'ಪೆದ್ದಿ' ಚಿತ್ರದಲ್ಲಿ ನಾಯಕಿಯ ಎದೆ, ಸೊಂಟ ತೋರಿಸೋ ದೃಶ್ಯಗಳು; ವಿವಾದದ ಬಗ್ಗೆ ನಿರ್ದೇಶಕ ಪ್ರತಿಕ್ರಿಯೆ

ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ತೆರೆಕಂಡು ಭರ್ಜರಿ ಪ್ರದರ್ಶನ ಕಾಣ್ತಿದೆ. ಮಿಶ್ರಪ್ರತಿಕ್ರಿಯೆ ನಡುವೆಯೂ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಚಿತ್ರದ ಕಾಲಾವಧಿ, ಲಾಜಿಕ್ ಇಲ್ಲದ ದೃಶ್ಯಗಳ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಇನ್ನು ಮುಖ್ಯವಾಗಿ ನಾಯಕಿ ಜಾನ್ವಿ ಕಪೂರ್ ಪಾತ್ರ ಪೋಷಣೆ ಬಗ್ಗೆಯೇ ಅಸಮಾಧಾನ ವ್ಯಕ್ತವಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ. ಈ ಬಗ್ಗೆ ನಿರ್ದೇಶಕ ಬುಚ್ಚಿಬಾಬು ಈಗ ಪ್ರತಿಕ್ರಿಯಿಸಿ ಕ್ಷಮೆ ಯಾಚಿಸಿದ್ದಾರೆ.

ಒಬ್ಬ ಫಿಲ್ಮ್ ಮೇಕರ್ ಆಗಿ ಸಿನಿಮಾ ಪ್ರೇಕ್ಷಕರನ್ನು ರಂಜಿಸಬೇಕು, ಸ್ಫೂರ್ತಿ ತುಂಬಬೇಕು, ಕನೆಕ್ಟ್ ಆಗಬೇಕು ಎಂದು ನಾನು ಭಾವಿಸುತ್ತನೇ. ಆದ್ರೆ ಯಾರಿಗೂ ಅನಾನುಕೂಲ ಅಥವಾ ಅಗೌರವವನ್ನುಂಟು ಮಾಡಬಾರದು. 'ಪೆದ್ದಿ' ಚಿತ್ರದ ಕೆಲವು ದೃಶ್ಯಗಳ ಕುರಿತು ನಾವು ಪ್ರತಿಕ್ರಿಯೆಗಳನ್ನು ಕೇಳಿದ್ದೇವೆ, ಅದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಬುಚ್ಚಿಬಾಬು ಟ್ವೀಟ್ ಮಾಡಿದ್ದಾರೆ.

Buchi Babu Apologizes Amid Criticism Over Janhvi Kapoor s Role in Ram Charan s Peddi

ತೆರೆಮೇಲೆ ಹಾಗೂ ಹೊರಗೆ ಮಹಿಳೆಯರ ಬಗ್ಗೆ ನನಗೆ ಯಾವಾಗಲೂ ಅಪಾರ ಗೌರವವಿದೆ, ಯಾವುದೇ ಮಹಿಳಾ ಪಾತ್ರವನ್ನು ಅಸಭ್ಯವಾಗಿ ನೋಡುವುದು ಅಥವಾ ಅಗೌರವಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಚಿತ್ರದ ಯಾವುದೇ ಭಾಗದಲ್ಲಿ ನಿಮಗೆ ಆ ರೀತಿ ಅನ್ನಿಸಿದ್ದರೆ, ನಾವು ಆ ಭಾವನೆಗಳನ್ನು ಗೌರವಿಸುತ್ತೇವೆ, ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಸಂಬಂಧಪಟ್ಟ ಭಾಗಗಳಲ್ಲಿ ಬದಲಾವಣೆಗಳನ್ನು ಮಾಡಲು ನಾವು ನಿರ್ಧರಿಸಿದ್ದೇವೆ" ಎಂದಿದ್ದಾರೆ.

ಪ್ರತಿಯೊಬ್ಬ ಮಹಿಳೆಯನ್ನು ಗೌರವಿಸಬೇಕು, ಗೌರವ ಕೊಡಬೇಕು, ಘನತೆಯಿಂದ ಪ್ರತಿನಿಧಿಸಬೇಕು. ಬಲವಾದ ಪಾತ್ರಗಳನ್ನು ಆಚರಿಸುವ ಮತ್ತು ಆ ಮೌಲ್ಯಗಳನ್ನು ಎತ್ತಿಹಿಡಿಯುವ ಕಥೆಗಳನ್ನು ಹೇಳಲು ನಾವು ಬದ್ಧರಾಗಿದ್ದೇವೆ. ತಮ್ಮ ಅಭಿಪ್ರಾಯಗಳನ್ನು ಪ್ರಾಮಾಣಿಕವಾಗಿ ಮತ್ತು ಪ್ರಾಮಾಣಿಕವಾಗಿ ಹಂಚಿಕೊಂಡ ಎಲ್ಲರಿಗೂ ಧನ್ಯವಾದಗಳು ಎಂದು ನಿರ್ದೇಶಕರು ತಿಳಿಸಿದ್ದಾರೆ.

