ್ಷ ಪವನ್ ನಟಿಸಿದ್ 'ಭೀಮ್ಲಾ ನಾಯಕ್' ಸಿನಿಮಾ ಹಿಟ್ ಆಗಿತ್ತು. ಬಹಳ ಹಿಂದೆ ಶುರುವಾದ 'ಹರಿಹರ ವೀರಮಲ್ಲು' ಸಿನಿಮಾ ಯಾಕೋ ತಡವಾಗುತ್ತಿದೆ. 'ಓಜಿ' ಹಾಗೂ 'ಉಸ್ತಾದ್ ಭಗತ್ ಸಿಂಗ್' ಸಿನಿಮಾಗಳನ್ನು ಕೂಡ ಜನಸೇನಾನಿ ಒಪ್ಪಿಕೊಂಡಿದ್ದಾರೆ. 'ಬ್ರೋ' ಸಿನಿಮಾ ಟೈಟಲ್ ಜೊತೆಗೆ ರಿಲೀಸ್ ಡೇಟ್ ಕೂಡ ಘೋಷಣೆ ಆಗಿದೆ. ಜುಲೈ 28ಕ್ಕೆ ತೆರೆಮೇಲೆ ಮತ್ತೆ ಪವರ್ ಸ್ಟಾರ್ ಆರ್ಭಟ ಶುರುವಾಗಲಿದೆ.

More from Filmibeat

English summary
Bro The Avatar: Pawan Kalyan and Sai Dharam Tej starrer movie title revealed. Bro is the official Telugu remake of the superhit Tamil film Vinodhaya Sitham. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X