Bro The Avatar Final Collection: ಸೋತ ಮತ್ತೊಂದು ರಿಮೇಕ್; ಪವನ್ ಕಲ್ಯಾಣ್ ಚಿತ್ರಕ್ಕೆ ನಷ್ಟ!

ಸಿನಿ ರಸಿಕರು ಇತ್ತೀಚೆಗೆ ರಿಮೇಕ್ ಚಿತ್ರಗಳಿಂದ ಅತಿ ದೂರ ಸರಿದು ಬಿಟ್ಟಿದ್ದಾರೆ. ದಿಗ್ಗಜ ನಟರೇ ಪರ ಭಾಷೆಯೊಂದರ ಹಿಟ್ ಚಿತ್ರದ ರಿಮೇಕ್‌ನಲ್ಲಿ ನಟಿಸಿದರೂ ಸಹ ಆ ಚಿತ್ರವನ್ನು ನೋಡಲು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮವಾಗಿ ಸ್ಟಾರ್ ನಟರು ನಟಿಸಿದ ರಿಮೇಕ್ ಚಿತ್ರಗಳೂ ಸಹ ಹಿಟ್ ಹಣೆಪಟ್ಟಿ ಪಡೆದುಕೊಳ್ಳಲಾಗದೇ ಸೋಲುಂಡು ಮಕಾಡೆ ಮಲಗಿವೆ.

ಆದರೂ ಸಹ ಕೆಲ ಸ್ಟಾರ್ ನಟರು ರಿಮೇಕ್ ಚಿತ್ರಗಳನ್ನು ಮಾಡುವುದನ್ನು ಬಿಟ್ಟು ಸ್ವಂತ ಕಥೆಯುಳ್ಳ ಸ್ವಮೇಕ್ ಚಿತ್ರಗಳಲ್ಲಿ ನಟಿಸುವತ್ತ ಹೆಜ್ಜೆ ಇಡುತ್ತಿಲ್ಲ. ಇಂತಹ ಸಾಲಿಗೆ ಸೇರುವ ತೆಲುಗು ನಟರೆಂದರೆ ಅದು ಮೆಗಾ ಸ್ಟಾರ್ ಚಿರಂಜೀವಿ ಹಾಗೂ ಪವರ್ ಸ್ಟಾರ್ ಪವನ್ ಕಲ್ಯಾಣ್. ಹೌದು, ಇತ್ತೀಚೆಗೆ ತೆಲುಗಿನಲ್ಲಿ ಅತಿಹೆಚ್ಚು ರಿಮೇಕ್ ಚಿತ್ರಗಳನ್ನು ಮಾಡಿರುವ ನಟರೆಂದರೆ ಈ ಇಬ್ಬರ ಹೆಸರೇ ಕೇಳಿಬರುತ್ತೆ.

Bro the Avatar: Pawan Kalyans another remake film failed at box office

ಸದ್ಯ ಚಿರಂಜೀವಿ ನಟಿಸಿರುವ ರಿಮೇಕ್ ಚಿತ್ರ ಭೋಳ ಶಂಕರ್ ಬಿಡುಗಡೆಯಾದ ಮೊದಲ ದಿನವೇ ನೀರಸ ಪ್ರತಿಕ್ರಿಯೆ ಪಡೆದುಕೊಂಡು ಹೀನಾಯವಾಗಿ ಸೋಲುಂಡಿದೆ. ಇದಕ್ಕೂ ಎರಡು ವಾರಗಳ ಮುಂಚೆ ಬಿಡುಗಡೆಯಾಗಿದ್ದ ಪವನ್ ಕಲ್ಯಾಣ್ ನಟನೆಯ ಬ್ರೋ ಚಿತ್ರ ಸಹ ಬಾಕ್ಸ್ ಆಫೀಸ್‌ನಲ್ಲಿ ಸೋಲುಂಡಿದೆ. ಇನ್ನು ಭೋಳ ಶಂಕರ್ ತಮಿಳಿನ ವೇದಾಲಂ ಚಿತ್ರದ ರಿಮೇಕ್ ಆದರೆ, ಬ್ರೋ ಚಿತ್ರ ತಮಿಳಿನ ವಿನೋದಯ ಸೀತಂ ಚಿತ್ರದ ರಿಮೇಕ್ ಆಗಿದೆ.

ಇನ್ನು ಬ್ರೋ ಚಿತ್ರ ಬಿಡುಗಡೆ ದಿನ 48 ಕೋಟಿ ಹಾಗೂ ಮೊದಲ ವಾರಾಂತ್ಯದ ದಿನಗಳೆರಡರಲ್ಲಿ 40 ಕೋಟಿ ಗಳಿಸಿದ್ದು ಬಿಟ್ಟರೆ ನಂತರದ ದಿನಗಳಲ್ಲಿ ಎರಡಂಕಿ ಕೋಟಿ ಕಲೆಕ್ಷನ್ ಮುಟ್ಟುವಲ್ಲಿ ವಿಫಲಗೊಂಡಿತು. ಚಿತ್ರ 12 ದಿನಗಳ ಓಟಕ್ಕೆ ಸುಸ್ತಾಗಿದ್ದು, ಈ ಅವಧಿಯಲ್ಲಿ 112.40 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಮಾಡಿದ್ದು, ಈ ಪೈಕಿ 66.97 ಕೋಟಿ ರೂಪಾಯಿ ಶೇರ್ ಕಲೆಕ್ಷನ್ ಆಗಿದೆ. ಸಿನಿಮಾ ಲಾಭ ಗಳಿಸಲು ಆರಂಭಿಸಬೇಕೆಂದರೆ 98.50 ಕೋಟಿ ರೂಪಾಯಿ ಶೇರ್ ಕಲೆಕ್ಷನ್ ಮಾಡಬೇಕಿದ್ದು, 31.53 ಕೋಟಿ ಶೇರ್ ಕಲೆಕ್ಷನ್ ಮಾಡಬೇಕಾದ ಅಗತ್ಯವಿದೆ. ಸದ್ಯ ದಿನಕ್ಕೆ ಒಂದು ಕೋಟಿ ಗ್ರಾಸ್ ಕಲೆಕ್ಷನ್ ಮಾಡುವುದಕ್ಕೂ ಕಷ್ಟ ಪಡುತ್ತಿರುವ ಬ್ರೋ ಚಿತ್ರ ಇನ್ನೂ 31.53 ಕಲೆಕ್ಷನ್ ಮಾಡುವುದು ಅಸಾಧ್ಯವೆಂದೇ ಹೇಳಬಹುದಾಗಿದ್ದು, ಈ ಚಿತ್ರ ನಷ್ಟದೊಂದಿಗೆ ತನ್ನ ಓಟವನ್ನು ಮುಕ್ತಾಯಗೊಳಿಸಿದೆ.

More from Filmibeat

English summary
Bro the Avatar: Pawan Kalyan's another remake film failed at box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X