'ಪೆದ್ದಿ' ಚಿತ್ರದಲ್ಲಿ ಜಾನ್ವಿ ಕಪೂರ್ ಅಚ್ಚಿಯಮ್ಮ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಊರಿನ ರಾಜಕೀಯ ಮುಖಂಡನ ಮಗಳ ಪಾತ್ರ ಅದು. ಸಿಕ್ಕಾಪಟ್ಟೆ ಬಿಂದಾಸ್ ಆಗಿ ಊರಿನಲ್ಲಿ ಸುತ್ತಾಡಿಕೊಂಡು ಇರುವ ಅಚ್ಚಿಯಮ್ಮನ ಮೇಲೆ ಮೊದಲ ನೋಟದಲ್ಲೇ ನಾಯಕ 'ಪೆದ್ದಿ' ಮನಸ್ಸಾಗುತ್ತದೆ. ಆದರೆ ಜಾನ್ವಿಯನ್ನು ಚಿತ್ರದಲ್ಲಿ ಅಸಭ್ಯವಾಗಿ ತೋರಿಸಿರುವ ಬಗ್ಗೆ ಬೇಸರ ವ್ಯಕ್ತವಾಗುತ್ತಿದೆ. ಪ್ರತಿ ದೃಶ್ಯದಲ್ಲಿ ಲಂಗಾ ದಾವಣಿ ತೊಟ್ಟ ಆಕೆಯ ಎದೆ, ಸೊಂಟ, ಹೊಕ್ಕಳ ಸುತ್ತಾ ಕ್ಯಾಮರಾ ಫೋಕಸ್ ಮಾಡಲಾಗಿದೆ.

ಚಿತ್ರದಲ್ಲಿ ಜಾನ್ವಿಯನ್ನು ಗ್ಲಾಮರ್ ಬೊಂಬೆಯಾಗಿ ಚಿತ್ರಿಸಲಾಗಿದೆ. ಹಳ್ಳಿ ಹುಡುಗಿ ಯಾಕೆ ಹೀಗೆ ಲಂಗಾ ದಾವಣಿ ತೊಟ್ಟು ಮೈ ಪ್ರದರ್ಶನ ಮಾಡುತ್ತಾ ಸುತ್ತಾಡುತ್ತಾಳೆ. ಇದು ಯಾಕೋ ಅತಿಯಾಯ್ತು. ಇನ್ನು ಆಕೆಯ ಒಪ್ಪಿಗೆ ಇಲ್ಲದೇ ಕಳ್ಳನಂತೆ ಹೋಗಿ ನಾಯಕ 'ಪೆದ್ದಿ' ಮುತ್ತು ಕೊಟ್ಟು ಬರುತ್ತಾನೆ. ಈ ರೀತಿ ನಾಯಕನನ್ನು ವಿಜೃಂಭಿಸುವುದು ಎಷ್ಟು ಸರಿ? ಇನ್ನು ಸನ್ನಿವೇಶವೊಂದರಲ್ಲಿ ಅಚ್ಚಿಯಮ್ಮ ತಮ್ಮ ವಿರೋಧಿಗಳಿಗೆ ಕೆಟ್ಟದಾಗಿ ಕೈ ಬೆರಳು ತೋರಿಸಿ ತಿರುಗೇಟು ಕೊಡುತ್ತಾಳೆ. ಒಟ್ಟಾರೆ ಚಿತ್ರದಲ್ಲಿ ಜಾನ್ವಿ ಪಾತ್ರ ಚಿತ್ರಣವೇ ಸರಿಯಿಲ್ಲ ಎಂದು ಟೀಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಆಗ್ತಿದೆ.

ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಮೊದಲಿನಿಂದಲೂ ಒಳ್ಳೆ ಪಾತ್ರಗಳು ಸಿಗುತ್ತಿಲ್ಲ. ಬಾಲಿವುಡ್‌ನಲ್ಲಿ ಆರಕ್ಕೇರದ ಮೂರಕ್ಕಿಳಿಯದೇ ನಟಿಯಾಗಿ ಉಳಿದುಬಿಟ್ಟಿದ್ದಾರೆ. ಅದೇ ಕಾರಣಕ್ಕೆ ದಕ್ಷಿಣದ ಸಿನಿಮಾಗಳಲ್ಲಿ ನಟಿಸೋಕೆ ಮುಂದಾಗಿದ್ದಾರೆ. ಈ ಹಿಂದೆ ಬಂದಿದ್ದ ತೆಲುಗಿನ 'ದೇವರ' ಚಿತ್ರದಲ್ಲಿ ಕೂಡ ಗ್ಲಾಮರ್ ಬೊಂಬೆಯಂತಹ ಪಾತ್ರವೇ ಸಿಕ್ಕಿತ್ತು. ಅಚ್ಚಿಯಮ್ಮ ಪಾತ್ರ ದೊಡ್ಡ ಬ್ರೇಕ್ ಕೊಡುತ್ತದೆ ಎಂದೇ ಆಕೆ ಭಾವಿಸಿದ್ದರು. ಆದರೆ ಅದು ಕೂಡ ಟೀಕೆಗೆ ಗುರಿಯಾಗಿದೆ.

Read more about: ramcharan tollywood janhvi kapoor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X